Hijab ಹಾಕೋದಾದ್ರೆ ಮದರಸಾಗೆ ಹೋಗಿ; ಸಿದ್ದರಾಮಯ್ಯ ಅಲ್ಲ ಸಿದ್ದರಹೀಮ್ ಅಯ್ಯ: MP Pratap Simha ಹೇಳಿಕೆ

ಸಮವಸ್ತ್ರ ಎನ್ನುವುದು ಬರೀ ಬಣ್ಣದ ಉಡುಪಲ್ಲ.  ಅದು ಎಲ್ಲಾ ಮಕ್ಕಳು ಸಮಾನರು ಎಂದು ಸಾರುವ ಉಡುಪು. ಎಲ್ಲರೂ ಕಾಲೇಜಿಗೆ ಜಾಬ್ ಗಾಗಿ ಬರುತ್ತಾರೆ. ನೀವು ಹಿಜಾಬ್ ಗಾಗಿ ಬರುತ್ತೀದ್ದೀರಾ? ಹಿಜಾಬ್ ಹಾಕಿಕೊಂಡು, ಟೋಪಿ ಹಾಕಿಕೊಂಡು ನೀವು ಕಲಿಯಬೇಕು ಎಂಬುದಾದರೆ ಮದರಸಾಗೆ ಹೋಗಿ.

ಸಂಸದ ಪ್ರತಾಪ್​​ ಸಿಂಹ

ಸಂಸದ ಪ್ರತಾಪ್​​ ಸಿಂಹ

  • Share this:
Hijab Controversy: ರಾಜ್ಯದಲ್ಲಿ ಉಂಟಾಗಿರುವ ಹಿಜಾಬ್ (Hijab) ವಿವಾದದ ಕುರಿತು ಇಡೀ ರಾಷ್ಟ್ರಮಟ್ಟದಲ್ಲಿ ಚರ್ಚೆಯಾಗುತ್ತಿದೆ. ರಾಜಕೀಯ ಮುಖಂಡರು ಸೇರಿದಂತೆ ಸಾರ್ವಜನಿಕರು ಶಾಲೆ(School)ಗಳಲ್ಲಿ ಹಿಜಾಬ್ ಧರಿಸುವ ತಮ್ಮ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ. ಇದೀಗ ಸಂಸದ ಪ್ರತಾಪ್ ಸಿಂಹ (MP Pratap Simha) ಹಿಜಾಬ್ ಧರಿಸುವಿಕೆ ಕುರಿತು ಪ್ರತಿಕ್ರಿಯೆ ನೀಡಿದ್ದಾರೆ. ಎಲ್ಲಾ ರೀತಿಯ ಒತ್ತಡ, ಟೀಕಾಪ್ರಹಾರದ ನಡುವೆಯೂ ಸಮವಸ್ತ್ರ (Uniform) ಕಡ್ಡಾಯಕ್ಕೆ ಸರಕಾರ ಬದ್ಧವಾಗಿರೋದು ಒಳ್ಳೆಯ ಸಂದೇಶ. ಹಿಜಾಬ್ ಗಾಗಿ ಇಷ್ಟು ಹಠ ಹಿಡಿದು ಯಾಕಾಗಿ ವಿದ್ಯಾರ್ಥಿಗಳು (Students) ಕೂತಿದ್ದಾರೆ ಎಂದು ಪ್ರತಾಪ್ ಸಿಂಹ ಪ್ರಶ್ನೆ ಮಾಡಿದ್ದಾರೆ.

ಸಮವಸ್ತ್ರ ಎನ್ನುವುದು ಬರೀ ಬಣ್ಣದ ಉಡುಪಲ್ಲ.  ಅದು ಎಲ್ಲಾ ಮಕ್ಕಳು ಸಮಾನರು ಎಂದು ಸಾರುವ ಉಡುಪು. ಎಲ್ಲರೂ ಕಾಲೇಜಿಗೆ ಜಾಬ್ ಗಾಗಿ ಬರುತ್ತಾರೆ. ನೀವು ಹಿಜಾಬ್ ಗಾಗಿ ಬರುತ್ತೀದ್ದೀರಾ? ಹಿಜಾಬ್ ಹಾಕಿಕೊಂಡು, ಟೋಪಿ ಹಾಕಿಕೊಂಡು ನೀವು ಕಲಿಯಬೇಕು ಎಂಬುದಾದರೆ ಮದರಸಾಗೆ ಹೋಗಿ. ಮದರಸಾದಲ್ಲಿ ನಿಮ್ಮ ಪ್ರತ್ಯೇಕ ಭಾವನೆ ಕಾಪಾಡಿಕೊಳ್ಳಬಹುದು. ಸರಕಾರಿ ಶಾಲೆಗಳಲ್ಲಿ ಈ ಪ್ರತ್ಯೇಕತೆ ಸಾಧ್ಯವಿಲ್ಲ ಎಂದು ಹೇಳಿದರು.

ಇಲ್ಲಿಯ ಸಂಸ್ಕೃತಿಯನ್ನು ಒಪ್ಪಿಕೊಳ್ಳಬೇಕು

ಇದು ಬ್ರಿಟಿಷರ ಭಾರತವಲ್ಲ.  ಇದು ಭರತ ಖಂಡ. ಹಿಂದೂ ಧರ್ಮದ ಬುನಾದಿ ಮೇಲೆ ಇರುವ ದೇಶವಿದು. ಇಲ್ಲಿ ಗಣಪತಿ ಪೂಜೆ, ಹೆಣ್ಣು ಮಕ್ಕಳ ಕುಂಕುಮ‌ ಸಂಸ್ಕೃತಿಯ ಭಾಗ. ಇದನ್ನು ಯಾರು ಪ್ರಶ್ನಿಸುವಂತಿಲ್ಲ. ಇಸ್ಲಾಂ, ಕ್ರಿಶ್ಚಿಯನ್ ಮರುಭೂಮಿಯಲ್ಲಿ ಹುಟ್ಟಿ ನೆಲೆಗಾಗಿ ಹುಡುಕಿಕೊಂಡು ಇಲ್ಲಿಗೆ ಬಂದಿವೆ.  ಇಲ್ಲಿಗೆ ಬಂದ ಮೇಲೆ ಹಿಂದೂ ಸಂಸ್ಕೃತಿಯನ್ನು ಒಪ್ಪಿಕೊಳ್ಳಬೇಕು ಎಂದರು.

ಇದನ್ನೂ ಓದಿ:  Hijab Controversy: ವೋಟ್ ಬ್ಯಾಂಕ್​ಗಾಗಿ ಸಿದ್ದರಾಮಯ್ಯ ಸುಳ್ಳು ಹರಡುತ್ತಿದ್ದಾರೆ: ಸಚಿವ ನಾಗೇಶ್​ ಕಿಡಿ

ಕ್ರಿಶ್ಚಿಯನ್, ಇಸ್ಲಾಂ ಧರ್ಮದ ಹೇರಿಕೆ ಇಲ್ಲಿ ನಡೆಯುವುದಿಲ್ಲ. ಈ ನೆಲದ ಸಂಸ್ಕೃತಿಯನ್ನು ಕ್ರಿಶ್ಚಿಯನ್, ಇಸ್ಲಾಂ ಧರ್ಮಗಳು ಒಪ್ಪಿಕೊಳ್ಳಬೇಕು ಎಂದು ಹೇಳಿದರು.

ಸಿದ್ದರಾಮಯ್ಯ ಅಲ್ಲ ಸಿದ್ದರಹೀಮ್ ಅಯ್ಯ!

ಹಿಜಾಬ್ ಬಗ್ಗೆ ಸಿದ್ದರಾಮಯ್ಯ ಹೇಳಿಕೆಗೆ ಪ್ರತಿಕ್ರಿಯಿಸಿದ ಪ್ರತಾಪ್ ಸಿಂಹ, ಅವರನ್ನು ಗಂಭೀರವಾಗಿ ಪರಿಗಣಿಸಬೇಡಿ. ಗೋರಿಪಾಳ್ಯದ ಜಮೀರ್ ಅಹಮದ್ ಈಗ ಸಿದ್ದರಾಮಯ್ಯ ಅವರನ್ನು ಚಾಮರಾಜಪೇಟೆಯಿಂದ ಸ್ಪರ್ಧಿಸಲು ಕರೆಯುತ್ತಿದ್ದಾರೆ. ಅಧಿಕಾರಕ್ಕಾಗಿ ಸಿದ್ದರಾಮಯ್ಯ ಅವರು ಸಿದ್ದರಹೀಮ್ ಅಯ್ಯ ಅಂತಾ ಬೇಕಾದರೂ ಹೆಸರು ಬದಲಾಯಿಸಿಕೊಳ್ಳುತ್ತಾರೆ.  ಅವರ ಹೇಳಿಕೆಯನ್ನು ಗಂಭೀರವಾಗಿ ಪರಿಗಣಿಸಬೇಡಿ ಎಂದು ವ್ಯಂಗ್ಯ ಮಾಡಿದರು.ಬಿ.ಸಿ.ನಾಗೇಶ್ ಪ್ರತಿಕ್ರಿಯೆ

ಹಿಜಾಬ್ ವಿಚಾರ ನ್ಯಾಯಾಲಯದಲ್ಲಿದೆ.  ಆ ವಿಚಾರದ ಬಗ್ಗೆ ಲೀಗಲ್ ಹಾಗೂ ನಮ್ಮ ವಿಭಾಗದವರನ್ನು ಕರೆದು ಸಭೆ ಮಾಡಿದ್ದಾರೆ.  ಕೋರ್ಟ್ ನಲ್ಲಿ ಸರ್ಕಾರದ ಪರವಾಗಿ ಮಾತನಾಡುವ ಬಗ್ಗೆ ಹೇಳಿದ್ದಾರೆ. ರೂಲ್ ಏನೇಳುತ್ತೆ ಅನ್ನೋದನ್ನು ನಮಗೆ ತಿಳಿಸಿದ್ದಾರೆ. 2013, 2018ರಲ್ಲಿಯೇ ನಿಯಮ ತಂದಿದ್ದು, ಎಲ್ಲಾ ಶಿಕ್ಷಣ ಸಂಸ್ಥೆಗಳಿಗೆ ಯುನಿಫಾರ್ಮ್ ಮಾಡುವ ಅಧಿಕಾರ ಕೊಡಲಾಗಿದೆ. ಯಾವುದೇ ಕಮಿಟಿ ಯುನಿಫಾರ್ಟ್ ಮಾಡಬಹುದು. 5 ವರ್ಷ ಆ ಯುನಿಫಾರ್ಮ್ ಇರಬೇಕು ಎಂಬ ಕಂಡೀಷನ್ ಇದೆ ಎಂದು ತಿಳಿಸಿದರು.

ಇದನ್ನೂ ಓದಿ:  ಕೇಸರಿ ಶಾಲು ಮೊದಲಿನಿಂದ ಹಾಕ್ತಿದ್ರಾ? Hijab ಮೊದಲಿನಿಂದಲೂ‌ ಹಾಕ್ತಿದ್ರು: Siddaramaiah

ಮುಂದೆ ಏನು ಕ್ರಮ ತೆಗೆದುಕೊಳ್ಳಬೇಕು ಎಂಬುದರ ಬಗ್ಗೆ ಚರ್ಚೆ ಮಾಡಲಾಗುವುದು. ತೀರ್ಪು ಬರೋವರೆಗೆ ಚಾಲ್ತಿಯಲ್ಲಿರು ಸಮವಸ್ತ್ರವನ್ನು ಮುಂದುವರಿಸಬೇಕು. ಶಿಕ್ಷಣ ಸಂಸ್ಥೆಗಳು ಸಮನ್ವಯ ಕಾಪಾಡಲು ಇರೋದು. ಆ ಮಕ್ಕಳು ಒಂದೂವರೆ ವರ್ಷದಿಂದ ಬರ್ತಾ ಇದಾರೆ. ಜನವರಿವರೆಗೂ ನಿಯಮಗಳನ್ನು ಫಾಲೋ ಮಾಡಿರುವ ಮಕ್ಕಳು, ಈಗ ಹಿಜಾಬ್ ಧರಿಸುತ್ತಿದ್ದಾರೆ.ಯಾರ ಕುಚೋದ್ಯದಿಂದ ಹೀಗೆ ಮಾಡ್ತಾ ಇದ್ದಾರೋ ಗೊತ್ತಿಲ್ಲ.  ಒಂದೂವರೆ ತಿಂಗಳಿಂದ ಮಕ್ಕಳು ಮತ್ತ ಅವರ ಪೋಷಕರ ಮನವೊಲಿಸಲು ಶಾಸಕ ರಘುಪತಿ ಭಟ್ ಪ್ರಯತ್ನಿಸುತ್ತಿದ್ದಾರೆ. ಅದರಲ್ಲಿ ಕೆಲ ಮಕ್ಕಳು ನಿಯಮಗಳನ್ನು ಶಾಲೆಗೆ ಬರುತ್ತಿದ್ದಾರೆ ಎಂದು ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಹೇಳಿದ್ದಾರೆ.
Published by:Mahmadrafik K
First published: