Death Note Mystery: ನೇಣಿಗೆ ಶರಣಾದ ಪ್ರಿಯತಮೆ; 11ನೇ ದಿನ ಸಿಕ್ಕ ಡೆತ್​ನೋಟ್​​ನಿಂದ ಪ್ರಕರಣಕ್ಕೆ ಟ್ವಿಸ್ಟ್

ಮಗಳು ಅವಮಾನ ತಾಳಲಾರೆ ಸತ್ತಿದ್ದಾಳೆ ಅಂತಾ ದೂರು ನೀಡದೆ ಶವಸಂಸ್ಕಾರ ಮಾಡಿ ಸುಮ್ಮನಾಗಿದ್ದ ಆಕೆಯ ಪೋಷಕರಿಗೆ ಹನ್ನೊಂದು ದಿನದ ಬಳಿಕ ಸಿಕ್ಕ ಆಕೆಯ ಡೆಟ್ ನೋಟ್ ಸಿಕ್ಕಿತ್ತು. ಅಲ್ಲಿಂದ ಪ್ರಕರಣದ ದಿಕ್ಕನ್ನೇ ಬದಲಾಗಿ ಬಿಟ್ಟಿದೆ.

ಪ್ರಿಯಕರ, ದೂರು ದಾಖಲಿಸಿಕೊಳ್ಳದ ಪೊಲೀಸ್​

ಪ್ರಿಯಕರ, ದೂರು ದಾಖಲಿಸಿಕೊಳ್ಳದ ಪೊಲೀಸ್​

  • Share this:
    ಮೈಸೂರು: ಅವರಿಬ್ಬರದ್ದು  ಐದು ವರ್ಷದ ಪ್ರೀತಿ. ಆದರೆ ಜೋಡಿ ಹಕ್ಕಿಗಳ  ನಡುವೆ ಮತ್ತೊಬ್ಬ ಎಂಟ್ರಿ ಕೊಟ್ಟಿದ್ದ. ಇಬ್ಬರ ಮಧ್ಯೆ ಮತ್ತೊಬ್ಬನ ಪ್ರವೇಶದಿಂದ  ಪ್ರೀತಿ ದ್ವೇಷಕ್ಕೆ ತಿರುಗಿದೆ. ಪ್ರಿಯಕರನ ಅನುಮಾನ, ಅವಮಾನಗಳಿಂದ ಬೇಸತ್ತ ಆಕೆ ನ್ಯಾಯಕ್ಕಾಗಿ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಳು. ಅಲ್ಲೂ ನ್ಯಾಯ ಸಿಗಲಿಲ್ಲ ಅಂತಾ ಸಾವಿನ ಮನೆ ಕದ ತಟ್ಟಿದ್ದಾಳೆ. ಮೃತಪಟ್ಟ ಹನ್ನೊಂದು ದಿನದ ಬಳಿಕ ಸಿಕ್ಕ ಆಕೆಯ ಡೆತ್ ನೋಟ್​​ನೊಂದು ಇಡೀ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದೆ.  ಮೃತ ಯುವತಿ ನಂಜನಗೂಡು ತಾಲೂಕಿನ ಚನ್ನಪಟ್ಟಣ ನಿವಾಸಿ. ಪ್ರಿಯಕರ ಮಾಡಿದ ಮೋಸಕ್ಕೆ ಬೇಸತ್ತು ಯುವತಿ ನೇಣಿಗೆ ಕೊರಳೊಡ್ಡಿದ್ದಾಳೆ.

    ಅವಮಾನಿಸಿದ್ದ ಪ್ರಿಯಕರ..! 

    ಮಗಳು ಅವಮಾನ ತಾಳಲಾರೆ ಸತ್ತಿದ್ದಾಳೆ ಅಂತಾ ದೂರು ನೀಡದೆ ಶವಸಂಸ್ಕಾರ ಮಾಡಿ ಸುಮ್ಮನಾಗಿದ್ದ ಆಕೆಯ ಪೋಷಕರಿಗೆ ಹನ್ನೊಂದು ದಿನದ ಬಳಿಕ ಸಿಕ್ಕ ಆಕೆಯ ಡೆಟ್ ನೋಟ್ ಸಿಕ್ಕಿತ್ತು. ಅಲ್ಲಿಂದ ಪ್ರಕರಣದ ದಿಕ್ಕನ್ನೇ ಬದಲಾಗಿ ಬಿಟ್ಟಿದೆ. ಅಂದಹಾಗೆ ಯುವತಿ ಅದೇ ಗ್ರಾಮದ ಲೋಕೇಶ್ ಎಂಬಾತನನ್ನ ಕಳೆದ ಒಂದು ವರ್ಷದಿಂದ ಪ್ರೀತಿ ಮಾಡ್ತಾ ಇದ್ಲು.‌ ಈ ನಡುವೆ ಮೃತಳು, ಅದೇ ಗ್ರಾಮದ ಸುರೇಶ್ ಎಂಬಾತನ ಜೊತೆ ಮಾತನಾಡುತ್ತಿದ್ದಳು ಅಂತಾ ಆರೋಪಿಸಿ ಆಕೆಯ ಜೊತೆ ಲೋಕೇಶ್ ಜಗಳ ತೆಗೆದಿದ್ದಾನೆ. ಮದುವೆ ಆಗಲ್ಲ ಅಂತಾ ಯುವತಿ ಮೇಲೆ ಹಲ್ಲೆ ಮಾಡಿ, ಅವಮಾನಿಸಿ ಮೊಬೈಲ್ ಪೋನ್ ಕಸಿದುಕೊಂಡಿದ್ದನಂತೆ.

    ಮನೆ ಎದುರು ಜಗಳ ಮಾಡಿದ್ದ ಪ್ರಿಯಕರನ ಸಂಬಂಧಿಕರು 

    ಪ್ರಿಯಕರನ ನಡೆಯಿಂದ ಬೇಸತ್ತು ಹುಲ್ಲಹಳ್ಳಿ ಪೊಲೀಸ್ ಠಾಣೆಗೆ ದೂರು ನೀಡಲು ಮುಂದಾಗಿದ್ದಾಳೆ. ಆದ್ರೆ ಪೊಲೀಸರು ದೂರು ಸ್ವೀಕರಿಸದ ಹಿನ್ನೆಲೆ ಮನೆಗೆ ಬಂದ ಯುವತಿ ವಿರುದ್ಧ ಲೋಕೇಶ್​ ಹಾಗೂ ಸಂಬಂಧಿಕರು ಮನೆ ಮುಂದೆ ಬಂದು ಗಲಾಟೆ ಮಾಡಿಹೋಗಿದ್ರಂತೆ. ಹೀಗಾಗಿ ಎಲ್ಲೂ ನ್ಯಾಯ ಸಿಗದೆ ಇದ್ದಕ್ಕೆ ಮನೆಯಲ್ಲಿ ಯುವತಿ ನೇಣಿಗೆ ಶರಣಾಗಿದ್ದಾಳೆ.ಇನ್ನ, ದೂರು ನೀಡಿದ್ರೂ ಪ್ರಯೋಜನಾ ಇಲ್ಲ ಅಂತಾ ಗೊತ್ತಾದ ಶೋಭಾ ಸಂಬಂಧಿಕರು ಪೊಲೀಸರಿಗೆ ದೂರು ನೀಡದೆ ಯುವತಿಯ ಅಂತ್ಯಸಂಸ್ಕಾರದ ನೇರವೇರಿಸಿ ಸುಮ್ಮನಾಗಿದ್ರು.

    11ನೇ ದಿನ ಸಿಕ್ತು ಪ್ರಕರಣಕ್ಕೆ ಟ್ವಿಸ್ಟ್​​ 

    ಆದ್ರೆ ಹನ್ನೊಂದು ದಿನದ ತಿಥಿ ಕಾರ್ಯಕ್ಕೆ ಅಂತಾ ಯುವತಿ ಕೊಠಡಿ ಶುಚಿ ಮಾಡುವ ವೇಳೆ ಆಕೆಯೇ ಬರೆದಿದ್ದ ಡೆಟ್ ನೋಟ್ ಸಿಕ್ಕಿದೆ. ಡೆತ್ ನೋಟ್ ನಲ್ಲಿ ಯುವತಿ ನನ್ನ ಸಾವಿಗೆ ಲೋಕೇಶ್ ಕಾರಣ. ಮದುವೆ ಆಗುವುದಾಗಿ ನಂಬಿಸಿ ಅತ್ಯಾಚಾರ ಎಸಗಿದ್ದಾನೆ. ಮದುವೆ ಬಗ್ಗೆ ಮಾತನಾಡಿದ್ದಕ್ಕೆ ಜಗಳವಾಡಿ ಅವಮಾನಿಸಿದ್ದಾನೆ. ದೂರು ಕೊಡಲು ಹೋದ ವೇಳೆ ಹುಲ್ಲಳ್ಳಿ ಠಾಣೆ ಎಎಸ್ಐ ಶಿವರಾಜು ದೂರು ಪಡೆಯದೆ ಆರೋಪಿಗಳ ಜೊತೆ ಶಾಮೀಲಾಗಿ ದೂರು ದಾಖಲಿಸದೆ ನ್ಯಾಯ ಒದಗಿಸಲಿಲ್ಲ. ಹೀಗಾಗಿ ಆತ್ಮಹತ್ಯೆಗೆ ಶರಣಾಗುತ್ತಿದ್ದೇನೆ ಅಂತಾ ಡೆತ್ ನೋಟ್ ನಲ್ಲಿ ಉಲ್ಲೇಖ ಮಾಡಿದ್ದಾಳೆ.

    ಇದನ್ನೂ ಓದಿ: Murder News: ಮನೆಯಲ್ಲಿ ಬೈತಾರೆ ಎಂದು ಮನೆಮಂದಿಗೆಲ್ಲಾ ವಿಷ ಹಾಕಿ ಕೊಂದ ಅಪ್ರಾಪ್ತೆ

    ದೂರು ದಾಖಲಿಸಿಕೊಳ್ಳದ ಪೊಲೀಸ್​ ವಿಒರುದ್ಧ ತನಿಖೆ 

    ಈ ಸಂಬಂಧ ಪ್ರಕರಣದಲ್ಲಿ ಕರ್ತವ್ಯ ಲೋಪ ಎಸಗಿರೋ ಹುಲ್ಲಹಳ್ಳಿ ಠಾಣೆ ಎಎಸ್ಐ ಶಿವರಾಜು ವಿರುದ್ಧ ಇಲಾಖೆ ತನಿಖೆಗೆ ಆದೇಶ ಮಾಡಿ, ಅತ್ಯಾಚಾರ ಆರೋಪದಲ್ಲಿ ಯುವತಿಯ ಪ್ರಿಯಕರ ಲೋಕೇಶ್ ಹಾಗೂ ಆತ್ಮಹತ್ಯೆಗೆ ಪ್ರಚೋದನೆ ನೀಡಿರೋ ಸಂಬಂಧ 8 ಮಂದಿ ವಿರುದ್ಧ ಎಫ್.ಐ.ಆರ್ ದಾಖಲು ಮಾಡಲಾಗಿದೆ. ಒಟ್ಟಿನಲ್ಲಿ, ಪೊಲೀಸ್ ಅಧಿಕಾರಿ ದೂರು ದಾಖಲು ಮಾಡಿಕೊಳ್ಳು ಹಿಂದೇಟು ಹಾಕಿದ್ದಕ್ಕೆ ನ್ಯಾಯ ಸಿಗದೆ, ವ್ಯವಸ್ಥೆ ವಿರುದ್ಧ ಮನನೊಂದು ಯುವತಿ ಆತ್ಮಹತ್ಯೆಗೆ ಶರಣಾಗಿದ್ದಾಳೆ. ಪೊಲೀಸರು ಪ್ರಕರಣ ಗಂಭೀರವಾಗಿ ಪರಿಗಣಿಸಿದ್ರೆ ಇಂತದ್ದೊಂದು ಅನಾಹುತ ತಪ್ಪುತ್ತಿತ್ತೋ ಏನೊ. ಆದ್ರೆ ಪ್ರಕರಣದಲ್ಲಿ ಇಬ್ಬರ ನಡುವಿನ ಮತ್ತೊಬ್ಬನ ಎಂಟ್ರಿ ಪ್ರಿಯಕರನ ಮೋಸಕ್ಕೆ ಮುಗ್ದ ಜೀವವೊಂದು ಬಲಿಯಾಗಿದ್ದು ದುರಂತವೇ ಸರಿ.

     ವರದಿ:- ದಿವ್ಯೇಶ್ ಜಿ ವಿ ನ್ಯೂಸ್  
    Published by:Kavya V
    First published: