ಒಂದು ಕಾಲದ ವಿಲನ್ ಈಗ ದಸರಾ ಹೀರೋ..ಅಶ್ವತ್ಥಾಮನ ಬಗ್ಗೆ ತಿಳಿಯಲೇಬೇಕಾದ ಸಂಗತಿಗಳು ಇಲ್ಲಿವೆ

Dasara Hero Ashwatthaman: ದಶಕಗಳಿಂದ ಮಲೆನಾಡಿಗರ ಕೋಪಕ್ಕೆ ತುತ್ತಾಗಿದ್ದ ಅಶ್ವತ್ಥಾಮ. ಆದ್ರೀಗ ಆತನ ಗಾಂಭೀರ್ಯತೆ, ಶಾಂತ ಸ್ಬಭಾವ ಕಂಡು ಅರಣ್ಯ ಇಲಾಖೆ ಅಧಿಕಾರಿಗಳೇ ಬೆರಗಾಗಿದ್ದಾರೆ. ಕೇವಲ ನಾಲ್ಕು ವರ್ಷದಲ್ಲೇ ಶಾಂತ ಸ್ವಭಾವ ಮೈಗೂಡಿಸಿಕೊಂಡ ಈತನಿಗೆ ಅರಣ್ಯ ಇಲಾಖೆ ಅಧಿಕಾರಿಗಳು ಭರ್ಜರಿ ಆಫರ್ ನೀಡಿದ್ದಾರೆ.

ಅಶ್ವತ್ಥಾಮ

ಅಶ್ವತ್ಥಾಮ

 • Share this:
  ಮೈಸೂರು(Dasara) : ಮಲೆನಾಡಿಗರಲ್ಲಿ ಭಯ ಹುಟ್ಟಿಸಿದ ವಿಲನ್ ಆತ. ಆತನ ಪುಂಡಾಟಿಕೆಗೆ ಬ್ರೇಕ್ ಹಾಕಲು ಅರಣ್ಯ ಇಲಾಖೆ ಇಲಾಖೆ ಬೆಸ್ತು ಬಿದ್ದಿತ್ತು. ಅತ ಕಾಣಿಸಿಕೊಂಡ್ರೆ ಎದುರಾಗಿದ್ದ ಜನರು ಬದುಕೋದೇ ಡೌಟ್. ಆದರೀಗ ಮಲ್ಲಿಗೆ ನಗರಿಯಲ್ಲಿರೋ ಅವನು ಫುಲ್ ಕೂಲ್ ಆಗಿದ್ದಾನೆ. ಹಾಗಿದ್ರೆ ಯಾರು ಆ ಶಾಂತ ಸ್ವರೂಪಿ ಯಾರು ಅಂತೀರ. ಹಾಗಿದ್ರೆ ಇಲ್ಲಿದೆ ಅದರ  ಫುಲ್ ಡಿಟೇಲ್ಸ್. ಮಹಾಭಾರತದಲ್ಲಿ ಪಾಂಡವರಿಗೆ ಭೀತಿ ಹುಟ್ಟಿಸಿದ್ದ. ಉಪಪಾಂಡವರ ಕೊಂದ ಅಶ್ವತ್ಥಾಮ ಎಷ್ಟು ರೋಚಕವೋ ಅಷ್ಟೆ ರೋಚಕ ನಮ್ಮಿ ಅಶ್ವತ್ಥಾಮ ಆನೆ. ದಶಕಗಳಿಂದ ಮಲೆನಾಡಿಗರ ಕೋಪಕ್ಕೆ ತುತ್ತಾಗಿದ್ದ ಅಶ್ವತ್ಥಾಮ. ಹಾಸನದ ಸಕಲೇಶಪುರದ ಸುತ್ತಮುತ್ತಲಿನ ಹಳ್ಳಿಗಳ ಜನರ ನಿದ್ದೆ ಕೆಡಿಸಿದಾತ. ಆದ್ರೀಗ ಆತನ ಗಾಂಭೀರ್ಯತೆ, ಶಾಂತ ಸ್ಬಭಾವ ಕಂಡು ಅರಣ್ಯ ಇಲಾಖೆ ಅಧಿಕಾರಿಗಳೇ ಬೆರಗಾಗಿದ್ದಾರೆ. ಕೇವಲ ನಾಲ್ಕು ವರ್ಷದಲ್ಲೇ ಶಾಂತ ಸ್ವಭಾವ ಮೈಗೂಡಿಸಿಕೊಂಡ ಈತನಿಗೆ ಅರಣ್ಯ ಇಲಾಖೆ ಅಧಿಕಾರಿಗಳು ಭರ್ಜರಿ ಆಫರ್ ನೀಡಿದ್ದಾರೆ.

  ದಸರಾ ಗ್ಯಾಂಗ್​ನಲ್ಲಿ ಅಶ್ವತ್ಥಾಮ

  ವಿಶ್ವವಿಖ್ಯಾತ ಮೈಸೂರು ದಸರಾ ಪ್ರಮುಖ ಆಕರ್ಷಣೆ ಗಜಪಡೆ. ಈ ಬಾರಿ ದಸರಾದಲ್ಲಿ ಪಾಲ್ಗೊಳ್ಳಲು 8 ಆನೆಗಳ ತಂಡ ಈಗಾಗಲೇ ಅರಮನೆ ಅಂಗಳದಲ್ಲಿ  ತಾಲೀಮು ನಡೆಸುತ್ತಿವೆ. ಇವುಗಳ ಪೈಕಿ ಈ ಬಾರಿ ಎಲ್ಲರ ಗಮನ 38ರ ಹರೆಯದ ಅಶ್ವತ್ಥಾಮ ಎಂಬ ಗಂಡು ಆನೆಯ ಮೇಲಿದೆ. ಈತನಿಗೆ ಮೊದಲ ಬಾರಿಗೆ ದಸರಾದಲ್ಲಿ ಪಾಲ್ಗೊಳ್ಳುವ ಸದಾವಕಾಶವನ್ನು ಅರಣ್ಯ ಇಲಾಖೆ ಅಧಿಕಾರಿಗಳು ನೀಡಿದ್ದಾರೆ. ಈ ಅಶ್ವತ್ಥಾಮ ಈ ಬಾರಿ ದಸರಾ ಮಹೋತ್ಸವಕ್ಕೆ ಬರಲು ಕಾರಣವೂ ಇದೆ.

  ಪುಂಡನಾಗಿದ್ದ ಈತ ಸಂಪೂರ್ಣವಾಗಿ ಬದಲಾಗಿದ್ದಾನೆ

  ಹಾಸನ ಜಿಲ್ಲೆಯ ಸಕಲೇಶಪುರ ಸುತ್ತಮುತ್ತಲಿನ ಈತ ಪುಂಡಾಟ ಮೆರೆಯುತ್ತಿದ್ದ. ಆನೆಯ ಉಪಟಳ ಹೆಚ್ಚಾದ್ದರಿಂದ ಪುಂಡಾನೆಯನ್ನು ಸೆರೆ ಹಿಡಿಯಲು ಅರಣ್ಯ ಇಲಾಖೆ ಮೇಲೆ ಜನರ ಒತ್ತಾಡ ಹೆಚ್ಚಾಯ್ತು. ಆಗ 2017ರಲ್ಲಿ ಈತನನ್ನು  ಅಭಿಮನ್ಯು ಅಂಡ್ ಟೀಮ್ ಸೆರೆ ಹಿಡಿದಿತ್ತು. ‌ಸೆರೆ ಸಿಕ್ಕ ಕೇವಲ ನಾಲ್ಕು ವರ್ಷಗಳಲ್ಲಿ ಪುಂಡನಾಗಿದ್ದ ಈತ ಸಂಪೂರ್ಣವಾಗಿ ಬದಲಾದ. ಈತನ ಎತ್ತರ, ದೇಹದ ಉದ್ದ, ಆಕರ್ಷಕ ದಂತ ಸ್ವಭಾವನ್ನು ಗಮನಿಸಿದ ಅರಣ್ಯ ಇಲಾಖೆ ಅಧಿಕಾರಿಗಳು ಈ ಬಾರಿ ದಸರಾಕ್ಕೆ ಈತನ್ನ ಕರೆತಂದಿದ್ದಾರೆ.

  ಇದನ್ನೂ ಓದಿ: Madikeri Dasara: ಶಕ್ತಿ ದೇವತೆಗಳ ಕರಗ ಉತ್ಸವದ ಮೂಲಕ ಮಡಿಕೇರಿ ದಸರಾಕ್ಕೆ ಚಾಲನೆ

  ಭವಿಷ್ಯದಲ್ಲಿ ಅಂಬಾರಿ ಹೊರುತ್ತಾನಾ? 

  ಈತ ಸದ್ಯ ಅರಮನೆ ಅಂಗಳದಲ್ಲಿ ಅಭಿಮನ್ಯು, ಧನಂಜಯ, ಗೋಪಾಲಸ್ವಾಮಿ ಸೇರಿದಂತೆ ಇತರೆ ಆನೆಗಳ ಜೊತೆಗೆ ಗಾಂಭೀರ್ಯ ನಡಿಗೆ ಆರಂಭಿಸಿದ್ದಾನೆ. 34ರ ಹರೆಯದ ಈತ, 2.85 ಮೀಟರ್ ಎತ್ತರ, 3.46 ಉದ್ದದ ದೇಹ 3,630 ಕೆ.ಜಿ ತೂಕವಿದ್ದಾನೆ, ಸಮತಟ್ಟಾದ ಬೆನ್ನುನೀಳ ದಂತ ಹೊಂದಿರುವುದರಿಂದ  ಅಭಿಮನ್ಯುವಿನ ಉತ್ತರಾಧಿಕಾರಿಗಳ ಆನೆಗಳ ಪಟ್ಟಿಯಲ್ಲಿ ಈತನು ಸೇರ್ಪಡೆಗೊಂಡಿದ್ದಾನೆ. ಹಾಗಾಗಿ ಕ್ಯಾಪ್ಟನ್ ಅಭಿಮನ್ಯು ಸಾರಥ್ಯದಲ್ಲಿ ಈತನನ್ನ ಪಳಗಿಸಲಾಗುತ್ತಿದೆ. ಹಾಗಾಗಿ ಈ ಬಾರಿ ಜಂಬೂ ಸವಾರಿಯಲ್ಲಿ ಆತನ ಭಾಗವಹಿಸುವಿಕೆ ಸಾಕಷ್ಟು ಕುತೂಹಲ ಮೂಡಿಸಿದ್ದು ಭವಿಷ್ಯದಲ್ಲಿ ಅಂಬಾರಿ ಆನೆಯಾಗುವ ಅವಕಾಶವೂ ಈತನಿಗಿದೆ.

  ಮಾವುತ ಶಿವು ಹಾಗೂ ಕಾವಾಡಿ ಗಣೇಶ, ಅಶ್ವತ್ಥಾಮನ ಆರೈಕೆ ಮಾಡುತ್ತಿದ್ದಾರೆ‌. ದೊಡ್ಡಹರವೆ ಆನೆ ಶಿಬಿರದಲ್ಲಿ ಪಳಗಿರುವ ಈತ ಇನ್ನೂ ಮೂರ್ನಾಲ್ಕು ವರ್ಷಗಳಲ್ಲಿ ಅಂಬಾರಿ ಹೊರುವಷ್ಟು ಸಾಮರ್ಥ್ಯ ಹೊಂದಲಿದ್ದಾನೆ‌.ಹಾಗಾಗಿ ಮುಂದಿನ ದಸರಾದಲ್ಲಿ  ನಿರಂತರವಾಗಿ ಪಾಲ್ಗೊಂಡು ಮುಂದೆ ಅಂಬಾರಿ ಹೊರುವ ಜವಬ್ದಾರಿ ನೀಡುವ ಸಾದ್ಯತೆಯೂ ಇದೆ.  ಮೊದಲ ಬಾರಿಗೆ ದಸರಾ ಹೆಜ್ಜೆ ಹಾಕಲು ಸಜ್ಜಾಗುತ್ತಿರುವ ಅಶ್ವತ್ಥಾಮನಿಗೊಂದು ಆಲ್ ದಿ ಬೆಸ್ಟ್ ಹೇಳೋಣ.

  ವರದಿ: ದಿವ್ಯೇಶ್​ ಜಿ ವಿ
  Published by:Kavya V
  First published: