ಹುಣಸೂರು ಉಪಚುನಾವಣೆ: 40 ಎಫ್​ಐಆರ್​ ದಾಖಲು, 6 ಲಕ್ಷ ಹಣ ಜಪ್ತಿ; ಮಾಹಿತಿ ನೀಡಿದ ಮೈಸೂರು ಜಿಲ್ಲಾಧಿಕಾರಿ

ಕೇಂದ್ರದಿಂದ ಭದ್ರತೆಗಾಗಿ ಸಿಐಎಸ್ ಎಫ್, ಸಿಆರ್ ಪಿಎಫ್ ಪೊಲೀಸರನ್ನು  ಕರೆಸಲಾಗುವುದು. ಅವರನ್ನು ಸೂಕ್ತ ಸ್ಥಳಗಳಿಗೆ ನಿಯೋಜಿಸಲಾಗುವುದು‌ ಎಂದರು.

Latha CG | news18-kannada
Updated:November 22, 2019, 7:12 PM IST
ಹುಣಸೂರು ಉಪಚುನಾವಣೆ: 40 ಎಫ್​ಐಆರ್​ ದಾಖಲು, 6 ಲಕ್ಷ ಹಣ ಜಪ್ತಿ; ಮಾಹಿತಿ ನೀಡಿದ ಮೈಸೂರು ಜಿಲ್ಲಾಧಿಕಾರಿ
ಮೈಸೂರು ಡಿಸಿ ಅಭಿರಾಂ ಜಿ.ಶಂಕರ್​
  • Share this:
ಮೈಸೂರು(ನ.22): ಹುಣಸೂರು ಕ್ಷೇತ್ರ ವ್ಯಾಪ್ತಿಯಲ್ಲಿ ಒಟ್ಟು 6 ಚೆಕ್ ಪೋಸ್ಟ್‌ ಗಳನ್ನು ನಿರ್ಮಿಸಲಾಗಿದ್ದು, ಹೆಚ್ಚುವರಿಯಾಗಿ 3ಚೆಕ್ ಪೋಸ್ಟ್ ಗಳನ್ನು ನಿರ್ಮಿಸಲಾಗಿದೆ. ಚೆಕ್ ಪೋಸ್ಟ್ ಗಳಲ್ಲಿ ಒಟ್ಟು  6,35,300ರೂ ಹಣ ಜಪ್ತಿ ಮಾಡಲಾಗಿದೆ. ದಾಖಲೆ ಪರಿಶೀಲಿಸಿ 4ಲಕ್ಷ ಹಣವನ್ನು ವಾರಸುದಾರರಿಗೆ ಹಿಂದಿರುಗಿಸಲಾಗಿದೆ ಎಂದು ಮೈಸೂರು ಜಿಲ್ಲಾಧಿಕಾರಿ ಅಭಿರಾಮ್​ ಜಿ.ಶಂಕರ್​ ತಿಳಿಸಿದ್ದಾರೆ.

ಡಿಸೆಂಬರ್​ 5ರಂದು ಹುಣಸೂರು ಉಪಚುನಾವಣೆ ಹಿನ್ನೆಲೆ, ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಒಟ್ಟು 1,37,00,000ಮೌಲ್ಯದ 1 ಲಕ್ಷ ಲೀಟರ್‌ ಸ್ಪಿರಿಟ್ ವಶಪಡಿಸಿಕೊಳ್ಳಲಾಗಿದೆ. 25ಸಾವಿರ ಲೀಟರ್ ನಂತೆ ನಾಲ್ಕು ಟ್ಯಾಂಕರ್ ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಹೇಳಿದರು.

ಉಪಚುನಾವಣೆ ಸಂಬಂಧ ಕ್ಷೇತ್ರ ವ್ಯಾಪ್ತಿಯಲ್ಲಿ ಒಟ್ಟು 40ಎಫ್ ಐಆರ್ ಗಳನ್ನು ದಾಖಲಿಸಲಾಗಿದೆ. ಮತದಾನದ ದಿನ ಹುಣಸೂರಿನಲ್ಲಿ ಸಾರ್ವತ್ರಿಕ ರಜೆ ಘೋಷಣೆ ಮಾಡಲಾಗಿದೆ ಎಂದರು.

ಬಿಜೆಪಿಯದ್ದು ಗರ್ಭಗುಡಿ ಸಂಸ್ಕೃತಿ; ಬಡವರು, ದಲಿತರಿಗೆ ಅಲ್ಲಿ ಜಾಗ ಇಲ್ಲ: ಶಿವಶಂಕರ್ ರೆಡ್ಡಿ

ಈಗಾಗಲೇ ಎಲ್ಲಾ ಕಡೆ ಚೆಕ್ ಪೋಸ್ಟ್‌ಗಳನ್ನ ಹೆಚ್ಚಳ ಮಾಡಲಾಗಿದೆ. ಚುನಾವಣೆಗೆ ಸಂಬಂಧಿಸಿದಂತೆ 186 ರೌಡಿಗಳನ್ನು ಗುರುತಿಸಲಾಗಿದೆ. ಅಗತ್ಯ ಬಿದ್ದರೆ ಕೆಲವರನ್ನು ವಶಕ್ಕೆ ಪಡೆಯಲಾಗುವುದು. ಕೇಂದ್ರದಿಂದ ಭದ್ರತೆಗಾಗಿ ಸಿಐಎಸ್ ಎಫ್, ಸಿಆರ್ ಪಿಎಫ್ ಪೊಲೀಸರನ್ನು  ಕರೆಸಲಾಗುವುದು. ಅವರನ್ನು ಸೂಕ್ತ ಸ್ಥಳಗಳಿಗೆ ನಿಯೋಜಿಸಲಾಗುವುದು‌ ಎಂದರು.

30 ಸಾವಿರ ಸೀರೆ ಸಿಕ್ಕ ಪ್ರಕರಣದ ಬಗ್ಗೆ ಮಾತನಾಡಿದ ಅವರು, ಗೋಡನ್ ಬಾಡಿಗೆ ಪಡೆದ ವ್ಯಕ್ತಿಯ ಮೇಲೆ ದೂರು ದಾಖಲಿಸಲಾಗಿದೆ. ಸೀರೆ ಮೇಲೆ ಅಂಟಿಸಲಾಗಿದ್ದ ವ್ಯಕ್ತಿಗಳ ಭಾವಚಿತ್ರದ ಆಧಾರದಲ್ಲಿ ಕೇಸ್ ದಾಖಲಿಸಿಲ್ಲ. ಸದ್ಯ ತನಿಖೆ ನಡೆಸಲಾಗುತ್ತಿದೆ. ಪಾತ್ರ ಇದ್ದರೆ ಮತ್ತಷ್ಟು ಜನರ ಮೇಲೆ ಕೇಸ್ ದಾಖಲಿಸಲಾಗುವುದು ಎಂದರು.

ಬನಾರಸ್ ಹಿಂದೂ ವಿವಿ ವಿವಾದ; ಸಂಸ್ಕೃತದಲ್ಲಿ ಪಿಎಚ್​.ಡಿ ಪಡೆದ ವಿಶ್ವದ ಮೊದಲ ಮುಸ್ಲಿಂ ಮಹಿಳೆ ಸಲ್ಮಾ ಹೇಳುವುದೇನು?
First published:November 22, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading