• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • Operation Kamala: ಹಳೇ ಮೈಸೂರು ಭಾಗದಲ್ಲಿ ಆಪರೇಷನ್ ಕಮಲ; ಕೈ, ತೆನೆ ಪಾಳಯಕ್ಕೆ ಎದುರಾಗಲಿದೆ ಬಿಗ್​ ಶಾಕ್​

Operation Kamala: ಹಳೇ ಮೈಸೂರು ಭಾಗದಲ್ಲಿ ಆಪರೇಷನ್ ಕಮಲ; ಕೈ, ತೆನೆ ಪಾಳಯಕ್ಕೆ ಎದುರಾಗಲಿದೆ ಬಿಗ್​ ಶಾಕ್​

ಎಸ್​.ಟಿ ಸೋಮಶೇಖರ್​

ಎಸ್​.ಟಿ ಸೋಮಶೇಖರ್​

ಜೆಡಿಎಸ್, ಕಾಂಗ್ರೆಸ್ ಪಕ್ಷಗಳಲ್ಲಿ ಅಂತರ ಕಾಯ್ದುಕೊಂಡಿರೋ ನಾಯಕರನ್ನ ಟಾರ್ಗೆಟ್ (Target) ಮಾಡಿರೋ ಬಿಜೆಪಿ , ಕಾಂಗ್ರೆಸ್​ ಹಾಗೂ ಜೆಡಿಎಸ್​ನ ಹಾಲಿ, ಮಾಜಿ ಶಾಸಕರು , ಪ್ರಭಾವಿ ಮುಖಂಡರನ್ನ ತನ್ನತ್ತ ಸೆಳೆಯಲು ಮುಂದಾಗಿದೆ.

  • Share this:

ಮೈಸೂರು (ಮೇ 14) : ಹಳೇ ಮೈಸೂರು ಭಾಗದಲ್ಲಿ ಆಪರೇಷನ್ ಕಮಲ (Operation Kamala) ಮತ್ತೆ ಸದ್ದು ಮಾಡ್ತಿದೆ. ಸಚಿವ ಎಸ್. ಸೋಮಶೇಖರ್ ಹೇಳಿಕೆ  ಆಪರೇಷನ್ ಕಮಲಕ್ಕೆ ಪುಷ್ಪಿ ನೀಡ್ತಿದೆ. ಆ ಮೂಲಕ ಹಳೆ ಮೈಸೂರು ಪ್ರಾಂತ್ಯದಲ್ಲಿ ಬಿಜೆಪಿ ತನ್ನ ಪಾರುಪತ್ಯ ಸಾಧಿಸಲು ಮುಂದಾಗಿದ್ದು,  ಆಪರೇಷನ್ ಸಕ್ಸಸ್ (Success) ಆದ್ರೆ ಕೈ, ತೆನೆ ಪಾಳಯಕ್ಕೆ ಬಿಗ್ ಶಾಕ್ (Big Shock) ಎದುರಾಗಲಿದೆ. ಗೃಹ ಸಚಿವ ಅಮಿತ್ ಶಾ ಬಂದು ಹೋದ್ಮೇಲ್, ಹಳೆ ಮೈಸೂರು ಭಾಗದಲ್ಲಿ ಬಿಜೆಪಿ ಫುಲ್  ಆಕ್ಟಿವ್ (BJP Full Active) ಆಗಿದೆ. ರಾಜ್ಯ, ದೇಶದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿದಿರೋ ಬಿಜೆಪಿ ಹಳೆ ಮೈಸೂರು ಪ್ರಾಂತ್ಯದಲ್ಲಿ ಕೇಸರಿ ಬಲ ಹೆಚ್ಚಿಸಿಕೊಳ್ಳಲು ಮುಂದಾಗಿದೆ. ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ. ಸೋಮಶೇಖರ್ (S.T Somashekar) ಇಂದು ನೀಡಿರೋ ಹೇಳಿಕೆ ಆಪರೇಷನ್ ಕಮಲ್ ಫಿಕ್ಸ್ ಅನ್ನೋದನ್ನ ಸಾರಿ ಹೇಳುತ್ತಿದೆ.


ಘಟಾನುಘಟಿಗಳಿಗೆ ಬಿಜೆಪಿ ಗಾಳ


ಜೆಡಿಎಸ್, ಕಾಂಗ್ರೆಸ್ ಪಕ್ಷಗಳಲ್ಲಿ ಅಂತರ ಕಾಯ್ದುಕೊಂಡಿರೋ ನಾಯಕರನ್ನ ಟಾರ್ಗೆಟ್ (Target) ಮಾಡಿರೋ ಬಿಜೆಪಿ , ಕಾಂಗ್ರೆಸ್​ ಹಾಗೂ ಜೆಡಿಎಸ್​ನ ಹಾಲಿ, ಮಾಜಿ ಶಾಸಕರು , ಪ್ರಭಾವಿ ಮುಖಂಡರನ್ನ ತನ್ನತ್ತ ಸೆಳೆಯಲು ಮುಂದಾಗಿದೆ. ಜೆಡಿಎಸ್ ಚಾಮುಂಡೇಶ್ವರಿ ಕ್ಷೇತ್ರದ ಶಾಸಕ ಜಿ‌.ಟಿ ದೇವೇಗೌಡ , ಜಿಟಿಡಿ ಪುತ್ರ ಜಿ.ಡಿ. ಹರೀಶ್ ಗೌಡ, ಮಂಡ್ಯ ಜಿಲ್ಲೆ ಶಾಸಕರಾದ  ಸಿಎಸ್ ಪುಟ್ಟರಾಜು, ಅಂದಾನಿ, ಹಾಲಿ ಸಂಸದೆ ಸುಮಲತಾ ಅಂಬರೀಶ್  ಸೇರಿದಂತೆ ಹಲವು ಘಟಾನುಘಟಿ ನಾಯಕರುಗಳಿಗೆ ಗಾಳ ಹಾಕಿದೆ‌.


ಹಳೇ ಮೈಸೂರು ಭಾಗದಲ್ಲಿ ಆಪರೇಷನ್ ಕಮಲ


ಜಿಲ್ಲಾ ಉಸ್ತುವಾರಿ ಸಚಿವ ಎಸ್. ಟಿ. ಸೋಮಶೇಖರ್ ಇಂದು ಮಾಧ್ಯಮಗಳ ಜೊತೆ ಮಾತನಾಡಿ, ಹಳೆ ಮೈಸೂರು ಭಾಗದಲ್ಲಿ ಆಪರೇಷನ್ ಕಮಲ ನಡೆಯುತ್ತಿದೆ. ಮಾತುಕತೆ ಅಂತಿಮ ಹಂತಕ್ಕೆ ತಲುಪಿದ್ದು, ಯಾವುದೇ ಕಂಡಿಷನ್ ಇಲ್ದೆ ಘಟಾನುಘಟಿ ನಾಯಕರು ಒಪ್ಪಿದ್ದು,  ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟಿಲ್ ಗ್ರೀನ್ ಸಿಗ್ನಲ್ ಕೊಟ್ರೆ ಆದಷ್ಟು ಶೀಘ್ರದಲ್ಲೇ ಕೆಲ ನಾಯಕರು ಬಿಜೆಪಿ ಸೇರ್ತಾರೆ ಎಂದಿದ್ದಾರೆ.


ಇದನ್ನೂ ಓದಿ: Interim Injunction: ಪೀಠಾರೋಹಣಕ್ಕೆ ಕೋರ್ಟ್ ಬ್ರೇಕ್, ಅಡೆತಡೆಯಿಲ್ಲದೆ ಕಾರ್ಯಕ್ರಮ ನಡೆಯುತ್ತೆ-ಬಿ.ಜೆ ಪುಟ್ಟಸ್ವಾಮಿ


ಕಾಂಗ್ರೆಸ್​, ಜೆಡಿಎಸ್​ ನಾಯಕರ ಒಳಜಗಳ ಬಿಜೆಪಿಗೆ ಲಾಭ


ಪಕ್ಷಗಳ ಆಂತರಿಕ ಭಿನ್ನಾಭಿಪ್ರಾಯಗಳಿಂದ  ಹಲವು ಹಂತಗಳಲ್ಲಿ ಕೆಲ ಜೆಡಿಎಸ್, ಕೈ ನಾಯಕರರು  ಅಂತರ ಕಾಯ್ದುಕೊಂಡಿದ್ದಾರೆ. ಜೆಡಿಎಸ್, ಕಾಂಗ್ರೆಸ್ ಪಕ್ಷದ ಆಂತರಿಕ ಒಳಜಗಳದ ಲಾಭ ಪಡೆದು ಆಪರೇಷನ್ ಗೆ ಬಿಜೆಪಿ  ಮುಂದಾಗಿದೆ ಎನ್ನಲಾಗ್ತಿದೆ. ಚಾಮರಾಜ ಕ್ಷೇತ್ರದ ಶಾಸಕ ಎಲ್. ನಾಗೇಂದ್ರ ಕೂಡ ಆಪರೇಷನ್ ಕಮಲ ಸತ್ಯ ಅನ್ನೋದನ್ನ ಒಪ್ಪಿಕೊಂಡಿದ್ದಾರೆ.


ಜೆಡಿಎಸ್​ ತೊರೆಯಲು ಜಿಟಿಡಿ ರೆಡಿ


ಚಾಮುಂಡೇಶ್ವರಿ ಕ್ಷೇತ್ರದ ಶಾಸಕ ಜಿ.ಟಿ. ದೇವೇಗೌಡ ಈಗಾಗಲೇ ಜೆಡಿಎಸ್ ಪಕ್ಷ ತೊರೆಯಲು ಸಜ್ಜಾಗಿದ್ದು, ತನಗೆ ಚಾಮುಂಡೇಶ್ವರಿ, ಪುತ್ರನಿಗೆ ಚಾಮರಾಜ ಕ್ಷೇತ್ರದಲ್ಲಿ ಟಿಕೇಟ್ ಕೊಡಿ ಅಂತಾ ಕೈ ನಾಯಕರಿಗೆ ತಮ್ಮ ಡಿಮ್ಯಾಂಡ್ ಇಟ್ಟಿದ್ದಾರೆ. ಆದ್ರೆ ಈ ವರೆಗೂ ಕಾಂಗ್ರೆಸ್ ಹೈಕಮಾಂಡ್  ಗ್ನೀನ್ ಸಿಗ್ನಲ್ ಕೊಟ್ಟಿಲ್ಲ. ಹೀಗಾಗಿ ಜಿ.ಟಿ. ದೇವೇಗೌಡಪುತ್ರಗೆ ಚಾಮರಾಜ ಬಿಜೆಪಿ ಟಿಕೇಟ್ ನೀಡಿದ್ರೆ ತಾನು ಕ್ಷೇತ್ರ ತ್ಯಾಗ ಮಾಡಲು ಸಿದ್ದ ಅಂತಾ ಜಿಟಿ ದೇವೇಗೌಡರನ್ನ ಪಕ್ಷಕ್ಕೆ ಸ್ವಾಗತ ಮಾಡಿದ್ದಾರೆ.


ಇದನ್ನೂ ಓದಿ: BJP Decision: ರಾಜ್ಯಸಭೆಗೆ ಮತ್ತೊಮ್ಮೆ ನಿರ್ಮಲಾ ಸೀತಾರಾಮನ್, ವಿಧಾನ ಪರಿಷತ್ತಿಗೆ ವಿಜಯೇಂದ್ರ ಹೆಸರು ಶಿಫಾರಸು


ಒಟ್ಟಿನಲ್ಲಿ  ಚುನಾವಣೆಗೆ ಒಂದು ವರ್ಷ ಬಾಕಿ ಇರುವಾಗಲೇ ಬಿಜೆಪಿ ಆಪರೇಷನ್ ಶುರುಮಾಡಿದೆ. ಯಾರ್ಯಾರು ಬಿಜೆಪಿ ಸೇರ್ತಾರೆ,  ಬಿಜೆಪಿ ನಾಯಕರ ಮೆಗಾ ಪ್ಲಾನ್ ಹಳೆ ಮೈಸೂರು ಪ್ರಾಂತ್ಯದಲ್ಲಿ ಯಾವ ರೀತಿ ವರ್ಕೌಟ್ ಆಗುತ್ತೆ ಕಾದು ನೋಡಬೇಕು.

Published by:Pavana HS
First published: