Darshan Indrajit: ಗಂಡಸ್ತನ ಇದ್ದರೆ ಇಂದ್ರಜಿತ್ ಹಲ್ಲೆ ವಿಡಿಯೋ ರಿಲೀಸ್ ಮಾಡಲಿ: ಸವಾಲಾಕಿದ ದರ್ಶನ್

ರಾಜ್​​ಕುಮಾರ್​ ಅವರನ್ನು ನೋಡಿ ಕಲಿ ಅಂತಾರೆ. ಇಂದು ರಾಜ್​ಕುಮಾರ್​ ಅವರ ಮಗನ ಬಳಿ ಇರುವ ಕಾರೇ ನನ್ನ ಬಳಿ ಇದೆ. ಆ ಮಟ್ಟಕ್ಕೆ ಕಷ್ಟಪಡದೆ ಬೆಳೆಯಲು ಆಗುತ್ತಾ ಎಂದು ಚಾಲೆಂಜಿಂಗ್​ ಸ್ಟಾರ್​ ಆಕ್ರೋಶ ವ್ಯಕ್ತಪಡಿಸಿದರು.

ನಟ ದರ್ಶನ್​

ನಟ ದರ್ಶನ್​

  • Share this:
ಮೈಸೂರು: ಸಂದೇಶ್​ ದಿ ಪ್ರಿನ್ಸ್​ ಹೋಟೆಲ್​ನ ವೇಟರ್​ ಮೇಲೆ ಹಲ್ಲೆ ನಡೆಸಿದ್ದಾರೆಂಬ ಪ್ರಕರಣ ಸಂಬಂಧ ನಟ ದರ್ಶನ್​​ ಕ್ಷಮೆಯಾಚಿಸಬೇಕು ಎಂದು ನಿನ್ನೆ ನಿದೇರ್ಶಕ ಇಂದ್ರಜಿತ್​ ಲಂಕೇಶ್​ ಆಗ್ರಹಿಸಿದ್ದರು. ಇದರ ಬೆನ್ನಲ್ಲೇ ಇಂದು ಮಾಧ್ಯಮಗಳೆದು ಮಾತನಾಡಿದ ನಟ ದರ್ಶನ್​​ ಅವರು ನಿರ್ದೇಶಕ ಇಂದ್ರಜಿತ್​ ಅವರಿಗೆ ಸವಾಲಾಕಿದರು. ಭಾವೋಗ್ವೇದದಲ್ಲಿ ಮಾತನಾಡಿದ ದರ್ಶನ್​​​​, ಗಂಡಸ್ತನ ಇದ್ದರೆ ನಾನು ಹಲ್ಲೆ ಮಾಡಿರುವ ವಿಡಿಯೋವನ್ನು ರಿಲೀಸ್​ ಮಾಡಲಿ. ನಾನು ಮಾಡದ ತಪ್ಪಿಗೆ ನಾನೇಕೆ ಕ್ಷಮೆ ಕೇಳಬೇಕು. ಸ್ಟಾರ್​​​ಡಂ ಸುಮ್ಮನೆ ಬಂದಿಲ್ಲ ಎಂದು ಅಬ್ಬರಿಸಿದರು.

ನಾನು ಮನುಷ್ಯನೇ, ಹೋಟೆಲ್​ನಲ್ಲಿ ಸರ್ವೀಸ್​​ ತಡವಾದರೆ ಕೇಳುವುದೇ ತಪ್ಪಾ? ಸ್ಟಾರ್​ಗಿರಿಯಿಂದ ದಬ್ಬಾಳಿಕೆ ಮಾಡೋ ಅಗತ್ಯ ನನಗಿಲ್ಲ. 170 ರೂಪಾಯಿಯಿಂದ ವೃತಿ ಆರಂಭಿಸಿದ ನನಗೆ ಸುಲಭಕ್ಕೆ ಸ್ಟಾರ್​ ಪಟ್ಟ ಬಂದಿಲ್ಲ. ರಾಜ್​​ಕುಮಾರ್​ ಅವರನ್ನು ನೋಡಿ ಕಲಿ ಅಂತಾರೆ. ನಾನು, ನನ್ನ ಕುಟುಂಬ ರಾಜ್​​ಕುಮಾರ್​ ಅವರಿಗೆ ಕೊಡುವ ಗೌರವ ಎಲ್ಲರಿಗೂ ಗೊತ್ತಿದೆ. ಇಂದು ರಾಜ್​ಕುಮಾರ್​ ಅವರ ಮಗನ ಬಳಿ ಇರುವ ಕಾರೇ ನನ್ನ ಬಳಿ ಇದೆ. ಆ ಮಟ್ಟಕ್ಕೆ ಕಷ್ಟಪಡದೆ ಬೆಳೆಯಲು ಆಗುತ್ತಾ ಎಂದು ಚಾಲೆಂಜಿಂಗ್​ ಸ್ಟಾರ್​ ಆಕ್ರೋಶ ವ್ಯಕ್ತಪಡಿಸಿದರು.

ಇದನ್ನೂ ಓದಿ: ಅಪ್ಪು-ರಾಘಣ್ಣರಿಂದ ಖರೀದಿಸಿದ್ದ ಆಸ್ತಿಯನ್ನು ದರ್ಶನ್​ಗೆ ಉಮಾಪತಿ ಕೊಡದಿದ್ದದ್ದೇ ವೈಮನಸ್ಸಿಗೆ ಕಾರಣವಾಯ್ತಾ?

ಇಡೀ ಪ್ರಕರಣವನ್ನು ಡೈವರ್ಟ್​ ಮಾಡುತ್ತಿದ್ದಾರೆ. ದೊಡ್ಮನೆ ಪಾರ್ಪಟಿ ವಿಷಯವನ್ನು ನಿರ್ಮಾಪಕ ಉಮಾಪತಿ ಈಗ ಏಕೆ ಎತ್ತುತ್ತಿದ್ದಾರೆ. ಪುನೀತ್​, ರಾಘವೇಂದ್ರ ರಾಜ್​ಕುಮಾರ್​ ಪಾರ್ಪಟಿ ಕೇಳಿದ್ದೆ. ಕೊಡಲ್ಲ ಎಂದಿದ್ದರು ಅಲ್ಲಿಗೆ ಮುಗಿತು. 3 ವರ್ಷ ಹಿಂದಿನ ವಿಷಯವನ್ನು ಇಂದು ಹೇಳುವ ಮೂಲಕ ವಿಷಯವನ್ನು ಡೈವರ್ಟ್​​ ಮಾಡುತ್ತಿದ್ದಾರೆ. ಅಣ್ಣವ್ರ ಮಕ್ಕಳು ಚಿನ್ನದ ಚಮಚ ಇಟ್ಟುಕೊಂಡು ಹುಟ್ಟಿದ್ದಾರೆ. ಅವರದ್ದು ಸಾವಿರಾರು ಪಾಪರ್ಟಿ ಇದೆ. ದೊಡ್ಮೆನೆ ವಿಷಯಕ್ಕೆ ನಾನು ಬಂದಿಲ್ಲ ಎಂದು ದರ್ಶನ್​​ ಸ್ಪಷ್ಟನೆ ನೀಡಿದರು.

ಇಂದ್ರಜಿತ್​ ವಿಡಿಯೋ ರಿಲೀಸ್​ ಮಾಡಲಿ. ತನಿಖೆ ಮಾಡಲಿ, ಏನಾದರೂ ಮಾಡಲಿ. ನಾನೇನು ಮರ್ಡರ್​ ಮಾಡಿಲ್ಲ. ನಾನು ಅನ್​ ಎಜುಕೇಟಡ್​​ ಅಂತಿದ್ದಾರೆ, ನಾನು 10ನೇ ಕ್ಲಾಸ್​ ಪಾಸ್​. ಯಾರ ಇಮೇಜನ್ನು ಯಾರೂ ಹಾಳು ಮಾಡಲು ಸಾಧ್ಯವಿಲ್ಲ. ನನ್ನ ಕೆಲಸ ಸರಿಯಾಗಿದ್ದರೆ ನಾನೇಕೆ ಹೆದರಬೇಕು. ಇಂದ್ರಜಿತ್​ ದಾಖಲೆ ರಿಲೀಸ್​ ಮಾಡಲಿ. ಯಾವುದಕ್ಕೂ ಹೆದರುವ ಜಾಯಮಾನ ನನ್ನದಲ್ಲ ಎಂದು ಗುಡುಗಿದರು.
Published by:Kavya V
First published: