ಲಾಕ್‌ಡೌನ್ ಎಫೆಕ್ಟ್‌; ಮನೆ ಮನೆಗೆ ಪಡಿತರ ತಲುಪಿಸಲು ಮುಂದಾಗಿರುವ ಮೈಸೂರು ಜಿಲ್ಲಾಡಳಿತ

ಮೈಸೂರು ಜಿಲ್ಲಾಡಳಿತ ಇಂದಿನಿಂದ ಸಾರ್ವಜನಿಕ ವಿತರಣಾ ಪದ್ದತಿ ಅಡಿಯಲ್ಲಿ ಪಡಿತರ ವಿತರಣೆಗೆ ಚಾಲನೆ ನೀಡಿದೆ. ಹೀಗಾಗಿ ಜನ ಪಡಿತರ ಪಡೆಯಲು ನ್ಯಾಯಬೆಲೆ ಅಂಗಡಿಗೆ ಹೋಗುವ ಅವಶ್ಯಕತೆ ಇಲ್ಲ. ಬದಲಾಗಿ ಬಿಪಿಎಲ್ ಕಾರ್ಡ್‌ ದಾರರ ಪಡಿತರವನ್ನು ಜಿಲ್ಲಾಡಳಿತ ನಿಮ್ಮ ಮನೆ ಬಾಗಿಲಿಗೇ ತಲುಪಿಸಲಿದೆ.

news18-kannada
Updated:April 3, 2020, 11:35 AM IST
ಲಾಕ್‌ಡೌನ್ ಎಫೆಕ್ಟ್‌; ಮನೆ ಮನೆಗೆ ಪಡಿತರ ತಲುಪಿಸಲು ಮುಂದಾಗಿರುವ ಮೈಸೂರು ಜಿಲ್ಲಾಡಳಿತ
ಸಾಂದರ್ಭಿಕ ಚಿತ್ರ.
  • Share this:
ಮೈಸೂರು (ಏಪ್ರಿಲ್ 03); ಕರೋನಾ ಲಾಕ್ ಡೌನ್ ಹಿನ್ನಲೆಯಲ್ಲಿ ಜನ ಮನೆಯಿಂದ ಹೊರ ಬರುವುದನ್ನು ತಡೆಯುವ ಸಲುವಾಗಿ ಮೈಸೂರು ಜಿಲ್ಲಾಡಳಿತ ನೂತನ ಪಡಿತರ ವ್ಯವಸ್ಥೆಗೆ ಮುಂದಾಗಿದೆ. ಮನೆ ಮನೆಗೆ ದಿನಸಿ ಸಾಮಗ್ರಿಗಳನ್ನು ತಲುಪಿಸಲು ಕಾರ್ಯಕ್ರಮ ರೂಪಿಸಿದೆ.

ಮೈಸೂರು ಜಿಲ್ಲಾಡಳಿತ ಇಂದಿನಿಂದ ಸಾರ್ವಜನಿಕ ವಿತರಣಾ ಪದ್ದತಿ ಅಡಿಯಲ್ಲಿ ಪಡಿತರ ವಿತರಣೆಗೆ ಚಾಲನೆ ನೀಡಿದೆ. ಹೀಗಾಗಿ ಜನ ಪಡಿತರ ಪಡೆಯಲು ನ್ಯಾಯಬೆಲೆ ಅಂಗಡಿಗೆ ಹೋಗುವ ಅವಶ್ಯಕತೆ ಇಲ್ಲ. ಬದಲಾಗಿ ಬಿಪಿಎಲ್ ಕಾರ್ಡ್‌ ದಾರರ ಪಡಿತರವನ್ನು ಜಿಲ್ಲಾಡಳಿತ ನಿಮ್ಮ ಮನೆ ಬಾಗಿಲಿಗೇ ತಲುಪಿಸಲಿದೆ. ರಾಜ್ಯ ಸರ್ಕಾರದ ಅಡಿಯಲ್ಲಿ ಜಿಲ್ಲಾಢಳಿತದ ನೇತೃತ್ವದಲ್ಲಿ ಕಾರ್ಯಕ್ರಮ ನಡೆಯಲಿದೆ.

ಪಡಿತರ ವ್ಯವಸ್ಥೆಯ ಅಡಿಯಲ್ಲಿ 5ಕೆಜಿ ಅಕ್ಕಿ, 2 ಕೆ.ಜಿ ಗೋಧಿ ವಿತರಣೆ ಮಾಡಲು ನಿರ್ಧರಿಸಲಾಗಿದ್ದು, ಈ ಎಲ್ಲಾ ಪದಾರ್ಥಗಳನ್ನೂ ಏಪ್ರಿಲ್ ಮತ್ತು ಮೇ ಈ ಎರಡು ತಿಂಗಳ ಪಡಿತರವನ್ನು ಒಂದೇ ಬಾರಿಗೆ ನೀಡಲು ಜಿಲ್ಲಾಡಳಿತ ಕ್ರಮ ತೆಗೆದುಕೊಂಡಿದೆ. ಮೈಸೂರಿನಲ್ಲಿ 7ಲಕ್ಷಕ್ಕೂ ಹೆಚ್ಚು ಬಿಪಿಎಲ್‌ ಕಾರ್ಡುದಾರರು ಇದ್ದು, ರಾಜ್ಯದಲ್ಲೇ ಮೊದಲ ಬಾರಿಗೆ ಈ ವಿನೂತನ ಕಾರ್ಯಕ್ರಮವನ್ನು ಪ್ರಾಯೋಗಿಕವಾಗಿ ಮೈಸೂರು ಜಿಲ್ಲಾಡಳಿತ ರೂಪಿಸಿದೆ.

ಇದನ್ನೂ ಓದಿ : ಏಪ್ರಿಲ್​ 5ರ ರಾತ್ರಿ 9 ಗಂಟೆಗೆ ಇಡೀ ವಿಶ್ವಕ್ಕೆ ಬೆಳಕಿನ ಶಕ್ತಿ ತೋರಿಸಬೇಕು; ಪ್ರಧಾನಿ ಮೋದಿ
First published: April 3, 2020, 11:33 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading