Mysuru: ಸೆಲ್ಫಿ ತೆಗೆಯಲು ಹೋಗಿ ಪ್ರಾಣ ಕಳೆದುಕೊಂಡ ಗೃಹಿಣಿ; ತಾಯಿ ಕಳೆದುಕೊಂಡ ಮಗಳ ಆಕ್ರಂದನ

ದೇವಾಲಯದ ಪ್ರವೇಶಕ್ಕೂ ಮುನ್ನ ಶ್ರೀಕ್ಷೇತ್ರ ಸಂಗಮದ ಮುಂಭಾಗದಲ್ಲೇ ಕಪಿಲಾ ನದಿ ದಡದಲ್ಲಿ ಕಾಲು ತೊಳೆಯಲು ತೆರಳಿದ್ದಾರೆ. ಕಾಲು ತೊಳೆದು  ಬಳಿಕ ಮೊಬೈಲ್ ಪೋನಿನ ಮೂಲಕ ಸೆಲ್ಫಿ ತೆಗೆಯಲು ಮುಂದಾಗಿದ್ದಾರೆ. ಮೊಬೈಲ್ ಫೋನ್ ಮೂಲಕ ಸೆಲ್ಫಿ ತೆಗೆಯುತ್ತಿದ್ದ ಕವಿತಾ ಕಾಲು ಜಾರಿ ನದಿಗೆ ಬಿದ್ದು ಪ್ರಾಣ ಕಳೆದುಕೊಂಡಿದ್ದಾರೆ.

ಮೃತ ಕವಿತಾ

ಮೃತ ಕವಿತಾ

  • Share this:
ಮೈಸೂರು (ಮೇ 7): ಸೆಲ್ಫಿ (Selfie) ಹುಚ್ಚಿಗೆ ನೂರಾರು ಜನ ಬಲಿಯಾಗ್ತಾನೆ ಇದ್ದಾರೆ. ಹಾಗೇ ನಂಜನಗೂಡು (Nanjanagudu) ತಾಲೂಕಿನ ಪವಿತ್ರ ಯಾತ್ರಾ ಶ್ರೀ ಕ್ಷೇತ್ರ ಸಂಗಮದ (Sangama) ಕಪಿಲಾ ನದಿಯಲ್ಲೂ (Kapila River) ಇಂತಹದ್ದೆ ಒಂದು ಈ ದುರ್ಘಟನೆ ಜರುಗಿದೆ. ಕಪಿಲಾ ನದಿ ಬಳಿ ಸೆಲ್ಫಿ ತೆಗೆದುಕೊಳ್ಳಲು ಹೋಗಿ ಮಹಿಳೆ ಸಾವನ್ನಪ್ಪಿದ್ದಾರೆ. ಚಾಮರಾಜನಗರ ಜಿಲ್ಲೆ ನಂಜದೇವನಪುರ ಗ್ರಾಮದ ಗಿರೀಶ್ ಎಂಬುವರ ಪತ್ನಿ ಕವಿತಾ (Kavitha) 38 ವರ್ಷದ ಮೃತ ಗೃಹಿಣಿಯಾಗಿದ್ದಾರೆ. ಕವಿತಾ, ಮೈಸೂರು ತಾಲೂಕಿನ ದೂರ ಗ್ರಾಮದ ಪಿಎಲ್ ಡಿ ಬ್ಯಾಂಕ್ ಅಧ್ಯಕ್ಷ ರಾದ ಡಿ ಬಿ ನಾಗರಾಜ್ ಎಂಬುವರ ಪುತ್ರಿ ಆಗಿದ್ದಾರೆ.

ಕಾಲು ತೊಳೆಯಲು ನದಿಗೆ ಹೋಗಿದ್ದ ಕವಿತಾ

ಮೃತ ಗೃಹಿಣಿ ಕವಿತಾ ಮತ್ತು ಪತಿ ಗಿರೀಶ್ ಹಾಗೂ ಪುತ್ರಿಯ ಜತೆಗೂಡಿ ಯಾತ್ರಾಸ್ಥಳ ಸಂಗಮ ಕ್ಷೇತ್ರಕ್ಕೆ ಪೂಜೆ ಸಲ್ಲಿಸಲು ಆಗಮಿಸಿದ್ದಾರೆ. ದೇವಾಲಯದ ಪ್ರವೇಶಕ್ಕೂ ಮುನ್ನ ಶ್ರೀಕ್ಷೇತ್ರ ಸಂಗಮದ ಮುಂಭಾಗದಲ್ಲೇ ಕಪಿಲಾ ನದಿ ದಡದಲ್ಲಿ ಕಾಲು ತೊಳೆಯಲು ತೆರಳಿದ್ದಾರೆ. ಕಾಲು ತೊಳೆದು  ಬಳಿಕ ಮೊಬೈಲ್ ಪೋನಿನ ಮೂಲಕ ಸೆಲ್ಫಿ ತೆಗೆಯಲು ಮುಂದಾಗಿದ್ದಾರೆ. ಮೊಬೈಲ್ ಫೋನ್ ಮೂಲಕ ಸೆಲ್ಫಿ ತೆಗೆಯುತ್ತಿದ್ದ ಕವಿತಾ ಕಾಲು ಜಾರಿ ನದಿಗೆ ಬಿದ್ದು ಪ್ರಾಣ ಕಳೆದುಕೊಂಡಿದ್ದಾರೆ.

ತಾಯಿ ಕಳೆದುಕೊಂಡು ಮಗಳ ಕಣ್ಣೀರು

ಸಮೀಪದಲ್ಲೇ ಇದ್ದ ಪತಿ ಗಿರೀಶ್ ಮತ್ತು ಪುತ್ರಿಯ ಆಕ್ರಂದನ ಮುಗಿಲು ಮುಟ್ಟುವಂತಿದೆ. ನಂಜನಗೂಡು ತಾಲೂಕಿನ ಹುಲ್ಲಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮೃತ ಯುವತಿಯ ಶವವನ್ನು ಕಪಿಲಾ ನದಿಯಿಂದ ಹೊರತೆಗೆದು ಮರಣೋತ್ತರ ಪರೀಕ್ಷೆಗೆ ನಂಜನಗೂಡಿನ ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ.

ಇದನ್ನೂ ಓದಿ: Mohan Juneja: KGF 2 ಖ್ಯಾತಿಯ ನಟ ಮೋಹನ್ ಜುನೇಜ ಇನ್ನಿಲ್ಲ

ರಾಮನಗರದಲ್ಲಿ ಬಸ್‌ ಹಾಗೂ ಕಾರಿನ ನಡುವೆ ಅಪಘಾತ
 ರಾಮನಗರದಲ್ಲಿ ಬೆಳ್ಳಂಬೆಳಗ್ಗೆ ಭೀಕರ ಅಪಘಾತ ಸಂಭವಿಸಿದೆ.  ಕೆಎಸ್​ಆರ್​ಟಿಸಿ ಬಸ್ ಹಾಗೂ ಕಾರಿನ ಮಧ್ಯೆ ಭೀಕರ ಅಪಘಾತದ ಪರಿಣಾಮ ಉಡುಪಿ ಮೂಲದ ಮೂವರು ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಕನಕಪುರ ತಾಲೂಕಿನ ಸಾತನೂರು ಕೆಮ್ಮಲ್ಲಿ ದೊಡ್ಡಿ ಗ್ರಾಮದಲ್ಲಿ ಸಂಭವಿಸಿದೆ.  ಅಪಘಾತದ ತೀವೃತೆಗೆ ಮಗುವಿನ ದೇಹ ಛಿದ್ರವಾಗಿದ್ದು, ಅಪಘಾತದ ತೀವೃತೆ ತಿಳಿಸುತ್ತಿತ್ತು.


6 ತಿಂಗಳ ಮಗು ಸೇರಿ ಮೂವರ ದುರ್ಮರಣ, ಇಬ್ಬರಿಗೆ ಗಾಯ


ಮೃತರನ್ನು ಅಕ್ಷತಾ, ಡ್ರೈವರ್ ಉಮೇಶ್ ಹಾಗೂ 6 ತಿಂಗಳು ಮಗು ಸುಮಂತ್ ಎಂದು ಗುರುತಿಸಲಾಗಿದೆ, ಘಟನೆಯಲ್ಲಿ ಕಾರಿನಲ್ಲಿದ್ದ ಮತ್ತಿಬ್ಬರಿಗೆ ಸಣ್ಣಪುಟ್ಟ ಗಾಯವಾಗಿದೆ. ಗಾಯಗೊಂಡವರನ್ನ ಕನಕಪುರ ಸಾರ್ವಜನಿಕ ಆಸ್ಪತ್ರೆಗೆ ದಾಖಲು ಮಾಡಿ, ಪ್ರಾಥಮಿಕ ಚಿಕಿತ್ಸೆ ನೀಡಿದ ಬಳಿಕ ಬೆಂಗಳೂರು ಆಸ್ಪತ್ರೆಗೆ ರವಾನಿಸಲಾಗಿದೆ. ಕಾರು ಚಾಲಕನ ಅತಿಯಾದ ವೇಗವೇ ಅಪಘಾತಕ್ಕೆ ಕಾರಣ ಎಂದು ತಿಳಿದುಬಂದಿದೆ. ಈ ಕುರಿತು ಸಾತನೂರು ಪೊಲೀಸರು ಸ್ಥಳಕ್ಕೆ ಭೇಟಿ ಪರಿಶೀಲನೆ ನಡೆಸಿದ್ರು.
ದಯಾಮರಣ ಕೋರಿ ಪತ್ರ ಬರೆದ ಬಿಎಂಟಿಸಿ ಡ್ರೈವರ್ಬೆಂಗಳೂರಿನ ಬಿಎಂಟಿಸಿ ಬಸ್ ಡ್ರೈವರ್ ಶಂಬುಲಿಂಗಯ್ಯ ಚಿಕ್ಕಮಠ ಎಂಬುವವರೇ ದಯಾಮರಣಕ್ಕೆ ಕೋರಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿರುವವರು.  “ನಾನು, ನನ್ನ ಹೆಂಡತಿ ಹಾಗೂ ಮಕ್ಕಳು ಸಾಯಬೇಕಾಗಿದೆ. ದಯವಿಟ್ಟು ಅದಕ್ಕೆ ಅವಕಾಶ ನೀಡಿ” ಅ್ಂತ ಮನವಿ ತಮ್ಮ ಪತ್ರದಲ್ಲಿ ಮನವಿ ಮಾಡಿದ್ದಾರೆ.

ಇದನ್ನೂ ಓದಿ: DK Shivakumar: "ಯತ್ನಾಳ್ ಏನು ಮೆಂಟಲ್ಲಾ? ಅವರನ್ನು ಮೊದಲು ವಿಚಾರಣೆ ಮಾಡಿ" - ಸರ್ಕಾರಕ್ಕೆ ಡಿಕೆಶಿ ಆಗ್ರಹ

“ಕೆಲಸ ಇಲ್ಲ, ತಿನ್ನಲು ಅನ್ನವೂ ಇಲ್ಲ”

ದಯಾಮರಣಕ್ಕೆ ಮನವಿ ಮಾಡಿದ್ದಕ್ಕೆ ಕಾರಣ ಏನು ಅಂತ ಶಂಬುಲಿಂಗಯ್ಯ ಚಿಕ್ಕಮಠ ಅವರು ಪತ್ರದಲ್ಲಿ ವಿವರಿಸಿದ್ದಾರೆ. “ನಾನು ಈ ಹಿಂದೆ ಬಿಎಂಟಿಸಿ ಮುಷ್ಕರದಲ್ಲಿ ಭಾಗಿಯಾಗಿರಲಿಲ್ಲ. ಆದರೂ ಬಿಎಂಟಿಸಿ ಅಧಿಕಾರಿಗಳು ನನ್ನನ್ನು ಕೆಲಸದಿಂದ ವಜಾ ಮಾಡಿದ್ದಾರೆ. ಒಂದು ವರ್ಷದಿಂದ ಮಾಡಲು ಕೆಲಸವಿಲ್ಲ, ಬದುಕಲು ದಿಕ್ಕೇ ಇಲ್ಲ. ತಿನ್ನಲು ಅನ್ನವಿಲ್ಲ. ಮನೆ ಬಾಡಿಗೆ ಕಟ್ಟಲು ಆಗ್ತಿಲ್ಲ.  ಹೀಗಾಗಿ ನಮ್ಮ ಇಡೀ ಕುಟುಂಬ ಬೀದಿಗೆ ಬಿದ್ದಿದೆ. ಇದರಿಂದ ನಾನು, ನನ್ನ ಹೆಂಡತಿ ಹಾಗೂ ಮಕ್ಕಳೊಂದಿಗೆ ಸಾಯಲು ನಿರ್ಧರಿಸಿದ್ದೇನೆ” ಅಂತ ತಮ್ಮ ಸಂಕಷ್ಟ ತೋಡಿಕೊಂಡಿದ್ದಾರೆ.
Published by:Pavana HS
First published: