ಬಿಜೆಪಿಯಲ್ಲಿ ಭ್ರಷ್ಟಾಚಾರ ಹೆಚ್ಚಾಗಿದೆ, ಉಪ್ಪು ತಿಂದೋರು ನೀರು ಕುಡಿಯಲಿ: Siddaramaiah

ನಮ್ಮ ಸರ್ಕಾರವನ್ನು 10% ಸರ್ಕಾರ ಎಂದು ಕರೆದಿದ್ದ ಪ್ರಧಾನಿ ನರೇಂದ್ರ ಮೋದಿ ಅವರು ಇದಕ್ಕೇನು ಹೇಳ್ತಾರೆ ಎಂದು ಸಿದ್ದರಾಮಯ್ಯ ಪ್ರಶ್ನೆ ಮಾಡಿದ್ದರು.

ಮಾಜಿ ಸಿಎಂ ಸಿದ್ದರಾಮಯ್ಯ

ಮಾಜಿ ಸಿಎಂ ಸಿದ್ದರಾಮಯ್ಯ

  • Share this:
ಮೈಸೂರು: ಯಾವ ಇಲಾಖೆಯಲ್ಲಿ ಲಂಚ ತಗೋತ್ತಾರೆ ಅಲ್ಲಿಂದಲೇ ತನಿಖೆ ಮಾಡಿಸೋದಾ.? ಈ ಪರ್ಸೆಟೆಂಜ್ ತನಿಖೆ ಸುಪ್ರೀಂ ಕೋರ್ಟ್ ನಿವೃತ್ತ ನ್ಯಾಯಾಧೀಶರಿಂದ ಆಗಬೇಕು. ಯಾರು ಲಂಚ‌ ತಗೊಂಡಿದ್ದಾರೆ ಅವರಿಗೆ ಶಿಕ್ಷೆ ಆಗಲಿ. ಅದು ಬಿಟ್ಟು ಇಲಾಖೆಗಳ ಕಾರ್ಯದರ್ಶಿ ಕೈಯಲ್ಲಿ ಮಾಡಿಡುತ್ತೇವೆ ಅಂದ್ರೆ ಏನರ್ಥ ಮಾಡಿಕೊಳ್ಳಬೇಕು.  ಇದು ಕಣ್ಣೋರೋಸೆ ತಂತ್ರ ಅಲ್ವಾ, ಪ್ರಕರಣ ಮುಚ್ಚಿಹಾಕೋ ಯತ್ನ ಮಾಡಲಾಗುತ್ತಿದೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ (Former CM Siddaramaiah) ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.  ಬಿಡಿಎ(BDA)ನಲ್ಲಿ 300 ಕೋಟಿ ನಷ್ಟವಾಗಿದೆ ಅಂತಾರೆ. ಬಿಜೆಪಿ(BJP)ಯಲ್ಲಿ ಭ್ರಷ್ಟಾಚಾರ (Corruption) ಹೆಚ್ಚಾಗಿದೆ. ಭ್ರಷ್ಟಾಚಾರ ಹೆಚ್ಚಾಗಿದೆ ಅಂತ ದೂರು ಬಂದಮೇಲೆ‌ ತನಿಖೆ ಮಾಡಬೇಕಲ್ವ.? ಆದರೆ ಸಿಎಂ ಆ ಕಾಲದಲ್ಲಿ ಇತ್ತು ಅಂತಾರೆ, ಹೌದು ಆ ಕಾಲದಲ್ಲೂ ಭ್ರಷ್ಟಾಚಾರ ಇತ್ತು. ಆದರೆ ಕಂಟ್ರಾಕ್ಟರ್ ಯಾವಾತಾದ್ರು ಪತ್ರ ಬರೆದಿದ್ದಾರಾ ಎಂದು ಸಿದ್ದರಾಮಯ್ಯ ಪ್ರಶ್ನೆ ಮಾಡಿದರು.

ಕೆಂಪಣ್ಣನ ಆರೋಪ ಸತ್ಯ 35 ರಿಂದ 40 ಪರ್ಸೆಂಟ್ ಸರ್ಕಾರ ಇದು. ಸಚಿವರು, ಶಾಸಕರು, ಸಂಸದರು ಪರ್ಸೆಂಟೆಜ್ ತೆಗೆದುಕೊಂಡಿದ್ದಾರೆ.ಇದನ್ನ ಸ್ವತಃ ಕೆಂಪಣ್ಣ ಕೊಟ್ಟಿರುವ ಹೇಳಿಕೆಯನ್ನು ನಾನು ರಾಜ್ಯಪಾಲರಿಗೆ ಕೊಟ್ಟಿದ್ದೇನೆ. ಮೊದಲು ಈ ಸರ್ಕಾರ ವಜಾ ಮಾಡಿ ಅಂತ ಪ್ರಧಾನಿಗೆ ಆಗ್ರಹ ಮಾಡುತ್ತೇನೆ. ಪರ್ಸೆಂಟೆಜ್ ಏನು ತೆಗೆದುಕೊಂಡಿಲ್ಲ ಅಂತ ಸರ್ಕಾರ ಹೇಳಿದೋದ್ರೆ. ಕಾರ್ಯದರ್ಶಿ ಬಳಿ ತನಿಖೆ ಮಾಡಿಸ್ತಿನಿ ಅಂತ ಯಾಕಪ್ಪ ಹೇಳ್ದಪ್ಪ ಎಂದು ಬಿಜೆಪಿಗೆ ತಿರುಗೇಟು ನೀಡಿದರು.

ನವೆಂಬರ್ 25 ರಂದು  ಕಾಂಗ್ರೆಸ್ ಪಕ್ಷದ ನಿಯೋಗ ರಾಜ್ಯಪಾಲರನ್ನು ಭೇಟಿ ಮಾಡಿತ್ತು. ಸಂವಿಧಾನದ 356ನೇ ಪರಿಚ್ಛೇದದಡಿ ರಾಷ್ಟ್ರಪತಿ ಆಳ್ವಿಕೆ ಹೇರಬೇಕು ಹಾಗೂ ರಾಜ್ಯ ಬಿಜೆಪಿ ಸರ್ಕಾರದ ಭ್ರಷ್ಟಾಚಾರದ ಬಗ್ಗೆ ಸುಪ್ರೀಂ ಕೋರ್ಟ್ ನ ನ್ಯಾಯಮೂರ್ತಿಗಳ ನೇತೃತ್ವದಲ್ಲಿ ನ್ಯಾಯಾಂಗ ತನಿಖೆ ನಡೆಸಬೇಕು ಎಂದು ಕಾಂಗ್ರೆಸ್ ನಿಯೋಗ ಮನವಿ ಮಾಡಿತ್ತು.

ಇದನ್ನೂ ಓದಿ:  ಇದು ಮೂರ್ಖತನದ ಪರಮಾವಧಿ. ಅದು ಸುಮ್ಮನೆ ಬೂಟಾಟಿಕೆ: ಸಚಿವ B.C.Patil

ರಾಜ್ಯ ಸರ್ಕಾರದ ಬ್ರಹ್ಮಾಂಡ ಭ್ರಷ್ಟಾಚಾರಕ್ಕೆ ಸರ್ಕಾರಿ ಕಾಮಗಾರಿಗಳ ವೆಚ್ಚದಲ್ಲಿ 40% ಅನ್ನು ಸರ್ಕಾರದ ಸಚಿವರು ಹಾಗೂ ಅಧಿಕಾರಿಗಳಿಗೆ ಕಮಿಷನ್ ರೂಪದಲ್ಲಿ ನೀಡಬೇಕಾಗಿದೆ ಎಂದು ಆರೋಪಿಸಿ ಗುತ್ತಿಗೆದಾರರ ಸಂಘದ ಅಧ್ಯಕ್ಷರಾದ ಕೆಂಪಣ್ಣ ಹಾಗೂ ಸಂಘದ ಲಕ್ಷಕ್ಕೂ ಅಧಿಕ ಸದಸ್ಯರು ಪ್ರಧಾನಿಗಳಿಗೆ ಬರೆದ ಪತ್ರವೇ ಸಾಕ್ಷಿ.

ಪ್ರಧಾನಿ ಮೋದಿ ಇದಕ್ಕೇನು ಹೇಳ್ತಾರೆ?

ರಾಜ್ಯ ಸರ್ಕಾರದ ಕಮಿಷನ್ ದಂಧೆ ಹಾಗೂ ಅಕ್ರಮ ಹಣದ ವರ್ಗಾವಣೆ ಬಗ್ಗೆ ಗುತ್ತಿದಾರರ ಸಂಘ ಪ್ರಧಾನಿಗಳಿಗೆ ಬರೆದ ಪತ್ರದ ಬಗ್ಗೆ ಪತ್ರಿಕೆಗಳು ವರದಿ ಮಾಡಿವೆ. ನಮ್ಮ ಸರ್ಕಾರವನ್ನು 10% ಸರ್ಕಾರ ಎಂದು ಕರೆದಿದ್ದ ಪ್ರಧಾನಿ ನರೇಂದ್ರ ಮೋದಿ ಅವರು ಇದಕ್ಕೇನು ಹೇಳ್ತಾರೆ ಎಂದು ಸಿದ್ದರಾಮಯ್ಯ ಪ್ರಶ್ನೆ ಮಾಡಿದ್ದರು.

ಸರ್ಕಾರದ ಖಜಾನೆಗೆ 300 ಕೋಟಿ ನಷ್ಟ

ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಮೇಲೆ ನಡೆಸಿರುವ ಎಸಿಬಿ ದಾಳಿಯಿಂದ ಅಲ್ಲಿನ ಭ್ರಷ್ಟಾಚಾರವೂ ಬಯಲಾಗಿದೆ. ಒಂದು ಅಂದಾಜಿನ ಪ್ರಕಾರ ಬಿಡಿಎ ಭ್ರಷ್ಟಾಚಾರದಿಂದ ಸರ್ಕಾರದ ಖಜಾನೆಗೆ ಸುಮಾರು ರೂ. 300 ಕೋಟಿ ನಷ್ಟವಾಗಿದೆ. ಎಸಿಬಿ ಕಾರ್ಯದಲ್ಲಿ ಸರ್ಕಾರ ಮಧ್ಯಪ್ರವೇಶ ಮಾಡದೆ ತಪ್ಪಿತಸ್ಥರಿಗೆ ಶಿಕ್ಷೆಯಾಗುವಂತೆ ನೋಡಿಕೊಳ್ಳಬೇಕು ಎಂದು ಕಾಂಗ್ರೆಸ್ ಆಗ್ರಹಿಸಿದೆ.

ಇದನ್ಕೂ ಓದಿ:  ಉಗ್ರಪ್ಪ ವಿರುದ್ಧ ಕ್ರಮಕೈಗೊಳ್ಳಲಾಗದ ಡಿಕೆಶಿ ಅಸಹಾಯಕ; Ramesh Jarkiholi ಬಗ್ಗೆ ಮಾತಾಡಿದ್ದಕ್ಕೆ BJP ತಿರುಗೇಟು

ಕಾಂಗ್ರೆಸ್ ನಾಯಕರಿಗೆ ಭಯ ಕಾಡ್ತಿದೆ: ಕಟೀಲ್ ತಿರುಗೇಟು

ಕಾಂಗ್ರೆಸ್ ಅಧಿಕಾರ ಕಳೆದುಕೊಂಡ ಮೇಲೆ ಅತಂತ್ರ ಸ್ಥಿತಿಯಲ್ಲಿ ಇದೆ.  ನಿರಂತರವಾಗಿ ಅಪಪ್ರಚಾರ ಮಾಡುವುದು, ಸುಳ್ಳು ಮಾಹಿತಿ ಕೊಡುವುದು,  ಸುಳ್ಳು ಸುದ್ದಿಗಳನ್ನು ಹಬ್ಬಿಸುವ ಕಾರ್ಯದಲ್ಲಿ ತೊಡಗಿದೆ. ಕಾಂಗ್ರೆಸ್ ನಾಯಕರಿಗೆ ಭಯ ಕಾಡ್ತಿದೆ. ಬಿಜೆಪಿ ಮಹಾನಗರ ಪಾಲಿಕೆ ಸೇರಿದಂತೆ ಅನೇಕ ಚುನಾವಣೆ ಅಭೂತಪೂರ್ವ ಗೆಲುವು ಸಾಧಿಸಿದೆ. ಇದೇ ರೀತಿ ಗೆಲುವಿನ ಅಂತರ ಜಾಸ್ತಿ ಆದ್ರೆ ನಾನು ನಿರುದ್ಯೋಗಿ ಆಗುತ್ತೇನೆ ಅಂತ ಸುಳ್ಳು ಸುದ್ದಿಗಳನ್ನ ಸೃಷ್ಟಿ ಮಾಡಿ ದೂರು ಕೊಡುವ ಕೆಲಸ ಮಾಡುತ್ತಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ತಿರುಗೇಟು ನೀಡಿದ್ದಾರೆ.
Published by:Mahmadrafik K
First published: