• Home
  • »
  • News
  • »
  • state
  • »
  • Friend Murder: ಇನ್‍ಸ್ಟಾಗ್ರಾಂನಲ್ಲಿ ಯುವತಿ ವಿಚಾರವಾಗಿ ಸ್ನೇಹಿತರ ನಡುವೆ ಕಿರಿಕ್, ಮುಂದಾಗಿದ್ದು ದುರಂತ!

Friend Murder: ಇನ್‍ಸ್ಟಾಗ್ರಾಂನಲ್ಲಿ ಯುವತಿ ವಿಚಾರವಾಗಿ ಸ್ನೇಹಿತರ ನಡುವೆ ಕಿರಿಕ್, ಮುಂದಾಗಿದ್ದು ದುರಂತ!

ಪ್ರಾತಿನಿಧಿಕ ಚಿತ್ರ

ಪ್ರಾತಿನಿಧಿಕ ಚಿತ್ರ

ಇನ್‍ಸ್ಟಾಗ್ರಾಂನ ಪೋಸ್ಟ್ ವೊಂದರ ಕಾಮೆಂಟ್ ವಿಚಾರವಾಗಿ ಆತ್ಮೀಯ ಸ್ನೇಹಿತರ ನಡುವೆ ದೊಡ್ಡ ಕಿರಿಕ್ ಆಗಿದೆ. ಒಂದು ವಾರದಿಂದ ಜಗಳಗಳಾಗಿ, ಜಗಳ ವಿಕೋಪಕ್ಕೆ ತಿರುಗಿ ಕೊಲೆಯಲ್ಲಿ ಅಂತ್ಯವಾಗಿದೆ.

  • Share this:

ಸಾಮಾಜಿಕ ಜಾಲತಾಣಗಳಿಂದ (Social Media) ಎಷ್ಟೋ ಅನುಕೂಲವೋ, ಅಷ್ಟೇ ಅನಾನುಕೂಲವು ಹೌದು. ನಾವು ಅದನ್ನು ಹೇಗೆ ಬಳಸುತ್ತೇವೆ ಎನ್ನುವುದ ಮೇಲೆ ಅದು ನಿರ್ಧಾರವಾಗುತ್ತದೆ. ಇತ್ತಿಚೀನ ದಿನಗಳಲ್ಲಿ ಯುವ ಜನಾಂಗ ಅದರಲ್ಲಿ ಮುಳುಗಿ ಹೋಗಿರುವುದನ್ನು ನೋಡಿದ್ದೇವೆ. ಅದು ಒಳ್ಳೆಯ ರೀತಿಯಿಂದ ಇದ್ರೆ ಏನೂ ತೊಂದ್ರೆ ಇಲ್ಲ. ಆದ್ರೆ ಅದರಲ್ಲಿ ಹಾಕುವ ಪೋಸ್ಟ್ ಗಳಿಂದ ಎಷ್ಟೋ ಗಲಾಟೆಗಳೇ ನಡೆದು ಹೋಗಿವೆ. ಪ್ರಾಣ ಸ್ನೇಹಿತರಾಗಿದ್ದವರು ಬಡಿದಾಡಿಕೊಂಡಿದ್ದಾರೆ. ಅಂತದ್ದೇ ಘಟನೆ ಮೈಸೂರಿನಲ್ಲಿ (Mysuru) ನಡೆದಿದೆ. ಇನ್‍ಸ್ಟಾಗ್ರಾಂ ಪೋಸ್ಟ್​ವೊಂದರ (Instagram Post) ಕಾಮೆಂಟ್ ವಿಚಾರವಾಗಿ ಆತ್ಮೀಯ ಸ್ನೇಹಿತರ ನಡುವೆ ದೊಡ್ಡ ಕಿರಿಕ್ ಆಗಿದೆ. ಒಂದು ವಾರದಿಂದ ಜಗಳಗಳಾಗಿ, ಜಗಳ ವಿಕೋಪಕ್ಕೆ ತಿರುಗಿ ಕೊಲೆಯಲ್ಲಿ ಅಂತ್ಯವಾಗಿದೆ.


ಪ್ರಾಣ ಸ್ನೇಹಿತರ ಕಿಡಿ ಹೊತ್ತಿಸಿದ ಇನ್‍ಸ್ಟಾಗ್ರಾಂ ಕಾಮೆಂಟ್!
ಈ ಘಟನೆ ನಡೆದಿರೋದು ಹುಣಸೂರು-ಮೈಸೂರು ಹೆದ್ದಾರಿಯ ನಗರದ ಎಪಿಎಂಸಿ ಜಂಕ್ಷನ್ ಬಳಿ. ನಿತಿನ್ ಮತ್ತು ಬೀರೇಶ್ ಎನ್ನುವವರು ಆತ್ಮೀಯ ಸ್ನೇಹಿತರಾಗಿರುತ್ತಾರೆ. 23 ವರ್ಷದ ಬೀರೇಶ್ ಹುಣಸೂರು ತಾಲೂಕಿನ ಅಂಗಟಹಳ್ಳಿಯ ನಿವಾಸಿ. ನಿತಿನ್ ಗೋಕುಲ್ ರಸ್ತೆಯ ಕುಟ್ಟಿ ಜಿಮ್‍ನ ತರಬೇತುದಾರ. ಇಬ್ಬರು ತುಂಬಾ ವರ್ಷಗಳಿಂದ ಸ್ನೇಹಿತರಾಗಿರುತ್ತಾರೆ. ಆದ್ರೆ ಒಂದು ವಾರದ ಹಿಂದೆ ನಿತಿನ್ ಹಾಕಿದ್ದ ಇನ್‍ಸ್ಟಾಗ್ರಾಂನ ಒಂದು ಪೋಸ್ಟ್‍ಗೆ ಬೀರೇಶ್ ಪ್ರಚೋಧಿಸುವ ರೀತಿ ಕಾಮೆಂಟ್ ಹಾಕಿರುತ್ತಾನೆ. ಅದರಿಂದ ಕೋಪಗೊಂಡು ಇಬ್ಬರು ನಡುವೆ ಜಗಳವಾಗಿ ಬೀರೇಶ್‍ಗೆ ನಿತಿನ್ ಚಾಕುವಿನಿಂದ ಇರಿದು ಕೊಂದಿದ್ದಾನೆ.


ಬೀರೇಶ್ ಹಾಕಿದ್ದ ಕಾಮೆಂಟ್ ಏನು?
ನಿತಿನ್ ಕೆಲವು ತಿಂಗಳ ಹಿಂದೆ ಸಾಮಾಜಿಕ ಜಾಲತಾಣದ ಮೂಲಕ ಪರಿಚಯಚಯವಾದ ಯುವತಿಯನ್ನು ಪ್ರೀತಿಸಿ ಮದುವೆಯಾಗಿರುತ್ತಾನೆ. ಆ ಯುವತಿ ತುಂಬಾ ಶ್ರೀಮಂತ ಹುಡುಗಿ. ಇನ್‍ಸ್ಟಾಗ್ರಾಂ ನಿತಿನ್ ಹಾಕಿದ್ದ ಒಂದು ಪೋಸ್ಟ್ ಗೆ ಬೀರೇಶ್ ಹೆಂಡತಿಯನ್ನು ಸರಿಯಾಗಿ ನೋಡಿಕೊಳ್ಳಲು ಆಗದಿದ್ರೆ ಏಕೆ ಮದುವೆಯಾಗಬೇಕಿತ್ತು ಎಂದು ಕೆಟ್ಟದಾಗಿ ಕಾಮೆಂಟ್ ಮಾಡಿದ್ದ. ಇದರಿಂದ ಕೋಪಗೊಂಡ ನಿತಿನ್ ಆ ಕಾಮೆಂಟ್‍ನ್ನು ಇತರೆ ಸ್ನೇಹಿತರಿಗೂ ಕಳಿಸಿದ್ದ. ಒಂದು ವಾರದಿಂದ ಇಬ್ಬರ ನಡುವೆ ಜಗಳ ಆಗುತ್ತಿತ್ತು.


ಸ್ನೇಹಿತರ ಜೊತೆ ಸೇರಿ ಸ್ನೇಹಿತನ ಕೊಲೆ!
ಬೀರೇಶ್ ಕಾಮೆಂಟ್‍ನಿಂದ ಕೋಪಗೊಂಡಿದ್ದ ನಿತಿನ್ ಹೇಗಾದ್ರೂ ಇವನನ್ನು ಕೊಂದುಬಿಡಬೇಕು ಎಂದು ಸ್ಕೆಚ್ ಹಾಕುತ್ತಿದ್ದ. ಅಂತೆಯೇ ಜಗಳವಾಗಿ ಒಂದು ವಾರದ ನಂತರ ನಿನ್ನ ಜೊತೆ ಮಾತನಾಡಬೇಕು ಎಂದು ಕರೆಸಿಕೊಂಡಿದ್ದಾನೆ.


ಇದನ್ನೂ ಓದಿ: Ayub Khan Murder: ಚಾಕು ಇರಿತಕ್ಕೊಳಗಾಗಿದ್ದ ಮಾಜಿ ಕಾರ್ಪೊರೇಟರ್​ ಪತಿ ಆಯೂಬ್ ಖಾನ್ ಕೊನೆಯುಸಿರು!


ಬರುವಾಗ ನಿತಿನ್ ಜೊತೆಗೆ ತನ್ನ ಮತ್ತೊಬ್ಬ ಸ್ನೇಹಿತ ಮನು ಎಂಬುವವನನ್ನು ಕರೆದುಕೊಂಡು ಬಂದಿದ್ದ. ಆಗ ಒಂದೇ ಬೈಕ್‍ನಲ್ಲಿ ಮೂವರು ಕೂತುಕೊಂಡು ಹೋಗುವಾಗ ನಿತಿನ್ ಮಧ್ಯೆ ಕೂತಿದ್ದ ಬೀರೇಶ್‍ಗೆ ಚಾಕುವಿನಿಂದ ಚುಚ್ಚಿದ್ದಾನೆ. ಚಿಕಿತ್ಸೆಗಾಗಿ ಬೀರೇಶ್‍ನನ್ನು ಮೈಸೂರಿನ ಕೆ.ಆರ್ ಆಸ್ಪತ್ರೆಗೆ ದಾಖಲಿಸಿದ್ರೂ, ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದಾನೆ.


ಆರೋಪಿಗಳು ಎಸ್ಕೇಪ್, ಕೇಸ್ ದಾಖಲು
ಬೀರೇಶ್ ಸಾವನ್ನಪ್ಪುತ್ತಿದ್ದಂತೆ, ನಿತಿನ್ ಮತ್ತು ಮನು ಎಸ್ಕೇಪ್ ಆಗಿದ್ದಾರೆ. ಬೀರೇಶ್ ಪೋಷಕರು ಇಬ್ಬರು ಆರೋಪಿಗಳ ವಿರುದ್ಧ ಹುಣಸೂರು ನಗರ ಠಾಣೆ ಪೆÇಲೀಸ್ ಠಾಣೆಯಲ್ಲಿ ಕೇಸ್ ದಾಖಲಿಸಿದ್ದಾರೆ. ಪೊಲೀಸರು ಆರೋಪಿಗಳಿಗಾಗಿ ಹುಡುಕಾಟ ನಡೆಸಿದ್ದಾರೆ.


ಮೃತ ಬೀರೇಶನದ್ದು ತಪ್ಪಿತ್ತಾ?
ಬೀರೇಶ್ ಸಹ ಸುಮ್ಮನೆ ಇರಲಾರದೇ ತನ್ನ ಸ್ನೇಹಿತ ನಿತಿನ್ ಪತ್ನಿಯ ಹೆಸರಲ್ಲಿ ನಕಲಿ ಖಾತೆ ಸೃಷ್ಟಿಸಿ ಅಸಭ್ಯವಾದ ಪೋಸ್ಟ್​​ ಗಳನ್ನು ಹಾಕುತ್ತಿದ್ನಂತೆ. ಅದಕ್ಕೂ ನಿತಿನ್ ಕೋಪಗೊಂಡ ಕೊಲೆ ಮಾಡಿರಬಹುದು ಎಂದು ಪೊಲೀಸರು ತಿಳಿಸಿದ್ದಾರೆ.


ಇದನ್ನೂ ಓದಿ: Hubballi Crime News: ತಾಯಿಗೆ ಅವಾಚ್ಯ ಶಬ್ದಗಳಿಂದ ನಿಂದನೆ; ಮಗನಿಗೆ ಚಾಕುವಿನಿಂದ ಇರಿದ ಅಪ್ಪ


ಒಟ್ಟಲ್ಲಿ ಇವರಿಬ್ಬರ ಜಗಳದಿಂದತ ಗರ್ಭಿಣಿಯಾಗಿವರ ನಿತಿನ್ ಪತ್ನಿ ಕಣ್ಣೀರು ಹಾಕುತ್ತಿದ್ದಾಳೆ. ಪ್ರಪಂಚವನ್ನೇ ನೋಡದ ನನ್ನ ಮಗು ತಂದೆಯಿಲ್ಲದೇ ಅನಾಥವಾಯ್ತು ಎಂದು ಬೇಸರಗೊಂಡಿದ್ದಾರೆ.

Published by:Savitha Savitha
First published: