Jamboo Savari 2019 LIVE: ಸಂಜೆ 4:31ರಿಂದ ದಸರಾ ಜಂಬೂ ಸವಾರಿ: ವಿಶೇಷ ಕ್ಷಣ ಕಣ್ತುಂಬಿಕೊಳ್ಳಲು ಕಾತರರಾಗಿರುವ ಲಕ್ಷಾಂತರ ಜನರು

Jambu Savari 2019 LIVE | Vijayadashami 2019: ಕ್ಪಾಪ್ಟನ್ ಅರ್ಜುನ ಈಗಾಗಲೇ 7 ಬಾರಿ ಅಂಬಾರಿ ಹೊತ್ತು ಜಂಬೂ ಸವಾರಿ ಯಶಸ್ವಿಗೊಳಿಸಿದ್ದಾನೆ. ಇಂದು 8 ನೇ ಬಾರಿಗೆ ಅಂಬಾರಿ ಹೊರಲು ಅರ್ಜುನ ಸಜ್ಜಾಗಿದ್ದು, ಕೊನೆಯ ಅಂಬಾರಿ ಹೊತ್ತು ಸಾಗಲಿರುವ ಅರ್ಜುನನ್ನು ಕಣ್ತುಂಬಿಕೊಳ್ಳಲಿರುವ ಲಕ್ಷಾಂತರ ಜನ ಕಾತುರದಿಂದ ಕಾಯುತ್ತಿದ್ದಾರೆ.

G Hareeshkumar | news18-kannada
Updated:October 8, 2019, 1:04 PM IST
Jamboo Savari 2019 LIVE: ಸಂಜೆ 4:31ರಿಂದ ದಸರಾ ಜಂಬೂ ಸವಾರಿ: ವಿಶೇಷ ಕ್ಷಣ ಕಣ್ತುಂಬಿಕೊಳ್ಳಲು ಕಾತರರಾಗಿರುವ ಲಕ್ಷಾಂತರ ಜನರು
ಜಂಬೂ ಸವಾರಿ
G Hareeshkumar | news18-kannada
Updated: October 8, 2019, 1:04 PM IST
ಮೈಸೂರು (ಅ.08) : ದಸರಾ ಮಹೋತ್ಸವದ ಜಂಬೂ ಸವಾರಿ ಮೆರವಣಿಗೆಗೆ ಕ್ಷಣಗಣನೆ ಆರಂಭವಾಗಿದ್ದು, ಚಿನ್ನದ ಅಂಬಾರಿ ಹೊತ್ತು  ಹೆಜ್ಜೆ ಹಾಕಲು ಕ್ಯಾಪ್ಟನ್ ಅರ್ಜುನ ಸಜ್ಜಾಗಿದ್ದಾನೆ. ಇಂದು ಸಂಜೆ 4.31ರಿಂದ 4.57ರ ಒಳಗೆ ಸಲ್ಲುವ ಶುಭ ಕುಂಭ ಲಗ್ನದಲ್ಲಿ ಸಿಎಂ ಯಡಿಯೂರಪ್ಪ ಅವರು ಚಾಲನೆ ನೀಡಲಿದ್ದಾರೆ.

ಮಧ್ಯಾಹ್ನ 2.15ಕ್ಕೆಲ ಅರಮನೆಯ ಉತ್ತರ ದ್ವಾರದಲ್ಲಿ ನಂದಿ ದ್ವಜದ ಪೂಜೆ ನಡೆಯಲಿದೆ. ಬನ್ನಿಮಂಟಪ ಅರಮನೆಯಿಂದ 5 ಕಿ.ಮೀ.ದೂರದಲ್ಲಿದೆ. ಈ ಬಾರಿ 42 ಸ್ತಬ್ಧ ಚಿತ್ರಗಳು ಮೆರವಣಿಗೆಯಲ್ಲಿ ಸಾಗಲಿವೆ. 30 ಜಿಲ್ಲೆಗಳ ವಿವಿಧ ಸ್ತಬ್ಧಚಿತ್ರಗಳು ಹಾಗೂ ಹೊರ ರಾಜ್ಯಗಳ ಸ್ತಬ್ಧ ಚಿತ್ರಗಳು ಕೂಡ ದಸರಾ ಮೆರವಣಿಗೆಯಲ್ಲಿ ಕಂಗೊಳಿಸಲಿವೆ.

chamundeshwari devi
ಚಾಮುಂಡೇಶ್ವರಿ ದೇವಿ


ಕ್ಪಾಪ್ಟನ್ ಅರ್ಜುನ ಈಗಾಗಲೇ 7 ಬಾರಿ ಅಂಬಾರಿ ಹೊತ್ತು ಜಂಬೂ ಸವಾರಿ ಯಶಸ್ವಿಗೊಳಿಸಿದ್ದಾನೆ. ಇಂದು 8 ನೇ ಬಾರಿಗೆ ಅಂಬಾರಿ ಹೊರಲು ಅರ್ಜುನ ಸಜ್ಜಾಗಿದ್ದು, ಕೊನೆಯ ಅಂಬಾರಿ ಹೊತ್ತು ಸಾಗಲಿರುವ ಅರ್ಜುನನ್ನು ಕಣ್ತುಂಬಿಕೊಳ್ಳಲಿರುವ ಲಕ್ಷಾಂತರ ಜನ ಕಾತುರದಿಂದ ಕಾಯುತ್ತಿದ್ದಾರೆ.

ಇದನ್ನೂ ಓದಿ : Mysore Dasara 2019: ದಸರಾ ಹಿನ್ನೆಲೆ ಮೈಸೂರು ನಗರದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್

ಕ್ಯಾಪ್ಟನ್ ಅರ್ಜುನನಿಗೆ 59 ವರ್ಷವಾಗಿದ್ದು ಜಂಬೂ ಸವಾರಿ ಮೆರವಣಿಗೆಯಲ್ಲಿ ಅರ್ಜುನನನ್ನ ಮಾವುತ ವಿನು ,ಕಾವಾಡಿ ಮಧು ಮುನ್ನಡೆಸಲಿದ್ದಾರೆ. ಅರ್ಜುನ ಕಳೆದ 19-20 ವರ್ಷಗಳಿಂದ ದಸರಾ ಮಹೋತ್ಸವದಲ್ಲಿ ಭಾಗಿಯಾಗಿದ್ದು, 2012 ರಿಂದ ಚಿನ್ನದ ಅಂಬಾರಿ ಹೊರುವ ಜವಾಬ್ದಾರಿಯನ್ನ ನಿರ್ವಹಿಸುತ್ತಿದ್ದಾನೆ.

ಅರಮನೆಯಿಂದ  ಬನ್ನಿಮಂಟಪದವರೆಗೆ 750ಕೆಜಿ ತೂಕದ  ಅಂಬಾರಿ ಹೊತ್ತು ಸಾಗಲಿರುವ ಅರ್ಜು‌ನನಿಗೆ ಆಯಾಸವಾಗುತ್ತದೆ. ಈ ಹಿನ್ನಲೆ ಅರ್ಜುನನಿಗೆ ಬೆಲ್ಲ, ಕಾಯಿ, ಗ್ಲೂಕೋಸ್, ಗರಿಕೆಯ ವಿಶೇಷ ಆಹಾರ ನೀಡಿ ಅರ್ಜುನನ್ನ ತಯಾರಿ ಮಾಡಲಾಗಿದೆ.
Loading...

ಚಾಮುಂಡೇಶ್ವರಿ ಉತ್ಸವ ಮೂರ್ತಿಗೆ  ವಿಶೇಷ ಪೂಜೆ ಸಲ್ಲಿಸಿದ ಯದುವೀರ್ ಒಡೆಯರ್


ಅತ್ಯಾಕರ್ಷಕ ಪಂಜಿನ ಕವಾಯತು

ಅತ್ಯಾಕರ್ಷಕ ಪಂಜಿನ ಕವಾಯತು ದಸರಾ ಮಹೋತ್ಸವದ ಪ್ರಮುಖ ಆಕರ್ಷಣೆ ಹಾಗೂ ವರ್ಣರಂಜಿತ ತೆರೆ ಎಳೆಯುವ ಅತ್ಯಾಕರ್ಷಕ ಕಾರ್ಯಕ್ರಮವಾದ ಪಂಜಿನ ಕವಾಯತು ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಬನ್ನಿಮಂಟಪ ಮೈದಾನ ಸಜ್ಜಾಗಿದ್ದು ಅಂತಿಮ ಹಂತದ ಸಿದ್ಧತೆಗಳನ್ನು ಮಾಡಲಾಗುತ್ತಿದೆ.

ಭಾರತೀಯ ಸೇನೆಯ ವಿಶೇಷ ವಿಭಾಗದ ಯೋಧರಿಂದ ಮೈನವಿರೇಳಿಸುವ ಮೋಟಾರ್ ಬೈಕ್ ಸಾಹಸ ಪ್ರದರ್ಶನ ಸೇರಿದಂತೆ ವಿವಿಧ ಕಾರ್ಯಕ್ರಮಗಳು ನಡೆಯಲಿದ್ದು, ಕೊನೆಯಲ್ಲಿ ಚಿತ್ತಾಕರ್ಷಕ ಪಂಜಿನ ಕವಾಯತು ನಡೆಯಲಿದೆ.

First published:October 8, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...