ಫ್ರೀ ಕಾಶ್ಮೀರ ಭಿತ್ತಿಪತ್ರ ಪ್ರದರ್ಶಿಸಿದ್ದ ಯುವತಿ ಠಾಣೆಗೆ ಹಾಜರ್‌: ಪೊಲೀಸರಿಂದ ವಿಚಾರಣೆ

ಇನ್ನು, ಯಾವುದೇ ದುರುದ್ದೇಶದಿಂದ ಫ್ರೀ ಕಾಶ್ಮೀರ ಬಿತ್ತಿಪತ್ರ ಪ್ರದರ್ಶಿಸಿಲ್ಲ. ನನ್ನ ನಡೆಯಿಂದ ಯಾರಿಗಾದರೂ ನೋವಾಗಿದ್ದರೆ ಕ್ಷಮೆ ಕೇಳುತ್ತೇನೆ. ನ್ಯಾಯಲಯವೇ ನನಗೆ ಷರತ್ತುಬದ್ಧ ಜಾಮೀನು ನೀಡಿದೆ. ಈ ಬಗ್ಗೆ ಪೊಲೀಸರ ವಿಚಾರಣೆ ಮುಂದುವರೆಯಲಿದೆ ಎಂದು ತಿಳಿಸಿದರು.

news18-kannada
Updated:January 11, 2020, 1:48 PM IST
ಫ್ರೀ ಕಾಶ್ಮೀರ ಭಿತ್ತಿಪತ್ರ ಪ್ರದರ್ಶಿಸಿದ್ದ ಯುವತಿ ಠಾಣೆಗೆ ಹಾಜರ್‌: ಪೊಲೀಸರಿಂದ ವಿಚಾರಣೆ
ಮೈಸೂರು ವಿವಿಯಲ್ಲಿ Free Kashmir ಪೋಸ್ಟರ್
  • Share this:
ಬೆಂಗಳೂರು(ಜ.11): ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಪ್ರತಿಭಟನೆ ವೇಳೆ ಫ್ರೀ ಕಾಶ್ಮೀರ ಎಂಬ ಭಿತ್ತಿಪತ್ರ​ ಪ್ರದರ್ಶಿಸಿದ್ದ ಯುವತಿ ನಳಿನಿ ಪೊಲೀಸ್​​ ಠಾಣೆಗೆ ಹಾಜರಾಗಿದ್ದಾರೆ. ಇಂದು ಮೈಸೂರಿನ ಜಯಲಕ್ಷ್ಮಿಪುರ ಪೊಲೀಸ್ ಠಾಣೆಗೆ ಹಾಜರಾದ ನಳಿನಿ, ಜನವರಿ 8ನೇ ತಾರಿಕು ನಡೆದ ಪೌರತ್ವ ಕಾಯ್ದೆ ವಿರುದ್ಧದ ಪ್ರತಿಭಟನೆಯಲ್ಲಿ ತಾವ್ಯಾಕೇ ಫ್ರೀ ಕಾಶ್ಮೀರ ಎಂಬ ಫಲಕ ಪ್ರದರ್ಶಿಸಿದ್ದರು ಎನ್ನುವುದರ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ.

ತನ್ನ ತಂದೆಯೊಂದಿಗೆ ಪೊಲೀಸ್​​ ಠಾಣೆಗೆ ಹಾಜಾರದ ಬಳಿಕ ಸುದ್ದಿಗಾರರೊಂದಿಗೆ ಮಾತಾಡಿದ ನಳಿನಿ, ನಾನು ಮೈಸೂರು ವಿವಿಯ ಹಳೆಯ ವಿದ್ಯಾರ್ಥಿನಿ. ನನ್ನನ್ನು ಪ್ರತಿಭಟನೆಗೆ ಯಾರು ಕರೆದಿರಲಿಲ್ಲ. ನಾನೇ ಸ್ವಯಂಪ್ರೇರಿತಳಾಗಿ ಭಾಗವಹಿಸಿದ್ದೇನೆ. ಫ್ರೀ ಕಾಶ್ಮೀರ ಎಂಬ ಭಿತ್ತಿಫತ್ರ ನಾನೇ ಸಿದ್ಧಪಡಿಸಿದ್ದು. ಕೇಂದ್ರ ಸರ್ಕಾರ ಜಮ್ಮು-ಕಾಶ್ಮೀರದ ವಿಶೇಷ ರದ್ದುಗೊಳಿಸಿ ಇಂಟರ್​​ನೆಟ್​​​ ಸೇರಿದಂತೆ ಮೊಬೈಲ್​​​ ಸಂದೇಶ ಮತ್ತಿತರ ಸೇವೆಗಳನ್ನು ರದ್ದುಗೊಳಿಸಿತ್ತು. ಇದನ್ನು ಖಂಡಿಸಿ ಮತ್ತೆ ಎಲ್ಲಾ ಸೇವೆಗಳನ್ನು ಆರಂಭಿಸಿ ಎಂದು ಆಗ್ರಹಿಸಿ ಫ್ರೀ ಕಾಶ್ಮೀರ ಭಿತ್ತಿಪತ್ರ ಪ್ರದರ್ಶಿಸಿದ್ದೇನೆ ಎಂದರು.

ಇನ್ನು, ಯಾವುದೇ ದುರುದ್ದೇಶದಿಂದ ಫ್ರೀ ಕಾಶ್ಮೀರ ಭಿತ್ತಿಪತ್ರ ಪ್ರದರ್ಶಿಸಿಲ್ಲ. ನನ್ನ ನಡೆಯಿಂದ ಯಾರಿಗಾದರೂ ನೋವಾಗಿದ್ದರೆ ಕ್ಷಮೆ ಕೇಳುತ್ತೇನೆ. ನ್ಯಾಯಲಯವೇ ನನಗೆ ಷರತ್ತುಬದ್ಧ ಜಾಮೀನು ನೀಡಿದೆ. ಈ ಬಗ್ಗೆ ಪೊಲೀಸರ ವಿಚಾರಣೆ ಮುಂದುವರೆಯಲಿದೆ ಎಂದು ತಿಳಿಸಿದರು.

ಇದನ್ನೂ ಓದಿ: ಮುಂಬೈ ಆಯ್ತು ಮೈಸೂರು ವಿಶ್ವವಿದ್ಯಾಲಯದಲ್ಲೂ Free Kashmir ಕೂಗು

ಇತ್ತೀಚೆಗೆ ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಸಿಎಎ ಹಾಗೂ ಜೆಎನ್​ಯು ಹಿಂಸಾಚಾರ ಖಂಡಿಸಿ ಬಹುಜನ ವಿದ್ಯಾರ್ಥಿ ಸಂಘ ಮತ್ತು ಎಸ್​ಎಫ್​ಐ ನೇತೃತ್ವದಲ್ಲಿ ಹಲವು ವಿದ್ಯಾರ್ಥಿಗಳು ಸಂಘಟನೆಗಳು ಪ್ರತಿಭಟನೆ ಆಯೋಜಿಸಿದ್ದವು. ವಿಶ್ವವಿದ್ಯಾಲಯದ ಕ್ಲಾಕ್ ಟವರ್ ಬಳಿಯಿಂದ ಕುವೆಂಪು ಪ್ರತಿಮೆಯವರೆಗೆ ಪಂಜಿನ ಮೆರವಣಿಗೆ ನಡೆಸಲಾಯಿತು. ಈ ವೇಳೆ, ಪ್ರತಿಭಟನಾಕಾರರ ಮಧ್ಯೆ ವಿದ್ಯಾರ್ಥಿನಿಯೊಬ್ಬಳು ಫ್ರೀ ಕಾಶ್ಮೀರ ಎಂಬ ಭಿತ್ತಿಪತ್ರ ಹಿಡಿದು ನಿಂತಿದ್ದಳು. ಹಿಟ್ಲರ್ ವಿರುದ್ಧವೂ ಬರೆಯಲಾಗಿದ್ದ ಪೋಸ್ಟರ್​ಗಳು ಈ ಪ್ರತಿಭಟನೆಯಲ್ಲಿ ಕಂಡುಬಂದವು.

ಈ ಸಂಬಂಧ ಮೈಸೂರಿನ ಜಯಲಕ್ಷ್ಮಿಪುರಂ ಪೊಲೀಸರು ಸೆಕ್ಷನ್ 124ಎ ಅಡಿಯಲ್ಲಿ ಸ್ವಯಂಪ್ರೇರಿತ ಎಫ್​​ಐಆರ್​​ ದಾಖಲಿಸಿಕೊಂಡಿದ್ದರು. ಪ್ರತಿಭಟನೆ ನೇತೃತ್ವವಹಿಸಿದ್ದ ಮರಿದೇವಯ್ಯ ಹಾಗೂ ಇತರರ ವಿರುದ್ದವೂ ಎಫ್​ಐಆರ್ ದಾಖಲಿಸಲಾಗಿತ್ತು. ಸರ್ಕಾರದ ವಿರುದ್ದ ದ್ವೇಷ, ತಿರಸ್ಕಾರ ಹುಟ್ಟು ಹಾಕುವ ಪ್ರಯತ್ನ, ಪ್ರಚೋದನಾಕಾರಿ ನಾಮಫಲಕ ಪ್ರದರ್ಶನ ಆರೋಪದಡಿ ಎಫ್​ಐಆರ್ ದಾಖಲು ಮಾಡಲಾಗಿತ್ತು.
Published by: Ganesh Nachikethu
First published: January 11, 2020, 1:17 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading