ಓದು ತಲೆಗೆ ಹತ್ತುತ್ತಿಲ್ಲ ಎಂದು ಫೇಸ್​ಬುಕ್​ ಲೈವ್​ ವಿಡಿಯೋ ಮಾಡಿ ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿನಿ

ಓದಿನಲ್ಲಿ ನನಗೆ ಆಸಕ್ತಿಯಿಲ್ಲ. ಅಲ್ಲದೇ ನನ್ನ ಆರೋಗ್ಯ ಕೂಡ ಸದಾ ಹದಗೆಡುತ್ತಿದ್ದು, ಓದಿನ ಕಡೆ ಹೆಚ್ಚು ಗಮನಕೊಡಲಾಗುತ್ತಿಲ್ಲ

Seema.R | news18
Updated:January 13, 2019, 10:03 AM IST
ಓದು ತಲೆಗೆ ಹತ್ತುತ್ತಿಲ್ಲ ಎಂದು ಫೇಸ್​ಬುಕ್​ ಲೈವ್​ ವಿಡಿಯೋ ಮಾಡಿ ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿನಿ
ಮೃತ ವಿದ್ಯಾರ್ಥಿನಿ
Seema.R | news18
Updated: January 13, 2019, 10:03 AM IST
ಪುಟ್ಟಪ್ಪ

ಮೈಸೂರು (ಜ.13): ಎಷ್ಟೇ ಕಷ್ಟಪಟ್ಟು  ಓದಿದರೂ ವಿದ್ಯೆ ತಲೆಗೆ ಹತ್ತುತ್ತಿಲ್ಲ. ಆರೋಗ್ಯದ ಸಮಸ್ಯೆ ಕೂಡ ನನ್ನನ್ನು ಕಾಡುತ್ತಿದೆ ಎಂದು  ಖಿನ್ನತೆಗೆ ಒಳಗಾದ ವಿದ್ಯಾರ್ಥಿನಿ ಫೇಸ್​ಬುಕ್​ ಲೈವ್​ ಮಾಡಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

ನಗರದ ಬನ್ನಿಮಂಟಪದ ಕಾವೇರಿ ನಗರದ  ಯಾಸ್ಮಿನ್​ ತಾಜ್​ (18) ಮೃತ ವಿದ್ಯಾರ್ಥಿನಿ. ಓದಿನಲ್ಲಿ ನನಗೆ ಆಸಕ್ತಿಯಿಲ್ಲ. ಅಲ್ಲದೇ ನನ್ನ ಆರೋಗ್ಯ ಕೂಡ ಸದಾ ಹದಗೆಡುತ್ತಿದ್ದು, ಓದಿನ ಕಡೆ ಹೆಚ್ಚು ಗಮನಕೊಡಲಾಗುತ್ತಿಲ್ಲ. ಕಾಲೇಜಿಗೆ ಸರಿಯಾಗಿ ಹೋಗದ ಹಿನ್ನಲೆ  ಪ್ರಿಪೆರೇಟರಿ ಎಕ್ಸ್​ ಹಾಲ್​ ಟಿಕೆಟ್​ ಕೂಡ ನನಗೆ ಸಿಕ್ಕಿಲ್ಲ  ಎಂದು ವಿಡಿಯೋದಲ್ಲಿ ತಿಳಿಸಿದ್ದಾಳೆ.

ನಾನು ಲಾಯರ್​ ಅಥವಾ ಸಿಂಗರ್​ಆಗಬೇಕು ಎಂದು ಕೊಂಡಿದ್ದೆ. ಆದರೆ, ಜೀವನದಲ್ಲಿ ಏನನ್ನು ಸಾಧಿಸಲು ಅಸಾಧ್ಯವಾಯಿತು. ನನ್ನನ್ನು ಬದುಕಿರುವಾಗ ಯಾರು ಕೂಡ ಇಷ್ಟಪಡಲಿಲ್ಲ. ಸತ್ತ ಮೇಲಾದರೂ ನನ್ನ ವಿಡಿಯೋ ಲೈಕ್​ ಮಾಡಿ.  ಯಾಸ್ಮಿನ್​ ಸಾವನ್ನಪ್ಪಿದ್ದು ಇಡೀ ಜಗತ್ತಿಗೆ ತಿಳಿಯಲಿ.  ಸ್ನೇಹಿತರೇ ನಿಮ್ಮನ್ನು ನಾನು ಮಿಸ್​ ಮಾಡಿಕೊಳ್ಳಲಿದ್ದೇನೆ ಎಂದು ಮಾತ್ರೆ ನುಂಗಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

ಇದನ್ನು ಓದಿ: ಶರದ್ ಪವಾರ್ ಅವರಿಗೆ ಈ ವರ್ಷದ ಬಸವ ಪ್ರಶಸ್ತಿ: ಕೂಡಲಸಂಗಮ ಸ್ವಾಮೀಜಿಯಿಂದ ಘೋಷಣೆ

ಯಾಸ್ಮಿನ್​ ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದು, ಈ ಸಂಬಂಧ ಚಿಕಿತ್ಸೆಯನ್ನು ಪಡೆಯುತ್ತಿದ್ದಳು. ಅದೇ ಮಾತ್ರೆಗಳನ್ನು ಒಟ್ಟಿಗೆ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಈ ಕುರಿತು ಮೇಟಗಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

First published:January 13, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ