HOME » NEWS » State » MYSORE DASARA 2020 MYSURU DASARA JAMBOO SAVARI ELEPHANT LIST FINALISED SCT

Mysuru Dasara 2020: ಮೈಸೂರು ದಸರಾ ಆನೆಗಳ ಪಟ್ಟಿ ಅಂತಿಮ; ಗಜಪಡೆಗೆ ಕೋವಿಡ್ ಟೆಸ್ಟ್​ ಕಡ್ಡಾಯ

Mysuru Dasara 2020: ಈ ಬಾರಿಯ ದಸರಾಗೆ 5 ಆನೆಗಳ ಆಯ್ಕೆ ಅಂತಿಮವಾಗಿದ್ದು, ಮೈಸೂರು ಅರಣ್ಯ ಇಲಾಖೆ ವನ್ಯಜೀವಿ ವಿಭಾಗದಿಂದ ಆನೆಗಳ ಅಂತಿಮ ಪಟ್ಟಿ ರವಾನೆಯಾಗಿದೆ. ದಸರಾದಲ್ಲಿ ಪಾಲ್ಗೊಳ್ಳುವ ಎಲ್ಲ 5 ಆನೆಗಳಿಗೂ ಕೋವಿಡ್ ಟೆಸ್ಟ್​ ಮಾಡಲಾಗುವುದು.

news18-kannada
Updated:September 11, 2020, 1:08 PM IST
Mysuru Dasara 2020: ಮೈಸೂರು ದಸರಾ ಆನೆಗಳ ಪಟ್ಟಿ ಅಂತಿಮ; ಗಜಪಡೆಗೆ ಕೋವಿಡ್ ಟೆಸ್ಟ್​ ಕಡ್ಡಾಯ
ಮೈಸೂರು ದಸರಾದ ಜಂಬೂ ಸವಾರಿಯ ದೃಶ್ಯ
  • Share this:
ಮೈಸೂರು (ಸೆ. 11): ಕೊರೋನಾದಿಂದಾಗಿ ಈ ವರ್ಷ ವಿಶ್ವವಿಖ್ಯಾತ ಮೈಸೂರು ದಸರಾ ಕೂಡ ಕಳೆಗುಂದಲಿದೆ. ಈ ಬಾರಿ ಸರಳವಾಗಿ ಮೈಸೂರು ದಸರಾ ಆಚರಿಸಲು ನಿರ್ಧರಿಸಲಾಗಿದ್ದು, ಹೆಚ್ಚು ಜನರು ಸೇರದಂತೆ ಮುನ್ನೆಚ್ಚರಿಕೆ ವಹಿಸಲಾಗಿದೆ. ಮೈಸೂರು ದಸರಾದಲ್ಲಿ ಆನೆಗಳ ಮೆರವಣಿಗೆಯೇ ದೊಡ್ಡ ಆಕರ್ಷಣೆ. ಈ ಹಿನ್ನೆಲೆಯಲ್ಲಿ ಈ ಬಾರಿಯ ಸರಳ ದಸರಾಗೆ 5 ಆನೆಗಳ ಆಯ್ಕೆ ಅಂತಿಮವಾಗಿದ್ದು, ಮೈಸೂರು ಅರಣ್ಯ ಇಲಾಖೆ ವನ್ಯಜೀವಿ ವಿಭಾಗದಿಂದ ಆನೆಗಳ ಅಂತಿಮ ಪಟ್ಟಿ ರವಾನೆಯಾಗಿದೆ. ಕೇಂದ್ರ ಅರಣ್ಯಾಧಿಕಾರಿಗೆ ಆನೆಗಳ ಅಂತಿಮ ಪಟ್ಟಿ ಹಾಗೂ ಆನೆಗಳ ಆರೋಗ್ಯ ಸ್ಥಿತಿಯ ವರದಿ ರವಾನೆ ಮಾಡಲಾಗಿದೆ. ಹಾಗೇ, ಮುಂದಿನ ತಿಂಗಳು ನಡೆಯುವ ಮೈಸೂರು ದಸರಾದಲ್ಲಿ ಪಾಲ್ಗೊಳ್ಳುವ ಎಲ್ಲ ಆನೆಗಳಿಗೂ ಕೊರೋನಾ ಟೆಸ್ಟ್​ ಮಾಡಲಾಗುವುದು.

ಅಂತಿಮಗೊಂಡಿರುವ ಪಟ್ಟಿಗೆ ಇನ್ನೆರಡು ದಿನದಲ್ಲಿ ಕೇಂದ್ರ ಅರಣ್ಯಾಧಿಕಾರಿಯಿಂದ ಅನುಮತಿ ಸಿಗುವ ಸಾಧ್ಯತೆಯಿದೆ. ಈ ಬಾರಿ ಅಭಿಮನ್ಯು ಆನೆಯೇ ಅಂಬಾರಿಯನ್ನು ಹೊರಲಿದೆ. ಈ ಬಾರಿಯ ದಸರಾದಲ್ಲಿ ಅರ್ಜುನ ಆನೆ ಭಾಗಿಯಾಗುವುದಿಲ್ಲ. 60 ವರ್ಷ ದಾಟಿರುವ ಹಿನ್ನೆಲೆಯಲ್ಲಿ ಅರ್ಜುನ ಆನೆಗೆ ಈ ಬಾರಿ ದಸರಾದ ಯಾವುದೇ ಜವಾಬ್ದಾರಿಯನ್ನೂ ನೀಡದಿರಲು ನಿರ್ಧರಿಸಲಾಗಿದೆ. ಈ ಬಾರಿಯ ಜಂಬೂಸವಾರಿಯಲ್ಲಿ 5 ಆನೆಗಳು ಮಾತ್ರ ಭಾಗಿಯಾಗಲಿವೆ. ಹೀಗಾಗಿ, ಈ ಬಾರಿ ಹೆಚ್ಚುವರಿ ಆನೆಗಳನ್ನು ಕಾಡಿನಿಂದ ಕರೆತರುವುದಿಲ್ಲ.

ಇದನ್ನೂ ಓದಿ: Karnataka Weather: ಕರ್ನಾಟಕದಲ್ಲಿ ಇನ್ನೆರಡು ದಿನ ಮಳೆ ಹೆಚ್ಚಳ; ಕರಾವಳಿಯಲ್ಲಿಂದು ರೆಡ್ ಅಲರ್ಟ್​

ಮೊದಲ ದಿನದಿಂದ ಕೊನೆಯ ದಿನದವರೆಗೂ ಆನೆಗಳು ಅರಮನೆ ಆವರಣದಲ್ಲೇ ವಾಸ್ತವ್ಯ ಹೂಡಲಿವೆ ಎಂದು ಮೈಸೂರು ವನ್ಯಜೀವಿ ವಿಭಾಗದ ಅರಣ್ಯಾಧಿಕಾರಿ ಅಲೆಕ್ಸಾಂಡರ್‌ ಹೇಳಿಕೆ ನೀಡಿದ್ದಾರೆ. ಪ್ರತಿವರ್ಷ ಜಂಬೂ ಸವಾರಿಗೆ ಆನೆಗಳನ್ನು ಸಿದ್ಧಪಡಿಸುವುದೇ ದೊಡ್ಡ ಸಂಭ್ರಮವಾಗಿತ್ತು. ಈ ಬಾರಿ ದಸರಾವನ್ನು ಸರಳವಾಗಿ ಆಚರಿಸಲು ನಿರ್ಧರಿಸಿರುವುದರಿಂದ ಅದ್ದೂರಿಯಾಗಿ ತಯಾರಿ ಮಾಡಿಕೊಳ್ಳುತ್ತಿಲ್ಲ.

ದಸರಾ ಆನೆಗಳಿಗೆ ಕೊರೋನಾ ಟೆಸ್ಟ್​:

ಮೈಸೂರು ದಸರಾದಲ್ಲಿ ಪಾಲ್ಗೊಳ್ಳುವ ಎಲ್ಲ 5 ಆನೆಗಳಿಗೂ ಕೋವಿಡ್ ಟೆಸ್ಟ್​ ಮಾಡಲಾಗುವುದು. ಮಾನವರಿಂದ ಪ್ರಾಣಿಗಳಿಗೆ ಕೊರೋನಾ ಸೋಂಕು ಹರಡುವ ಸಾಧ್ಯತೆ ಇರುವುದರಿಂದ ಮುನ್ನೆಚ್ಚರಿಕಾ ಕ್ರಮವಾಗಿ ಆನೆಗಳಿಗೆ ಕೊರೋನಾ ಟೆಸ್ಟ್​ ಮಾಡಿಸಲಾಗುವುದು. ಆನೆಗಳ ಜೊತೆಗೆ ಆನೆಗಳ ಮಾವುತರಿಗೂ ಕೋವಿಡ್ ತಪಾಸಣೆ ಮಾಡಿಸಲಾಗುವುದು. ದಸರಾ ಮುಗಿದ ನಂತರವೂ ಆನೆಗಳ ಆರೋಗ್ಯ ತಪಾಸಣೆ ಮಾಡಿಸಿ, ವಾಪಾಸ್ ಕಳುಹಿಸಲಾಗುವುದು. ದಸರಾ ಆನೆಗಳಿಂದ ಆನೆ ಶಿಬಿರಗಳಲ್ಲಿರುವ ಆನೆಗಳಿಗೆ ಕೊರೋನಾ ಸೋಂಕು ಹರಡಬಾರದು ಎಂಬ ಕಾರಣಕ್ಕೆ ಈ ನಿರ್ಧಾರ ಮಾಡಲಾಗಿದೆ.
Published by: Sushma Chakre
First published: September 11, 2020, 1:08 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories