Bitcoin: ಆಸ್ಪತ್ರೆಯ ಡೇಟಾ ಕದ್ದು ಬಿಟ್​ಕಾಯ್ನ್ ಡಿಮ್ಯಾಂಡ್ ಮಾಡಿದ ಹ್ಯಾಕರ್ಸ್, ಇದು ಹೊಸಾ ಬಗೆಯ ಬ್ಲಾಕ್​ಮೇಲ್!

ಆಸ್ಪತ್ರೆಯ ಡೇಟಾ ಕದ್ದಿರುವ ಹ್ಯಾಕರ್ ಗಳು ಬಿಟ್ ಕಾಯಿನ್ ಮೂಲಕ ಹಣ ಕೇಳಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಆದ್ರೆ ಇದನ್ನು ಪೊಲೀಸರು ಖಚಿತಪಡಿಸಿಲ್ಲ. ಪ್ರಕರಣ ಸಂಬಂಧ ಎಫ್‌ಐಆರ್ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ ಎಂದು ಡಿಸಿಪಿ ಪ್ರದೀಪ್ ಗುಂಟಿ ಮಾಹಿತಿ ನೀಡಿದ್ದಾರೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
Bitcoin: ಆಸ್ಪತ್ರೆಯ ಡೇಟಾ ಕದ್ದು ಬಿಟ್​ಕಾಯ್ನ್ ಡಿಮ್ಯಾಂಡ್ ಮಾಡಿದ ಹ್ಯಾಕರ್ಸ್, ಇದು ಹೊಸಾ ಬಗೆಯ ಬ್ಲಾಕ್​ಮೇಲ್!ಮೈಸೂರು: ರಾಜ್ಯದಲ್ಲಿ ಬಿಟ್ ಕಾಯಿನ್ ಹಗರಣ (Bitcoin Scam), ಹ್ಯಾಕರ್ ಶ್ರೀಕಿ (Hackeer Sriki) ಪ್ರಕರಣಗಳು ಸದ್ದು ಮಾಡುತ್ತಿವೆ. ಈ ನಡುವೆ ಮೈಸೂರಿನ (Mysuru) ಖಾಸಗಿ ಆಸ್ಪತ್ರೆಯ (Private Hospital) ಮಾಹಿತಿಯನ್ನು ಅಪರಿಚಿತರು ಹ್ಯಾಕ್ ಮಾಡಿದ್ದಾರೆ. ಈ ಸಂಬಂಧ ಖಾಸಗಿ ಆಸ್ಪತ್ರೆ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದೆ. ಮುಖ್ಯ ಹಣಕಾಸು ಸರ್ವರ್ ಮತ್ತು ರೋಗಿಗಳ ಡೇಟಾವನ್ನು ಅಪರಿಚಿತ ವ್ಯಕ್ತಿಗಳು ಹ್ಯಾಕ್ ಮಾಡಿದ್ದಾರೆ ಎಂದು ಆಸ್ಪತ್ರೆ ದೂರಿನಲ್ಲಿ ದಾಖಲಿಸಿದೆ. ಈ ಸಂಬಂಧ ಸೈಬರ್ ಕ್ರೈಂ, ಆರ್ಥಿಕ ಅಪರಾಧ ಮತ್ತು ಮಾದಕ ದ್ರವ್ಯ (CEN- Cybercrime, Economic offences and Narcotics) ಪೊಲೀಸರನ್ನು ಆಸ್ಪತ್ರೆ ಸಂಪರ್ಕಿಸಿದೆ

ಆಸ್ಪತ್ರೆಯ ಡೇಟಾ ಕದ್ದಿರುವ ಹ್ಯಾಕರ್ ಗಳು ಬಿಟ್ ಕಾಯಿನ್ ಮೂಲಕ ಹಣ ಕೇಳಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಆದ್ರೆ ಇದನ್ನು ಪೊಲೀಸರು ಖಚಿತಪಡಿಸಿಲ್ಲ. ಪ್ರಕರಣ ಸಂಬಂಧ ಎಫ್‌ಐಆರ್ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ ಎಂದು ಡಿಸಿಪಿ ಪ್ರದೀಪ್ ಗುಂಟಿ ಮಾಹಿತಿ ನೀಡಿದ್ದಾರೆ.

ಹ್ಯಾಕಿಂಗ್ ತಡೆಯೋದು ಹೇಗೆ ಎಂಬುದನ್ನು ನಗರದ Security Researcher ಎಹ್ರಾಜ್ ಅಹ್ಮದ್ ಮಾಹಿತಿ ನೀಡಿದ್ದಾರೆ.

  • ನಿಯತಕಾಲಿಕವಾಗಿ ನಮ್ಮ ಸಿಸ್ಟಂಗಳನ್ನು  ಭದ್ರತಾ ತಪಾಸಣೆ ನಡೆಸುವುದು. ಇದು ಹ್ಯಾಕಿಂಗ್ ತಪ್ಪಿಸಲು ಪ್ರಮಖ ಮಾರ್ಗವಾಗಿದೆ.

  • ಆಂಟಿವೈರಸ್ ಬಳಕೆಯನ್ನು ಕಾಲಕಾಲಕ್ಕೆ ನವೀಕರಿಸಬೇಕು.

  • ಡೇಟಾವನ್ನು ಸಂಗ್ರಹಿಸಲು ಬಳಸುವ ಸರ್ವರ್‌ಗಳನ್ನು ಸುರಕ್ಷಿತಗೊಳಿಸಬೇಕು.

  • ಎಲ್ಲಾ ನಿರ್ಣಾಯಕ ಮತ್ತು ಸೂಕ್ಷ್ಮ ಡೇಟಾಗೆ ಬ್ಯಾಕಪ್ ಯೋಜನೆಯನ್ನು ಬಳಸಬೇಕು ಮತ್ತು ಅಂತಹ ಡೇಟಾ ಮತ್ತು ಸರ್ವರ್‌ಗಳಿಗೆ ಪ್ರವೇಶವನ್ನು ನಿರ್ಬಂಧಿಸಬೇಕು.

  • ಮೂರನೇ ವ್ಯಕ್ತಿ ಸಾಫ್ಟ್‌ವೇರ್ ಬಳಸದಂತೆ ನೋಡಿಕೊಳ್ಳುವುದು. ಜೊತೆಗೆ ನೋಂದಣಿಯಾಗದ ISP (Internet Service Provider)  ಬಳಕೆಯಾಗದಂತೆ ಎಚ್ಚರಿಕೆ ತೆಗೆದುಕೊಳ್ಳಬೇಕು.


ಈ ರೀತಿ ಮುಂಜಾಗ್ರತ ಕ್ರಮಗಳನ್ನು ತೆಗೆದುಕೊಳ್ಳುವದರಿಂದ ಸರ್ವರ್‌ಗಳನ್ನು ಸುರಕ್ಷಿತವಾಗಿರಿಸಲು ಸಹಾಯ ಮಾಡುತ್ತದೆ ಮತ್ತು ಯಾವುದೇ ಮಾಲ್‌ವೇರ್ ನೆಟ್‌ವರ್ಕ್ ಮೂಲಕ ಹರಡುವುದನ್ನು ತಡೆಯುತ್ತದೆ ಎಂದು ಅಹ್ಮದ್ ಹೇಳಿದ್ದಾರೆ.

ಇದನ್ನೂ ಓದಿ:  Explainer: ಬಿಟ್‌ ಕಾಯಿನ್‌ ಮೈನಿಂಗ್ ಬಗ್ಗೆ ನಿಮಗೆಷ್ಟು ಗೊತ್ತು? ಇಲ್ಲಿದೆ ಮಾಹಿತಿ

Onlineನಲ್ಲಿ ಹಳ ಕಳೆದುಕೊಂಡವರಿಂದ ದೂರು ದಾಖಲು

ಆನ್ ಲೈನ್ ಹಣ ಕಳೆದುಕೊಂಡ ಕುರಿತ ಎರಡು ಪ್ರಕರಣಗಳನ್ನು CEN ಪೊಲೀಸರು ದಾಖಲಿಸಿಕೊಂಡಿದ್ದಾರೆ. ನವೆಂಬರ್ 26 ರಂದು 27 ವರ್ಷದ ಮಹಿಳಗೆ ಹೇಳಿಎ

ವರದಿಯಾದ ಮೊದಲ ಘಟನೆಯಲ್ಲಿ, 27 ವರ್ಷದ ಮಹಿಳೆಯೊಬ್ಬರು ಫೋನ್ ಮೂಲಕ ಸಂಪರ್ಕಿಸಿದ ವ್ಯಕ್ತಿಯೊಬ್ಬರು ಸೂಚಿಸಿದಂತೆ ಅಪ್ಲಿಕೇಶನ್ ಡೌನ್ ಲೋಡ್ ಮಾಡಿಕೊಳ್ಳುತ್ತಿದ್ದಂತೆ 1.73 ಲಕ್ಷ ರೂ. ಹಣ ಕಳೆದುಕೊಂಡಿದ್ದಾರೆ. ಮಹಿಳೆಗೆ ತಾನು ಕ್ರೆಡಿಟ್ ಕಾರ್ಡ್ ಕಂಪನಿಯ customer care representative ಎಂದು ನಂಬಿಸಲಾಗಿತ್ತು.

ಮತ್ತೊಂದು ಪ್ರಕರಣದಲ್ಲಿ ವಿಜಯನಗರದ ನಿವಾಸಿ 48 ವರ್ಷದ ವ್ಯಕ್ತಿಯೊಬ್ಬರನ್ನು ದೂರವಾಣಿ ಮೂಲಕ ಸಂಪರ್ಕಿಸಿ ಕೆವೈಸಿ ಅಪ್‌ಡೇಟ್‌ ಮಾಡುವಂತೆ ಸೂಚಿಸಿದಂತೆ ಆಪ್‌ ಅಳವಡಿಸಿ 1.57 ಲಕ್ಷ ರೂ.ಗಳನ್ನು ದೋಚಿಸಿದ್ದಾರೆ. ಎರಡೂ ಪ್ರಕರಣಗಳಲ್ಲಿ ಎಫ್‌ಐಆರ್ ದಾಖಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಇದನ್ನೂ ಓದಿ: Bitcoin - ಬಿಟ್​ಕಾಯಿನ್ ಪಾಸ್​ವರ್ಡ್ ಮರೆತು ಜನರು ಕಳೆದುಕೊಂಡ ಹಣ 10 ಲಕ್ಷ ಕೋಟಿಯಾ?

ಡಿಜಿಟಲ್ ಯುಗದ ಡಿಜಿಟಲ್ ಕರೆನ್ಸಿ

Bitcoin: ಡಿಜಿಟಲ್ ಯುಗದ ಡಿಜಿಟಲ್ ಕರೆನ್ಸಿ ಎಂದೇ ಹೆಸರುವಾಸಿಯಾಗಿರುವ ಬಿಟ್ ಕಾಯಿನ್ ಇದಕ್ಕೆ ಯಾವುದೇ ಭೌತಿಕ ರೂಪ ಇರುವುದಿಲ್ಲ. ಅಲ್ಲದೆ ದೇಶ, ಭಾಷೆ, ಬ್ಯಾಂಕ್‌ಗಳು ಹೀಗೆ ಯಾವುದೇ ರೀತಿಯ ಚೌಕಟ್ಟು ಇಲ್ಲ. ಇದೀಗ ಮಧ್ಯ ಅಮೆರಿಕದಲ್ಲಿರುವ ದೇಶ ಎಲ್‌ಸಾಲ್ವಡಾರ್ ಬಿಟ್ ಕಾಯಿನ್ ಅನ್ನು ಕಾನೂನು ಟೆಂಡರ್ ಆಗಿ ಸ್ವೀಕರಿಸಿದ ಏಕೈಕ ದೇಶವಾಗಿದೆ. ಮತ್ತು ಇದು ಕ್ರಿಪ್ಟೋಕರೆನ್ಸಿಗಳ ಗಣಿಗಾರಿಕೆಗೆ ಶಕ್ತಿ ತುಂಬಲು ದೇಶದ ಜ್ವಾಲಾಮುಖಿ ಶಕ್ತಿಯನ್ನು ಬಳಸಬಹುದೇ ಎಂದು ಅನ್ವೇಷಿಸುತ್ತಿದೆ.

ಮತ್ತೊಂದೆಡೆ, ವಿಶ್ವದ ಅರ್ಧಕ್ಕಿಂತ ಹೆಚ್ಚು ಬಿಟ್‌ಕಾಯಿನ್‌ಗಳನ್ನು ಗಣಿಗಾರಿಕೆ ಮಾಡುವ ಚೀನಾ, ಇಂಧನ ಬಳಕೆಯ ಬಗೆಗಿನ ಕಾಳಜಿಯಿಂದ ಅಂತಹ ವ್ಯವಹಾರಗಳನ್ನು ಭೇದಿಸಲು ಪ್ರಾರಂಭಿಸಿದೆ.
Published by:Mahmadrafik K
First published: