Mysore Murder: ಕುಡಿದಾಗ ಅತಿಯಾಗಿ ಬೈಯುತ್ತಿದ್ದ; ರೋಸಿ ಹೋದ ಸ್ನೇಹಿತರು ಹರಿಸಿಯೇ ಬಿಟ್ಟರು ನೆತ್ತರು!

person was murdered by his friends: ಹಬೀದ್  ಎಲ್ಲರ ಮೇಲು ಡಾಮಿನೇಟ್ ಮಾಡುತ್ತಿದ್ದನಂತೆ.‌ ತನ್ನದೆ ಮಾತು ನಡೆಯಬೇಕು ಅಂತಿದ್ದನಂತೆ. ಜೊತೆಗೆ ಎಲ್ಲರನ್ನು ಕುಡಿದು ಅವಾಚ್ಯ ಶಬ್ದಗಳಿಂದ ಬೈಯುತ್ತಿದ್ದನಂತೆ.

ಆರೋಪಿಗಳು

ಆರೋಪಿಗಳು

  • Share this:
    ಮೈಸೂರು:- ಅವರದ್ದು ಒಂದು ದೊಡ್ಡ ಗ್ಯಾಂಗ್ (gang). ರಾತ್ರಿಯಾಯ್ತು ಅಂದ್ರೆ ಎಲ್ಲರು ಒಂದೆಡೆ ಸೇರಿ ಎಣ್ಣೆ ಪಾರ್ಟಿ(alcohol party) ಮಾಡ್ತಿದ್ರು. ಆ ಗ್ಯಾಂಗ್ ನಲ್ಲಿದ್ದ ಸ್ನೇಹಿತನೊಬ್ಬ ಸಣ್ಣ ಪುಟ್ಟ ವಿಷಯಗಳಿಗೂ ಎಲ್ಲರಿಗೂ ಅವಾಚ್ಯ ಶಬ್ದಗಳಿಂದ (using abusive words) ನಿಂದಿಸುತ್ತಿದ್ದನಂತೆ. ಅಂದು ಆಯುಧ ಪೂಜೆಯ ಹಿಂದಿನ ದಿನವೂ ಕೂಡ ಅವರೆಲ್ಲ ಎಣ್ಣೆ ಪಾರ್ಟಿಗೆ ಅಂತ ಸೇರಿದ್ದರು. ಆ ಎಣ್ಣೆ ಪಾರ್ಟಿಯಲ್ಲೂ ನಿಲ್ಲದ ಆತನ ಬೈಗುಳಕ್ಕೆ ಬೇಸತ್ತು ಕತ್ತು ಕೊಯ್ದಿದ್ದಾರೆ. ಸದ್ಯ ಆ ಕೊಲೆ ಮಾಡಿದ ಗ್ಯಾಂಗ್ ನ್ನ ಪೊಲೀಸರು ಹೆಡೆಮುರಿಕಟ್ಟಿದ್ದಾರೆ.

    ಹೊರ ಹೋದವನು ಮತ್ತೆ ಬರಲೇ ಇಲ್ಲ

    ಅಂದು ಮೈಸೂರಿನ ಜನ ಆಯುಧ ಪೂಜೆಯ ಸಿದ್ದತೆಯಲ್ಲಿದ್ರು. ಅಂದು ರಾತ್ರಿ ನಡೆದ ಭೀಕರ ಹತ್ಯೆ ಕಂಡು ಇಡೀ ಮೈಸೂರೆ ಬೆಚ್ಚಿ ಬಿದ್ದಿತ್ತು. ಹೌದು, ಅಂದು ಮೈಸೂರಿನ ಉದಯಗಿರಿಯಲ್ಲಿ ಬೆಳಂ ಬೆಳಗ್ಗೆ ಹಮೀದ್ ಖಾನ್ ಹತ್ಯೆಯಾಗಿತ್ತು. ಉದಯಗಿರಿಯ ಅಲ್ ಬದೀರ್ ಮಸೀದಿ ಪಕ್ಕದ ಖಾಲಿ ನಿವೇಶನದ ಬಳಿ ನಡೆದ ಹತ್ಯೆಯಿಂದ ಮೈಸೂರಿಗರು ಬೆಚ್ವಿಬಿದ್ದಿದ್ರು. ಅಂದು ರಾತ್ರಿ ಹಮೀದ್ ಮನೆಯಿಂದ ಊಟ ಮಾಡಿ ಹೊರಗೆ ಓದವನು ತಡರಾತ್ರಿಯಾದ್ರು‌ ಮನೆಗೆ ಬಂದಿರಲಿಲ್ಲ. ಪ್ರತಿದಿನ ತಡವಾಗಿ ಮನೆಗೆ ಬರ್ತಿದ್ದರಿಂದ ಮನೆಯವರೆಲ್ಲ ಮನೆಗೆ ತಡವಾಗಿ ಬರಬಹುದು ಎಲ್ಲೋ ಸ್ನೇಹಿತರ ಜೊತೆ ಇರ್ತಾನೆ ಅಂತ ಅಂದುಕೊಂಡಿದ್ರು. ಆದ್ರೆ ಆ ಸ್ನೇಹಿತರೆ ಆತನಿಗೆ ಸ್ಕೆಚ್ ಹಾಕಿ‌ ಮುಗಿಸಿದ್ರು.

    ಅತಿಯಾಗಿ ಬೈಯ್ದಿದ್ದೇ ಮುಳುವಾಯ್ತು..!

    ಹಬೀದ್ ಅಂದು ತನ್ನ ಸ್ನೇಹಿತರಾದ ಫೈರೋಜ್ ಖಾನ್, ಹುಸೈನಿ ಬೇಗ್ಖಾಸಿಫ್ ಹುಲ್ಲಾ ಖಾನ್, ಆಶೀಖ್ ಜೊತೆ ಮಸೀದಿ ಪಕ್ಕದ ಖಾಲಿ ಜಾಗದಲ್ಲಿ ಎಣ್ಣೆ ಪಾರ್ಟಿ ಮಾಡುತ್ತಿದ್ರಂತೆ.‌ ಈ ವೇಳೆ ಅಲ್ಲಿ ಮಾತಿಗೆ ಮಾತು ಬೆಳೆದಿದೆ, ಈ ವೇಳೆ ಹಮೀದ್ ಅಲ್ಲಿದ್ದ ಸ್ನೇಹಿತರ ತಾಯಿ ಹಾಗೂ ಮನೆಯವರ ಬಗ್ಗೆ ಅವಾಚ್ಯಶಬ್ದಗಳಿಂದ‌ ನಿಂದಿಸಿದ್ದಾನೆ.‌ ಇದರಿಂದ ರೊಚ್ಚಿಗೆದ್ದ ಎಲ್ಲರು ಹಬೀದ್ ಕತ್ತುಕೊಯ್ದು ಕೊಲೆ ಮಾಡಿದ್ದಾರೆ. ಕೊಲೆ ಮಾಡಿದ ನಂತರ ಎಲ್ಲರೂ ತಲೆ ಮರೆಸಿಕೊಂಡಿದ್ದರು. ಕೊಲೆಯ ಪ್ರಕರಣ ಬೆಳಕಿಗೆ ಬಂದ ನಂತರ ಪ್ರಕರಣದ ತನಿಖೆ ನಡೆಸಿದ ಉದಯಗಿರಿ ಪೊಲೀಸರು ಹಮೀದ್  ಕೊಲೆಗೆ ಕಾರಣ ಹುಡುಕುತ್ತ ತನಿಖೆ ತೀರ್ವಗೊಳಿಸಿದ್ದರು. ಈ ವೇಳೆ ಪ್ರಕರಣದ ಪ್ರಮುಖ ಆರೋಪಿಗಳನ್ನು ಸೆರೆಹಿಡಿಯುವಲ್ಲಿ ಯಶಸ್ವಿಯಾಗಿದ್ದರು.

    ಅತಿಯಾದ ವರ್ತನೆಯಿಂದ ಹರಿಯಿರು ನೆತ್ತರು..! 

    ಆರೋಪಿಗಳ ವಿಚಾರಣೆ ನಡೆಸಿದ ನಂತರ ಅಸಲಿ ಸತ್ಯ ಬಾಯ್ಬಿಟ್ಟಿದ್ದಾರೆ.‌ ಹಬೀದ್  ಎಲ್ಲರ ಮೇಲು ಡಾಮಿನೇಟ್ ಮಾಡುತ್ತಿದ್ದನಂತೆ.‌ ತನ್ನದೆ ಮಾತು ನಡೆಯಬೇಕು ಅಂತಿದ್ದನಂತೆ. ಜೊತೆಗೆ ಎಲ್ಲರನ್ನು ಕುಡಿದು ಅವಾಚ್ಯ ಶಬ್ದಗಳಿಂದ ಬೈಯುತ್ತಿದ್ದರಂತೆ. ಆದ್ರೆ ಮಾರನೆ‌ ದಿನ ಎಲ್ಲರು ಮತ್ತೆ ಅದನ್ನ ಮರೆತು ಒಂದಾಗುತ್ತಿದ್ರಂತೆ. ಆದ್ರೆ ಅಂದು ಆತನ ವರ್ತನೆ ಅತಿಯಾದ ಕಾರಣ ಎಲ್ಲರು ಸೇರಿ ಕೊಲೆ‌ ಮಾಡಿದ್ದಾರೆ.

    ಇದನ್ನೂ ಓದಿ: Accused Arrested: ಅಪ್ರಾಪ್ತನ ಜೊತೆ ಗೃಹಿಣಿಯ ಸರಸ; ಯುವಕನಿಗೆ ಅವಳು ಬೇಡವಾದಾಗ ನಡೆಯಿತು ಅನಾಹುತ!

    ಇನ್ನೂ ಹಮೀದ್ ನ ಹಿನ್ನಲೆಯನ್ನು ಗಮನಿಸಿದರೆ ಈತನ ವಿರುದ್ದ ವಿವಿಧ ಪೊಲೀಸ್ ಠಾಣೆಗಳಲ್ಲಿ ಅನೇಕ ಪ್ರಕರಣಗಳು ದಾಖಲಾಗಿದೆ. ಈತನು ಸಹ ಕ್ರಿಮಿನಲ್ ಹಿನ್ನಲೆ ಉಳ್ಳವನಾಗಿದ್ದ ಎಂದು ಮೈಸೂರಿನ ಪೊಲೀಸರ ಕಮಿಷನರ್ ಡಾ. ಚಂದ್ರಗುಪ್ತ ಮಾಹಿತಿ ‌ನೀಡಿದ್ದಾರೆ.ಒಟ್ಟಿನಲ್ಲಿ ಕುಡಿದ ನಶೆಯಲ್ಲಿ ಆತ ಬೈಯುತ್ತಿದ್ದ ಅವಾಚ್ಯ ಶಬ್ದಗಳೆ ಆತನಿಗೆ ಮುಳುವಾಗಿ, ಸ್ನೇಹಿತನಿಗೆ ಸ್ನೇಹಿತರೆ ಸ್ಕೆಚ್ ಹಾಕಿ‌ಕೊಲೆ ಮಾಡಿದ್ದು ವಿಪರ್ಯಾಸ.

    ವರದಿ: ದಿವ್ಯೇಶ್​ ಜಿ.ವಿ
    Published by:Kavya V
    First published: