Donkey Milk: ಮಕ್ಕಳಲ್ಲಿ ಕಾಣಿಸಿಕೊಳ್ಳುತ್ತಿರುವ ಜ್ವರದ ಬೆನ್ನಲ್ಲೆ ಕತ್ತೆ ಹಾಲಿಗೆ ಹೆಚ್ಚಿದ ಬೇಡಿಕೆ

ಇದೀಗ ನಗರ ಪ್ರದೇಶದಲ್ಲಿ ಕತ್ತೆ ಹಾಲಿಗೆ ಬೇಡಿಕೆ ಹೆಚ್ಚಿದೆ. 5 ಮಿಲಿ ಹಾಲು 50 ರೂಗೆ ನಗರದಲ್ಲಿ ಮಾರಾಟ ಮಾಡಲಾಗುತ್ತಿದೆ.

ಕತ್ತೆ ಹಾಲು ಕರೆಯುತ್ತಿರುವ ದೃಶ್ಯ

ಕತ್ತೆ ಹಾಲು ಕರೆಯುತ್ತಿರುವ ದೃಶ್ಯ

 • Share this:
  ಬೆಂಗಳೂರು (ಸೆ. 23): ರಾಜ್ಯದೆಲ್ಲೆಡೆ ಮಕ್ಕಳಲ್ಲಿ ವೈರಲ್​ ಜ್ವರ (viral fever in children) ಹೆಚ್ಚಾಗಿ ಕಾಣಿಸುತ್ತಿದ್ದು, ಆತಂಕ ಮೂಡಿಸಿದೆ. ಕೋವಿಡ್​ ಆತಂಕದಲ್ಲಿ ಮಕ್ಕಳಲ್ಲಿ ಕಂಡು ಬರುತ್ತಿರುವ ಈ ಸಾಮಾನ್ಯ ಜ್ವರ, ಕೆಮ್ಮು, ಶೀತದ ಲಕ್ಷಣಗಳು ಪೋಷಕರಲ್ಲಿ ಭಯ ಮೂಡಿಸಿದೆ. ಇದಕ್ಕಾಗಿ ಮಕ್ಕಳ ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿಗೆ ಮುಂದಾಗಿರುವ ಪೋಷಕರು ಇದೀಗ ಕತ್ತೆ ಹಾಲಿನ ಮೊರೆ ಹೋಗಿರುವ ಘಟನೆ ಸಾಂಸ್ಕೃತಿಕ ನಗರಿಯಲ್ಲಿ (Mysore city) ಕಂಡು ಬಂದಿದೆ. ಅಚ್ಚರಿಯಾದರೂ ಹೌದು, ಮೈಸೂರಿನ ಹಲವು ಭಾಗಗಳಲ್ಲಿ ಈಗ ಕತ್ತೆ ಹಾಲಿಗೆ ಬೇಡಿಕೆ ಹೆಚ್ಚಿದೆ. ಕತ್ತೆಯ ಹಾಲು (Donkey milk) ಮಕ್ಕಳಲ್ಲಿ ಹಸಿವು ಹೆಚ್ಚಿಸುವ, ಆಸ್ತಮಾ, ಶೀತ, ಕೆಮ್ಮು ಮುಂತಾದ ಕಾಯಿಲೆಗಳಿಗೆ ರಾಮಬಾಣ ಎನ್ನಲಾಗುತ್ತಿದೆ. ಈ ಹಿನ್ನಲೆ ಜನರು ಈ ಕತ್ತೆ ಹಾಲಿನ ಮೊರೆ ಹೋಗುತ್ತಿರುವ ದೃಶ್ಯ ಕಂಡು ಬಂದಿದೆ.

  ಕತ್ತೆ ಹಾಲಿಗೆ ಹೆಚ್ಚಿದ ಡಿಮ್ಯಾಂಡ್​

  ಹಸುವಿನ ಹಾಲಿಗಿಂತ ಕತ್ತೆ ಹಾಲಿನಲ್ಲಿ ಔಷಧೀಯ ಗುಣ ಹೊಂದಿದ್ದು, ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ ಎಂಬ ಮಾತು ಹಿಂದಿನಿಂದಲೂ ಕೇಳಿ ಬಂದಿದೆ. ಇದೇ ಹಿನ್ನಲೆ ಇದೀಗ ನಗರ ಪ್ರದೇಶದಲ್ಲಿ ಕತ್ತೆ ಹಾಲಿಗೆ ಬೇಡಿಕೆ ಹೆಚ್ಚಿದೆ. 5 ಮಿಲಿ ಹಾಲಿಗೆ 50 ರೂಗೆ ನಗರದಲ್ಲಿ ಮಾರಾಟ ಮಾಡಲಾಗುತ್ತಿದೆ. ವಿಶೇಷ ಎಂದರೆ ಗ್ರಾಮೀಣ ಭಾಗದಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದ ಕತ್ತೆ ಹಾಲು ಮಾರಾಟ ಈಗ ನಗರದಲ್ಲೂ ಕಂಡು ಬಂದಿದೆ.

  ನಗರದಲ್ಲಿ ಕತ್ತೆ ಹಾಲಿಗೆ ಬೇಡಿಕೆ ಹೆಚ್ಚಿದ ಹಿನ್ನಲೆ ಸಾಕಾಣಿದಾರರು  ಬೀದಿ ಬೀದಿಗಳಲ್ಲಿ ಕತ್ತೆಗಳನ್ನು ಹಿಡಿದು ಬರುತ್ತಿರುವ ದೃಶ್ಯ ಸಾಮಾನ್ಯವಾಗಿದೆ.  ಕೊಳ್ಳುವವರ ಮನೆಯ ಮುಂದೆಯೇ ಸ್ಥಳದಲ್ಲಿ ಹಾಲು ಕರೆದು ನೀಡುತ್ತಾರೆ. ಇದರಿಂದ ವ್ಯಾಪಾರಿಗಳಿಗೂ ಸಾಕಷ್ಟು ಲಾಭ ಆಗುತ್ತಿದೆ. ನಗರದಲ್ಲಿ ಪ್ರತಿನಿತ್ಯ ಇದೇ ರೀತಿ ಸಾಕಾಣಿಕೆ ದಾರರು ತಮ್ಮ ಕಿಸೆ ತುಂಬಿಸಿಕೊಳ್ಳುತ್ತಿರುವ ದೃಶ್ಯ ಕಂಡು ಬಂದಿದೆ.

  ಇದನ್ನು ಓದಿ: ಬೆಂಗಳೂರು ವಿವಿಯಲ್ಲಿ ಅತಿಥಿ ಉಪನ್ಯಾ ಸಕ ಹುದ್ದೆಗೆ ಅರ್ಜಿ ಆಹ್ವಾನ

  ರೋಗ ನಿರೋಧಕ ಶಕ್ತಿ ಗುಣ ಹೊಂದಿರುವ ಕತ್ತೆ ಹಾಲು

  ಕತ್ತೆ ಹಾಲಿನ ಸೇವನೆ ಆರೋಗ್ಯಕ್ಕೆ ಉತ್ತಮ ಎಂಬುದು ಈಗಾಗಲೇ ತಿಳಿದು ಬಂದಿದೆ, ಅದರಲ್ಲೂ 10 ವರ್ಷದೊಳಗಿನ ಮಕ್ಕಳಿಗೆ ಈ ಕತ್ತೆ ಹಾಲನ್ನು ಕುಡಿಸುವುದರಿಂದ ಕೆಮ್ಮ, ಶ್ವಾಸಕೋಶ ಸೋಂಕು, ನೆಗಡಿ ನಿವಾರಣೆಯಾಗಲಿದೆ. ಇದರಲ್ಲಿ ವಿಟಮಿನ್ ಸಿ, ಎ, ಬಿ1, ಬಿ2, ಬಿ6 ಸೇರಿದಂತೆ ಅನೇಕ ಅಂಶ ಇದೆ. ಈ ಕತ್ತೆ ಹಾಲಿನಲ್ಲಿನ ಗುಣದಿಂದ ಅನೇಕ ಕಾಯಿಲೆಗಳು ಗುಣವಾಗುತ್ತದೆ ಎಂಬ ಮಾತಿದೆ. ಅದರಲ್ಲೂ ಈ ಹಿಂದಿನ ಕಾಲದಲ್ಲಿ ಹುಟ್ಟಿದ ಮಕ್ಕಳಿಗೆ ಕತ್ತೆ ಹಾಲನ್ನು ಕೂಡಿಸುತ್ತಿದ್ದರು. ಇದರಿಂದ ಮಗುವಿನ ಆರೋಗ್ಯ ವೃದ್ದಿಯಾಗುತ್ತದೆ ಎಂಬ ಮಾತು ಹಿರಿಯರು ಹೇಳುತ್ತಿದ್ದರು.

  ಇದನ್ನು ಓದಿ:  ಕಣ್ಣುಗಳ ಸುತ್ತಿನ ಡಾರ್ಕ್​ ಸರ್ಕಲ್ ನಿಮ್ಮ ಅಂದ ಹಾಳು ಮಾಡುತ್ತಿದ್ದರೆ, ಈ ಟಿಪ್ಸ್ ಫಾಲೋ ಮಾಡಿ

  ಬಳಸುವ ಮುನ್ನ ಎಚ್ಚರ

  ಕತ್ತೆ ಹಾಲಿನಲ್ಲಿ ಅನೇಕ ಔಷಧೀಯ ಗುಣ ಹೊಂದಿದ್ದು, ಅದು ತಾಯಿ ಎದೆ ಹಾಲಿನಷ್ಟೆ ಪ್ರಮಾಣದ ಶಕ್ತಿಯನ್ನು ಹೊಂದಿದೆ. ಆದರೆ, ಅನೇಕ ಬಾರಿ ಈ ಹಾಲುಗಳು ಮಕ್ಕಳಿಗೆ ಅಲರ್ಜಿ ಆಗುವ ಸಂಭವವೂ ಇರುತ್ತದೆ. ಈ ಹಿನ್ನಲೆ ಇದರ ಬಳಕೆ ಮಾಡುವ ಮುನ್ನ ಪರೀಕ್ಷೆ ಮಾಡಿ ಬಳಸುವುದು ಉತ್ತಮ
  Published by:Seema R
  First published: