Mysuru: ಸಾಂಸ್ಕೃತಿಕ ನಗರ ಮೈಸೂರು ಪ್ರಗತಿಯಾಗ್ತಿಲ್ವ? ಅಭಿವೃದ್ಧಿಗೆ ಆಗುತ್ತಿರುವ ಸಮಸ್ಯೆ ಏನು?

Mysuru City development: ಸಂಪರ್ಕ ವ್ಯವಸ್ಥೆಯು ಸವಾಲಾಗಿದ್ದರೆ ಶೀಘ್ರದಲ್ಲಿಯೇ ಈ ದಿಸೆಯಲ್ಲೂ ಬದಲಾವಣೆ ಮಾಡಲಾಗುತ್ತದೆ. ವಾಯುಯಾನದಲ್ಲಿ ಹೇಗೆ ಸುಧಾರಣೆ ಮಾಡಲಾಗಿದೆಯೋ ಅಂತೆಯೇ ಬೆಂಗಳೂರಿಗೆ ಸಂಪರ್ಕ ಕಲ್ಪಿಸುವ 10 ಪಥದ ಹೆದ್ದಾರಿ ಮುಂದಿನ ವರ್ಷ ಆರಂಭವಾದಾಗ ಪ್ರಯಾಣ ಸಮಯವನ್ನು ಕಡಿತಗೊಳಿಸಲಿದೆ. ಮೈಸೂರು ನಗರವನ್ನು ಹೆಚ್ಚು ಹಣ ವಿನಿಯೋಗಿಸುವ ಪ್ರದೇಶವಾಗಿ ಕಂಡುಕೊಳ್ಳುತ್ತಾರೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:

ಸಾಂಸ್ಕೃತಿಕ ನಗರಿ ಮೈಸೂರು ಶಾಂತ ಸುಂದರವಾಗಿ ಹೇಗೆ ಕಾಣುತ್ತದೆಯೋ ಅಲ್ಲಿನ ಜನರು ಕೂಡ ಪ್ರಶಾಂತ ಜೀವನ ನಡೆಸಲು ಬಯಸುವವರು. ಪಟ್ಟಣಗಳಲ್ಲಿ ಕಂಡುಬರುವ ಗಿಜಿಗುಡುತ್ತಿರುವ ಟ್ರಾಫಿಕ್, ಮಾಲಿನ್ಯಗಳು, ಆಡಂಬರ ಈ ನಗರ ಹೊಂದಿಲ್ಲದಿದ್ದರೂ ಪ್ರತಿಯೊಬ್ಬರೂ ಇಷ್ಟಪಡುವ ಸುಂದರ ನಗರವಾಗಿದೆ. ಮೈಸೂರು ನಗರಲ್ಲಿ ವಾಸಿಸುವ ಹೆಚ್ಚಿನವರು ಈ ನಗರದಲ್ಲಿರುವ ಸರಳತೆಯನ್ನು ಬಹುವಾಗಿ ಮೆಚ್ಚಿಕೊಳ್ಳುತ್ತಾರೆ. ನಿಧಾನವಾಗಿ ಪ್ರಗತಿಯತ್ತ ಹೆಜ್ಜೆ ಹಾಕುತ್ತಿರುವ ಮೈಸೂರು ಸಾಂಕ್ರಾಮಿಕದ ನಂತರ ಕೊಂಚ ಮಂಕಾದರೂ ಹಿಂದೆಂದಿಗಿಂತಲೂ ಕೊಂಚ ಉತ್ತಮವಾಗಿ ಆರ್ಥಿಕ ಪ್ರಗತಿ ಕಂಡುಕೊಳ್ಳುತ್ತಿದೆ.


ಮೈಸೂರು ನಗರವು ವಾಯುಯಾನದಲ್ಲಿ ಪ್ರಗತಿ ಕಂಡುಕೊಂಡಿದ್ದು ಸಾಂಕ್ರಾಮಿಕದ ಪರಿಸ್ಥಿತಿಯಲ್ಲೂ ಬೆಳವಣಿಗೆಯ ಹಾದಿ ಹಿಡಿದಿದೆ. ವಿಮಾನಗಳ ಸಂಖ್ಯೆಯಲ್ಲಿ ಮಹತ್ತರ ಬದಲಾವಣೆಯಾಗದಿದ್ದರೂ ದಿನದಲ್ಲಿ ಸರಾಸರಿ ಹತ್ತು ವಿಮಾನಗಳು ಸಂಚಾರ ನಡೆಸುತ್ತಿವೆ. ಹಲವು ತಿಂಗಳಿನವರೆಗೆ ಸಂಚಾರ ಸ್ಥಗಿತಗೊಂಡಿದ್ದರೂ ವರ್ಷದಲ್ಲಿ 11% ಹೆಚ್ಚಳ ಕಂಡುಕೊಂಡಿವೆ. ಈ ಪ್ರಗತಿಯನ್ನು ನಗರವು ಕಾಣಲು ಸುದೀರ್ಘ ಸಮಯ ತೆಗೆದುಕೊಂಡಿದೆ ಎಂದೇ ಹೇಳಬಹುದು. ವಿಮಾನ ನಿಲ್ದಾಣ ಕೂಡ ಐತಿಹಾಸಿಕವಾಗಿ ಪ್ರಸಿದ್ಧಗೊಂಡಿರುವ ಚಾಮುಂಡಿ ಬೆಟ್ಟದ ಹತ್ತಿರಲ್ಲಿದ್ದರೂ ಇದು ಸುಧಾರಣೆಯತ್ತ ಮುಖ ಮಾಡಿರಲಿಲ್ಲ ಎಂಬುದು ಪ್ರಗತಿ ನಿಧಾನವಾಗಲು ಕಾರಣವಾಗಿರುವ ಅಂಶವಾಗಿದೆ.


ಮೈಸೂರಿನ ನಿವಾಸಿಗಳು ನಗರದಂತೆಯೇ ಸರಳ ಮನೋಭಾವದವರು:


ಮೈಸೂರು ನಗರದ ಪ್ರತಿಯೊಂದು ಏರಿಯಾ ಒಂದೊಂದು ಚಟುವಟಿಕೆಯ ಕೇಂದ್ರ ಹೊಂದಿದೆ. ಇಲ್ಲಿ ನೆಲೆಸಿರುವ ಪ್ರತಿಯೊಬ್ಬ ಮೈಸೂರಿಗನೂ ಹೇಳುವ ಒಂದು ಮಾತು ನಾನು ಹೆಚ್ಚು ಮಹತ್ವಾಂಕ್ಷಿಯಲ್ಲ. ಅದೇ ರೀತಿ ಹೆಚ್ಚಿನ ಹಣ ಸಂಪಾದನೆ ಕೂಡ ನನಗೆ ಬೇಕಾಗಿಲ್ಲ. ಚಾಮುಂಡಿ ಬೆಟ್ಟ ಹಾಗೂ ಕಾರಂಜಿ ಸರೋವರದ ಬೆಳಗ್ಗಿನ ನಡಿಗೆ ನನಗೆ ಸಾಕು. ಅದೇ ರೀತಿ ಸಂಜೆಯ ದೋಸೆ ತಿನ್ನಲು ಬಯಸುತ್ತೇನೆ ಎಂಬುದು ಸ್ಟಾರ್ ಆಫ್ ಮೈಸೂರ್‌ನ ವ್ಯವಸ್ಥಾಪಕ ಸಂಪಾದಕರಾದ ವಿಕ್ರಮ್ ಮುತ್ತಣ್ಣ ಹೇಳುವ ಮಾತಾಗಿದೆ.


ಮೈಸೂರಿನಲ್ಲಿ ನಡೆದ ಅಪರಾಧಿ ಕೃತ್ಯಗಳು:


ಹೀಗೆ ಶಾಂತವಾಗಿದ್ದ ಮೈಸೂರನ್ನು ಬೆಚ್ಚಿಬೀಳುವಂತೆ ಮಾಡಿದ್ದು ಒಂದರ ಹಿಂದೆ ಒಂದರಂತೆ ನಡೆದ ಘಟನೆಗಳಾಗಿವೆ. ಚಾಮುಂಡಿ ಬೆಟ್ಟದ ಬಳಿ ವಿದ್ಯಾರ್ಥಿನಿಯ ಮೇಲೆ ನಡೆದ ಸಾಮೂಹಿಕ ಅತ್ಯಾಚಾರ ಹಾಗೂ ಆಭರಣ ಅಂಗಡಿಯ ದರೋಡೆ ಸಮಯದಲ್ಲಿ ನಿವಾಸಿಯೊಬ್ಬರ ಮೇಲೆ ಗುಂಡು ಹಾರಿಸಲಾಯಿತು. ಈ ಎರಡೂ ಘಟನೆಗಳು ಮೈಸೂರಿನ ದುರ್ಬಲತೆಗೆ ಸಾಕ್ಷಿಯಾಗಿವೆ. ಎಂಬುದು ಇಲ್ಲಿನ ನಿವಾಸಿ ನಯೀಮ್ ಅಭಿಪ್ರಾಯವಾಗಿದೆ. ಮೈಸೂರು ನಗರ ಬೆಳವಣಿಗೆಯ ಪಥದತ್ತ ಹೆಜ್ಜೆಹಾಕುತ್ತಿದ್ದರೂ ಅಪರಾಧ ಕೃತ್ಯಗಳಲ್ಲೂ ಪ್ರಗತಿ ಕಾಣುತ್ತಿದೆ ಎಂಬುದು ಇಲ್ಲಿ ಗಮನಿಸಬೇಕಾದ ಅಂಶವಾಗಿದೆ ಎಂದು ನಯೀಮ್ ಹೇಳುತ್ತಾರೆ.


ಇದೀಗ ಎರಡು ದಶಕಗಳಿಂದಲೂ ಹೆಮ್ಮೆಯ ನಗರಿ ಬೆಂಗಳೂರಿನ ನೆರಳನ್ನೇ ಅನುಸರಿಸುತ್ತಿದ್ದರೂ ಇಲ್ಲಿನ ಸಂಸ್ಕೃತಿ ಹಾಗೂ ಸಾಂಸ್ಕೃತಿಕ ವೈಭವಕ್ಕೆ ಯಾವುದೇ ಲೋಪ ಉಂಟಾಗಲಿಲ್ಲ ಎಂಬುದು ಸಮಾಧಾನಕಾರ ವಿಷಯವಾಗಿದೆ. ಆಧುನಿಕತೆಯ ನೆರಳು ಕೊಂಚ ಕೊಂಚವಾಗಿ ಮೈಸೂರನ್ನು ವಶಪಡಿಸಿಕೊಂಡಿದ್ದರೂ ಕಲೆ, ಸಂಸ್ಕೃತಿ, ಆಚರಣೆಗೆ ಇಂದಿಗೂ ಮೈಸೂರು ತನ್ನ ಹೆಸರನ್ನು ಉಳಿಸಿಕೊಂಡಿದೆ ಎಂಬುದು ಲೇಖಕ ಅರುಣ್ ರಾಮನ್ ಮಾತಾಗಿದೆ.


ಇದನ್ನೂ ಓದಿ: ಪಶ್ಚಿಮಘಟ್ಟ ಸಾಲಿನ ಶೋಲಾ ಅರಣ್ಯಕ್ಕೂ ಸಂಚಕಾರ; ವರ್ಷಪೂರ್ತಿನೀರು ಹರಿಸುವ ಕಾನನಕ್ಕೂ ಕೊಡಲಿ ಏಟು!

ಪ್ರವಾಸೋದ್ಯಮದ ಹೊರತಾಗಿಯೂ ಆರ್ಥಿಕ ಪ್ರಗತಿ ಸವಾಲಾಗಿದೆ:


ಮೈಸೂರು ಇಂದಿಗೂ ಪ್ರವಾಸೋದ್ಯಮದ ಹೊರತಾಗಿಯೂ ಹಣ ರವಾನೆಯ ಮೇಲೆ ಅವಲಂಬಿತವಾಗಿರುವ ನಗರವಾಗಿದೆ. ನಗರದಲ್ಲಿರುವ ಆರ್ಥಿಕ ಚಟುವಟಿಕೆಗಳನ್ನು ಮಾತ್ರವೇ ಕೇಂದ್ರೀಕರಿಸಿಕೊಂಡು ನಗರಕ್ಕೆ ತನ್ನನ್ನು ತಾನು ಪೋಷಿಸಿಕೊಳ್ಳುವುದು ಸವಾಲಿನ ಮಾತಾಗಿದೆ ಎಂಬುದು ಮೈಸೂರಿನ ಆರ್ಥಿಕತೆ, ಸಾಮಾಜಿಕ ಇತಿಹಾಸಕಾರ ಪೃಥ್ವಿ ದತ್ತ ಚಂದ್ರ ಶೋಭಿ ಅಭಿಪ್ರಾಯವಾಗಿದೆ.


ಕೃಷಿ ಜಿಲ್ಲೆಗಳಾದ ಮಂಡ್ಯ ಹಾಗೂ ಕೊಡಗಿನಂತಹ ಹಿನ್ನೆಲೆ ಪ್ರದೇಶದಿಂದ ವಿನಿಯೋಗಿಸುವ ನಗರವಾಗಿದೆ. ಈಗಲೂ ಕೂಡ ಇಲ್ಲಿ ನೆಲೆಸಿರುವ ಹೆಚ್ಚಿನ ಯುವಕರು ಬೆಂಗಳೂರು ಇಲ್ಲವೇ ಇತರ ನಗರಗಳತ್ತ ಉದ್ಯೋಗದ ಸಲುವಾಗಿ ಆಕರ್ಷಿತರಾಗುತ್ತಾರೆ. ಆದರೆ ಮೈಸೂರಿನ ಹೊರಗೆ ನೆಲೆಸಿರುವವರು ಈ ನಗರದಲ್ಲಿ ನೆಲೆಸುವ ಕನಸು ಕಾಣುತ್ತಾರೆ. ಇದು ಆಶ್ಚರ್ಯಕರ ಅಂಶವಾದರೂ ಸತ್ಯಕ್ಕೆ ಸಮೀಪವಾದುದಾಗಿದೆ ಎಂಬುದು ಪೃಥ್ವಿ ದತ್ತ ಮಾತಾಗಿದೆ.


ಇಲ್ಲಿನ ಖಾಸಗಿ ಪ್ಲಾಟ್‌ಗಳು ಅಣಬೆಗಳಂತೆ ನಗರದಾದ್ಯಂತ ಬೆಳೆದುಕೊಂಡಿದ್ದು ಇಂತಹ ವಸತಿ ನಿವೇಶನಗಳಲ್ಲಿ ಅಲ್ಪ ಸ್ವಲ್ಪ ಹೂಡಿಕೆ ಇದೆ. ಆದರೆ ರಿಯಲ್ ಎಸ್ಟೇಟ್ ಕ್ಷೇತ್ರದಲ್ಲಿ ಏರಿಕೆಯಾಗಿದ್ದು ನಗರವಾಸಿಗಳಿಗೆ ಕೈಗೆಟಕುವ ಬೆಲೆಗಳಲಿಲ್ಲ ಎಂಬುದು ವಾಸ್ತವಾಂಶವಾಗಿದೆ. ಸಾಂಕ್ರಾಮಿಕದ ಸಮಯದಲ್ಲಿ ಮೈಸೂರು ಹಲವಾರು ಉದ್ಯೋಗಿಗಳ ಆಶ್ರಯತಾಣವಾಗಿ ಮಾರ್ಪಟ್ಟಿದೆ.


ಮನೆಯಿಂದಲೇ ಕೆಲಸ ಮಾಡುವ ಸೌಲಭ್ಯಕ್ಕಾಗಿ ಹೆಚ್ಚಿನವರು ಮೈಸೂರನ್ನು ಆಯ್ಕೆಮಾಡಿಕೊಂಡಿದ್ದಾರೆ. ಬೆಂಗಳೂರಿನಂತಹ ಸೌಕರ್ಯಗಳನ್ನು ಮೈಸೂರಿನಲ್ಲಿಯೂ ಪಡೆದುಕೊಳ್ಳಬಹುದಾಗಿದ್ದು ಹತ್ತು ವರ್ಷಗಳ ಹಿಂದೆ ಈ ಯಾವುದೇ ಸೌಲಭ್ಯಗಳನ್ನು ಮೈಸೂರು ಹೊಂದಿರಲಿಲ್ಲ. ಇದೀಗ ಕೃಷ್ಣರಾಜ ಸಾಗರ ಡ್ಯಾಮ್‌ ಬಳಿ ಹಿನ್ನೀರಿನ ನೌಕಾಯಾನ ಕ್ಲಬ್ ಕೂಡ ಇದೆ. ಹಾಗೆಯೇ ವಾರಾಂತ್ಯದ ಮೋಜಿಗಾಗಿ ವಿಹಾರ ತಾಣಗಳು, ಬೆಟ್ಟಗಳು, ಅರಣ್ಯಗಳು, ರೆಸಾರ್ಟ್‌ಗಳನ್ನು ನಗರ ಒಳಗೊಂಡಿದೆ.


ಮುಗ್ಗರಿಸಿದ ಡಿಜಿಟಲ್ ಪ್ರಗತಿ:


ಸಾಫ್ಟ್‌ವೇರ್ ವಲಯದಲ್ಲೂ ಮೈಸೂರು ಹೆಸರು ಮಾಡಿತ್ತು. ಇನ್ಫೋಸಿಸ್ ತನ್ನ ತರಬೇತಿ ಕೇಂದ್ರಗಳನ್ನು ನಗರದಲ್ಲಿ ಸ್ಥಾಪಿಸಿದಾಗ ಎಲ್ಲರ ಕಣ್ಣು ನಗರದ ಮೇಲಿತ್ತು. ಆದರೆ ಬೆಂಗಳೂರಿಗೆ ಸನಿಹದಲ್ಲಿದ್ದರೂ ಡಿಜಿಟಲ್ ಆರ್ಥಿಕತೆಯಲ್ಲಿ ಇದು ಅಷ್ಟೊಂದು ಪ್ರಗತಿಯನ್ನು ಕಂಡುಕೊಳ್ಳಲಿಲ್ಲ.


ಮೈಸೂರಿನಲ್ಲಿ ನೆಲೆ ಕಂಡುಕೊಂಡ ಹಲವಾರು ಚಟುವಟಿಕೆಗಳು ಆರಕ್ಕೇರದೆ ಮೂರಕ್ಕಿಳಿಯದೆ ವಿಫಲತೆಯ ಹಾದಿಯನ್ನು ಕಂಡಿವೆ ಎಂದು ರಾಮನ್ ಹೇಳುತ್ತಾರೆ. ಮೈಸೂರಿನಲ್ಲಿ ತಲೆಎತ್ತಿದ್ದ ಕೈಗಾರಿಕಾ ಕೇಂದ್ರಗಳನ್ನು ನೋಡಿದಾಗ ಮೈಸೂರು ಹದಗೆಡುತ್ತದೆ ಎಂದೇ ಅನೇಕರು ಭಾವಿಸಿದ್ದರು. ಆದರೆ ಬೆಂಗಳೂರಿನ ಕೈಗಾರಿಕಾ ಕೇಂದ್ರಗಳ ಮಾಲಿನ್ಯಕ್ಕೆ ಮೈಸೂರು ನೆಲೆಯಾಗಲಿಲ್ಲ. ಕೈಗಾರಿಕೆಗಳ ಪ್ರಗತಿ ನಗರಕ್ಕೆ ಲಾಭ ತಂದುಕೊಟ್ಟಿದ್ದರೂ ಮೈಸೂರು ಸುಂದರ ನಗರವಾಗಿ ಬಹುಕಾಲ ಉಳಿಯಲು ಅನುವು ಮಾಡಿಕೊಟ್ಟಿದೆ ಎಂದು ರಾಮನ್ ಹೇಳುತ್ತಾರೆ.


ಮೈಸೂರು ಪ್ರಗತಿಯ ಹಾದಿಯಲ್ಲಿದೆ ಹೇಗೆ..?


ಹಿಂದಿನ ಮೈಸೂರಿಗೂ ಇಂದಿನ ಮೈಸೂರಿಗೂ ಹಲವಾರು ಬದಲಾವಣೆಗಳನ್ನು ಕಾಣಬಹುದಾಗಿದೆ. ನಂಜನಗೂಡಿನ ಕಡೆಗೆ ವಿಮಾನ ನಿಲ್ದಾಣದ ದಕ್ಷಿಣಕ್ಕೆ ಕೈಗಾರಿಕಾ ಕಾರಿಡಾರ್‌ ಯೋಜನೆಯನ್ನು ಮೂರು ದಶಕಗಳ ಹಿಂದೆಯೇ ಯೋಜಿಸಲಾಗಿತ್ತು. ಈ ಯೋಜನೆಗೆ ಹಲವು ಸವಾಲುಗಳು ಇದ್ದವು ಎಂದು ಭಾರತೀಯ ಉದ್ಯಮದ ಒಕ್ಕೂಟದ ಮೈಸೂರು ವಿಭಾಗದ ಮುಖ್ಯಸ್ಥರಾದ ಪವನ್‌ರಂಗ್ ಹೇಳುತ್ತಾರೆ. ನಗರವು 25ಕ್ಕೂ ಹೆಚ್ಚಿನ ತಾಂತ್ರಿಕ ಸಂಸ್ಥೆಗಳನ್ನು ಹಾಗೂ ಆರು ಎಂಜಿನಿಯರಿಂಗ್ ಕಾಲೇಜುಗಳನ್ನು ಹೊಂದಿದೆ. ಆದರೆ ಇದು ತಕ್ಕ ಮಟ್ಟಿಗೆ ಮಾತ್ರವೇ ಖ್ಯಾತಿಯನ್ನು ನಗರಕ್ಕೆ ತಂದುಕೊಟ್ಟಿದೆ. ಪ್ರಸ್ತುತ ಎಲೆಕ್ಟ್ರಾನಿಕ್ಸ್ ಹಾಗೂ ತಂತ್ರಜ್ಞಾನವನ್ನು ಆಧರಿಸಿ ಉದ್ಯಮ ಹಾಗೂ ಔದ್ಯೋಗಿಕ ಯೋಜನೆಗಳನ್ನು ಜಾರಿಗೆ ತರಲಾಗುತ್ತಿದೆ ಎಂಬುದಾಗಿ ಪವನ್‌ ರಂಗ್ ಹೇಳುತ್ತಾರೆ.


ಇದನ್ನೂ ಓದಿ: ಮಂಗಳವಾರ,ಬುಧವಾರ ಬೆಂಗಳೂರಿನ ಈ ಪ್ರದೇಶಗಳಲ್ಲಿ ಕರೆಂಟ್ ಇರಲ್ಲ....

ಸಂಪರ್ಕ ವ್ಯವಸ್ಥೆಯು ಸವಾಲಾಗಿದ್ದರೆ ಶೀಘ್ರದಲ್ಲಿಯೇ ಈ ದಿಸೆಯಲ್ಲೂ ಬದಲಾವಣೆ ಮಾಡಲಾಗುತ್ತದೆ. ವಾಯುಯಾನದಲ್ಲಿ ಹೇಗೆ ಸುಧಾರಣೆ ಮಾಡಲಾಗಿದೆಯೋ ಅಂತೆಯೇ ಬೆಂಗಳೂರಿಗೆ ಸಂಪರ್ಕ ಕಲ್ಪಿಸುವ 10 ಪಥದ ಹೆದ್ದಾರಿ ಮುಂದಿನ ವರ್ಷ ಆರಂಭವಾದಾಗ ಪ್ರಯಾಣ ಸಮಯವನ್ನು ಕಡಿತಗೊಳಿಸಲಿದೆ. ಮೈಸೂರು ನಗರವನ್ನು ಹೆಚ್ಚು ಹಣ ವಿನಿಯೋಗಿಸುವ ಪ್ರದೇಶವಾಗಿ ಕಂಡುಕೊಳ್ಳುತ್ತಾರೆ.


ವಿದೇಶದಲ್ಲಿ ನೆಲೆಸಿರುವ ಹೆಚ್ಚಿನ ಜನರು ಮೈಸೂರಿನಲ್ಲಿ ಆಸ್ತಿ ಖರೀದಿಸುತ್ತಾರೆ. ಇಲ್ಲಿಗೆ ಮರಳಿ ಬರುವ ಯೋಜನೆಯಲ್ಲಿ ಈ ಖರೀದಿನಡೆಸಿದರೂ ನಗರದಲ್ಲಿ ಹೆಚ್ಚು ಬದಲಾವಣೆ ಕಾಣದೇ ಅವರು ನೆಲೆನಿಲ್ಲುವ ಯೋಜನೆ ಮಾಡುತ್ತಿಲ್ಲ. ನಗರದಲ್ಲಿ ಬದಲಾವಣೆಗಳಾದಾಗ ಸರಕಾರ ಕೂಡ ಅದಕ್ಕೆ ಬೆಂಬಲ ನೀಡಬೇಕು. ಮುಂದಿನ ಐದಾರು ವರ್ಷಗಳಲ್ಲಿ ಮೈಸೂರು ಕೂಡ ಆರ್ಥಿಕವಾಗಿ ಬೇರೆ ನಗರಳಂತೆಯೇ ಮಹತ್ತರ ಬದಲಾವಣೆ ಕಾಣಬಹುದೆಂಬ ಆಶಯವಿದೆ ಎಂಬುದು ನಗರವಾಸಿಗಳ ಅಭಿಪ್ರಾಯವಾಗಿದೆ.

Published by:Sandhya M
First published: