• Home
 • »
 • News
 • »
 • state
 • »
 • ಸಿದ್ದರಾಮಯ್ಯ ಸೋಲು, ಮೈತ್ರಿ ಸರ್ಕಾರ ಪತನ ಸೇರಿದಂತೆ ಹಲವು ವಿಚಾರಕ್ಕೆ ಶ್ರೀನಿವಾಸ್​ ಮನೆಯಲ್ಲಿ ಮುಹೂರ್ತ ಇಟ್ಟಿದ್ದೇವೆ; ವಿಶ್ವನಾಥ್​

ಸಿದ್ದರಾಮಯ್ಯ ಸೋಲು, ಮೈತ್ರಿ ಸರ್ಕಾರ ಪತನ ಸೇರಿದಂತೆ ಹಲವು ವಿಚಾರಕ್ಕೆ ಶ್ರೀನಿವಾಸ್​ ಮನೆಯಲ್ಲಿ ಮುಹೂರ್ತ ಇಟ್ಟಿದ್ದೇವೆ; ವಿಶ್ವನಾಥ್​

ಹೆಚ್‌. ವಿಶ್ವನಾಥ್.‌

ಹೆಚ್‌. ವಿಶ್ವನಾಥ್.‌

ಸಂಸದ ಶ್ರೀನಿವಾಸ್​ ಪ್ರಸಾದ್​ ಮನೆ ಹಲವು ಬೆಳವಣಿಗೆಗೆ ಸಾಕ್ಷಿಯಾಗಿದೆ. ಈಗಲೂ ಶ್ರೀನಿವಾಸ್​ ಪ್ರಸಾದ್ ಮನೆಯಲ್ಲಿ ರಾಜಕೀಯ ಮತ್ತು ಜಿಲ್ಲೆಯ ವಿದ್ಯಾಮಾನಗಳ ಕುರಿತು ಮಾತನಾಡಿದ್ದೇವೆ.

 • Share this:

  ಮೈಸೂರು (ಜೂ. 2): ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸಿದ್ದರಾಮಯ್ಯ ಸೋಲಿಗೆ, ಸಮ್ಮಿಶ್ರ ಸರ್ಕಾರ ಪತನ, ಯಡಿಯೂರಪ್ಪ ಸಿಎಂ ಆಗಲು ಸೇರಿದಂತೆ ಹಲವು ವಿಚಾರಗಳಿಗೆ ಸಂಸದ ಶ್ರೀನಿವಾಸ್​ ಪ್ರಸಾದ್​ ಮನೆಯಲ್ಲಿ ಮುಹೂರ್ತ ಇಟ್ಟಿದ್ದೇವೆ. ಸಂಸದ ಶ್ರೀನಿವಾಸ್​ ಪ್ರಸಾದ್​ ಮನೆ ಹಲವು ಬೆಳವಣಿಗೆಗೆ ಸಾಕ್ಷಿಯಾಗಿದೆ.  ಈಗಲೂ ಶ್ರೀನಿವಾಸ್​ ಪ್ರಸಾದ್ ಮನೆಯಲ್ಲಿ ರಾಜಕೀಯ ಮತ್ತು ಜಿಲ್ಲೆಯ ವಿದ್ಯಾಮಾನಗಳ ಕುರಿತು ಮಾತನಾಡಿದ್ದೇವೆ. ಸದ್ಯಕ್ಕೆ ಯಾವ ವಿಚಾರಕ್ಕೆ ಮೂಹರ್ತ ಇಟ್ಟಿದ್ದೇವು ಎಂದು ಹೇಳುವುದಿಲ್ಲ. ಈ ಬಗ್ಗೆ ಕಾದು ನೋಡಣೆ ಏನಾಗಲಿದೆ ಎಂದು ವಿಧಾನ ಪರಿಷತ್​ ಸದಸ್ಯ ವಿಶ್ವನಾಥ್​ ಮಾರ್ಮಿಕವಾಗಿ ತಿಳಿಸಿದ್ದಾರೆ. ರಾಜ್ಯ ರಾಜಕೀಯ ಬೆಳವಣಿಗೆ ಬೆನ್ನಲ್ಲೆ ಅವರು ಇಂದು ಸಂಸದ ಶ್ರೀನಿವಾಸ್​ ಪ್ರಸಾದ್​ ಭೇಟಿ ಮಾಡಿ ಗಂಭೀರ ಚರ್ಚೆ ನಡೆಸಿದ್ದಾರೆ.


  ಬಿಎಸ್​ವೈ ಆರೋಗ್ಯ ಸರಿಯಿಲ್ಲ


  ಈ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಯಡಿಯೂರಪ್ಪ ಆರೋಗ್ಯ ಸರಿಯಿಲ್ಲ. ಅವರ ಆರೋಗ್ಯ ಸರಿಯಾಗಬೇಕು. ಅದರ ಜೊತೆ ರಾಜ್ಯದ ಆಡಳಿತದ ಆರೋಗ್ಯವು ಸರಿಯಾಗಬೇಕು. ಇದಕ್ಕಾಗಿ ಹೈಕಮಾಂಡ್ ಶೀಘ್ರವೇ ಒಂದು ತೀರ್ಮಾನ ಕೈಗೊಳ್ಳಬೇಕು ಎನ್ನುವ ಮೂಲಕ ಯಡಿಯೂರಪ್ಪ ನಾಯಕತ್ವ ಬದಲಾವಣೆ ಕುರಿತು ಪರೋಕ್ಷವಾಗಿ ಸಹಮತ ಸೂಚಿಸಿದರು


  ಹೈಕಮಾಂಡ್​ ಅಂತಿಮ 


  ರಾಜ್ಯ ರಾಜಕಾರಣಿದಲ್ಲಿ ಸ್ವಲ್ಪ ಗೊಂದಲ ಇದೆ. ಕೆಲವರು ದೆಹಲಿಗೆ ಹೋಗಿದ್ದಾರೆ. ಇನ್ನು‌ ಕೆಲವರು ಹೇಳಿಕೆ‌ ಕೊಡುತ್ತಿದ್ದಾರೆ. ಈ ಮಧ್ಯೆ ಯಡಿಯೂರಪ್ಪನವರು ಏನೂ ಮಾತನಾಡುತ್ತಿಲ್ಲ. ಯಾರು ಏನೇ ಮಾಡಿದರೂ ತೀರ್ಮಾನ ಮಾಡುವುದು ಹೈಕಮಾಂಡ್. ಹಾಗಾಗಿ ಹೈಕಮಾಂಡ್ ಸೂಕ್ತ ತೀರ್ಮಾನ ಮಾಡಲಿದೆ ಎಂದು ವಿಶ್ವಾಸ ಹೊಂದಿದ್ದೇವೆ ಎಂದರು.


  ಹಾದಿ ರಂಪ ಬೀದಿ ರಂಪ ಬಿಡಿ


  ಇದೇ ವೇಳೆ ಜಿಲ್ಲೆಯಲ್ಲಿ ಡಿಸಿ ರೋಹಿಣಿ ಸಿಂಧೂರಿ ಮತ್ತು ಸಂಸದ ಪ್ರತಾಪ್​ ಸಿಂಹ ಜಟಾಪಟಿ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಮೈಸೂರು ಜಿಲ್ಲೆ ನಿಮ್ಮಬ್ಬರದ್ದೆ ಅಲ್ಲ. ಪ್ರತಾಪ್‌ಸಿಂಹಗೋ ಅಥವಾ ರೋಹಿಣಿ ಸಿಂಧೂರಿಗೋ ಮೈಸೂರು ಸೀಮಿತವಾಗಿಲ್ಲ. ಇಬ್ಬರು ಹಾದಿರಂಪ ಬೀದಿರಂಪ ಮಾಡುವುದನ್ನು ಮೊದಲು ಬಿಡಬೇಕು ಎಂದು ಸಲಹೆ ನೀಡಿದರು.


  ಇದನ್ನು ಓದಿ: ಸಿಪಿ ಯೋಗೇಶ್ವರ್​ದು ಐರನ್​ ಲೆಗ್​​; ರೇಣುಕಾಚಾರ್ಯ ವಾಗ್ದಾಳಿ


  ಸಂಸದರಾಗಿರುವ ಪ್ರತಾಪ್​ ಸಿಂಹ ಅವರು ಯಾವುದೇ ಮಾತುಗಳನ್ನು ಆಡಬೇಕಾದರೆ ಗಾಂಭೀರ್ಯತೆ ಇರಬೇಕು. ಜಿಲ್ಲೆಯಲ್ಲಿ ನಾನು, ಶ್ರೀನಿವಾಸ್ ಪ್ರಸಾದ್, ರಾಮದಾಸ್, ನಾಗೇಂದ್ರ, ತನ್ವೀರ್ ಸೇಠ್ ‌ರಂತಹ ಹಿರಿಯದ್ದೇವೆ. ನೀವಿಬ್ಬರೇ ಬೀದಿಯಲ್ಲಿ ಜಗಳ ಆಡಿದರೆ ಹೇಗೆ ಎಂದು ಪ್ರಶ್ನಿಸಿದರು.


  ಈ ಬೆಳವಣಿಗೆ ಕಂಡು ಉಸ್ತುವಾರಿ ಸಚಿವರು ಮೌನಕ್ಕೆ ಶರಣಾಗಬಾರದು. ಕೂಡಲೇ ಮಧ್ಯಪ್ರವೇಶಿಸಿ ಸಮಸ್ಯೆಯನ್ನ ಬಗೆಹರಿಸಬೇಕು. ನಮ್ಮಂತವರನ್ನ ಕೂರಿಸಿ ಚರ್ಚೆ ಮಾಡಿ ಇತ್ಯರ್ಥ ಮಾಡಿ ಎಂದರು


  ರಾಜಕೀಯ ಚರ್ಚೆ ಇಲ್ಲ: ಸಂಸದ ಶ್ರೀನಿವಾಸ್​ ಪ್ರಸಾದ್​


  ವಿಶ್ವನಾಥ್​ ಭೇಟಿ ಕುರಿತು ಮಾತನಾಡಿದ ಸಂಸದ ಶ್ರೀನಿವಾಸ್​ ಪ್ರಸಾದ್​ ನಾವು ಯಾವುದೇ ರಾಜಕೀಯ ಚರ್ಚೆ ನಡೆಸಿಲ್ಲ ಎಂದರು. ಅಲ್ಲದೇ, ಯೋಗೇಶ್ವರ್ ಹೇಳಿಕೆ ಕೊಟ್ಟ ಮೇಲೆ ರಾಜ್ಯ ಬಿಜೆಪಿ ಸ್ವಲ್ಪ ಗೊಂದಲದಲ್ಲಿದೆ. ಮೊದಲು ಯತ್ನಾಳ್ ಹೀಗೆ ಗೊಂದಲ ಮೂಡಿಸಿದ್ದರು. ಈಗ ಸಿಪಿ ಯೋಗೇಶ್ವರ್ ಬಂದ ಮೇಲೆ‌ ಈ ಗೊಂದಲ ಶುರುವಾಗಿದೆ. ಹೈಕಮಾಂಡ್ ನಾಯಕತ್ವ ಬದಲಾವಣೆ ವಿಚಾರದಲ್ಲಿ ಚರ್ಚೆ ಬೇಡ ಎಂದಿದ್ದಾರೆ. ಕಟೀಲ್ ಅವರು ಈ ಮಾತನ್ನ ಎಲ್ಲರಿಗೂ ಹೇಳಿದ್ದಾರೆ. ಹಾಗಾಗಿ ಸದ್ಯಕ್ಕೆ ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಪ್ರಶ್ನೆ ಇಲ್ಲ. ಹೈಕಮಾಂಡ್ ಭೇಟಿ ಮಾಡಲು ಎಲ್ಲರು ಹೋಗಿದ್ದಾರೆ. ವಿಜಯೇಂದ್ರ ಯೋಗೇಶ್ವರ್ ಬಗ್ಗೆ ದೂರು ಕೊಟ್ಟಿದ್ದಾರೆ. ಅದೇ ಥರ ಯೋಗೇಶ್ವರ್ ಸಹ ನಾಯಕರನ್ನ ಭೇಟಿ ಮಾಡಿದ್ದಾರೆ. ನನ್ನನ್ನು ಸಿಟಿ ರವಿ ಭೇಟಿಯಾಗಿದ್ದರು. ಸೌದರ್ಹಯುತವಾದ ಭೇಟಿ ಅಷ್ಟೇ ಅಂತ ಅವರೇ ಹೇಳಿದ್ದಾರೆ ಎಂದರು.

  Published by:Seema R
  First published:

  ಸುದ್ದಿ 18ಕನ್ನಡ ಟ್ರೆಂಡಿಂಗ್

  ಮತ್ತಷ್ಟು ಓದು