ಕಾಶ್ಮೀರ ಫೈಲ್ಸ್ ರಕ್ತಸಿಕ್ತ ಚಿತ್ರ, ನೋಡಬೇಕಾದವರು ನೋಡ್ತಾರೆ: MLC H Vishwanath

ಜೇಮ್ಸ್ ಚಿತ್ರ ಚಿತ್ರಮಂದಿರಗಳಿಂದ ಎತ್ತಂಗಡಿ ಆದರೆ ರಾಜ್ಯದ ಜನ ರೊಚ್ಚಿಗೇಳುತ್ತಾರೆ. ರಾಜ್ಯದಲ್ಲಿ ಕನ್ನಡ ಸಿನಿಮಾಗಳಿಗೆ (Kannada Cinema) ಮೊದಲ ಆದ್ಯತೆ ನೀಡಬೇಕು ಎಂದು ಆಗ್ರಹಿಸಿದರು.

MLC ಹೆಚ್.ವಿಶ್ವನಾಥ್

MLC ಹೆಚ್.ವಿಶ್ವನಾಥ್

  • Share this:
ಚಿತ್ರಮಂದಿರಗಳಿಂದ ಜೇಮ್ಸ್ ಚಿತ್ರ (James Movie) ತೆರವು ವಿಚಾರಕ್ಕೆ ಸಂಬಂಧಿಸಿದಂತೆ ಇಂದು ಬಿಜೆಪಿ MLC ಹೆಚ್.ವಿಶ್ವನಾಥ್ (H Vishwanath) ಮೈಸೂರಿನಲ್ಲಿ ಮಾತನಾಡಿದ್ದಾರೆ. ಚಿತ್ರ ತೆಗೆಯುವ ಮೂಲಕ ಸಾಂಸ್ಕೃತಿಕ ರಾಯಭಾರಿಯಾದ ಕುಟುಂಬಕ್ಕೆ ಅವಮಾನ ಮಾಡಬಾರದು. ಡಾ.ರಾಜ್‌ ಕುಮಾರ್ (Dr Rajkumar) ಕುಟುಂಬ ರಾಜ್ಯದಲ್ಲಿ ಸಾಂಸ್ಕೃತಿಕ ರಾಯಭಾರಿಯಂತೆ ಇದೆ. ಅವರ ಕುಡಿ ಡಾ.ಪುನೀತ್ ರಾಜ್‌ಕುಮಾರ್ (Puneeth Rajkumar) ನಿಧನದ ನಂತರ ಜೇಮ್ಸ್ ಬಿಡುಗಡೆ ಆಗಿದೆ. ಇಡೀ ಕುಟುಂಬ ರಾಜ್ಯದ ಜನರ ಜೊತೆ ಬೆಸೆದುಕೊಂಡಿದೆ. ಈ ಸಂದರ್ಭದಲ್ಲಿ ಜೇಮ್ಸ್ ಎತ್ತಂಗಡಿ ಆಗಬಾರದು ಎಂದು ಹೆಚ್.ವಿಶ್ವನಾಥ್ ಗುಡುಗಿದರು. ಜೇಮ್ಸ್ ಚಿತ್ರ ಚಿತ್ರಮಂದಿರಗಳಿಂದ ಎತ್ತಂಗಡಿ ಆದರೆ ರಾಜ್ಯದ ಜನ ರೊಚ್ಚಿಗೇಳುತ್ತಾರೆ. ರಾಜ್ಯದಲ್ಲಿ ಕನ್ನಡ ಸಿನಿಮಾಗಳಿಗೆ (Kannada Cinema) ಮೊದಲ ಆದ್ಯತೆ ನೀಡಬೇಕು ಎಂದು ಆಗ್ರಹಿಸಿದರು.

ಕಾಶ್ಮೀರ್ ಫೈಲ್ಸ್ ಸಿನಿಮಾವೇ ಬೇರೆ. ಅದೊಂದು ರಕ್ತಸಿಕ್ತ ಚರಿತ್ರೆ. ನೋಡಬೇಕಾದವರು ಅದನ್ನು ನೋಡುತ್ತಾರೆ. ಮೊದಲು ನಮ್ಮ ಚಿತ್ರಗಳಿಗೆ ಆದ್ಯತೆ ಕೊಡಬೇಕು ಎಂದು ತಮ್ಮ ಅಭಿಪ್ರಾಯ ಹಂಚಿಕೊಂಡರು.

ಇದು ಸಂವಿಧಾನ ವಿರೋಧಿ ನಿಲುವು

ಇದೇ ವೇಳೆ  ಜಾತ್ರೆಗಳಲ್ಲಿ ಮುಸ್ಲಿಂ ವರ್ತಕರಿಗೆ ವ್ಯಾಪಾರಕ್ಕೆ ಅವಕಾಶ ನೀಡದ ವಿಚಾರಕ್ಕೆ ಪ್ರತಿಕ್ರಿಯಿಸಿ, ಇಂತಹ ನಡೆ ಅಮಾನವೀಯ. ಮುಸ್ಲಿಮರು ಈ ದೇಶದ ಪ್ರಜೆಗಳು. ಅವರನ್ನು ಅಲ್ಲಿ ವ್ಯಾಪಾರಕ್ಕೆ ಬರಬೇಡಿ, ಇಲ್ಲ ಬರಬೇಡಿ ಎಂದು ಹೇಳುವುದು ಸಂವಿಧಾನ ವಿರೋಧಿ ನಿಲುವು ಎಂದು ಅಸಮಾಧಾನ ಹೊರ ಹಾಕಿದರು.

ಇದನ್ನೂ ಓದಿ:  Puneeth Rajkumarರವರ 'ಜೇಮ್ಸ್'ಗೆ ಅಡ್ಡಿಯಾಗುತ್ತಾ 'The Kashmir files'? ಈ ಬಗ್ಗೆ ನಿರ್ಮಾಪಕರು ಹೇಳಿದ್ದೇನು?

ಸರ್ಕಾರ ಮುಸ್ಲಿಂ ವರ್ತಕರ ನೆರವಿಗೆ ಬರಲಿ

ಈ ರೀತಿ ಮುಸ್ಲಿಂ  ವ್ಯಾಪಾರಿಗಳ ಮೇಲೆ ನಿರ್ಬಂಧ ಹಾಕಿದ್ರೆ, ಅವರೆಲ್ಲ ಎಲ್ಲಿಗೆ ಹೋಗಬೇಕು ಹೇಳಿ ಎಂದು ಪ್ರಶ್ನೆ ಮಾಡಿದರು. ರಾಜ್ಯ ಸರ್ಕಾರ ತಕ್ಷಣ ಮುಸ್ಲಿಂ ವರ್ತಕರ ನೆರವಿಗೆ ಬರಬೇಕು. ಇಂತಹ ಬಹಿಷ್ಕಾರಗಳು ನಡೆಯದಂತೆ ನೋಡಿಕೊಳ್ಳಬೇಕು ಎಂದು ಮನವಿ ಮಾಡಿಕೊಂಡರು.

ಚುನಾವಣೆಗೆ ಹೋಗಲು ಬಿಜೆಪಿಗೆ ಮುಖವಿಲ್ಲ

ಜೇಮ್ಸ್ ಚಿತ್ರ ತೆಗೆಸಿದರೆ ಬಿಜೆಪಿ ಕಿತ್ತೊಗೆಯುತ್ತೇವೆ ಎಂದು ಅಭಿಮಾನಿಗಳು ಹೇಳಿದ್ದಾರೆ.  ರಾಜ್ಯದಲ್ಲಿ ಚುನಾವಣೆಗೆ ಹೋಗಲು ಬಿಜೆಪಿಯವರಿಗೆ ಮುಖವಿಲ್ಲ. ಇದೇ ಕಾರಣಕ್ಕೆ ಕೋಮುವಾದ ಬೆಳೆಸುತ್ತಿದ್ದಾರೆ. ಮುಸ್ಲಿಮರು ಜಾತ್ರೆಯಲ್ಲಿ ಅಂಗಡಿಯಲ್ಲಿ ಹಾಕದಂತೆ ಆದೇಶ ಮಾಡಿದ್ದಾರೆ. ಮೊದಲಿನಿಂದಲೂ ಇಲ್ಲದ್ದು ಇವತ್ತು ಯಾಕೆ ಬಂತು ಎಂದು ಕಾಂಗ್ರೆಸ್ ಮಾಜಿ ಸಚಿವ ಶಿವರಾಜ್ ತಂಗಡಗಿ ಪ್ರಶ್ನೆ ಮಾಡಿದ್ದಾರೆ.

ಜೇಮ್ಸ್ ನಿರ್ಮಾಪಕರ ಅಸಮಾಧಾನ

ಪವರ್ ಸ್ಟಾರ್ (Power Star) ಪುನೀತ್ ರಾಜ್‌ಕುಮಾರ್ (Puneeth Rajkumar) ಅಭಿನಯದ ಕೊನೆಯ ಸಿನಿಮಾ (Cinema) ‘ಜೇಮ್ಸ್’ (James) ಅಬ್ಬರ ಮುಂದುವರೆದಿದೆ. ವಿಶ್ವದಾದ್ಯಂತ ‘ಅಪ್ಪು’ ಅಭಿಮಾನಿಗಳು ಜೇಮ್ಸ್ ಸಿನಿಮಾವನ್ನು ಅಪ್ಪಿ, ಬಾಚಿ, ತಬ್ಬಿಕೊಂಡಿದ್ದಾರೆ. ಮತ್ತೊಂದೆಡೆ ಕಾಶ್ಮೀರಿ ಪಂಡಿತರ ಹತ್ಯೆ ಕುರಿತಾದ ಬಾಲಿವುಡ್ (Bollywood) ಸಿನಿಮಾ ‘ದಿ ಕಾಶ್ಮೀರ್‌ ಫೈಲ್ಸ್’ (The Kashmir Files) ಕೂಡ ದೇಶದಾದ್ಯಂತ ಸದ್ದು ಮಾಡುತ್ತಿದೆ.

ಬಾಕ್ಸ್ ಆಫೀಸ್‌ನಲ್ಲಿಯೂ (Box Office) ಧೂಳೆಬ್ಬಿಸುತ್ತಿದೆ. ಇದೀಗ 2 ಹಿಟ್ ಚಿತ್ರಗಳು (Hit Cinema) ಮುಖಾಮುಖಿಯಾಗುತ್ತಾ ಎನ್ನುವ ಪ್ರಶ್ನೆ ಮೂಡಿದೆ. ಕೊಪ್ಪಳದಲ್ಲಿ ಈ ಬಗ್ಗೆ ಖುದ್ದು ಜೇಮ್ಸ್ ಸಿನಿಮಾ ನಿರ್ಮಾಪಕರೇ (Producer) ಆತಂಕ ಹೊರಹಾಕಿದ್ದಾರೆ.

ಇದನ್ನೂ ಓದಿ:  Puneeth Rajkumar ಹೆಸರಲ್ಲಿ ಪ್ರತಿಭಾವಂತ ವಿದ್ಯಾರ್ಥಿಗಳು ಚಿನ್ನದ ಪದಕ ಗೆಲ್ಲಬಹುದು, ಎಲ್ಲಿ? ಹೇಗೆ? ವಿವರ ಇಲ್ಲಿದೆ

“ನಮಗೆ ಸಮಸ್ಯೆ ಆಗಿರೋದು ನಿಜ” ಅಂತ ಜೇಮ್ಸ್ ಸಿನಿಮಾ ನಿರ್ಮಾಪಕ ನಿರ್ಮಾಪಕ ಕಿಶೋರ್ ಪತ್ತಿಕೊಂಡ ಹೇಳಿದ್ದಾರೆ. ಗಂಗಾವತಿಯಲ್ಲಿ ಮಾತನಾಡಿದ ಅವರು,  ಒಂದು ಶೋ ಮಾತ್ರ ಬೇರೆ ಚಿತ್ರ ಹಾಕ್ತಿವಿ ಅಂತಾ ಕೇಳಿಕೊಂಡಿದ್ರು. ಎಲ್ಲಿ ಅನ್ನೋದು ಬೇಡಾ.‌ ದಿ ಕಾಶ್ಮೀರ ಫೈಲ್ ಸಿನಿಮಾದಿಂದ ಸಮಸ್ಯೆ ಆಗಿದೆ. ನಾಲ್ಕು ಶೋ ನನಗೆ ಬೇಕೇ ಬೇಕು. ಈ ಬಗ್ಗೆ ನಾನಿನ್ನು ಫಿಲ್ಮ ಚೆಂಬರ್ ಗೆ ತಿಳಿಸಿಲ್ಲ.ಸಿನಿಮಾ ಸಕ್ಸಸ್ ಕಂಡಿದೆ ಎಲ್ಲರಿಗೂ ಧನ್ಯವಾದ ಎಂದರು.
Published by:Mahmadrafik K
First published: