ನನ್ನಿಂದ ಯಡಿಯೂರಪ್ಪನವರಿಗೆ ಅವಮಾನವಾಯಿತು; ಪರಾಜಿತ ಮೇಯರ್​ ಅಭ್ಯರ್ಥಿ ಸುನಂದ ಪಾಲನೇತ್ರ​ ಬೇಸರ

ಕಳ್ಳ ಕದ್ದು ಓಡೋದರೆ ಹಿಡಿಯಬಹುದು. ಈ ರೀತಿ ಮೋಸ ಮಾಡಿದ್ರೆ ಹೇಗೆ ನಂಬೋದು. ಈ ಚುನಾವಣೆ ಯಡಿಯೂರಪ್ಪನವರ ಪ್ರತಿಷ್ಠೆಯಾಗಿತ್ತು. ವಾರ್ಡ್ ಅಲ್ಲಿ ಸೋತಿದ್ರೆ ಏನು ಆಗುತ್ತಿರಲಿಲ್ಲ.  ಆದ್ರೆ ಪಾಲಿಕೆ ಒಳಗೆ ಯಡಿಯೂರಪ್ಪನವರಿಗೆ ಸೋಲಾಗಿದೆ. ನನ್ನಿಂದ ತಪ್ಪಾಗಿದ್ದರೆ ಕ್ಷಮಿಸಿ, ಆದ್ರೆ ನಾನು ಎಳ್ಳಷ್ಟು ತಪ್ಪು ಮಾಡಿಲ್ಲ ಎಂದರು.

ಸಿಎಂ ಬಿ.ಎಸ್.ಯಡಿಯೂರಪ್ಪ ಬಿಜೆಪಿ ಸದಸ್ಯೆ ಸುನಂದ ಪಾಲನೇತ್ರ‌ ಮನೆಗೆ ಭೇಟಿ ನೀಡಿದ್ದ ದೃಶ್ಯ

ಸಿಎಂ ಬಿ.ಎಸ್.ಯಡಿಯೂರಪ್ಪ ಬಿಜೆಪಿ ಸದಸ್ಯೆ ಸುನಂದ ಪಾಲನೇತ್ರ‌ ಮನೆಗೆ ಭೇಟಿ ನೀಡಿದ್ದ ದೃಶ್ಯ

 • Share this:
  ಮೈಸೂರು(ಫೆ.25): ನನ್ನಿಂದ ಯಡಿಯೂರಪ್ಪನವರಿಗೆ ಅವಮಾನ, ನೋವು ಆಯಿತು.  ನಾನಲ್ಲದೆ ಬೇರೆ ಯಾರಾದರೂ ಅಭ್ಯರ್ಥಿ ಆಗಿದ್ರೆ ಬಿಜೆಪಿ ಮೇಯರ್ ಆಗುತ್ತಿದ್ದರೇನೋ. ಸೋಲಿನ ಮುಖ ಇಟ್ಟುಕೊಂಡು ಮದುವೆಗೆ ಹೋಗಲಿಲ್ಲ. ಮದುವೆ ಮನೆಯಲ್ಲಿ ಯಡಿಯೂರಪ್ಪನವರ ಮುಂದೆ ಕಣ್ಣೀರು ಹಾಕಲು ಇಷ್ಟ ಇರಲಿಲ್ಲ. ಅದಕ್ಕಾಗಿ ಇಂದಿನ ಮದುವೆ ಸಮಾರಂಭಕ್ಕೆ ನಾನು ಹೋಗಲಿಲ್ಲ ಎಂದು ಪರಾಜಿತ ಅಭ್ಯರ್ಥಿ ಸುನಂದ ಪಾಲನೇತ್ರ ದುಃಖ ವ್ಯಕ್ತಪಡಿಸಿದ್ದಾರೆ.

  ಮೇಯರ್ ಚುನಾವಣೆಯಲ್ಲಿ ಬಿಜೆಪಿ ಸೋಲು ಅನುಭವಿಸಿದ ಹಿನ್ನೆಲೆ, ಪರಾಜಿತ ಬಿಜೆಪಿ ಅಭ್ಯರ್ಥಿ ತೀವ್ರ ಬೇಸರ ವ್ಯಕ್ತಪಡಿಸಿದರು. ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,  ನನಗೆ ಕೆಲಸ ಮಾಡಲು ಆಗ್ತಿಲ್ಲ. ಹಾಗಾಗಿ ರಾಜೀನಾಮೆ ನೀಡಲು ನಿರ್ಧಾರ ಮಾಡಿದ್ದೇನೆ. ನನಗೆ ಟಿಕೆಟ್ ಕೊಟ್ಟಿದ್ದು ಸಿಎಂ ಬಿಎಸ್‌ವೈ. ಅದಕ್ಕಾಗಿ ಅವರಿಗೆ ಹಾಗೂ ಪಕ್ಷದ ಅಧ್ಯಕ್ಷರಿಗೆ ಪತ್ರ ಬರೆದಿದ್ದೇನೆ. ಇಂದು ನಾನೇ ಬಿಜೆಪಿ ಕಚೇರಿಗೆ ಹೋಗಿ ಮಾತನಾಡಿಸುತ್ತೇನೆ ಎಂದು ಹೇಳಿದರು.

  ಇದು ರಾಜಕೀಯ ದೊಂಬರಾಟ ಅಂತ ಗೊತ್ತಿತ್ತು. ಕಣ್ಣೀರು ತುಂಬಿಕೊಂಡೆ ಪಾಲಿಕೆ ಪ್ರವೇಶಿಸಿದ್ದೆ‌. ನನಗಾಗಿ ಬಿಜೆಪಿ ನಾಯಕರು ಸಚಿವರು ಸಂಸದರು ಪ್ರಾಮಾಣಿಕ ಪ್ರಯತ್ನ ಮಾಡಿದರು. ನನ್ನ ಪರವಾಗಿ ಎಲ್ಲರ ಬಳಿ ಕೈ ಮುಗಿದರು. ಸಿಎಂ ನನ್ನ ಮನೆಗೆ ಬಂದಾಗಲೂ ನಾನು ಅವರಿಗೆ ಗೆಲ್ಲುವ ಭರವಸೆ ಕೊಟ್ಟಿದ್ದೆ ಎಂದು ದುಃಖಿತರಾದರು.

  ಡಿಸಿಎಂ ಗೋವಿಂದ ಕಾರಜೋಳ ಕ್ಷೇತ್ರದಲ್ಲಿ ಗೋಮಾಳ ಜಮೀನು ಒತ್ತುವರಿ ತೆರವಿಗಾಗಿ ಹೈಕೋರ್ಟ್ ಮೊರೆ ಹೋದ ಯುವಕ

  ಎಷ್ಟೋ ಸಲ ಸೋತಿದ್ದೀನಿ, ಆದ್ರೆ ಈ ಸೋಲು ನನ್ನ ಸೋಲಲ್ಲ.ಇದೊಂದು ರಾಜಕೀಯ ಪಿತೂರಿ ದೊಂಬರಾಟ. ಇದು ನನಗೆ ತುಂಬಾ ನೋವು ಕೊಟ್ಟಿದೆ. ಎಲ್ಲಾ ಪಕ್ಷದವರು ಭಾಗಿಯಾಗಿದ್ದರು. ನಾನು ಯಡಿಯೂರಪ್ಪನವರ ಸಂಬಂಧಿ ಅನ್ನೋದೆ ಈ ಸ್ಥಾನ ತಪ್ಪಲು ಕಾರಣವಾಗಿರಬಹುದು. ಆದ್ರೆ ನಾನು 25 ವರ್ಷ ಸೇವೆ ಮಾಡಿದ್ದೇನೆ. ಅದನ್ನಾದರೂ ಪರಿಗಣಿಸಬಹುದಿತ್ತು ಎಂದು ಅಸಮಾಧಾನ ವ್ಯಕ್ತಪಡಿಸಿದರು.

  ಯಡಿಯೂರಪ್ಪ, ಹೈಕಮಾಂಡ್ ಎಲ್ಲರು ಭಾಗಿಯಾಗಿ ಚುನಾವಣೆಯಲ್ಲಿ ಸೋಲು ಅನುಭವಿಸಿದ್ದೇ ನನಗೆ ನೋವಾಗಿದೆ. ರಾಜಕೀಯ ಕೆಟ್ಟದಲ್ಲ, ಆದ್ರೆ ನನ್ನಿಂದ ಕೆಟ್ಟದಾಗೋಯ್ತು. ಸಮಾಜಸೇವೆ ಅನ್ಕೊಂಡು ಕೆಲಸ ಮಾಡ್ತಿದ್ದೆ. ನನ್ನ ಸೇವೆಗೆ ಬೆಲೆಯೇ ಇರಲಿಲ್ಲ. ನನ್ನ ಜೊತೆ ಇದ್ದವರು ಎಂಎಲ್‌ಎ ಮಿನಿಸ್ಟರ್ ಆಗಿದ್ದಾರೆ. ರಾಜಕೀಯದಲ್ಲಿ ಹಿರಿಯರಾಗಬಾರದು. ನನಗೆ ರಾಜಕಾರಣವೇ ಸಾಕಾಗಿದೆ. ನಿನ್ನೆಯ ಫಲಿತಾಂಶ ಸ್ವೀಕರಿಸಲು ಆಗುತ್ತಿಲ್ಲ. ನನ್ನ ವಿರುದ್ದ ಕುತಂತ್ರ ನಡೆಯುತ್ತಿತ್ತು ಅಂತ ಕೆ.ಆರ್.ನಗರದಿಂದ ಮಾಹಿತಿ ಬರುತ್ತಿತ್ತು. ಆದರೆ ಯಾರಿಗೂ ಹೇಳೋಕೆ ಆಗಲಿಲ್ಲ. ನಿನಗೆ ಕಷ್ಟ ಆಗುತ್ತೆ, ಎಚ್ಚರಿಕೆಯಿಂದ ಇರು, ಅಂತ ಸಂಬಂಧಿಕರೇ ಕೆ.ಆರ್.ನಗರದಿಂದ ಕಾಲ್ ಮಾಡಿದ್ದರು ಎಂದು ದುಃಖತಪ್ತರಾದರು.

  ಕಳ್ಳ ಕದ್ದು ಓಡೋದರೆ ಹಿಡಿಯಬಹುದು. ಈ ರೀತಿ ಮೋಸ ಮಾಡಿದ್ರೆ ಹೇಗೆ ನಂಬೋದು. ಈ ಚುನಾವಣೆ ಯಡಿಯೂರಪ್ಪನವರ ಪ್ರತಿಷ್ಠೆಯಾಗಿತ್ತು. ವಾರ್ಡ್ ಅಲ್ಲಿ ಸೋತಿದ್ರೆ ಏನು ಆಗುತ್ತಿರಲಿಲ್ಲ.  ಆದ್ರೆ ಪಾಲಿಕೆ ಒಳಗೆ ಯಡಿಯೂರಪ್ಪನವರಿಗೆ ಸೋಲಾಗಿದೆ. ನನ್ನಿಂದ ತಪ್ಪಾಗಿದ್ದರೆ ಕ್ಷಮಿಸಿ, ಆದ್ರೆ ನಾನು ಎಳ್ಳಷ್ಟು ತಪ್ಪು ಮಾಡಿಲ್ಲ ಎಂದರು.
  Published by:Latha CG
  First published: