ಮೈಸೂರಿನಲ್ಲಿ ಇನ್ನೂ ಮುಗಿಯದ ಸಾಲಮನ್ನಾ ಗೊಂದಲ; ಫಲಾನುಭವಿಗಳ ಖಾತೆಗೆ ಬಾರದ ಹಣ

ಕೆಲ‌ ರೈತರಿಗೆ ಮಾತ್ರ ಇನ್ನೂ ಸಾಲಮನ್ನಾ ಆಗಿಲ್ಲ.  ಬ್ಯಾಂಕಿನಲ್ಲಿ ವ್ಯವಹಾರ ಮಾಡೋಣ ಅಂತ ರೈತರ ಬ್ಯಾಂಕಿಗೋದರೆ ನಿಮ್ಮ ಸಾಲ ಮನ್ನಾವಾಗಿಲ್ಲ ಎನ್ನುತ್ತಿದ್ದಾರೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಮೈಸೂರು (ಜ. 29): ಹಿಂದಿನ​​‌ ಸಮ್ಮಿಶ್ರ ಸರ್ಕಾರದ ಸಂದರ್ಭದಲ್ಲಿ ಸಿಎಂ ಆಗಿದ್ದ ಕುಮಾರಸ್ವಾಮಿ ಅವರು, ರೈತರ ಸಾಲ‌ ಮನ್ನಾ ಮಾಡುವುದಾಗಿ  ಘೋಷಣೆ ಮಾಡಿದ್ದರು. ಅದರಂತೆ ಸಾಕಷ್ಟು ರೈತರು ಈ ಯೋಜನೆ ಫಲಾನುಭವಿಗಳಾಗಿದ್ದಾರೆ. ಆದರೆ, ಕೆಲ‌ ರೈತರಿಗೆ ಮಾತ್ರ ಇನ್ನೂ ಈ ಸಾಲಮನ್ನಾಯೋಜನೆ ಲಾಭ ಪಡೆಯುವಲ್ಲಿ ವಿಫಲರಾಗಿದ್ದಾರೆ.  ಬ್ಯಾಂಕಿನಲ್ಲಿ ವ್ಯವಹಾರ ಮಾಡೋಣ ಅಂತ ರೈತರ ಬ್ಯಾಂಕಿಗೋದರೆ ನಿಮ್ಮ ಸಾಲ ಮನ್ನಾವಾಗಿಲ್ಲ. ಹಳೆ ಸಾಲದ ಬಡ್ಡಿ ಕಟ್ಟಿ ಎಂದು ಅಧಿಕಾರಿಗಳು ಪೀಡುಸುತ್ತಿದ್ದಾರೆ ಎಂಬ ಮಾತು ಕೇಳುತ್ತಿದೆ. ಅತ್ತ ಸಾಲನ್ನಾದ ಫಲ ಉಣ್ಣಲಾಗದೆ, ಇತ್ತ ಹೊಸ ಸಾಲ ಪಡೆಯಲಾಗದೆ, ರೈತರು ಗೊಂದಲಕ್ಕೆ ಸಿಲುಕಿದ್ದಾರೆ. ಸಾಲ ಮನ್ನಾದ ಮೂಲಕ 40 ಲಕ್ಷ ರೈತರಿಗೆ ಅನುಕೂಲವಾಗಲಿದೆ ಎಂದು ಈ ಹಿಂದಿನ ಸರ್ಕಾರ ತಿಳಿಸಿತ್ತು. ಆದರೆ,  ಈ ಯೋಜನೆ ಮಾತ್ರ ಅರ್ಹ ರೈತರಿಗೆ ಈವರೆಗೂ ಸಂಪೂರ್ಣವಾಗಿ ಸಿಕ್ಕಿಲ್ಲ. ಸಾಲ ಮನ್ನಾ ವಿಚಾರವಾಗಿ ರೈತರು ದಿನೇ ದಿನೇ ಬ್ಯಾಂಕು- ಕಚೇರಿಗೆ ಅಲೆಯುವಂತಾಗಿದೆಜಿಲ್ಲೆಯ ಟಿ.ನರಸೀಪುರ ತಾಲೂಕಿನ ಚಿಕ್ಕ ಬೋಹಳ್ಳಿ ಗ್ರಾಮದ ರೈತ ಸೋಮಣ್ಣ  2016ರಲ್ಲಿ  ಟಿ.ನರಸೀಪುರದ ಕಾವೇರಿ ಗ್ರಾಮೀಣ ಬ್ಯಾಂಕಿನಲ್ಲಿ 50 ಸಾವಿರ ಸಾಲ ಪಡೆದಿದ್ದಾರೆ. ಸಾಲಮನ್ನಾ ಯೋಜನೆ ನೀವು ಅರ್ಹರಾಗಿದ್ದೀರ ಅಂತ ಸರ್ಕಾರದಿಂದ ಪತ್ರ ಸಹ ಬಂದಿದೆ. ಬ್ಯಾಂಕಿನಲ್ಲೂ ಸಹ ಮೊದಲಿಗೆ ನಿಮ್ಮ ದಾಖಲೆ ಸರಿಯಾಗಿದೆ. ನೀವು ಸಾಲಮನ್ನಾ ವ್ಯಾಪ್ತಿಗೆ ಬರುತ್ತೀರಾ ಎಂದು ಹೇಳಿದ್ದಾರೆ. ಆದರೆ, ಈಗ ಬ್ಯಾಂಕಿನಲ್ಲಿ ವ್ಯವಹಾರ ಮಾಡಲು ಹೋದರೆ, ನಿಮ್ಮ ಸಾಲಮನ್ನಾ ಆಗಿಲ್ಲ. ಹಳೆ ಸಾಲಕ್ಕೆ 23 ಸಾವಿರ ಬಡ್ಡಿಯಾಗಿದೆ ಆ ಬಡ್ಡಿ ಕಟ್ಟಿ ಎನ್ನುತಿದ್ದಾರಂತೆ.

ಇದನ್ನು ಓದಿ: ಜುಲೈಗೆ ರಾಕಿಭಾಯ್​ ಹವಾ ಶುರು: ರಿವೀಲ್​ ಆಯ್ತು ಕೆಜಿಎಫ್​2 ರಿಲೀಸ್​ ಡೇಟ್​

ಇನ್ನು ಬ್ಯಾಂಕಿನ ಅಧಿಕಾರಿಗಳನ್ನ ವಿಚಾರಿಸಿದರೆ ಇದು ನಿಮ್ಮೊಬ್ಬರ ಸಮಸ್ಯೆಯಲ್ಲ ಸಾಕಷ್ಟು ಜನರ ಖಾತೆಗೆ ಸರ್ಕಾರದಿಂದ ಹಣ ಜಮಾವಣೆಯಾಗಿಲ್ಲ. ಇದರಿದ ಸಾಲ ಮನ್ನಾವಾಗಿಲ್ಲ ಎನ್ನುತ್ತಿದ್ದಾರೆ. ಇದರಿಂದಾಗಿ ಬ್ಯಾಂಕಿನಲ್ಲಿ ಯಾವುದೇ ವ್ಯವಹಾರ ಮಾಡ ಬೇಕು ಎಂದರೆ ಮೊದಲಿಗೆ ಹಳೆ ಸಾಲದ ಬಡ್ಡಿ ಪೂರ್ಣಮಾಡಿ ಬಳಿಕ ಸರ್ಕಾರದಿಂದ ಹಣ ಜಮಾವಣೆಯಾದರೆ, ನಿಮ್ಮ  ಹಣವನ್ನು ಕೊಡಲಾಗುವುದು ಎನ್ನುತ್ತಿದ್ದಾರೆ. ಒಂದು ವೇಳೆ ಈಗ ಹಣ ಕಟ್ಟಿ ವ್ಯವಹಾರ ಮಾಡಿದರೆ ಮುಂದೆ ನಮಗೆ ಹಣ ಕೊಡುತ್ತಾರೆ ಎನ್ನುವ ಗ್ಯಾರಂಟಿ ಏನು ಅಂತ ರೈತರ ಪ್ರಶ್ನೆ ಮಾಡುತ್ತಿದ್ದಾರೆ.

ರೈತರಿಗೆ ತಲುಪಿದೆ ಪತ್ರ:

ಸರ್ಕಾರ ಫಲಾನುಭವಿಗಳನ್ನ  ಗುರುತಿಸಿ ಅವರಿಗೆ ಪತ್ರ ನೀಡಿ ಅಭಿನಂದನೆ ಸಲ್ಲಿಸಿದೆ. ಕುಮಾರಸ್ವಾಮಿ ಸಹಿಯುಳ್ಳ ಪತ್ರವು ರೈತ ಸೋಮಣ್ಣರಿಗೆ ತಲುಪಿದೆ. ಆದರೆ, ರೈತನ ಅಕೌಂಟ್‌ಗೆ ಸರ್ಕಾರದಿಂದ ಹಣ ಮಾತ್ರ ಬಂದಿಲ್ಲ. ತೆಗೆದುಕೊಂಡಿದ್ದು 50 ಸಾವಿರ ಸಾಲ ಬಡ್ಡಿ ಕಟ್ಟೋಕೆ ಹೇಳುತ್ತಿರುವುದು 23 ಸಾವಿರ. ಸರ್ಕಾರಿ ಬ್ಯಾಂಕುಗಳಲ್ಲೇ ಈ ರೀತಿ ಲೇವಾದೇವಿಯವರಂತೆ ಬಡ್ಡಿ ಕೇಳಿದರೆ ನಾವೇಲ್ಲಿಗೆ ಹೋಗೋದು. ಅಧಿಕಾರಿಗಳು ನಮ್ಮ ದಾಖಲೆ ಪಡೆದ ಮೇಲೆ ಅದನ್ನ ಸೂಕ್ತವಾಗಿ ಬಗೆಹರಿಸಿಕೊಡಬೇಕಲ್ಲವೇ ಎನ್ನುವುದು ರೈತರ ಪ್ರಶ್ನೆಯಾಗಿದೆ.

ಒಟ್ಟಾರೆ, ಸರ್ಕಾರ ಮಾಡಿದ ಎಡವಟ್ಟಿಗೆ ರೈತರು ದಿನೇ ದಿನೇ ಬ್ಯಾಂಕಿಗೆ ಅಲೆಯುವಂತಾಗಿರೋದು ಸುಳ್ಳಲ್ಲ, ಸಾಲ ಮನ್ನಾ ಮಾಡಿದ್ರೆ ಒಂದೇ ಸಮಯದಲ್ಲಿ ಎಲ್ಲರಿಗೂ ಮನ್ನಾ ಮಾಡಬೇಕು, ಇಲ್ಲ ಮಾಡಬಾರದು.  ಸರ್ಕಾರ ಈಗಲಾದರೂ ಈ ಬಗ್ಗೆ ಎಚ್ಚೆತ್ತುಕೊಂಡು ರೈತರ ನೆರವಿಗೆ ಧಾವಿಸಿ, ತಾನೇ ಗುರುತಿಸಿರುವ ಫಲಾನುಭವಿಗಳಿಗೆ ಸಮಸ್ಯೆ ಬಗೆಹರಿಸಬೇಕಿದೆ.
Published by:Seema R
First published: