ಮೈಸೂರು: ಹಾನಗಲ್, ಸಿಂಧಗಿ ಉಪ ಚುನಾವಣಾ (by election) ಪ್ರಚಾರ ಕಣದಲ್ಲಿ ಇಬ್ಬರು ಮಾಜಿ ಮುಖ್ಯಮಂತ್ರಿಗಳ ಮಧ್ಯೆ ವಾಕ್ಸಮರ ನಿಲ್ಲುವ ಲಕ್ಷಣಗಳೇ ಕಾಣುತ್ತಿಲ್ಲ. ಇಂದೂ ಕೂಡ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ (HD Kumaraswamy) ಅವರು ವಿಪಕ್ಷ ನಾಯಕ ಸಿದ್ದರಾಮಯ್ಯ(siddaramaiah) ಹಾಗೂ ಕಾಂಗ್ರೆಸ್ ಶಾಸಕ ಜಮೀರ್ ಅಹ್ಮದ್ ಖಾನ್(zameer ahmed khan) ವಿರುದ್ಧ ವಾಗ್ದಾಳಿ ನಡೆಸಿದರು. ಸಿದ್ದರಾಮಯ್ಯ ಅಂಡ್ ಟೀಂ ಸಿಂಧಗಿಯಲ್ಲಿ ಕುಳಿತೊರೋದೆ ಜೆಡಿಎಸ್(JDS)ನ ಸೋಲಿಸಿ ಬಿಜೆಪಿ(BJP)ಯನ್ನ ಗೆಲ್ಲಿಸಲು ಎಂದು ಎಚ್ಡಿಕೆ ಆರೋಪಿಸಿದರು. ಸಿಂಧಗಿಯಲ್ಲಿ ಸ್ಪರ್ಧೆ ಇರೋದೆ ಜೆಡಿಎಸ್-ಬಿಜೆಪಿ ನಡುವೆ, ಕಾಂಗ್ರೆಸ್ನವರು ಅಲ್ಲಿ ಯಾಕೆ ಬೀಡು ಬಿಟ್ಟಿದ್ದಾರೆ. ಅವರ ಉದ್ದೇಶ ಜೆಡಿಎಸ್ ಸೋಲಿಸಿ, ಬಿಜೆಪಿಯನ್ನು ಗೆಲ್ಲಿಸುವುದು ಎಂದು ಇಲ್ಲಿ ಮಾಜಿ ಸಿಎಂ ಕುಮಾರಸ್ವಾಮಿ ಆರೋಪಿಸಿದರು.
ಅವರ ಫಾರಂಹೌಸ್ನಲ್ಲಿ ಅವರೇನು ಬಿತ್ತಿದ್ದಾರೆ?
ಸಿದ್ದರಾಮಯ್ಯ ಪ್ರತಿ ಸಭೆಯಲ್ಲೂ ನನ್ನ ವಿರುದ್ಧ ಹೊಲ ಉಳುಮೆ ಮಾಡಿದ್ದಾನಾ ಎಂದು ಪ್ರಶ್ನಿಸುತ್ತಾರೆ. ನಿಜವಾದ ರೈತ ನಾನು, ನಾವು ಕುರಿ ಮಂದೆಯ ನಡುವೆ ಊಟ ಮಾಡಿ ಮಲಗಿದ್ದೇನೆ. ನಾನು ಕೃಷಿಕನೋ ಅಲ್ಲವೋ ಅಂತ ಬಿಡದಿ ತೋಟಕ್ಕೆ ಬಂದು ನೋಡಲಿ ಎಂದು ಸವಾಲೆಸೆದರು. ಆದ್ರೆ ಸಿದ್ದರಾಮಯ್ಯ ಎಲ್ಲಿ ಹೊಲ ಉಳುಮೆ ಮಾಡಿದ್ದಾರೆ.ಅವರದ್ದು ಒಂದು ಫಾರಂ ಹೌಸ್ ಇದ್ಯಲ್ಲ, ಏನ್ ಬಿತ್ತಿದ್ದಾರೆ ಎಂದು ಸಿದ್ದರಾಮಯ್ಯ ಆರೋಪಕ್ಕೆ ಕುಮಾರಸ್ವಾಮಿ ತಿರುಗೇಟು ನೀಡಿದರು.
ಜಾತಿ ಜಾತಿಗಳನ್ನೇ ಒಡೆದರು
ಕರ್ನಾಟಕದಲ್ಲಿ ಜಾತಿ ವಿಷ ಬೀಜ ಬಿತ್ತಿದ್ದೆ ಸಿದ್ದರಾಮಯ್ಯ, ಜಾತಿ ಜಾತಿಗಳನ್ನೇ ಒಡೆದರು. ಸಿಂಧಗಿ, ಹಾನಗಲ್ನಲ್ಲಿ ಜಾತಿವಾರು ಸಭೆಗಳನ್ನ ಮಾಡ್ತಿದ್ದಾರೆ. ಜಾತ್ಯಾತೀತವಾಗಿದ್ರೆ ಇವರು ಜಾತಿವಾರು ಸಭೆ ಯಾಕೆ ನಡೆಸುತ್ತಿದ್ದರು. ಇವರೆಂಥಾ ಜಾತ್ಯಾತೀತ ವಾದಿಗಳು ಎಂದು ವಾಗ್ದಾಳಿ ನಡೆಸಿದರು.
ಇವರಿಂದ ಮುಸಲ್ಮಾನರು ಉದ್ದಾರ ಆಗಿದ್ದಾರಾ?
ಇನ್ನು ಬ್ರದರ್ ಬ್ರದರ್ ಅಂತ ಹೇಳಿಕೊಂಡು ಕುಮಾರಸ್ವಾಮಿ ಮುಸಲ್ಮಾನರ ಕತ್ತು ಕೋಯ್ತಾರೆ ಎಂಬ ಜಮೀರ್ ಆರೋಪಕ್ಕೆ ತಿರುಗೇಟು ನೀಡಿದರು. ಫಾರುಕ್ರನ್ನ ಚುನಾವಣೆಗೆ ನಿಲ್ಲಿಸಿ ಕತ್ತು ಕುಯ್ದಿದ್ದು ಯಾರು.? ಫಾರುಕ್ ವಿರುದ್ದ ರಾಮಸ್ವಾಮಿಗೆ ಓಟು ಹಾಕಿದ್ದು ಯಾರು? ಇವರಿಂದ ಮುಸಲ್ಮಾನರು ಉದ್ದಾರ ಆಗಿದ್ದಾರಾ. ಹೋಗಲಿ ರಾಮಸ್ವಾಮಿಯವರನ್ನಾದರೂ ಉಳಿಸಿಕೊಂಡಿದ್ದಾರಾ? ಇವರಿಂದ ನಾವು ಕಲಿಯುವುದು ಏನಿಲ್ಲ.ಇವರೆಲ್ಲಾ ಚುನಾವಣೆಯುದ್ದಕ್ಕೂ ಹೀಗೆ ಮಾತನಾಡಲಿ. ನನಗೆ ಒಳ್ಳೆಯದು, ನಾನು ಅದನ್ನೇ ಆಶಿಸುತ್ತೇನೆ ಎಂದರು.
ಇದನ್ನೂ ಓದಿ: Pralhad Joshi; ಸಿದ್ದರಾಮಯ್ಯ ದೃಷ್ಟಿಯಲ್ಲಿ DK Shivakumar ದೊಡ್ಡ ದುರ್ಜನರು: ಪ್ರಹ್ಲಾದ್ ಜೋಶಿ ತಿರುಗೇಟು
ಸಿದ್ದರಾಮಯ್ಯ ಖಾಲಿ ಡಬ್ಬ ಎಂದ ಈಶ್ವರಪ್ಪ
ಇನ್ನು ಸಿಂಧಗಿಯಲ್ಲಿ ನ್ಯೂಸ್ 18 ಕನ್ನಡಕ್ಕೆ ಹೇಳಿಕೆ ನೀಡಿದ ಸಚಿವ ಕೆ ಎಸ್ ಈಶ್ವರಪ್ಪ, ವಿಪಕ್ಷ ನಾಯಕ ಸಿದ್ದರಾಮಯ್ಯರನ್ನು ಖಾಲಿ ಡಬ್ಬ ಎಂದರು. ಸಿದ್ದರಾಮಯ್ಯ ಖಾಲಿ ಡಬ್ಬ ಇದ್ದಂತೆ, ಅವರು ಯಾವ ಅಭಿವೃದ್ಧಿ ಮಾಡದೆ, ನಾನು ಕುರುಬ ಕುರುಬ ಎಂದು ಖಾಲಿ ಮಾತಾಡ್ತಿದ್ದಾರೆ. ಅವರಿಗೆ ನಾಯಕತ್ವವೂ ಇಲ್ಲ, ಸಂಘಟನೆಯೂ ಇಲ್ಲ. ಆದರೆ ನಮಗೆ ಸಂಘಟನೆ, ನಾಯಕತ್ವ ಹಾಗೂ ಅಭಿವೃದ್ಧಿ ಇದೆ. ಇದರ ಆಧಾರದ ಮೇಲೆ ನಾವು 25000 ಮತಗಳ ಅಂತರದಿಂದ ಗೆಲ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಗೋಣಿಚೀಲದ ಹಣ ಎಂದು ಡಿಕೆ ಶಿವಕುಮಾರ್, ಸಿಂಧಗಿ ಕ್ಷೇತ್ರದ ಜನರಿಗೆ ಅಪಮಾನ ಮಾಡಿದ್ದಾರೆ. ಇವರಿಗೆ ಚುನಾವಣೆಯಲ್ಲಿ ಜನರು ತಕ್ಕ ಪಾಠ ಕಲಿಸ್ತಾರೆ ದೇವೇಗೌಡರಿಗೆ ಸೂಟ್ಕೇಸ್ ತೆಗೆದು ಕೊಳ್ಳುವ ಗತಿ ಬಂದಿದ್ದೆಯಾ..? ನನಗಂತೂ ಅವರಿಗೆ ಆ ಪರಿಸ್ಥಿತಿ ಇಲ್ಲ ಅಂತಾ ಅನ್ಸಿತ್ತಿದೆ. ಆದರೆ ಬಿಜೆಪಿಯಿಂದ ಸೂಟ್ಕೇಸ್ ಅನ್ನೋ ಜಮ್ಮೀರ್ ಆರೋಪ ಸುಳ್ಳು . ಸಿದ್ದರಾಮಯ್ಯ, ಜಮ್ಮೀರ್, ಸಿಎಂ ಇಬ್ರಾಹಿಂ ಯಾವ ಪಕ್ಷದ ಲ್ಲಿ ಇದ್ದಾರೆ ಎಂದು ಹೇಳಲಿ ಎಂದು ತಿರುಗೇಟು ನೀಡಿದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ