Jambu Savari Elephants: ಜಂಬೂ ಸವಾರಿ ಮುಗಿಸಿ ಕಾಡಿಗೆ ಪ್ರಯಾಣ ಬೆಳೆಸಿದ ಅಭಿಮನ್ಯು ಟೀಂ

Mysuru Dasara Elephants: ದಸರಾ ಸಮಯದಲ್ಲಿ ಆನೆಗಳು ಮೈಸೂರಿಗೆ ಬಂದಾಗ ಸಮೃದ್ಧವಾಗಿ ಅವುಗಳ ಆರೈಕೆ ಮಾಡಲಾಗುತ್ತದೆ.  ಗಜಪಡೆಗೆ ವಿವಿಧ ತರಕಾರಿ, ಧಾನ್ಯಗಳು, ಬೆಣ್ಣೆ, ಗ್ಲುಕೋಸ್ ಹೀಗೆ ವಿವಿಧ ಆಹಾರಗಳನ್ನು  ನೀಡಲಾಗುತ್ತದೆ. ಕಾಡಿನಲ್ಲಿ ಸೊಪ್ಪುಗಳನ್ನು ತಿಂದು ಅಭ್ಯಾಸವಾಗಿರುವುದರಿಂದ ಅವುಗಳಿಗೆ ಇದನ್ನು ಅಭ್ಯಾಸ ಮಾಡಿಸುವುದು  ಬಹಳ ಕಷ್ಟದ ಕೆಲಸ.

ಅಂಬಾರಿ ಅನೆಗಳಿಗೆ ಬೀಳ್ಕೊಡುಗೆ

ಅಂಬಾರಿ ಅನೆಗಳಿಗೆ ಬೀಳ್ಕೊಡುಗೆ

 • Share this:
  ವಿಶ್ವ ವಿಖ್ಯಾತ ಮೈಸೂರು(World famous Mysuru Dasara) ದಸರಾ ಐತಿಹಾಸಿಕ ಜಂಬೂ ಸವಾರಿ ಮೆರವಣಿಗೆಯನ್ನು ಯಶಸ್ವಿಯಾಗಿ ನಡೆಸಿದ ಕ್ಯಾಪ್ಟನ್ ಅಭಿಮನ್ಯು ಅಂಡ್ ಟೀಂ  ನಾಡಿನಿಂದ ಕಾಡಿನತ್ತ ತಮ್ಮ ಪಯಣ ಬೆಳೆಸಿವೆ.  ಹೌದು, ದಸರಾ ಮಹೋತ್ಸವಕ್ಕಾಗಿ ಎಂಟು  ಆನೆಗಳು(Elephant) ಕಾಡಿನಿಂದ ನಾಡಿಗೆ ಬಂದಿದ್ದವು. ಈಗ ಡ್ಯೂಟಿ ಮುಗಿಸಿ ನಾಡಿನಿಂದ ವಾಪಸ್ ಕಾಡಿಗೆ(Forest) ಹೋಗಿದ್ದು. ಅರಣ್ಯ ಇಲಾಖೆ ಗಜಪಡೆಗೆ ಪೂಜೆ ಸಲ್ಲಿಸಿ ಬೀಳ್ಕೊಡುಗೆ ನೀಡಿದೆ. ಈ ಕುರಿತ ಕಂಪ್ಲೀಟ್ ರಿಪೋರ್ಟ್ ಇಲ್ಲಿದೆ..

  ದಸರಾ ಗಜಪಡೆಗೆ ಅದ್ಧೂರಿ ಬೀಳ್ಕೊಡುಗೆ

  ಮೈಸೂರಿನ ಅಂಬಾ ವಿಲಾಸ ಅರಮನೆ ಆವರಣದಲ್ಲಿ ಇಂದು ಅರಣ್ಯ ಇಲಾಖೆಯಿಂದ ದಸರಾ ಗಜಪಡೆಗೆ ಸಾಂಪ್ರದಾಯಿಕ ಬೀಳ್ಕೊಡುಗೆ ಆಯೋಜಿಸಲಾಗಿತ್ತು. ಕಳೆದ ಒಂದೂವರೆ ತಿಂಗಳಿಂದ ಅರಮನೆ ಅಂಗಳದಲ್ಲಿ ಬೀಡು ಬಿಟ್ಟಿದ್ದ ಆನೆಗಳು, ಯಶಸ್ವಿಯಾಗಿ ಜಂಬೂ ಸವಾರಿ ಮುಗಿಸಿ  ವಾಪಸ್ ಕಾಡಿಗೆ ತೆರಳಿವೆ. ಅರಣ್ಯ ಇಲಾಖೆ ಪೂಜೆ ಸಲ್ಲಿಸಿ ಆನೆಗಳಿಗೆ ಬೀಳ್ಕೊಡುಗೆ ನೀಡಿದ್ದು,  ಪುರೋಹಿತ ಪ್ರಹ್ಲಾದ್ ಮೂಲಕ ಗಜಪೂಜೆ ಮಾಡಲಾಯ್ತು.

  ಇದನ್ನೂ ಓದಿ: ದಸರಾ ಸಂಭ್ರಮದಲ್ಲಿ ಧ್ವಂಸಗೊಂಡ ೧೦ನೇ ಜಯಚಾಮರಾಜ ಒಡೆಯರ್ ಕತ್ತಿ

  ಬಳಿಕ ಡಿಸಿಎಫ್ ಕರಿಕಾಳನ್  ಪಶು ವೈದ್ಯ  ರಮೇಶ್ ನೇತೃತ್ವದಲ್ಲಿ ಆನೆಗಳಿಗೆ ಪೂಜೆ ಸಲ್ಲಿಸಿದ್ರು. ಈ ವೇಳೆ ಮಾತನಾಡಿದ ಡಿಸಿಎಫ್ ಕರಿಕಾಳನ್ ಆನೆಗಳು ದಸರಾವನ್ನ ಯಶಸ್ವಿಯಾಗಿ ನಡೆಸಿವೆ. ಹೀಗಾಗಿ ಆನೆಗಳಿಗೆ ಪೂಜೆ ಸಲ್ಲಿಸಿ ಅವುಳ ಶಿಬಿರಕ್ಕೆ ಕಳುಹಿಸಲಾಗುತ್ತಿದೆ. ಮತ್ತಿಗೋಡು, ರಾಂಪುರ, ದುಬಾರೆ ಶಿಬಿರಗಳಿಗೆ ಕಳುಹಿಸಲಾಗುತ್ತಿದೆ. ಆನೆ ಜೊತೆಗೆ ಬಂದ ಮಾವುತ ಕಾವಾಡಿಗಳಿಗೆ ಸುಮಾರು 50 ಮಂದಿಗೆ ಅರಮನೆ ಆಡಳಿತ ಮಂಡಳಿಯಿಂದ ಪ್ರೋತ್ಸಾಹ ಧನವಾಗಿ ತಲಾ 10 ಸಾವಿರ ರೂಪಗಳನ್ನು ನೀಡಲಾಗಿದೆ ಎಂದಿದ್ದಾರೆ.

  ಕಾಡಿನಲ್ಲಿ ಆನೆಗಳ ದಿನಚರಿ ಹೇಗಿರಲಿದೆ?

  ದಸರಾ ಸಮಯದಲ್ಲಿ ಆನೆಗಳು ಮೈಸೂರಿಗೆ ಬಂದಾಗ ಸಮೃದ್ಧವಾಗಿ ಅವುಗಳ ಆರೈಕೆ ಮಾಡಲಾಗುತ್ತದೆ.  ಗಜಪಡೆಗೆ ವಿವಿಧ ತರಕಾರಿ, ಧಾನ್ಯಗಳು, ಬೆಣ್ಣೆ, ಗ್ಲುಕೋಸ್ ಹೀಗೆ ವಿವಿಧ ಆಹಾರಗಳನ್ನು  ನೀಡಲಾಗುತ್ತದೆ. ಕಾಡಿನಲ್ಲಿ ಸೊಪ್ಪುಗಳನ್ನು ತಿಂದು ಅಭ್ಯಾಸವಾಗಿರುವುದರಿಂದ ಅವುಗಳಿಗೆ ಇದನ್ನು ಅಭ್ಯಾಸ ಮಾಡಿಸುವುದು  ಬಹಳ ಕಷ್ಟದ ಕೆಲಸ. ಈ ಮೊದಲು ದಸರಾದಲ್ಲಿ ಭಾಗವಹಿಸಿರುವ ಆನೇಕಗಳಿಗೆ ಇದು ಅಷ್ಟು ಸಮಸ್ಯೆ ಮಾಡುವುದಿಲ್ಲ. ಆದರೆ ಹೊಸದಾಗಿ ನಾಡಿಗೆ ಬಂದಿರುವ ಆನೆಗಳನ್ನು  ತಾಲೀಮುಗೊಳಿಸುವುದು ಮತ್ತು ಅವುಗಳಿಗೆ ಆಹಾರ ನೀಡುವುದು ಸುಲಭವಲ್ಲ.ಆದರೆ ಕಾಡಿಗೆ ಮರಳಿದ ನಂತರ ಎಂದಿನಂತೆ ನೈಸರ್ಗಿಕವಾಗಿ ಕಾಡಿನ ಮೇವು ಸವಿಯಲಿವೆ.

  ಸಾಮಾನ್ಯವಾಗಿ ವಿವಿಧ ಕ್ಯಾಂಪ್‌ನಲ್ಲಿ ಆನೆಗಳು ಇರುತ್ತವೆ. ಬೆಳಗ್ಗೆ ಮಾವುತರು ಭತ್ತ, ಹುಲ್ಲು, ತೆಂಗಿನಕಾಯಿ, ಬೆಲ್ಲ ನೀಡಿ ಸ್ನಾನ ಮಾಡಿಸಿ ಸರಪಳಿ ಜೊತೆ ಕಾಡಿಗೆ ಬಿಡುತ್ತಾರೆ. ಕಾಡಿನಲ್ಲಿ ತನಗಿಷ್ಟ ಬಂದ ಸೊಪ್ಪನ್ನು ಆನೆಗಳು ಸೇವಿಸುತ್ತವೆ. ಸಂಜೆ 4 ಗಂಟೆಗೆ ಸರಪಳಿ ಹೋದ ದಾರಿ ಹಿಡಿದು ಮಾವುತ  ಹೋಗಿ ಆನೆಗಳನ್ನು ಕರೆದುಕೊಂಡು ಬರುತ್ತಾರೆ.

  ಅಶ್ವತ್ಥಾಮ, ಗೋಪಾಲಸ್ವಾಮಿ ಧನಂಜಯ, ಚೈತ್ರ ಕಾವೇರಿ ಲಕ್ಷ್ಮಿ ಆನೆಗಳನ್ನು ವಿದಾಯ ಮಾಡಲಾಗಿದ್ದು,  ಅಭಿಮನ್ಯು, ಗೋಪಾಲಸ್ವಾಮಿ ಮತ್ತಿಗೋಡು ಆನೆ ಶಿಬಿರ, ಅಶ್ವತ್ಥಾಮ ದೊಡ್ಡ ಹರವೆ ಆನೆ ಶಿಬಿರ, ವಿಕ್ರಮ, ಧನಂಜಯ, ಕಾವೇರಿ ದುಬಾರೆ ಆನೆ ಶಿಬಿರ, ಚೈತ್ರ ಹಾಗೂ ಲಕ್ಷ್ಮಿ ಆನೆ ಬಂಡೀಪುರ ಅರಣ್ಯದ ರಾಮಪುರ ಕ್ಯಾಂಪ್‍ಗೆ ಲಾರಿಗಳ ಮೂಲಕ ರವಾನೆ ಮಾಡಲಾಯಿತು.

  ಇದನ್ನೂ ಓದಿ: ಚಿನ್ನದ ಅಂಬಾರಿಯಲ್ಲಿ ಚಾಮುಂಡೇಶ್ವರಿಯ ಮೆರವಣಿಗೆ.. ಕಣ್ತುಂಬಿಕೊಂಡವರೆ ಧನ್ಯ

  ಪೂಜೆ, ಫೋಟೋ ಸೆಷನ್, ಅಂತಿಮ ಹಾರೈಕೆ ಎಲ್ಲವನ್ನೂ ಮುಗಿಸಿದ ಆನೆಗಳು ಒಂದೊಂದಾಗಿ ಲಾರಿ ಹತ್ತಿದವು.ಇನ್ನೂ ಮೊದಲ ಬಾರಿಗೆ ದಸರೆಯಲಿ ಭಾಗಿಯಾಗಿದ್ದ ಅಶ್ವತ್ಥಾಮ ಲಾರಿ ಹತ್ತಲು ಗಲಾಟೆ ಮಾಡ್ತಿದ್ದ ಕೂಂಬಿಂಗ್ ಸ್ಟಾರ್ ಕ್ಯಾಪ್ಟನ್ ಅಭಿಮನ್ಯು ಅಶ್ವತ್ಥಾಮನಿಗೆ ಬುದ್ದಿ ಕಲ್ಸಿ ಲಾರಿ ಏರಿಸಿದ್ದ. ಇದರೊಂದಿಗೆ ದಸರಾ ಚಟುವಟಿಕೆಗಳು ಬಹುತೇಕ ಮುಕ್ತಾಯವಾಗಿದ್ದು, ೪೧೧ನೇ ದಸರಾ ಸರಳ ದಸರಾವಾಗಿ ಇತಿಹಾಸದ ಪುಟ ಸೇರಿದಂತಾಗಿದೆ.

  ವರದಿ : ದಿವ್ಯೇಶ್ ಜಿವಿ
  Published by:Sandhya M
  First published: