Araga Jnanendra: ಘಟನಾ ಸ್ಥಳಕ್ಕೆ ಗೃಹ ಸಚಿವರ ನಾಮಕವಾಸ್ತೆ ಭೇಟಿ; ಮಹತ್ವದ ಸುಳಿವು ಆಧರಿಸಿ ನೆರೆರಾಜ್ಯಕ್ಕೆ ತನಿಖಾ ತಂಡ?

ಮಧ್ಯಾಹ್ನ ಚಾಮುಂಡಿ ಬೆಟ್ಟದ ತಪ್ಪಲಿನ ಲಲಿತಾದ್ರಿ ಬಡಾವಣೆಗೆ ಭೇಟಿ ನೀಡಿದ ಗೃಹ ಸಚಿವ ಅರಗ ಜ್ಞಾನೇಂದ್ರ ಪೊಲೀಸ್​ ಆಯುಕ್ತರ ಬಳಿಕ ಮಾಹಿತಿ ಪಡೆದರು

ಗೃಹ ಸಚಿವ ಅರಗ ಜ್ಞಾನೇಂದ್ರ

ಗೃಹ ಸಚಿವ ಅರಗ ಜ್ಞಾನೇಂದ್ರ

 • Share this:
  ಮೈಸೂರು (ಆ. 27): ಸಾಂಸ್ಕೃತಿ ನಗರಿಯಲ್ಲಿ ವಿದ್ಯಾರ್ಥಿನಿ (Mysore Rape case) ಮೇಲೆ ನಡೆದ ಅತ್ಯಾಚಾರ ಘಟನೆ ರಾಷ್ಟ್ರಮಟ್ಟದಲ್ಲಿ ಸದ್ದು ಮಾಡಿದೆ. ಘಟನೆ ಬಗ್ಗೆ ವ್ಯಾಪಾಕ ಖಂಡನೆ ವ್ಯಕ್ತವಾಗಿದೆ. ಈ ನಡುವೆ ಈ ಘಟನೆ ಕುರಿತು ಒಂದರ ಹಿಂದೆ ಒಂದು ವಿವಾದಾತ್ಮಕ ಹೇಳಿಕೆ ನೀಡುತ್ತಾ ಗೃಹ ಸಚಿವರು ಟೀಕೆಗೆ ಗುರಿಯಾಗಿದ್ದಾರೆ. ಘಟನೆ ನಡೆದ ಬಳಿಕ ಬೇಜವಾಬ್ದಾರಿ ಹೇಳಿಕೆ ನೀಡಿದ್ದ ಗೃಹ ಸಚಿವ ಅರಗ ಜ್ಞಾನೇಂದ್ರ (araga jnanendra) ದಿನಕಳೆದರೂ ಘಟನಾ ಸ್ಥಳಕ್ಕೆ ಭೇಟಿ ನೀಡಿಲ್ಲ ಎಂದು ದೂರು ಕೇಳಿ ಬಂದಿತ್ತು. ಈ ಬೆನ್ನಲ್ಲೇ ಎಚ್ಚೆತ್ತ ಗೃಹ ಸಚಿವರು ಇಂದು ಮೈಸೂರಿಗೆ ಭೇಟಿ ನೀಡಿದ್ದರು. ಆದರೆ, ಅವರ ಭೇಟಿ ಕೇವಲ ನಾಮಕವಾಸ್ತೆ ಭೇಟಿಯಾಗಿದೆ. ಬೆಳಗ್ಗೆಯಿಂದ ನಿರಂತರ ಕಾರ್ಯಕ್ರಮದ ಬಳಿಕ ಮಧ್ಯಾಹ್ನ ಘಟನಾ ಸ್ಥಳಕ್ಕೆ ಭೇಟಿ ನೀಡಿದ ಅವರು ಕಾಟಚಾರಕ್ಕೆ ಸ್ಥಳ ಪರಿಶೀಲನೆ ನಡೆಸಿ ಹೋದರು.

  ಐದು ನಿಮಿಷದ ಭೇಟಿ

  ಮಧ್ಯಾಹ್ನ ಚಾಮುಂಡಿ ಬೆಟ್ಟದ ತಪ್ಪಲಿನ ಲಲಿತಾದ್ರಿ ಬಡಾವಣೆಗೆ ಭೇಟಿ ನೀಡಿದ ಗೃಹ ಸಚಿವ ಅರಗ ಜ್ಞಾನೇಂದ್ರ ಪೊಲೀಸ್​ ಆಯುಕ್ತರ ಬಳಿಕ ಮಾಹಿತಿ ಪಡೆದರು. ಘಟನಾ ಸ್ಥಳಕ್ಕೆ ಹೋಘದ ಅವರು ರಸ್ತೆಯಲ್ಲಿಯೇ ನಿಂತು ಹೀಗೆ ಬಂದದು ಹಾಗೆ ಹೋದರು. ಸ್ಥಳದಲ್ಲಿಯೇ ನಿಂತ ಅವರು ಇದ್ದ ಐದು ನಿಮಿಷ ಕೂಡ ಫೋನ್​ ಸಂಭಾಷಣೆಯಲ್ಲಿ ತೊಡಗಿದ್ದರು. ಬಳಿಕ ಪೊಲೀಸ್​ ಆಯುಕ್ತರ ಬಳಿಕ ಒಂದು ನಿಮಿಷ ಮಾಹಿತಿ ಪಡೆದು ಹೋದರು. ಈ ವೇಳೆ ಮಾಧ್ಯಮಗಳಿಗೂ ಯಾವುದೇ ಪ್ರತಿಕ್ರಿಯೆಯನ್ನು ಅವರು ನೀಡಲಿಲ್ಲ.

  ಇಬ್ಬರು ವಶಕ್ಕೆ?

  ಘಟನೆ ಸಂಬಂಧ ಬೆಂಗಳೂರು ಮತ್ತು ಮೈಸೂರಿನ 6 ಅಧಿಕಾರಿಗಳ ತಂಡ ವಿಶೇಷ ತನಿಖೆ ನಡೆಸುತ್ತಿದ್ದು, ಶಂಕಿತರ ಪತ್ತೆ ಹಚ್ಚಲು ಪ್ರಯತ್ನ ನಡೆಸಿದ್ದಾರೆ. ಪ್ರಕರಣ ಸಬಂಧ ಇಬ್ಬರ ಸುಳಿವು ಪತ್ತೆಯಾಗಿದ್ದು, ಅವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗಿದೆ ಎನ್ನಲಾಗಿದೆ. ಈ ಆರೋಪಿಗಳ ಕುರಿತು ಸಿಕ್ಕ ಮಹತ್ವದ ಸುಳಿವು ಆಧಾರಿಸಿ ಅಧಿಕಾರಿಗಳ ತನಿಖಾ ತಂಡ ಕೇರಳಕ್ಕೆ ತೆರಳಿದ್ದಾರೆ ಎನ್ನಲಾಗಿದೆ.

  ಸಿಸಿಟಿವಿ ಮಾಹಿತಿ ಸಂಗ್ರಹ

  ಇನ್ನು ಘಟನೆ ಸಂಬಂಧ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ. ಸಿಸಿಟಿವಿ, ಟವರ್ ಲೊಕೇಷನ್ ಮೂಲಕ ಪೊಲೀಸರಿಗೆ ಆರೋಪಿಗಳ ಸುಳಿವು ಸಿಕ್ಕಿದೆ ಎನ್ನಲಾಗುತ್ತಿದೆ. ಇವತ್ತು ಅಥವಾ ನಾಳೆಯೊಳಗೆ ಆರೋಪಿಗಳ ಪತ್ತೆ ಬಗ್ಗೆ ತನಿಖಾ ತಂಡದಿಂದ‌ ಗೃಹ ಸಚಿವರಿಗೆ ಮಾಹಿತಿ ನೀಡಲಾಗುತ್ತದೆ. ಒಟ್ಟು ಆರು ವಿಶೇಷ ತಂಡಗಳಿಂದ ಕಾರ್ಯಾಚರಣೆ ನಡೆಸಲಾಗುತ್ತಿದೆ. ಎಡಿಜಿಪಿ ಪ್ರತಾಪ್ ರೆಡ್ಡಿ ನೇತೃತ್ವದಲ್ಲಿ ತನಿಖೆ ಚುರುಕುಗೊಂಡಿದೆ.

  ಇದನ್ನು ಓದಿ: ರಾಜ್ಯ ಪ್ರವಾಸಕ್ಕೂ ಮುನ್ನ ತವರಿನತ್ತ ಮಾಜಿ ಸಿಎಂ ಬಿಎಸ್​ ಯಡಿಯೂರಪ್ಪ

  ಆರೋಪಿಗಳು ಕೃತ್ಯ ಎಸಗಿ ಬೈಕ್​ಗಳಲ್ಲಿ ಎಸ್ಕೇಪ್ ಆಗಿರೋ ಮಾಹಿತಿ ಲಭ್ಯವಾಗಿದೆ. ಪೊಲೀಸರು ಲಲಿತಾದ್ರಿ ಬೆಟ್ಟದ ಪ್ರದೇಶಕ್ಕೆ ಹೋಗುವ ಮಾರ್ಗದಲ್ಲಿರುವ ಬಾರ್ ಹಾಗೂ ಹೋಟೆಲ್​​ನಲ್ಲಿರುವ ಸಿಸಿಟಿವಿ ಡಿವಿಆರ್ ಪಡೆದಿದ್ದಾರೆ. ಎರಡು ಟೀಂ ನಿಂದ ಟೆಕ್ನಿಕಲ್ ಆಯಾಮದಲ್ಲಿ ತನಿಖೆ ನಡೆಸಲಾಗುತ್ತಿದೆ. ಘಟನೆ ನಡೆದ ಮೂರು ಗಂಟೆಗಳ ಅವಧಿಯಲ್ಲಿ ಸ್ಥಳದ ಟವರ್ ಲೊಕೇಷನ್​ನ್ನು ಪೊಲೀಸರು ಡಂಪ್ ಮಾಡಿದ್ದಾರೆ.

  ಸದ್ಯ ಯುವತಿ ಹಾಗೂ ಸ್ನೇಹಿತನಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಸಂತ್ರಸ್ಥೆಯ ಸ್ನೇಹಿತನಿಗೆ ದುಷ್ಕರ್ಮಿಗಳು ಗಂಭೀರ ಹಲ್ಲೆ ಮಾಡಿದ್ದಾರೆ. ಹೀಗಾಗಿ ಇಬ್ಬರೂ ಶಾಕ್ ಗೊಳಗಾಗಿ ತನಿಖೆ ವೇಳೆ ಅಸ್ಪಷ್ಟ ಹೇಳಿಕೆ ನೀಡಿದ್ದಾರೆ.

  ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ನಾವು ಸುರಕ್ಷಿತವಾಗಿ ಇದ್ದು, ನಮ್ಮಿಂದ ಇತರರಿಗೆ ಸೋಂಕು ಹಬ್ಬದಂತೆ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು
  Published by:Seema R
  First published: