Siddaramaiah: ಜಾತ್ರಾ ಮಹೋತ್ಸವದಲ್ಲಿ ಸಿದ್ದರಾಮಯ್ಯ ವೀರಕುಣಿತ; ವಿಡಿಯೋ ವೈರಲ್

15 ವರ್ಷದ ಬಳಿಕ ಸಿದ್ದರಾಮಯ್ಯನವರು ವೀರ ಕುಣಿತ(Veera Kunita)ದಲ್ಲಿ ಭಾಗಿಯಾಗಿದ್ದಾರೆ. ಈ ಹಿಂದೆ ಉಪ ಮುಖ್ಯಮಂತ್ರಿಯಾಗಿದ್ದ ವೇಳೆ ಜಾತ್ರೆಯಲ್ಲಿ ವೀರ ಕುಣಿತಕ್ಕೆ ಹೆಜ್ಜೆ ಹಾಕಿದ್ದರು.

ಸಿದ್ದರಾಮಯ್ಯ ವೀರ ಕುಣಿತ

ಸಿದ್ದರಾಮಯ್ಯ ವೀರ ಕುಣಿತ

  • Share this:
ಮಾಜಿ  ಸಿಎಂ ಸಿದ್ದರಾಮಯ್ಯ (Former CM Siddaramaiah) ನಿನ್ನೆ ಹುಟ್ಟೂರು ಸಿದ್ದರಾಮನಹುಂಡಿ (Siddaramana Hundi Village) ಗ್ರಾಮಕ್ಕೆ ಭೇಟಿ ನೀಡಿ, ಸಿದ್ದರಾಮೇಶ್ವರ ಜಾತ್ರಾ ಮಹೋತ್ಸವದಲ್ಲಿ ಭಾಗಿಯಾಗಿದ್ದರು. ಈ ವೇಳೆ  ಗ್ರಾಮಸ್ಥರ ಜೊತೆಗೂಡಿ ಸುಮಾರು 40 ನಿಮಿಷಕ್ಕೂ ಹೆಚ್ಚು ಕಾಲ ಜಾನಪದ ವಾದ್ಯಗಳ ಹಿಮ್ಮೇಳಕ್ಕೆ ಹೆಜ್ಜೆ ಹಾಕಿದರು. ಸಿದ್ದರಾಮಯ್ಯನವರು ಹೆಜ್ಜೆ ಹಾಕಿದ್ದು, ನೋಡಿದ್ರೆ ಸುಮಾರು ದಿನಗಳಿಂದ ಪ್ರ್ಯಾಕ್ಟಿಸ್ ಮಾಡಿರುವ ಹಾಗೆ ಕಾಣುತ್ತಿತ್ತು. 15 ವರ್ಷದ ಬಳಿಕ ಸಿದ್ದರಾಮಯ್ಯನವರು ವೀರ ಕುಣಿತ(Veera Kunita)ದಲ್ಲಿ ಭಾಗಿಯಾಗಿದ್ದಾರೆ. ಈ ಹಿಂದೆ ಉಪ ಮುಖ್ಯಮಂತ್ರಿಯಾಗಿದ್ದ ವೇಳೆ ಜಾತ್ರೆಯಲ್ಲಿ ವೀರ ಕುಣಿತಕ್ಕೆ ಹೆಜ್ಜೆ ಹಾಕಿದ್ದರು.

ಸಿದ್ದರಾಮಯ್ಯನವರು ಹೆಜ್ಜೆ ಹಾಕೋದನ್ನು ನೋಡಲು ಅವರ ಅಭಿಮಾನಿಗಳು ಮುಗಿಬಿದ್ದಿದ್ದರು. ಈ ವೇಳೆ ಎಲ್ಲರೂ ತಮ್ಮ ಮೊಬೈಲ್ ಗಳಲ್ಲಿ ವಿಡಿಯೋ ಸೆರೆ ಹಿಡಿದುಕೊಂಡಿದ್ದಾರೆ. ಗ್ರಾಮಸ್ಥರ ನೂಕು ನುಗ್ಗಲ ನಡುವೆಯೂ ಸಿದ್ದರಾಮಯ್ಯ ಸಖತ್ ಸ್ಟೆಪ್ ಹಾಕಿದರು.

ತಂದೆಯ ಬಗ್ಗೆ ಯತೀಂದ್ರ ಸಿದ್ದರಾಮಯ್ಯ ಮಾತು

ಅಪ್ಪ ಪ್ರತಿ ವರ್ಷ ಜಾತ್ರೆ ವೇಳೆ ವೀರನ ಕುಣಿತ ಮಾಡೋದು ವಾಡಿಕೆ. ಈ ವಯಸ್ಸಿನಲ್ಲಿ ಅಪ್ಪ ವೀರನ ಕುಣಿತ ಮಾಡ್ತಾರೆ ಅಂತ ಅಂದು ಕೊಂಡಿರಲಿಲ್ಲ.ಅಪ್ಪ ಮೊದಲೇ ಹೇಳಿದ್ರು ನಾನು ಡ್ಯಾನ್ಸ್ ಮಾಡಲ್ಲ ಅಂತ. ಆದ್ರೆ ಜನರ ನೋಡಿ ಉತ್ಸಾಹ ಬಂದು ಅವರು ಸಹ ಹೋಗಿ ಡ್ಯಾನ್ಸ್ ಮಾಡಿದ್ರು. ಪ್ರತಿವರ್ಷ ಡ್ಯಾನ್ಸ್ ಮಾಡ್ತಿದ್ರು ಆದ್ರೆ, ಈ ಬಾರಿ ಮಾಡ್ತಾರೆ ಅಂತ ಅಂದುಕೊಂಡಿರಲಿಲ್ಲ ಎಂದು ಸಿದ್ದರಾಮಯ್ಯ ಅವರ ಪುತ್ರ ಶಾಸಕ ಯತೀಂದ್ರ ಹೇಳಿದ್ದಾರೆ.

ಅಪ್ಪ ಶಾಲೆಯಲ್ಲಿಯೇ ವೀರನ ಕುಣಿತ ಕಲಿತಿದ್ರು. ಹಾಗಾಗಿ ಅವರಿಗೆ ಪ್ರತಿಯೊಂದು ಸ್ಟೆಪ್ ನೆನಪಿದೆ. ನನಗೆ ಈ ರೀತಿ ಕುಣಿಯೋ ಚಿಕ್ಕಂದಿನಿಂದಲೂ ಬಿಡಲಿಲ್ಲ ಎಂದು ತಂದೆಯ ವೀರ ಕುಣಿತದ ಬಗ್ಗೆ ಹೇಳಿದರು.

ಇದನ್ನೂ ಓದಿ:  Nithyananda: ಕೈಲಾಸದಲ್ಲಿ ಕಳ್ಳಾಟ ಆಡ್ತಿದ್ದಾನಾ ಸ್ವಾಮಿ ನಿತ್ಯಾನಂದ? ಇಮೇಲ್‌ ಮೂಲಕವೇ ಶಿಷ್ಯೆಯಿಂದ ದೂರು!

ವಿಡಿಯೋ ವೈರಲ್

ಇನ್ನು ಯತೀಂದ್ರ ಸಿದ್ದರಾಮಯ್ಯ, ತಂದೆಯವರ ವೀರ ಕುಣಿತದ ವಿಡಿಯೋವನ್ನು ಟ್ವಿಟರ್ ನಲ್ಲಿ ಹಂಚಿಕೊಂಡಿದ್ದು, ವೈರಲ್ ಆಗುತ್ತಿದೆ. ನಮ್ಮೂರಿನ ಸಿದ್ಧರಾಮೇಶ್ವರ ದೇವರ ಜಾತ್ರೆಯಲ್ಲಿ ತಂದೆಯವರು ಸಂಗಡಿಗರೊಂದಿಗೆ ವೀರಕುಣಿತದ ಹೆಜ್ಜೆ ಹಾಕಿದ ಕ್ಷಣಗಳು ಎಂದು ಬರೆದುಕೊಂಡಿದ್ದಾರೆ. ಗ್ರಾಮದ ಸಿದ್ದರಾಮೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿ, ಪೂಜೆ ಸಲ್ಲಿಸಿದ್ದಾರೆ.ಗುರುವಾದ ವಿಧಾನಸಭೆಯಲ್ಲಿ ಮಾತನಾಡುತ್ತಾ ತಮ್ಮ ವಯಸ್ಸು, ಶಾಲೆಯ ಬಗ್ಗೆ  ಹೇಳಿದ್ದರು. ನನಗೆ ಎಷ್ಟು ವಯಸ್ಸು ಅಂತ ಗೊತ್ತಿಲ್ಲ. ನನಗೂ ಗೊತ್ತಿಲ್ಲ, ನಮ್ಮ ಮನೆಯರಿಗೂ ಗೊತ್ತಿಲ್ಲ. ನನ್ನ ಹುಟ್ಟಿದ ದಿನವನ್ನ ನಮ್ಮ‌ಸ್ಕೂಲ್ ಮೇಷ್ಟ್ರು ರಾಜಪ್ಪ ಅಂತ ಅವರೇ ಬರೆದುಕೊಂಡಿದ್ದಾರೆ.. 3-8-1947 ಅಂತ ಬರೆದುಕೊಂಡಿದ್ದಾರೆ.. ಅದಕ್ಕೆ ನಾನು ನನ್ನ ಹುಟ್ಟುಹಬ್ಬವನ್ನೇ ಆಚರಿಸಿಕೊಳ್ಳಲ್ಲ. ಮೇಷ್ಟ್ರು ಹೇಳಿದ ದಿನಾಂಕದ ಪ್ರಕಾರ ನನಗೆ 75 ವರ್ಷ ಎಂದು ಹೇಳಿದರು.

ಈಶ್ವರಪ್ಪ ಹೆಸರು ಹೇಳಿ ನಗೆ ಚಟಾಕಿ

ಅಂದು ನಮಗೆ ಕನ್ನಡ ಹೇಳಿಕೊಡುವ ಪಂಡಿತರಿದ್ದರು. ಕನ್ನಡ ವ್ಯಾಕರಣ, ಸಂಧಿಗಳನ್ನ ಹೇಳಿಕೊಡ್ತಿದ್ರು. ಆಗ ಕಲಿತಿದ್ದು, ಈಗಲೂ ಉಳಿದು ಕೊಂಡಿದೆ. ಹೈಸ್ಕೂಲ್ ವರೆಗಿನ ಓದು ಉಳಿಯುತ್ತೆ. ಕಾಲೇಜಿನ ಓದು ಮನಸ್ಸಿನಲ್ಲಿ ಉಳಿಯಲ್ಲ. ನನಗೆ ವ್ಯಾಕರಣ ಹೇಳಿ ಕೊಟ್ಟವರು ಈಶ್ವರಾಚಾರಿ ಮೇಷ್ಟ್ರು ಅಂತ ಹೇಳಿ ನೀನಲ್ಲಪ್ಪ ಎಂದು ಈಶ್ವರಪ್ಪ ಅವರ ಹೆಸರ ಹೇಳಿ ನಗೆ ಚಟಾಕಿ ಹಾರಿಸಿದರು.

ಇದನ್ನೂ ಓದಿ: ಮುಸ್ಲಿಂ ವ್ಯಾಪಾರಿಗಳಿಗೆ ನಿರ್ಬಂಧ; ಸರ್ಕಾರ ಒಳಗೊಳಗೆ ಖುಷಿ ಪಡ್ತಿದೆ: UT Khader ಆರೋಪ

ಸಿದ್ದರಾಮಯ್ಯ ಕ್ಲೀನ್ ಶೇವ್ ನೋಡಿದ ಈಶ್ವರಪ್ಪ ಅವರು ಏನ್ ಸ್ಮಾರ್ಟ್ ಆಗಿ ಬಂದಿದ್ದೀರಾ ಎಂದರು. ವಾರಕ್ಕೊಮ್ಮೆ ಹೀಗೆ ಮಾಡಿಸ್ತೀನಿ. ಇಲ್ಲದಿದ್ರೆ ನಿನ್ನಂತವರು ವಯಸ್ಸಾಯ್ತು ಅಂತ ಕಾಲೆಳಿತಾರಲ್ಲ ಅಂತ ಹೇಳಿದ್ದಕ್ಕೆ ನಿಮಗೆ ವಯಸ್ಸಾಯ್ತು ಅಂತ ಯಾರು ಹೇಳ್ತಾರೆ ಅಂತ ಈಶ್ವರಪ್ಪ ಕಾಲೆಳೆದರು.
Published by:Mahmadrafik K
First published: