Mysore: ಸ್ಮಶಾನ ಕಾಯಕದಲ್ಲಿ ನೀಲಮ್ಮ: ಎಲ್ಲರಿಗೂ ಮಾದರಿ ಈ ಗಟ್ಟಿಗಿತ್ತಿ

ನನ್ನ ಜೀವನದ ಪಯಣ ಅಷ್ಟೊಂದು ಸುಲಭವಾಗಿರಲಿಲ್ಲ. ಶವಗಳಿಗೆ ಗುಂಡಿ ತೆಗೆದು ಅಂತ್ಯ ಸಂಸ್ಕಾರ ಕೆಲಸ ಆರಂಭಿಸಿದಾಗ ಯಾರು ನನ್ನ ಬಗ್ಗೆ ಕಿಂಚಿತ್ತು ಕನಿಕರವನ್ನು ತೋರಲಿಲ್ಲ.

ನೀಲಮ್ಮ

ನೀಲಮ್ಮ

  • Share this:
ಜೀವನದ ಜಂಜಾಟ, ಕೆಲಸದ ಒತ್ತಡ ಹೀಗೆ ಹತ್ತಾರು ಕಾರಣಗಳಿಂದ ಮಾನವೀಯ ಸಂಬಂಧಗಳಿಗೆ ಬೆಲೆಯೇ ಇಲ್ಲದ ಪರಿಸ್ಥಿತಿ ನಿರ್ಮಾಣವಾಗಿದೆ. ಆದರೂ ಅದೆಷ್ಟೋ ಮಂದಿ ಇಂದಿಗೂ ಸಾಮಾಜಿಕ ಕಳಕಳಿ, ಮಾನವೀಯ ಗುಣದೊಂದಿಗೆ ತಮ್ಮ ಕಾಯಕದ ಮೂಲಕ ಇತರರಿಗೆ ನೆರವಾಗುತ್ತಾ ಬಂದಿದ್ದಾರೆ. ಇಂತಹ ಅಪರೂಪದ ವ್ಯಕ್ತಿಗಳಲ್ಲಿ ಮೈಸೂರಿನ ನೀಲಮ್ಮ (Mysore Neelamma) ಸಹ ಒಬ್ಬರು ಎಂದರೆ ಅತಿಶಯೋಕ್ತಿ ಆಗಲಾರದು. ಮೈಸೂರಿನ 57 ವರ್ಷದ ನೀಲಮ್ಮ, ತಮ್ಮ ಅಪರೂಪದ ಕಾಯಕದ (Work) ಮೂಲಕ ಗಮನ ಸೆಳೆದಿದ್ದಾರೆ. ಇತ್ತೀಚಿನ ದಿನಗಳಲ್ಲಿ ಮಹಿಳೆಯರು ಎಲ್ಲಾ ಕ್ಷೇತ್ರದಲ್ಲಿ ತಮ್ಮ ಛಾಪು ಮೂಡಿಸಿದ್ದು, ಸರ್ಕಾರಿ ಕೆಲಸ, ಖಾಸಗಿ ಉದ್ಯೋಗ, ಶಿಕ್ಷಣ ಕ್ಷೇತ್ರ, ವೈದ್ಯಕೀಯ ವೃತ್ತಿ, ಮನೆ ಕೆಲಸ ಹೀಗೆ ಹತ್ತಾರು ಹುದ್ದೆಗಳನ್ನು ನಿರ್ವಹಿಸುವ ಮಹಿಳೆಯರ ಸಾಲಿನಲ್ಲಿ ನೀಲಮ್ಮ ಅವರು ಆಯ್ಕೆ ಮಾಡಿಕೊಂಡಿದ್ದು ಶವ ಸಂಸ್ಕಾರ (GraveDigger)   ಮಾಡುವ ಕಾಯಕ. 2005ರಿಂದ ಈ ಕೆಲಸ ಮಾಡುತ್ತಿರುವ ನೀಲಮ್ಮ, ಈವರೆಗೂ ಸಾವಿರಾರು ಶವಗಳ ಸಂಸ್ಕಾರ ಮಾಡಿದ್ದಾರೆ.

17 ವರ್ಷದಿಂದ ಈ ಕಾರ್ಯ

ಯಾವುದೇ ಭಯ, ಆತಂಕಗಳಿಲ್ಲದೆ ಶವ ಸಂಸ್ಕಾರ ಮಾಡುವ ನೀಲಮ್ಮ ಅವರ ಕೆಲಸಕ್ಕೆ ಅನೇಕರು ಮೆಚ್ಚುಗೆ ವ್ಯಕ್ತಪಡಿಸಿದ್ದರೆ, ಇನ್ನೂ ಕೆಲವರು ಆಕೆಯನ್ನ ಕೀಳಾಗಿ ನೋಡಿದ್ದಾರೆ. ಆದರೆ ಇದಾವುದನ್ನು ಲೆಕ್ಕಿಸದ ನೀಲಮ್ಮ, ಕಳೆದ ಹಲವು ವರ್ಷಗಳಿಂದ ತಮ್ಮ ಅಪರೂಪದ ಕೆಲಸವನ್ನು ಮುಂದುವರಿಸುತ್ತಾ ಬಂದಿದ್ದಾರೆ. ಈಕೆಯ ವೃತ್ತಿ, ಧೈರ್ಯವನ್ನು ಸಮಾಜದ ಎಲ್ಲ ವರ್ಗದ ಜನ ಹಾಗೂ ವಿವಿಧ ಸಂಘ ಸಂಸ್ಥೆಗಳು ಮೆಚ್ಚಿಕೊಂಡಿವೆ. ಕಳೆದ 17 ವರ್ಷಗಳಿಂದ ಶವಗಳಿಗೆ ಗುಂಡಿ ತೆಗೆದು ಅಂತ್ಯ ಸಂಸ್ಕಾರ ಮಾಡುತ್ತಾ ಬಂದಿರುವ ನೀಲಮ್ಮ ಅವರ ಸೇವೆ ಕಂಡು ಅನೇಕ ಸಂಘ-ಸಂಸ್ಥೆಗಳು ಇವರಿಗೆ ಸನ್ಮಾನ ಮಾಡಿದ್ದಾರೆ. ಆದರೆ ಶವಸಂಸ್ಕಾರ ಮಾಡುವ ಕಾಯಕ ಮಾಡಿಕೊಂಡು, ಇಂತಹ ಸನ್ಮಾನ ಸಮಾರಂಭಗಳಲ್ಲಿ ಪಾಲ್ಗೊಳ್ಳುವುದು ನೀಲಮ್ಮ ಅವರಿಗೆ ಕಷ್ಟಕರವಾಗಲಿದೆ ಎಂದು ಖುದ್ದು ನೀಲಮ್ಮ ಅವರೇ ಹೇಳಿಕೊಂಡಿದ್ದಾರೆ.

ಈ ಕೆಲಸದ ಬಗ್ಗೆ ಕೀಳರಿಮೆ ನನಗೆ ಇಲ್ಲ

ಸಮಾಜದ ಇತರೆ ಮಹಿಳೆಯರಿಗಿಂತ ವಿಭಿನ್ನ ಕಾಯಕ ಮಾಡುತ್ತಿರುವ ಕುರಿತು ತಮ್ಮ ಅಭಿಪ್ರಾಯ ಹಂಚಿಕೊಂಡ ನೀಲಮ್ಮ, ನಾನು ಹೃದಯಾಘಾತದಿಂದ ನನ್ನ ಪತಿಯನ್ನು ಕಳೆದುಕೊಂಡು, ಅವರಿಗೆ ಎದೆನೋವು ಕಾಣಿಸಿಕೊಂಡ ಕೂಡಲೇ ಆಸ್ಪತ್ರೆಗೆ ಹೋದರು. ಆಸ್ಪತ್ರೆಗೆ ಹೋದ 15 ನಿಮಿಷದಲ್ಲೇ ಅವರು ತೀರಿಕೊಂಡರು. ಜೀವನದಲ್ಲಿ ಅನಿರೀಕ್ಷಿತ ಪರಿಸ್ಥಿತಿಗಳು, ಕಷ್ಟಗಳು ಎದುರಾದ ಸಂದರ್ಭದಲ್ಲಿ ಅದು ನಮ್ಮಲ್ಲಿ ಧೈರ್ಯ ಹೆಚ್ಚಿಸುತ್ತದೆ. ಶವಗಳಿಗೆ ಗುಂಡಿ ತೆಗೆದು ಅಂತ್ಯ ಸಂಸ್ಕಾರ ಮಾಡುವ ಕೆಲಸದಲ್ಲಿ ಯಾವ ಕೀಳರಿಮೆ ಕಾಣಿಸಿಲ್ಲ. ನಾನು ಶವಗಳಿಗೆ ಗುಂಡಿ ತೆಗೆದರೆ ಜನರು ನನಗೆ ಹಣ ನೀಡುತ್ತಾರೆ. 2005ರಲ್ಲಿ ಈ ಕೆಲಸ ಆರಂಭಿಸಿದಾಗ ಶವಗಳಿಗೆ ಗುಂಡಿ ತೆಗೆದರೆ 200 ರೂ. ನೀಡುತ್ತಿದ್ದರು, ಈಗ 1000 ರೂ. ನೀಡುತ್ತಾರೆ ಎನ್ನುತ್ತಾರೆ ನೀಲಮ್ಮ.

ಜೀವನ ಪಯಣ ಸುಲಭವಲ್ಲ

ನನ್ನ ಜೀವನದ ಪಯಣ ಅಷ್ಟೊಂದು ಸುಲಭವಾಗಿರಲಿಲ್ಲ. ನನ್ನ ಕೆಲಸವನ್ನು ಗುರುತಿಸುವುದಿರಲಿ, ಶವಗಳಿಗೆ ಗುಂಡಿ ತೆಗೆದು ಅಂತ್ಯ ಸಂಸ್ಕಾರ ಕೆಲಸ ಆರಂಭಿಸಿದಾಗ ಯಾರು ನನ್ನ ಬಗ್ಗೆ ಕಿಂಚಿತ್ತು ಕನಿಕರವನ್ನು ತೋರಲಿಲ್ಲ. ಕೂಲಿ ಕೆಲಸದವರಂತೆ ನೋಡುತ್ತಾ, ಅವಮಾನಕರ ಮಾತುಗಳನ್ನು ಆಡುತ್ತಾ ಹೋಗುತ್ತಿದ್ದರು. ನನ್ನ ಬಗ್ಗೆ ಕೆಟ್ಟ ಹೇಳಿಕೆಗಳನ್ನು ನೀಡುತ್ತಿರುವುದು ತಿಳಿದರು. ನಾನು ಯಾವುದೇ ಪ್ರತಿಕ್ರಿಯೆ ನೀಡದೆ ಸುಮ್ಮನಾಗುತ್ತಿದ್ದೆ. ನಾನು ಯಾವುದೇ ಟೀಕೆಗಳು, ಹೇಳಿಕೆಗಳಿಗೂ ಕಿವಿಗೊಡುತ್ತಿರಲಿಲ್ಲ.

ನನ್ನ ಕೆಲಸದ ಬಗ್ಗೆ ಅಪಹಾಸ್ಯ ಮಾಡಿದವರಿಂದಲೇ ಮೆಚ್ಚುಗೆ

ಆದರೆ ನೀಲಮ್ಮ ಈ ವೃತ್ತಿಯನ್ನು ಆರಂಭಿಸಿದ ಸಂದರ್ಭದಲ್ಲಿ ಇದೇ ಕೆಲಸ ಮಾಡುತ್ತಿದ್ದ ಅನೇಕರು ನನಗೆ ಪ್ರೋತ್ಸಾಹ ನೀಡಿದ್ದಾರೆ. ನನ್ನ ಇಬ್ಬರು ಮಕ್ಕಳು ಸಹ ನನ್ನ ಕೆಲಸಕ್ಕೆ ಸಹಕಾರ ನೀಡುತ್ತಿದ್ದರು, ನನ್ನ ಮಕ್ಕಳು ಇಂದು ಬೆಳೆದು ದೊಡ್ಡವರಾಗಿದ್ದರೂ, ಇಂದಿಗೂ ನನಗೆ ಕೆಲಸದಲ್ಲಿ ಸಹಾಯ ಮಾಡುತ್ತಿದ್ದಾರೆ. ಈ ಹಿಂದೆ ಯಾರು ನನ್ನನ್ನು ಮತ್ತು ನನ್ನ ಕೆಲಸದ ಬಗ್ಗೆ ಅಪಹಾಸ್ಯ ಮಾಡಿದ್ದರು, ಅವರು ಸಹ ಇಂದು ನನ್ನ ಕೆಲಸದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸುತ್ತಾರೆ.

ಬದುಕಿನ ಪಾಠ ಹೇಳುವ ನೀಲಮ್ಮ

ತಮ್ಮ ಕಾಯಕದ ಬಗ್ಗೆ ಮಾತನಾಡುತ್ತಾ, ಬದುಕಿನ ಪಾಠವನ್ನು ಹೇಳಿಕೊಡುವ ನೀಲಮ್ಮ, ಅನೇಕರಿಗೆ ಜೀವನದಲ್ಲಿ ಎಲ್ಲವೂ ಇದ್ದರೂ ಅವರು ಬದುಕುವುದಿಲ್ಲ, ಬದುಕು ಸಾಗಿಸಲು ಶ್ರೀಮಂತಿಕೆ, ಆಡಂಬರದ ಅಗತ್ಯವಿಲ್ಲ. ಬದಲಿಗೆ ಗಾಳಿ, ನೀರು ಮತ್ತು ಆಹಾರ ಇದ್ದರೆ ಸಾಕು. ಜನರು ಜೀವನದಲ್ಲಿ ಉತ್ಸಾಹದಿಂದ ಬದುಕುತ್ತಾರೆ ಎನ್ನುತ್ತಾರೆ ಶರಣೆ ನೀಲಮ್ಮ. ಅಲ್ಲದೆ ಸಾಮಾಜಿಕ ಸ್ಥಾನಮಾನ, ಗೌರವಗಳನ್ನು ಬದಿಗಿಟ್ಟು ಎಲ್ಲರಿಗೂ ಒಂದೇ ಅಳತೆಯ ಗುಂಡಿ ತೆಗೆಯುತ್ತೇನೆ. ಶ್ರೀಮಂತ, ಬಡವ ಹೀಗೆ ಎಲ್ಲರಿಗೂ ಸಮಾನ ಅಳತೆಯ ಗುಂಡಿ ತೆಗೆದು ಅಂತ್ಯಸಂಸ್ಕಾರ ಮಾಡುತ್ತೇನೆ ಎನ್ನುತ್ತಾರೆ.

ಇದನ್ನು ಓದಿ: ಮುಂಬೈನಲ್ಲಿ ಉಪನ್ಯಾಸಕರು ಈಗ ಬೆಂಗಳೂರಲ್ಲಿ ಆಟೋ ಡ್ರೈವರ್, ಇವರ ನಿರರ್ಗಳ English ಮಾತಿಗೆ ಬೆರಗಾಗದವರಿಲ್ಲ

ಯಾವುದೇ  ಭಯ ಇಲ್ಲ

ತಮ್ಮ ಕಾಯದ ಬಗ್ಗೆ ಮಾತನಾಡುವ ನೀಲಮ್ಮ, ಒಂದು ಗುಂಡಿ ತೆಗೆಯಲು ಮೂರು ಗಂಟೆ ಹಿಡಿಯುತ್ತದೆ. ನಾನು ಈ ಕೆಲಸ ಮಾಡುವ ಬಗ್ಗೆ ನನ್ನ ಹಿರಿಯರ ಬಳಿ ಹೇಳಿಕೊಂಡಾಗ, ಇದು ಸುಲಭದ ಕೆಲಸವಲ್ಲ, ಎಲ್ಲರಿಗೂ ಈ ಕೆಲಸವನ್ನು ಮಾಡಲು ಸಾಧ್ಯವಿಲ್ಲ ಎಂದಿದ್ದರು. ಅನೇಕ ಪುರುಷರು ಸ್ಮಶಾನದಲ್ಲಿ ಕೆಲಸ ಮಾಡಲು ಹೆದರಿ ಓಡಿ ಹೋಗಿದ್ದಾರೆ. ಆದರೆ ನನಗೆ ಎಂದಿಗೂ ಯಾವುದೇ ರೀತಿ ಭಯ ಆಗಿಲ್ಲ ಎಂದರು.

ಇದನ್ನು ಓದಿ: ಇನ್ಮುಂದೆ ಮಾಸ್ಕ್ ಹಾಕದಿದ್ರೂ ದಂಡ ವಿಧಿಸಲ್ವಾ? ಕೋವಿಡ್ 19 ನಿಯಮಗಳಿಗೆ ಬೀಳುತ್ತಾ ಬ್ರೇಕ್!?

ಇನ್ನು ತಮ್ಮ ತಾಯಿ ಮಾಡುವ ಅಪರೂಪದ ಕೆಲಸದ ಬಗ್ಗೆ ಮಾತನಾಡುವ ನೀಲಮ್ಮ ಅವರ ಹಿರಿಯ ಪುತ್ರ ಬಸವ ರಾಜೇಂದ್ರ, ಸಮಾಜದಲ್ಲಿ ನನ್ನ ತಾಯಿ ಪಡೆಯುತ್ತಿರುವ ಗೌರವವನ್ನು ನೋಡಿ ಖುಷಿಯಾಗುತ್ತದೆ ಎನ್ನುತ್ತಾರೆ.

ಕೊನೆಯದಾಗಿ ನೀಲಮ್ಮ ಅವರಿಗೆ ಜೀವನದ ಉತ್ಸಾಹದ ಕುರಿತು ಹೇಳಿದಾಗ, “ಬದುಕಿನಲ್ಲಿ ಅರ್ಥ ಮಾಡಿಕೊಳ್ಳಬೇಕಾದ ಒಂದು ವಿಷಯ ಏನೆಂದರೆ, ನಾವು ಜೀವಂತ ಇರುವವರ ಬಗ್ಗೆ ಭಯಪಡಬೇಕೆ ಹೊರತು, ಸತ್ತವರ ಬಗ್ಗೆ ಅಲ್ಲ'' ಎಂದು ನೀಲಮ್ಮ ಹೇಳಿದರು.
Published by:Seema R
First published: