Mysore Gang Rape: ತನಿಖೆಗೆ ಸಹಕರಿಸುತ್ತಿಲ್ಲ ಅಂತಲ್ಲ, ಯುವತಿಯ ಹೆತ್ತವರಿಗೆ ಮಾತನಾಡಲು ಸಮಯಬೇಕು: ಡಿಜಿಪಿ

victim parents need time: ಸಂತ್ರಸ್ತೆಯ ಪೋಷಕರು ಸಹಕರಿಸುತ್ತಿಲ್ಲ ಎಂಬ ವಾದವನ್ನು ತಳ್ಳಿ ಹಾಕಿದ ಅವರು, ಯಾವ ತಂದೆ-ತಾಯಿ ಇಂತಹ ಸಂದರ್ಭದಲ್ಲಿ ಉತ್ತರಿಸ್ತಾರೆ. ಅವರು ಸ್ವಲ್ಪ ದಿನದ ಬಳಿಕ ಮಾತನಾಡೋದಾಗಿ ತಿಳಿಸಿದ್ದಾರೆ ಎಂದರು.

ಡಿಜಿಪಿ ಪ್ರವೀಣ್ ಸೂದ್

ಡಿಜಿಪಿ ಪ್ರವೀಣ್ ಸೂದ್

  • Share this:
ಮೈಸೂರು: ನಗರದಲ್ಲಿ ಕಾಲೇಜು ವಿದ್ಯಾರ್ಥಿನಿ ಮೇಲೆ ನಡೆದಿರುವ ಸಾಮೂಹಿಕ ಅತ್ಯಾಚಾರ ಪ್ರಕರಣ ಸಂಬಂಧ ಗೃಹ ಸಚಿವ ಅರಗ ಜ್ಞಾನೇಂದ್ರ(araga jnanendra) ಹಾಗೂ ಡಿಜಿಪಿ ಪ್ರವೀಣ್ ಸೂದ್(DGP Praveen Sood) ಜಿಲ್ಲೆಯಲ್ಲೇ ಬೀಡು ಬಿಟ್ಟಿದ್ದಾರೆ. ಗೃಹ ಸಚಿವರು ಇಂದು ಸ್ಥಳ ಪರಿಶೀಲನೆಯನ್ನು ನಡೆಸಿದರು. ಇನ್ನು ಜಿಲ್ಲೆಯಲ್ಲಿ ಕಳೆದ ಕೆಲ ದಿನಗಳಿಂದ ನಡೆದಿರುವ ಅಪರಾಧ ಕೃತ್ಯಗಳ ಬಗ್ಗೆ ಡಿಜಿ ಪ್ರವೀಣ್ ಸೂದ್ ಸುದ್ದಿಗೋಷ್ಠಿ ನಡೆಸಿ ಮಾತನಾಡಿದರು. ಅತ್ಯಾಚಾರ ಪ್ರಕರಣದ ಸಂತ್ರಸ್ತ ಯುವತಿ ಹೇಳಲಿ ಬಿಡಲಿ‌, ಪ್ರಕರಣದ ತನಿಖೆ ನಡೀತಿದೆ. ಆರೋಪಿಗಳು ಪತ್ತೆಯಾದ ತಕ್ಷಣ ಹೇಳ್ತೀವಿ‌. ಮುಖ್ಯಮಂತ್ರಿಗಳು ದೆಹಲಿಯಿಂದ ಕರೆ ಮಾಡಿ ತನಿಖೆ ಮಾಡಲು ಸೂಚಿಸಿದ್ದಾರೆ‌. ಸುಳಿವು ಸಿಕ್ಕಿದ್ರೂ ಅದನ್ನ ಹೇಳಲು ಇದು ಸಮಯವಲ್ಲ, ತನಿಖೆಗೆ ಸಮಯ ಬೇಕಿದೆ. ಕ್ರೈಂ ಸೀನ್ ನಲ್ಲಿ ಏನೇನು ಸಿಕ್ಕಬೇಕಿತ್ತೋ ಅದು ಸಿಕ್ಕಿದೆ‌ ಎಂದರು.

ಇಂತಹ ಸಂದರ್ಭದಲ್ಲಿ ಹೇಗೆ ಉತ್ತರಿಸ್ತಾರೆ?

ಇನ್ನು ಪ್ರಕರಣದ ತನಿಖೆ ಸಂಬಂಧ ಸಂತ್ರಸ್ತೆಯ ಪೋಷಕರು ಸಹಕರಿಸುತ್ತಿಲ್ಲ ಎಂಬ ವಾದವನ್ನು ತಳ್ಳಿ ಹಾಕಿದ ಅವರು, ಯಾವ ತಂದೆ-ತಾಯಿ ಇಂತಹ ಸಂದರ್ಭದಲ್ಲಿ ಉತ್ತರಿಸ್ತಾರೆ. ಅವರು ಸ್ವಲ್ಪ ದಿನದ ಬಳಿಕ ಮಾತನಾಡೋದಾಗಿ ತಿಳಿಸಿದ್ದಾರೆ ಎಂದರು. ಇನ್ನು ಡಕಾಯಿತಿ ಪ್ರಕರಣದ ಬಗ್ಗೆ ಮಾಹಿತಿ ನೀಡಿದ ಅವರು ಆರೋಪಿಗಳನ್ನ ಪತ್ತೆಗಾಗಿ ದೇಶದ ಬೇರೆ ಬೇರೆ ಭಾಗಕ್ಕೆ 5 ತಂಡಗಳನ್ನು ಕಳುಹಿಸಲಾಗಿತ್ತು. ಈ ಪ್ರಕರಣದಲ್ಲಿ 6 ಮಂದಿಯನ್ನ ಅರೆಸ್ಟ್ ಮಾಡಲಾಗಿದೆ. ಪ್ಲಾನ್ ಮಾಡಿದ ಇಬ್ಬರಲ್ಲಿ ಒಬ್ಬ ಮೈಸೂರು ಇನ್ನೊಬ್ಬ ಬೆಂಗಳೂರಿನವರನ್ನ ಅರೆಸ್ಟ್ ಮಾಡಲಾಗಿದೆ. ಜಮ್ಮು ಕಾಶ್ಮೀರದಲ್ಲಿ 6ನೇ ಆರೋಪಿಯನ್ನು ಅರೆಸ್ಟ್ ಮಾಡಲಾಗಿದೆ.

6 ಮಂದಿ ಬಂಧನ

ದೇಶದ ನಾನಾ ಕಡೆ ನಮ್ಮ ಪೊಲೀಸರು ಆರೋಪಿಗಳನ್ನು ಯಶಸ್ವಿಯಾಗಿ ಅರೆಸ್ಟ್ ಮಾಡಿದ್ದಾರೆ. ಡಕಾಯಿತಿಗೆ ಬಳಸಿದ್ದ ಕೆಲವು ವಸ್ತುಗಳನ್ನ ವಶಕ್ಕೆ ಪಡೆಯಲಾಗಿದೆ. 8 ಮಂದಿಯ ಪೈಕಿ ಇದೀಗ 6 ಮಂದಿ ಬಂಧನ ಮಾಡಲಾಗಿದೆ. ಪ್ಲಾನ್ ಮಾಡಿದ್ದವರು ಸಹ ಜುವೆಲ್ಲರಿ ಶಾಪ್ ಇಟ್ಟುಕೊಂಡಿದ್ದವರು. ಪ್ಲಾನ್ ಮಾಡಿ ಹೊರಗಡೆಯಿಂದ ಕರೆಸಿದ್ದಾರೆ. ದೇಶದ ನಾನಾ ಭಾಗದ ವ್ಯಕ್ತಿಗಳನ್ನ ಬಳಸಿ ಡಕಾಯತಿ ನಡೆಸಲಾಗಿದೆ ಎಂದು ಪ್ರವೀಣ್ ಸೂದ್ ತಿಳಿಸಿದರು.

ಎರಡೂ ಘಟನೆ ದುರದೃಷ್ಟಕರ

ಇನ್ನು ಗೃಹ ಸಚಿವ ಅರಗ ಜ್ಞಾನೇಂದ್ರ ಮಾತನಾಡಿ, ಮೈಸೂರಿನಲ್ಲಿ ನಡೆದ ಎರಡು ಘಟನೆ ದುರದೃಷ್ಟಕರ ಎಂದರು. ಪ್ರಕರಣ ಬೇಗ ಬಗೆಹರಿಸಿ ಎಂದು ಒತ್ತಡ ಹಾಕಿದ್ದೆವು, ಅವರೂ ಸಹಾ ಒಂದು ಪ್ರಕರಣ ಪತ್ತೆ ಹಚ್ಚಿದ್ದಾರೆ. ಇದು ಸಂತಸದ ವಿಚಾರ, ಗ್ಯಾಂಗ್ ರೇಪ್ ವಿಚಾರ ಸಹಾ ಶೀಘ್ರದಲ್ಲೇ ಬಗೆಹರಿಯುತ್ತೆ. ರೇಪ್ ಕೇಸ್ ಬಗ್ಗೆ ಸದ್ಯ ಮಾತಾಡಲ್ಲ, ಪೊಲೀಸರ ಮೇಲೆ ಭರವಸೆ ಇದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಗೃಹ ಸಚಿವರ ನಾಮಕವಾಸ್ತೆ ಭೇಟಿ

ಗೃಹ ಸಚಿವರು ಇಂದು ಮೈಸೂರಿಗೆ ಭೇಟಿ ನೀಡಿದ್ದರು. ಆದರೆ, ಅವರ ಭೇಟಿ ಕೇವಲ ನಾಮಕವಾಸ್ತೆ ಭೇಟಿಯಾಗಿದೆ. ಬೆಳಗ್ಗೆಯಿಂದ ನಿರಂತರ ಕಾರ್ಯಕ್ರಮದ ಬಳಿಕ ಮಧ್ಯಾಹ್ನ ಘಟನಾ ಸ್ಥಳಕ್ಕೆ ಭೇಟಿ ನೀಡಿದ ಅವರು ಕಾಟಚಾರಕ್ಕೆ ಸ್ಥಳ ಪರಿಶೀಲನೆ ನಡೆಸಿ ಹೋದರು. ಮಧ್ಯಾಹ್ನ ಚಾಮುಂಡಿ ಬೆಟ್ಟದ ತಪ್ಪಲಿನ ಲಲಿತಾದ್ರಿ ಬಡಾವಣೆಗೆ ಭೇಟಿ ನೀಡಿದ ಗೃಹ ಸಚಿವ ಅರಗ ಜ್ಞಾನೇಂದ್ರ ಪೊಲೀಸ್​ ಆಯುಕ್ತರ ಬಳಿಕ ಮಾಹಿತಿ ಪಡೆದರು. ಘಟನಾ ಸ್ಥಳಕ್ಕೆ ಹೋಘದ ಅವರು ರಸ್ತೆಯಲ್ಲಿಯೇ ನಿಂತು ಹೀಗೆ ಬಂದದು ಹಾಗೆ ಹೋದರು. ಸ್ಥಳದಲ್ಲಿಯೇ ನಿಂತ ಅವರು ಇದ್ದ ಐದು ನಿಮಿಷ ಕೂಡ ಫೋನ್​ ಸಂಭಾಷಣೆಯಲ್ಲಿ ತೊಡಗಿದ್ದರು. ಬಳಿಕ ಪೊಲೀಸ್​ ಆಯುಕ್ತರ ಬಳಿಕ ಒಂದು ನಿಮಿಷ ಮಾಹಿತಿ ಪಡೆದು ಹೋದರು.
Published by:Kavya V
First published: