• Home
  • »
  • News
  • »
  • state
  • »
  • ಪ್ರೀತಿ ವಿರೋಧಿಸಿ ಯುವತಿಗೆ ಬಲವಂತದ ಮದುವೆ; ಕೆಆರ್​​ಎಸ್​ ಹಿನ್ನೀರಿನಲ್ಲಿ ಪ್ರೇಮಿಯೊಂದಿಗೆ ಶವವಾಗಿ ಪತ್ತೆಯಾದ ನವವಧು

ಪ್ರೀತಿ ವಿರೋಧಿಸಿ ಯುವತಿಗೆ ಬಲವಂತದ ಮದುವೆ; ಕೆಆರ್​​ಎಸ್​ ಹಿನ್ನೀರಿನಲ್ಲಿ ಪ್ರೇಮಿಯೊಂದಿಗೆ ಶವವಾಗಿ ಪತ್ತೆಯಾದ ನವವಧು

ಕೆಆರ್​ಎಸ್​ ಹಿನ್ನೀರು

ಕೆಆರ್​ಎಸ್​ ಹಿನ್ನೀರು

ಆತ್ಮಹತ್ಯೆಗೆ ಒಳಗಾಗಿದ್ದ ಯುವತಿ ಇತ್ತೀಚೆಗಷ್ಟೇ ಮದುವೆಯಾಗಿದ್ದಳು. ಈಗ ಪ್ರೀತಿಸಿದ ಯುವಕನ ಜೊತೆ ಆತ್ಮಹತ್ಯೆ ಮಾಡಿಕೊಂಡಿರುವ ಹಿನ್ನಲೆ ಯುವತಿಯ ಮನೆಯವರ ವಿರುದ್ಧ ಗಂಡಿನ ಕುಟುಂಬಸ್ಥರು ಆಕ್ರೋಶ ವ್ಯಕ್ತಪಡಿಸಿದೆ.

  • Share this:

ಮೈಸೂರು‌ (ಡಿ. 4): ಕೆಆರ್​ಎಸ್​​ ಅಣೆಕಟ್ಟಿನ ಹಿನ್ನೀರಿನಲ್ಲಿ (KRS Backwater) ಯುವಕ-ಯುವತಿ ಇಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. ಒಂದೇ ವೇಲ್​ನಲ್ಲಿ ಇಬ್ಬರೂ ಪರಸ್ಪರ ಕಟ್ಟಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು, ಇವರಿಬ್ಬರು ಪ್ರೇಮಿಗಳು (Lovers) ಎಂಬುದು ಸ್ಪಷ್ಟವಾಗಿದೆ. ಈ ಪ್ರಕರಣ ಕುರಿತು ತನಿಖೆ ನಡೆಸಿದಾಗ, ಇವರಿಬ್ಬರ ಪ್ರೇಮ ಕಥೆ (Love Story) ಹೊರ ಬಂದಿದ್ದು, ಸಾಕಷ್ಟು  ಮಹತ್ವ ಪಡೆದುಕೊಂಡಿದೆ. ಇನ್ನು ಆತ್ಮಹತ್ಯೆಗೆ ಒಳಗಾಗಿದ್ದ ಯುವತಿ ಇತ್ತೀಚೆಗಷ್ಟೇ ಮದುವೆಯಾಗಿದ್ದಳು. ಈಗ ಪ್ರೀತಿಸಿದ ಯುವಕನ ಜೊತೆ ಆತ್ಮಹತ್ಯೆ ಮಾಡಿಕೊಂಡಿರುವ ಹಿನ್ನಲೆ ಯುವತಿಯ ಮನೆಯವರ ವಿರುದ್ಧ ಗಂಡಿನ ಕುಟುಂಬಸ್ಥರು ಆಕ್ರೋಶ ವ್ಯಕ್ತಪಡಿಸಿದೆ.


ಏನಿದು ಪ್ರಕರಣ ?


ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ತಾಲೂಕಿನ ಕನ್ನಂಬಾಡಿ ಅಣೆಕಟ್ಟೆಯ ನಾರ್ತ್ ಬ್ಯಾಂಕ್ ಹಿನ್ನೀರು ಪ್ರದೇಶದಲ್ಲಿ ಘಟನೆ ನಡೆದಿದೆ. 20 ವರ್ಷದ ನವೀನ್ ಮತ್ತು 19 ವರ್ಷದ ನಿಸರ್ಗ ಆತ್ಮಹತ್ಯೆ ಮಾಡಿಕೊಂಡ ಪ್ರೇಮಿಗಳು. ಇಬ್ಬರೂ ಮೈಸೂರಿನ ಮೇಟಗಳ್ಳಿ ನಿವಾಸಿಗಳು. ಇವರಿಬ್ಬರೂ ಪರಸ್ಪರ ಸಂಬಂಧಿಗಳಾಗಿದ್ದರು. ಸಂಬಂಧಿಕರಾಗಿದ್ದರೂ ಇವರಿಬ್ಬರ ಪ್ರೀತಿಗೆ ಮನೆಯವರು ವಿರೋಧಿಸಿದ್ದರು.


ಸಂಬಂಧಿಕರಾಗಿದ್ದರೂ ಇಬ್ಬರ ಪ್ರೀತಿಗೆ ಮನೆಯವರ ವಿರೋಧ


ನವೀನ್ ಹಾಗೂ ನಿಸರ್ಗ ಹಲವು ವರ್ಷಗಳಿಂದ ಪ್ರೀತಿಸುತ್ತಿದ್ದರು ಎನ್ನಲಾಗಿದೆ. ಆದರೆ ಕಳೆದ ನವೆಂಬರ್ 20ರಂದು ಯುವತಿ ನಿಸರ್ಗಗೆ ಪೋಷಕರು ಬೇರೊಬ್ಬರೊಂದಿಗೆ ಮದುವೆ ಮಾಡಿದ್ದರು. ಇದರಿಂದ ಪರಸ್ಪರ ಪ್ರೀತಿಸುತ್ತಿದ್ದ ಇಬ್ಬರು ಭಗ್ನ ಪ್ರೇಮಿಗಳಾಗಿದ್ದರು. ಮದುವೆಯ ನಂತರದ ಕಾರ್ಯಕ್ಕೆ ಬಂದ ನಿಸರ್ಗ ಪ್ರಿಯಕರ ನವೀನ್ ಜೊತೆ ವೇಲ್‌ನಲ್ಲಿ ಕಾಲು ಬಿಗಿದುಕೊಂಡು ಕಾವೇರಿ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.


ನದಿಯಲ್ಲಿ ಈ ರೀತಿ ಇಬ್ಬರ ಮೃತ ದೇಹ ಪತ್ತೆಯಾದ ಹಿನ್ನಲೆ ಸ್ಥಳಕ್ಕೆ ಆಗಮಿಸಿದ  ಕೆ ಆರ್ ಎಸ್ ಪೊಲೀಸರು ಪ್ರಕರಣ ದಾಖಲಿಸಿ, ಇಬ್ಬರ  ಮೃತದೇಹವನ್ನೂ ಮೈಸೂರಿನ ಕೆ‌.ಆರ್‌.ಆಸ್ಪತ್ರೆಯ ಶವಾಗಾರದಲ್ಲಿ ಮರಣೋತ್ತರ ಪರೀಕ್ಷೆ ನಡೆಸಲಾಯಿತು


ಇದನ್ನು ಓದಿ: ಪಶ್ಚಿಮ ಘಟ್ಟ ಪರಿಸರ ಸೂಕ್ಷ್ಮ ವಲಯ ಘೋಷಣೆಗೆ ರಾಜ್ಯ ಸರ್ಕಾರದ ವಿರೋಧ: ಕೇಂದ್ರಕ್ಕೆ ಸಿಎಂ ಸ್ಪಷ್ಟನೆ


ಆಕ್ರೋಶ ವ್ಯಕ್ತಪಡಿಸಿದ  ಗಂಡಿನ ಮನೆಯವರು


ಇನ್ನೂ ಕಳೆದ ತಿಂಗಳು ನಿಸರ್ಗಳನ್ನು  ಚಾಮರಾಜನಗರ ಜಿಲ್ಲೆ ಕೊಳ್ಳೇಗಾಲ ತಾಲೂಕಿನ ತಿಮ್ಮರಾಜ ಪುರದ ನಿವಾಸಿ ಕಾಂತರಾಜ್​ ಎಂಬುವವರಿಗೆ ಮದುವೆ ಮಾಡಿಕೊಡಲಾಗಿತ್ತು. ಮನೆಯವರಿಗೆ ಇಬ್ಬರ ಪ್ರೀತಿಯ ವಿಚಾರ ಗೊತ್ತಿದ್ದರೂ ಏನು ಹೇಳದೇ ಕಾಂತರಾಜ್​ ಜೊತೆ ಮದುವೆ ಮಾಡಿದ್ದರು. ಈಗ ಮದುವೆಯಾಗಿ ತಿಂಗಳೊಳಗೆ ಈ ರೀತಿ ವಧು ಹೆಣವಾಗಿ ಬಿದ್ದಿರುವುದು ವರನ ಕುಟುಂಬಸ್ಥರ ಆಕ್ರೋಶಕ್ಕೆ ಗುರಿಯಾಗಿದೆ.


ಇದನ್ನು ಓದಿ: ಕನಸಿನಲ್ಲಿ ಈ ವಸ್ತು ಕಂಡರೆ ಶೀಘ್ರದಲ್ಲೇ ಹಣವಂತರಾಗಲಿದ್ದೀರಾ ಎಂದು ಅರ್ಥವಂತೆ


ಎಲ್ಲಾ ವಿಚಾರ ಗೊತ್ತಿದ್ದರೂ ನಮ್ಮನ್ನು ಮಧ್ಯ ವರ್ತಿ ಬಲಿಪಾಶು ಮಾಡಿದ್ಧಾನೆ. ನಾವೇ  ಖರ್ಚನ್ನು ಹಾಕಿಕೊಂಡು ಮದುವೆ ಮಾಡಿಕೊಂಡಿದ್ದೇವು. ಆದರೆ ಇವರು  ಇವರ ಪ್ರೀತಿ‌ ಮುಚ್ಚಿಟ್ಟು ನಮ್ಮ ಹುಡುಗನಿಗೆ‌‌ ಮೋಸ ಮಾಡಿದ್ದಾರೆ. ಮಧ್ಯವರ್ತಿಗಳಿಗೆ ಶಿಕ್ಷೆಯಾಗಬೇಕು ಅಂತ ಕಾಂತರಾಜ್ ಪೋಷಕರು ಪಟ್ಟು ಹಿಡಿದರು. ಇನ್ನೂ ಆಗತಾನೇ ಹೊಸ ಜೀವನದ ಕನಸು ಕಾಣುತ್ತಿದ್ದ ಕಾಂತರಾಜು ಈ ಘಟನೆಯಿಂದ ದಿಕ್ಕು ತೋಚದಂತೆ ಕುಳಿತ್ತಿದ್ದಾನೆ.


ಮೂವರ ಜೀವನ ದುರಂತ ಅಂತ್ಯ


ಯುವತಿ ಪೋಷಕರು ಮಾಡಿದ ಪ್ರೀತಿಗೆ ವಿರೋಧ ಮಾಡಿ ಬೇರೊಬ್ಬನ ಜೊತೆ ಮದುವೆ ಮಾಡಿ ಏನೋ ಸಾಧಿಸಿದಂತೆ ಬೀಗಿದ್ದರು. ಈಗ ಇದರ ಪರಿಣಾಮ ನವ ಜೀವನ ಸಾಗಿಸಬೇಕಿದ್ದ ನಿಸರ್ಗಳು ಕಡೆಗೆ ಈ ರೀತಿ ಜೀವನವನ್ನು ದುರಂತ ಅಂತ್ಯ ಮಾಡಿಕೊಂಡಿದ್ದಾಳೆ.  ಇತ್ತ ಕಾಂತರಾಜ್ ಜೀವನವೂ ಬಿರುಗಾಳಿಗೆ ಸಿಕ್ಕ ತರಗೆಲೆಯಂತಾಗಿದೆ.  ಮನೆಯವರ ವಿರೋಧದಿದಂದ ಮೂರು ಜನರ ಜೀವನ ಸಂಪೂರ್ಣ ಹಾಳಾಗಿದೆ.  ಮಕ್ಕಳ ಪ್ರೀತಿ, ಪ್ರೇಮಕ್ಕೆ ಸಕಾರಣವಿಲ್ಲದೆ ವಿರೋಧ ಮಾಡುವ ಪೋಷಕರಿಗೆ ಈ ಪ್ರಕರಣ ಸೂಕ್ತ ನಿದರ್ಶನವಾಗಬೇಕಿದೆ.

Published by:Seema R
First published: