ಬೆಂಗಳೂರು(ಆ.16): ಸಾಕಷ್ಟು ವಿಳಂಬದ ನಂತರ ಈ ಹೆದ್ದಾರಿಯ ಅಗಲೀಕರಣವು ಮುಂದಿನ ವರ್ಷ ಪೂರ್ಣಗೊಳ್ಳುವ ನಿರೀಕ್ಷೆ ಇದ್ದು ತಗಲುವ ಅಂದಾಜು ವೆಚ್ಚ 7400 ಕೋಟಿ ರೂ. ಆಗಿದೆ. ಈಗಾಗಲೇ ವಿಳಂಬಗೊಂಡಿರುವ ಬೆಂಗಳೂರು-ಮೈಸೂರು ಹೆದ್ದಾರಿಯ ಅಗಲೀಕರಣವು ಮುಂದಿನ ವರ್ಷ ಪೂರ್ಣಗೊಳ್ಳುವ ನಿರೀಕ್ಷೆ ಇದೆ. ಕೇಂದ್ರ ಸಾರಿಗೆ ಸಚಿವರಾದ ನಿತಿನ್ ಗಡ್ಕರಿ ಹೇಳಿರುವಂತೆ ಮೈಸೂರು - ನಿಡಘಟ್ಟ (56.2 ಕಿಲೋಮೀಟರ್) ರಸ್ತೆ ಅಗಲೀಕರಣದ (47 ಕಿಲೋಮೀಟರ್) ಪ್ರಾಜೆಕ್ಟ್ 80.49 ಶೇಕಡಾ ಪೂರ್ಣಗೊಂಡಿದೆ ಎಂದು ತಿಳಿಸಿದ್ದಾರೆ.
ಯೋಜನೆಯ ಮೊದಲ ಪ್ಯಾಕೇಜ್ ಘೋಷಣೆಯಾದೊಡನೆಯೇ ಈ ಯೋಜನೆಯು ಕ್ಷಿಪ್ರಗತಿಯಲ್ಲಿ ಆರಂಭಗೊಂಡಿತು. 2ನೇ ಪ್ಯಾಕೇಜ್ ನಿಡಘಟ್ಟ-ಮೈಸೂರು ರಸ್ತೆ ಅಗಲೀಕರಣಕ್ಕೆ (61.1 ಕಿಲೋಮೀಟರ್ಗಳು) ಘೋಷಿಸಲಾಯಿತು. ರಸ್ತೆ ಅಗಲೀಕರಣದ ಕಾರ್ಯವು ಆಮೆಗತಿಯಲ್ಲಿ ಸಾಗಿದ್ದು ಒಟ್ಟು 29.78 ಕಿಲೋಮೀಟರ್ಗಳಷ್ಟು ಕಾರ್ಯ ಮಾತ್ರ ಪೂರ್ಣಗೊಂಡಿದೆ. ಇದರಿಂದ ರಸ್ತೆ ಅಗಲೀಕರಣ ಕಾಮಗಾರಿ ಅರ್ಧದಲ್ಲಿಯೇ ನಿಂತಿದೆ. ಈ ಯೋಜನೆಯ ಒಟ್ಟು 73.7% ಪೂರ್ಣಗೊಂಡಿದ್ದು, ಮುಂದಿನ ವರ್ಷ ಅಕ್ಟೋಬರ್ನಲ್ಲಿ ಯೋಜನೆ ಪೂರ್ಣಗೊಳ್ಳಲಿದೆ.
ಕೋವಿಡ್ ಕಾರಣ ಅರ್ಧಕ್ಕೆ ನಿಂತಿದ್ದ ಬೆಂಗಳೂರು-ಮೈಸೂರು ಹೆದ್ದಾರಿಯನ್ನು ಪುನಃ ಆರಂಭಿಸಲಾಗಿದೆ. ಹೆಚ್ಚಿನ ಸಂಖ್ಯೆಯ ಫ್ಲೈಓವರ್ಗಳು ಮುಕ್ತಾಯ ಹಂತಕ್ಕೆ ಬಂದಿದ್ದು ಕೆಂಗೇರಿ ಹಾಗೂ ಕುಂಬಳಗೋಡು ನಡುವೆಯೂ ಫ್ಲೈಓವರ್ ಬರಲಿದೆ. ಈ ಹಿಂದೆ ಈ ರಸ್ತೆಯು ಹೆಚ್ಚಿನ ತಿರುವುಗಳನ್ನು ಒಳಗೊಂಡಿತ್ತು. ಆದರೆ ಈಗ ರಸ್ತೆಯನ್ನು ನೇರಗೊಳಿಸಲಾಗಿದೆ. ಬಿಡದಿ, ರಾಮನಗರ-ಚನ್ನಪಟ್ಟಣ ಬೈಪಾಸ್ ಕೆಲಸಗಳನ್ನು ಪೂರ್ಣಗೊಳಿಸಲಾಗಿದೆ.
ಹೆದ್ದಾರಿಯು ಹೆಚ್ಚು ಸಂಖ್ಯೆಯ ನದಿಗಳನ್ನು ಒಳಗೊಂಡಿದ್ದು ದೊಡ್ಡ ಸೇತುವೆಗಳ ಕೆಲಸ ಇನ್ನೂ ಪ್ರಗತಿಯಲ್ಲಿದೆ. ಹೆಚ್ಚಿನ ಪ್ರಯಾಣಿಕರು ಕಚ್ಚಾ ರಸ್ತೆಗಳ ಕೆಲಸದ ಪೂರ್ಣಗೊಳ್ಳುವುದಕ್ಕಾಗಿ ಕಾಯುತ್ತಿದ್ದು ಸ್ಥಳೀಯ ಟ್ರಾಫಿಕ್ ಹೆದ್ದಾರಿಯ ಟ್ರಾಫಿಕ್ನೊಂದಿಗೆ ವಿಲೀನಗೊಳ್ಳಬಾರದು ಎಂದು ಬಯಸುತ್ತಿದ್ದಾರೆ. ಪ್ರಸ್ತುತ ಹೆದ್ದಾರಿ ಹಲವಾರು ನಗರಗಳನ್ನು ಹಾದು ಹೋಗುತ್ತಿದ್ದು ಹೆಚ್ಚಿನ ಟ್ರಾಫಿಕ್ನಿಂದಾಗಿ ಪ್ರಯಾಣ ಸಮಯವೂ ಅಧಿಕವಾಗುತ್ತಿದೆ.
ಈ ಯೋಜನೆಯು ಈ ಹಿಂದೆಯೇ ಪೂರ್ಣಗೊಳ್ಳಬೇಕಿತ್ತು. ಆದರೆ ಕೆಲವೊಂದು ಕಾರಣಗಳಿಗಾಗಿ ನೆನೆಗುದಿಯಲ್ಲಿದೆ. ಆರಂಭದಲ್ಲಿ ಭೂ ಸ್ವಾಧಿನ ಸಮಸ್ಯೆಗಳಿಂದಾಗಿ ರಸ್ತೆ ಕೆಲಸಗಳು ನಿಧಾನಗೊಂಡಿದ್ದವು. ನಂತರ ಫೌಂಡೇಶನ್ ಕೆಲಸವು ಹಲವಾರು ತಿಂಗಳುಗಳನ್ನು ತೆಗೆದುಕೊಂಡಿದ್ದು ಇದರಿಂದ ಮುಖ್ಯ ಕೆಲಸಗಳಿಗೆ ತೊಂದರೆಯುಂಟಾಗಿದೆ. ನಂತರದ ಸಮಯಗಳಲ್ಲಿ ಕ್ವಾರಿ ಸಮಸ್ಯೆ, ಕೋವಿಡ್ನಿಂದಾಗಿ ಯೋಜನೆಯ ಕೆಲಸಗಳು ನಿಧಾನಗೊಂಡಿದ್ದವು. ಈಗ ರಸ್ತೆಯ ಕೆಲಸಗಳು ಪುನಃ ಆರಂಭಗೊಂಡಿದ್ದು ಯಾವುದೇ ತೊಂದರೆ ಇಲ್ಲದೆ ಕಾಮಗಾರಿ ಪೂರ್ಣಗೊಳ್ಳಲಿದೆ ಎಂಬುದು ಅಧಿಕಾರಿಗಳ ಆಶಯವಾಗಿದೆ.
ಈ ಯೋಜನೆಯ ಮೂಲಕ ಪ್ರಸ್ತುತ ನಾಲ್ಕು-ಪಥ ಹೆದ್ದಾರಿಯನ್ನು ಆರು-ಪಥ ಹೆದ್ದಾರಿಯಾಗಿ ಅಗಲೀಕರಿಸಲಾಗಿದ್ದು ಎರಡೂ ಬದಿಗಳಲ್ಲಿ ಎರಡು-ಪಥಗಳನ್ನು ಸರ್ವೀಸ್ ರಸ್ತೆಯನ್ನಾಗಿ ಬಳಸಲಾಗುತ್ತದೆ. ಎನ್ಎಚ್ಎಐ ಪ್ರಕಾರ ಹೆದ್ದಾರಿಯು “ಪ್ರವೇಶ ನಿಯಂತ್ರಣ’ ರಸ್ತೆಯಾಗಿದ್ದು ಪ್ರಯಾಣಿಕರು ಯಾವುದೇ ತೊಂದರೆ ಇಲ್ಲದೆ ಪ್ರಯಾಣಿಸಬಹುದಾಗಿದೆ.
ಹೆದ್ದಾರಿಯು ಹಲವಾರು ನಗರಗಳನ್ನು ಹಾದುಹೋಗುವುದರಿಂದ ಹೆಚ್ಚಿನ ಸಂಖ್ಯೆಯ ಬೈಪಾಸ್ಗಳನ್ನು ನಿರ್ಮಿಸಲಾಗುತ್ತದೆ. ಬೈಪಾಸ್ಗಳ ವಿಧದಲ್ಲಿ ಬೆಂಗಳೂರು-ಮೈಸೂರು ವಿಭಾಗವು 51.75 ಕಿಲೋಮೀಟರ್ಗಳಷ್ಟು ಗ್ರೀನ್ಫೀಲ್ಡ್ ರಸ್ತೆಗಳನ್ನು ಒಳಗೊಳ್ಳಲಿದೆ.
ನ್ಯೂಸ್18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್ ಕೇಸ್ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್ ನಿಯಮಗಳಾದ ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರೂ ಕೈ ಜೋಡಿಸಬೇಕು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ