• Home
  • »
  • News
  • »
  • state
  • »
  • ಎದುರು ಮನೆಯಾತನ ಜೊತೆ ಹೆಂಡತಿಗೆ ಅಕ್ರಮ ಸಂಬಂಧ ಇದೆ ಅಂತ ಅನುಮಾನ; ಆತನ ತಂದೆ-ತಾಯಿಯನ್ನ ಕೊಂದ ಪಾಪಿ!

ಎದುರು ಮನೆಯಾತನ ಜೊತೆ ಹೆಂಡತಿಗೆ ಅಕ್ರಮ ಸಂಬಂಧ ಇದೆ ಅಂತ ಅನುಮಾನ; ಆತನ ತಂದೆ-ತಾಯಿಯನ್ನ ಕೊಂದ ಪಾಪಿ!

ಆರೋಪಿ ಈರಯ್ಯ

ಆರೋಪಿ ಈರಯ್ಯ

Mysore Crime News: ಈರಯ್ಯ ಎದುರು ಮನೆಯ ರವಿಯನ್ನು ಹುಡುಕಿಕೊಂಡು ಹೊರಟಿದ್ದಾನೆ. ಈ ವೇಳೆ ರವಿ ಮನೆಯಲ್ಲಿ ಇರಲಿಲ್ಲ. ಈ ವೇಳೆ ಈ ಪಾಪಿ ಕೈಗೆ ರವಿ ತಂದೆ 68 ವರ್ಷದ ಮಾದಯ್ಯ, 57 ವರ್ಷದ ತಾಯಿ ನಿಂಗಮ್ಮ ಸಿಕ್ಕಿದ್ದಾರೆ. ಪಾಪಿ ಈರಯ್ಯ ಇವರ ಮೇಲೂ ಮಚ್ಚು ಬೀಸಿದ್ದಾನೆ.

  • Share this:

ಮೈಸೂರು: ಆತ ಮೊದಲೇ ಜೈಲು (Jail) ಸೇರಿ ಇತ್ತೀಚೆಗಷ್ಟೇ ಹೊರ ಬಂದಿದ್ದ. ಪತ್ನಿ (wife) ಮೇಲೆ ಅನುಮಾನಗೊಂಡ (Doubt) ಪಾಪಿ ರಕ್ತದ ಕೋಡಿಯನ್ನೇ ಹರಿಸಿದ್ದಾನೆ. ಪಾಪಿ ಬೀಸಿದ ಮಚ್ಚಿನೇಟಿಗೆ ಇಬ್ಬರು ಅಮಾಯಕರ ಜೀವ ಕಳೆದುಕೊಂಡಿದ್ರೆ(Double Murder), ಗಾಯಗೊಂಡವ್ರು ಆಸ್ಪತ್ರೆ ಸೇರಿದ್ದಾರೆ. ಮನೆಯಲ್ಲಿ ಎಲ್ಲಾ ಚೆಲ್ಲಾಡಿದ ರಕ್ತ. ಊರ ತುಂಬೆಲ್ಲಾ ರಕ್ತದೋಕುಳಿ. ಎಲ್ಲರ ಮುಖದಲ್ಲೂ ಆತಂಕ ಭಯ. ಇದು ಮೈಸೂರು ಜಿಲ್ಲೆ ನಂಜನಗೂಡು ತಾಲ್ಲೂಕಿನ ನವಿಲೂರು ಗ್ರಾಮ. ಇಡೀ ಗ್ರಾಮದ ಜನರು ನಿನ್ನೆ ನಡೆದ ರಕ್ತದೋಕುಳಿಯಿಂದ ಬೆಚ್ಚಿ ಬಿದ್ದಿದ್ದಾರೆ. ಅಂದ್ಹಾಗೆ ನಿನ್ನೆ ನವಿಲೂರಿನ ಈರಯ್ಯ ನಡೆಸಿದ ರಕ್ತದೋಕುಳಿಯಿಂದ ಇಬ್ಬರು ಸಾವನ್ನಪ್ಪಿದರೆ, 5 ಜನ ಸಾವು ಬದುಕಿನ ನಡುವೆ ಹೋರಾಟ ನಡೆಸಿದ್ದಾರೆ.


2ನೇ ಮದುವೆಯಲ್ಲೂ ಕಿರಿಕ್​​ 


ಆರೋಪಿ ಈರಯ್ಯ(48)  ಸಣ್ಣ ಪುಟ್ಟ ಕೆಲಸ ಮಾಡಿಕೊಂಡು ಜೀವನ ನಡೆಸುತ್ತಿದ್ದ. 13 ವರ್ಷದ ಹಿಂದೆ ತನ್ನ ಪತ್ನಿಯನ್ನು ಕೊಂದ ಆರೋಪದಡಿಯಲ್ಲಿ ಜೈಲು ಸೇರಿದ್ದ. ಕೊಲೆ ಆರೋಪ ಸಾಬೀತಾಗದ ಹಿನ್ನೆಲೆಯಲ್ಲಿ 3 ವರ್ಷ ಜೈಲು ಶಿಕ್ಷೆ ಅನುಭವಿಸಿ ನಂತರ ಜೈಲಿನಿಂದ ಬಿಡುಗಡೆಯಾಗಿದ್ದ. ಜೈಲಿನಿಂದ ಬಂದವನೇ ಪಕ್ಕದ ಹರವೆ ಗ್ರಾಮದ ಮಹದೇವಮ್ಮ‌ ಎಂಬಾಕೆಯನ್ನು ಮದುವೆಯಾಗಿದ್ದ. ಒಂದು ಗಂಡು ಮಗು ಸಹಾ ಇತ್ತು. ಎಲ್ಲವೂ ಚೆನ್ನಾಗಿಯೇ ನಡೆದಿತ್ತು. ಮಹದೇವಮ್ಮ ಮತ್ತೆ ಗರ್ಭಿಣಿಯಾಗಿದ್ದಳು. ಮದುವೆಯಾದ ಹೊಸತರಲ್ಲಿ ಎಲ್ಲವೂ ಚೆನ್ನಾಗಿಯೇ ಇತ್ತು. ಆದ್ರೆ ಬರ ಬರುತ್ತಾ ಈರಯ್ಯನಿಗೆ ಪತ್ನಿ ಮೇಲೆ ಅನುಮಾನ ಶುರುವಾಗಿತ್ತು. ಅದರಲ್ಲೂ ಎದುರು ಮನೆಯ ರವಿ ಎಂಬಾತನ ತನ್ನ ಪತ್ನಿ ಮಹದೇವಮ್ಮ ಜೊತೆ ಸಂಬಂಧ ಹೊಂದಿದ್ದಾಳೆ ಅನ್ನೋ ಅನುಮಾನ ಈರಯ್ಯನನ್ನು ಸದಾ ಕಾಡುತಿತ್ತು.


ಹೆಂಡತಿ ಮೇಲೆ ಸದಾ ಅನುಮಾನ 


ಈ ಸಂಬಂಧ 5 ವರ್ಷದ ಹಿಂದೆ ಗ್ರಾಮದಲ್ಲಿ ಜಗಳವಾಗಿ ರಾಜಿ ಪಂಚಾಯತಿ ಸಹ ಆಗಿತ್ತು. ಇನ್ನು ಪತ್ನಿ ಮಹದೇವಮ್ಮ ಗರ್ಭಿಣಿ ಆದ ದಿನದಿಂದಲೂ ಇದಕ್ಕೆ ರವಿಯೇ ಕಾರಣ ಅನ್ನೋ ಹುಳ ಈರಯ್ಯನ ತಲೆ ಹೊಕ್ಕಿತ್ತು. ಇದರಿಂದ ಹುಟ್ಟುವ ಮಗು ನನ್ನದಲ್ಲ ಅಂತ ಪತ್ನಿ ಜೊತೆ ಆಗಾಗ ಜಗಳವಾಡುತ್ತಿದ್ದ. ನೆನ್ನೆ ರಾತ್ರಿ ಸಹಾ ಇದೇ ವಿಚಾರವಾಗಿ ಈರಯ್ಯ ಜಗಳ ತೆಗೆದಿದ್ದ. ಜಗಳ ತಾರಕಕ್ಕೇರಿ ಮನೆಯಲ್ಲಿ ಊಟ ಮಾಡುತ್ತಿದ್ದ ಪತ್ನಿ ಮಹದೇವಳ ಮೇಲೆ ಮಚ್ಚಿನಿಂದ ಮಾರಣಾಂತಿಕ ಹಲ್ಲೆ ನಡೆಸಿದ್ದಾನೆ. ತಡೆಯಲು ಬಂದ ಮಹದೇವಮ್ಮ ತಾಯಿ ಗೌರಮ್ಮ ಮೇಲೂ ಮಚ್ಚಿನಿಂದ ಹಲ್ಲೆ ನಡೆಸಿದ್ದಾನೆ.


ರವಿ ತಂದೆ-ತಾಯಿ ಕೊಲೆ 


ಇಷ್ಟಕ್ಕೇ ಸುಮ್ಮನಾಗದ ಪಾಪಿ ಈರಯ್ಯ ಎದುರು ಮನೆಯ ರವಿಯನ್ನು ಹುಡುಕಿಕೊಂಡು ಹೊರಟಿದ್ದಾನೆ. ಈ ವೇಳೆ ರವಿ ಮನೆಯಲ್ಲಿ ಇರಲಿಲ್ಲ. ಈ ವೇಳೆ ಈ ಪಾಪಿ ಕೈಗೆ ರವಿ ತಂದೆ 68 ವರ್ಷದ ಮಾದಯ್ಯ, 57 ವರ್ಷದ ತಾಯಿ ನಿಂಗಮ್ಮ ಸಿಕ್ಕಿದ್ದಾರೆ. ಪಾಪಿ ಈರಯ್ಯ ಇವರ ಮೇಲೂ ಮಚ್ಚು ಬೀಸಿದ್ದಾನೆ. ಹಲ್ಲೆಗೊಳಗಾದ ನಿಂಗಮ್ಮ ಸ್ಥಳದಲ್ಲೇ ಸಾವನ್ನಪ್ಪಿದರೇ ಮಾದಯ್ಯ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ವಿಚಾರ ತಿಳಿದು ಸ್ಥಳಕ್ಕೆ ಆಗಮಿಸಿದ ನಂಜನಗೂಡು ಗ್ರಾಮಾಂತರ ಪೊಲೀಸರು ಹಲ್ಲೆ ನಡೆಸಿ ಗ್ರಾಮದಲ್ಲಿ ನಡೆದು ಹೋಗುತ್ತಿದ್ದ ಈರಯ್ಯನನ್ನು ವಶಕ್ಕೆ ಪಡೆದಿದ್ದಾರೆ. ಹಲ್ಲೆ ನಡೆಸಿದ ಮಚ್ಚನ್ನು ಹಿಡಿದುಕೊಂಡೇ ಈರಯ್ಯ ಜೀಪು ಹತ್ತಿದ್ದಾನೆ.


ಇದನ್ನೂ ಓದಿ: Charmadi Murder Mystery: ಚಾರ್ಮಾಡಿ ಘಾಟ್​​ನಲ್ಲಿ ನಡೆದ ಕೊಲೆಯ ರಹಸ್ಯ ಬಯಲು; ಜೊತೆಗಾರನೇ ಹಂತಕನಾಗಿದ್ದೇಕೆ?


ಸಿಕ್ಕ ಸಿಕ್ಕವರ ಮೇಲೆ ಮಚ್ಚು ಬೀಸಿದ..! 


ಪೊಲೀಸರು ಆತನನ್ನು ಕರೆದುಕೊಂಡು ಘಟನಾ ಸ್ಥಳಕ್ಕೆ ಆಗಮಿಸಿದ್ದಾರೆ. ಈ ವೇಳೆ ಘಟನಾ ಸ್ಥಳಕ್ಕೆ ಬಂದ ರವಿಯ ಸಂಬಂಧಿಗಳಾದ ಸುರೇಶ್ ಮತ್ತು ಮಹದೇವಸ್ವಾಮಿ ಈತನ ವಿರುದ್ದ ಪೊಲೀಸರಿಗೆ ಕಠಿಣ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ. ಇದರಿಂದ ರೊಚ್ಚಿಗೆದ್ದ ಈರಯ್ಯ ಪೊಲೀಸ್ ಜೀಪಿನಿಂದ ಹಾರಿ ಬಂದು ಸುರೇಶ್ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದಾನೆ. ತಪ್ಪಿಸಿಕೊಂಡ ಮಹದೇವಸ್ವಾಮಿಯನ್ನು ನವಿಲೂರಿನ ಗಲ್ಲಿ ಗಲ್ಲಿಯಲ್ಲಿ ಅಟ್ಟಾಡಿಸಿಕೊಂಡು ಮಚ್ಚಿನಿಂದ ಹಲ್ಲೆ ನಡೆಸಿದ್ದಾನೆ. ಆತ ಓಡಿದ ಎಲ್ಲಾ‌ ಕಡೆ‌ ರಕ್ತದ ಕಲೆಗಳಿವೆ. ಅದನ್ನು ರಕ್ಷಿಸಿಲು ಪೊಲೀಸರು ಆ ಜಾಗದಲ್ಲಿ ಪಾತ್ರೆಗಳನ್ನು ಮುಚ್ಚಿದ್ದಾರೆ. ಇನ್ನು ಇವರ ಮೇಲೆ ಹಲ್ಲೆ ನಡೆಯುವಾಗ ತಡೆಯಲು ಬಂದ ಪೊಲೀಸರ ಮೇಲೂ ಈರಯ್ಯ ಮಚ್ಚು ಬೀಸಿದ್ದಾನೆ. ಇದರಿಂದ ಸಬ್‌ಇನ್ಸಪೆಕ್ಟರ್ ರಾಮಸ್ವಾಮಿಗೂ ಗಾಯವಾಗಿದೆ. ಸ್ಥಿಮಿತ ಕಳೆದುಕೊಂಡು ಸಿಕ್ಕ ಸಿಕ್ಕವರ ಮೇಲೆ ಮಚ್ಚು ಬೀಸುತ್ತಿದ್ದ ಈರಯ್ಯನನ್ನು ಕೊನೆಗೆ ಪೊಲೀಸರು ಹೆಡೆಮುರಿ ಕಟ್ಟಿ ಬಂಧಿಸಿದ್ದಾರೆ.


ಘಟನೆಯಲ್ಲಿ ಇಬ್ಬರು ಅಮಾಯಕ ವೃದ್ದರು ಮೃತಪಟ್ಟಿದ್ದಾರೆ. ಬರೋಬ್ಬರಿ 5 ಜನ ಗಾಯಗೊಂಡಿದ್ದಾರೆ. ಇದರಲ್ಲಿ ಮೂವರ ಸ್ಥಿತಿ ಗಂಭೀರವಾಗಿದೆ. ಇವರಿಗೆ ಬೆಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಿಸಲಾಗಿದೆ. ಇದೆಲ್ಲಾ ಏನೇ ಇರಲಿ ಅನುಮಾನದ ಕೀಟ ತಲೆ ಹೊಕ್ಕಿದ್ದು ಮಾತ್ರವಲ್ಲ ಮದ್ಯದ ನಶೆಯಲ್ಲಿದ್ದ ಈರಯ್ಯ ಹಲವು ಸಾವು ನೋವಿಗೆ ಕಾರಣವಾಗಿದ್ದು ಮಾತ್ರ ದುರಂತವೇ ಸರಿ.

Published by:Kavya V
First published: