Anushka Sharma: ನಟಿಗೆ ಬಂತು ಅಭಿಮಾನಿಯಿಂದ ಕನ್ನಡದಲ್ಲೇ ಮದುವೆ ಕರೆಯೋಲೆ: ಶುಭ ಕೋರಿದ ಅನುಷ್ಕಾ ಶರ್ಮಾ!

Anushka Sharma: ಇದೇ ನವೆಂಬರ್ 24ರಂದು ಮೈಸೂರಿನ ನಯನಾ ಮತ್ತು ರುದ್ರೇಶ್​ ಮದುವೆ ನಡೆಯುತ್ತಿದೆ. ಈ ಮದುವೆಯ ಆಮಂತ್ರಣ ಪತ್ರವನ್ನು ಅನುಷ್ಕಾ ಶರ್ಮಾಗೆ ಕಳುಹಿಸಲಾಗಿತ್ತು. ಇದರ ಜತೆಗೆ ಸ್ವೀಟ್​ಗಳನ್ನು ಕೂಡ ನೀಡಲಾಗಿದ್ದು, ಇದರ ಜತೆಗೆ ಒಂದು ಪತ್ರ ಕೂಡ ಬರೆಯಲಾಗಿದೆ.

ಅನುಷ್ಕಾ ಶರ್ಮಾ ಪೋಸ್ಟ್​

ಅನುಷ್ಕಾ ಶರ್ಮಾ ಪೋಸ್ಟ್​

  • Share this:
ಸಿನಿಮಾ ತಾರೆ(Film Star)ಯರು ಅಂದರೆ ನಮ್ಮ ಜನಕ್ಕೆ ಅದೇನೋ ಪ್ರೀತಿ(Love) ಅವರನ್ನು ಕಂಡರೆ ಅದೇನೋ ಜೋಶ್​​(Josh). ನಟ-ನಟಿಯರುನ್ನು ಜನರು ನೋಡುವ ರೀತಿಯೇ ಬೇರೆ. ಅದು ಅಚ್ಚುಮೆಚ್ಚಿನ ನಟ-ನಟಿಯರಿಗೆ ತಮ್ಮ ಮನಸ್ಸಿನಲ್ಲಿ ವಿಶೇಷ ಸ್ಥಾನವನ್ನು ನೀಡಿರುತ್ತಾರೆ. ತಮ್ಮ ನೆಚ್ಚಿನ ಸೆಲೆಬ್ರಿಟಿಗಳ(Celebrity) ಜೊತೆ ಒಂದು ಫೋಟೋ(Photo) ತೆಗೆಸಿಕೊಳ್ಳಲು ಹರಸಹಾಸ ಪಡುತ್ತಾರೆ. ಒಂದು ಫೋಟೋ ಸಿಕ್ಕರೆ ಸಾಕು ಅದಕ್ಕೆ ಫ್ರೇಮ್(Frame)​ ಹಾಕಿ ಮನೆಯಲ್ಲಿ ಪ್ರದರ್ಶನಕ್ಕೆ ಇಡುತ್ತಾರೆ. ಇನ್ನೂ ಸಾಮಾಜಿಕ ಜಾಲತಾಣಗಳಲ್ಲಿ ಕೇಳಬೇಡಿ. ಪ್ರೊಫೈಲ್​ ಪಿಕ್(Profile Picture)ನಿಂದ ಕವರ್​ ಪಿಕ್(Cover Picture)​ವರೆಗೂ ತಮ್ಮ  ನೆಚ್ಚಿನ ನಟ-ನಟಯರ ಜೊತೆ ತೆಗೆಸಿಕೊಂಡ ಫೋಟೋವನ್ನೇ ಹಾಕಿಕೊಳ್ಳುತ್ತಾರೆ. ಮತ್ತೊಂದೆಡೆ ಕೆಲ. ಇನ್ನು ಕೆಲ ಸೆಲೆಬ್ರಿಟಿಗಳು ಅಭಿಮಾನಿಗಳು ಮಾಡುವ ಟ್ವೀಟ್​(Tweet)ಗೆ ಸೋಶಿಯಲ್​ ಮೀಡಿಯಾದಲ್ಲಿ ಪ್ರತಿಕ್ರಿಯಿಸಿದ ಉದಾಹರಣೆ ಸಾಕಷ್ಟಿದೆ. ಇದು ಕೂಡ ಅಭಿಮಾನಿಗಳ ಪಾಲಿಗೆ ವಿಶೇಷವೇ. ಮತ್ತೆ ಕೆಲ ಅಭಿಮಾನಿಗಳು ತಮ್ಮ ನೆಚ್ಚಿನ ನಟ, ನಟಿಯರು ತಮ್ಮ ಮದುವೆ(Marriage)ಗೆ ಬರಬೇಕೆಂಬ ಆಸೆಗಳು ಇರುತ್ತವೆ. ದೊಡ್ಡ ದೊಡ್ಡಸೆಲೆಬ್ರಿಟಿಗಳು ಕೂಡ ಅಭಿಮಾನಿಗಳ ಮದುವೆಗಳಿಗೆ ಹೋಗಿದ್ದಾರೆ. ಈಗ ಬಾಲಿವುಡ್​ ನಟಿ ಅನುಷ್ಕಾ ಶರ್ಮಾ(Anushka Sharma)ಗೆ ಕರ್ನಾಟ(Karnataka)ಕ ಮೈಸೂರು(Mysore) ಮೂಲದವರು ಮದುವೆ ಬರುವಂತೆ ಆಮಂತ್ರಣ ನೀಡಿದ್ದಾರೆ. 

ಕನ್ನಡದಲ್ಲೇ ಅನುಷ್ಕಾ ಶರ್ಮಾರವರಿಗೆ ಮದುವೆ ಕರೆಯೋಲೆ!

ಇದೇ ನವೆಂಬರ್ 24ರಂದು ಮೈಸೂರಿನ ನಯನಾ ಮತ್ತು ರುದ್ರೇಶ್​ ಮದುವೆ ನಡೆಯುತ್ತಿದೆ. ಈ ಮದುವೆಯ ಆಮಂತ್ರಣ ಪತ್ರವನ್ನು ಅನುಷ್ಕಾ ಶರ್ಮಾಗೆ ಕಳುಹಿಸಲಾಗಿತ್ತು. ಇದರ ಜತೆಗೆ ಸ್ವೀಟ್​ಗಳನ್ನು ಕೂಡ ನೀಡಲಾಗಿದ್ದು, ಇದರ ಜತೆಗೆ ಒಂದು ಪತ್ರ ಕೂಡ ಬರೆಯಲಾಗಿದೆ. ಈ ಫೋಟೋವನ್ನು ಅನುಷ್ಕಾ ಶರ್ಮಾ ಇನ್​ಸ್ಟಾಗ್ರಾಮ್​ ಸ್ಟೇಟಸ್​ನಲ್ಲಿ ಹಂಚಿಕೊಂಡಿದ್ದಾರೆ.

ಧನ್ಯವಾದ ಅರ್ಪಿಸಿದ ಅಪ್ಸರೆ ಅನುಷ್ಕಾ ಶರ್ಮಾ

‘ಇದೊಂದು ಅತಿ ಮಧುರವಾದ ಮದುವೆ ಆಮಂತ್ರಣ. ಧನ್ಯವಾದಗಳು ನಯನಾ. ನೀನು ಅತ್ಯಂತ ಸುಂದರ ವಧುವಾಗುತ್ತೀಯಾ’ ಎಂದು ಅನುಷ್ಕಾ ಶರ್ಮಾ ಬರೆದುಕೊಂಡಿದ್ದಾರೆ. ಇದನ್ನು ನೋಡಿದ ಕರ್ನಾಟಕದ ಅಭಿಮಾನಿಗಳು ಖುಷಿಯಾಗಿದ್ದಾರೆ. ಈ ವಿಚಾರ ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಖತ್​ ವೈರಲ್​ ಆಗುತ್ತಿದೆ. ಒಬ್ಬ ದೊಡ್ಡ ನಟಿ ತಮ್ಮ ಅಭಿಮಾನಿಗಳಿಗೆ ಪ್ರತಿಕ್ರಿಯೆ ನೀಡಿರುವುದು ಬಹಳ ಸಂತಸ ತಂದಿದೆ ಅಂತ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಇದನ್ನು ಓದಿ : ಅನುಷ್ಕಾ ಶರ್ಮಾ ತೊಟ್ಟ ಸ್ವಿಮ್​ಸೂಟ್ ಬೆಲೆಗೆ ಬೆಂಗಳೂರಲ್ಲಿ ಆರಾಮಾಗಿ ಒಂದು ಮನೆ ಬಾಡಿಗೆಗೆ ಸಿಗುತ್ತದೆ, ಬೆಲೆ ಎಷ್ಟು ಹೇಳಿ...ಸ್ವಿಮ್​​​​ ಸೂಟ್​ ತೊಟ್ಟು ಸುದ್ದಿಯಾಗಿದ್ದ ನಟಿ

ಕೆಲ ದಿನಗಳ ಹಿಂದೆಯಷ್ಟೇ ಅನುಷ್ಕಾ ಶರ್ಮಾ ಭಾರಿ ಸುದ್ದಿಯಾಗಿದ್ದರು.  ನಟನೆಯಿಂದ ದೂರು ಉಳಿದು, ತಾಯಿಯ ಜವಬ್ದಾರಿ ಹೊತ್ತು ಮಗುವಿನ ಆರೈಕೆ ಮಾಡುತ್ತ ಸಂತಸದಲ್ಲಿ ಕಾಲ ಕಳೆಯುತ್ತಿರುವ ಟೀಂ ಹಸಿರು ಈಜುಡುಗೆ ಸಕತ್‌ ಹಾಟ್‌ ಲುಕ್‌ನಲ್ಲಿ ಮಿಂಚಿದ್ದರು. ಹೊಸ ಲುಕ್‌ ನೊಂದಿಗೆ ಈಜುಡುಗೆಯಲ್ಲಿ ಕಂಗೊಳಿಸುತ್ತಿರುವ ನಟಿ ಅನುಷ್ಕಾ ಶರ್ಮಾ ತಮ್ಮ ಇನ್ಸ್ಟಾಗ್ರಾಮ್‌ ನಲ್ಲಿ ಸುಂದರ ಕ್ಷಣಗಳನ್ನು ಶೇರ್‌ ಮಾಡಿದ್ದಾರೆ. ಇದರಲ್ಲಿ ಅನುಷ್ಕಾ ನಿಯಾನ್ ಹಸಿರು ಈಜುಡುಗೆ ಧರಿಸಿದ್ದು, ಅದರ ಮೌಲ್ಯ ₹8 ಸಾವಿರ ಎಂದು ಹೇಳಲಾಗಿತ್ತು.

ಇದನ್ನು ಓದಿ : ಮಲೈಕಾ ಅರೋರಾರ ಕಾಂತಿಯುಕ್ತ ತ್ವಚೆಯ ರಹಸ್ಯ ಇದಂತೆ..!

ಅನುಷ್ಕಾ ವಿರುದ್ದ ನೆಟ್ಟಿಗರು ವಾಗ್ದಾಳಿ

ಈ ಬಾರಿ ಕಳೆದ ಅಕ್ಟೋಬರ್‌ 24ರಂದು ಕರ್ವಾಚೌತ್‌ ಹಬ್ಬದ ದಿನದಂದೇ ಇಂಡಿಯಾ ಪಾಕಿಸ್ತಾನ ನಡುವೆ ಮ್ಯಾಚ್‌ ಇತ್ತು. ಇದರಲ್ಲಿ ಭಾರತ ಸೋಲು ಕಂಡಿತ್ತು. ಕರ್ವಾ ಚೌತ್ ಉಪವಾಸ ಮಾಡದ ಅನುಷ್ಕಾರನ್ನು ದೂಷಿಸಿದ್ದಾರೆ ಮತ್ತು ಇದು ಭಾರತವು ವಿಶ್ವಕಪ್‌ನಲ್ಲಿ ಪಾಕಿಸ್ತಾನದ ವಿರುದ್ಧ ಸೋಲಲು ಕಾರಣವಾಯಿತು ಎಂದು ನಟಿಯ ಮೇಲೆ ನೆಟ್ಟಿಗರು ವಾಗ್ದಾಳಿ ನೆಡೆಸಿದ್ದರು. ಆದರೆ ವಿರಾಟ್ ಆ ಸಮಯದಲ್ಲಿ ಅನುಷ್ಕಾ ಶರ್ಮಾ ಅವರ ಬೆಂಬಲಕ್ಕೆ ನಿಂತು ಟ್ರೋಲ್ ಮಾಡುತ್ತಿರುವ ಜನರಿಗೆ ನಾಚಿಕೆಯಾಗಬೇಕು. ಸ್ವಲ್ಪ ಕರುಣೆ ಇರಲಿ. ಅವಳು ಯಾವಾಗಲೂ ನನಗೆ ಪಾಸಿಟಿವಿಟಿ ಎಂದು ಹೇಳಿದ್ದರು.
Published by:Vasudeva M
First published: