HOME » NEWS » State » MYSORE ACP MURDER SKETCH BEHIND CHANNAPATNA ROBBERY CASE SESR

ಮೈಸೂರು ಎಸಿಪಿ ತಂಗಿ ಮನೆ ದರೋಡೆ ಪ್ರಕರಣದ ಹಿಂದಿತ್ತು ಕೊಲೆಯ ಸಂಚು: ತನಿಖೆಯಲ್ಲಿ ಬಯಲು

ಮದ್ದೂರು ತಾಲೂಕು ಬಿಜೆಪಿ ಅಧ್ಯಕ್ಷ ಹಾಗೂ ರೌಡಿಶೀಟರ್ ಲಕ್ಷ್ಮಣನ ಕೊಲೆಗೆ ಕೆಲತಿಂಗಳ ಹಿಂದೆ ಸ್ಕೆಚ್​ ಹಾಕಲಾಗಿತ್ತು. ಲಕ್ಷ್ಮಣನ ಕೊಲೆಗೆ ಧ್ರುವ ಫೈನಾನ್ಸ್ ಮಾಡಿದ್ದ, ಹಾಗಾಗಿ ಲಕ್ಷ್ಮಣನ ಸಹಚರರು ಧ್ರುವನಿಗೆ ರಮೇಶ್ ಅಲಿಯಾಸ್ ಜಾಕಿ ಮೂಲಕ ಸ್ಕೆಚ್ ಹಾಕಿದ್ದಾರೆ ಎಂಬ ಮಾಹಿತಿ ಪೊಲೀಸ್ ಮೂಲಗಳಿಂದ ತಿಳಿದುಬಂದಿದೆ.

news18-kannada
Updated:March 13, 2020, 2:04 PM IST
ಮೈಸೂರು ಎಸಿಪಿ ತಂಗಿ ಮನೆ ದರೋಡೆ ಪ್ರಕರಣದ ಹಿಂದಿತ್ತು ಕೊಲೆಯ ಸಂಚು: ತನಿಖೆಯಲ್ಲಿ ಬಯಲು
ಸಾಂರ್ಭಿಕ ಚಿತ್ರ
  • Share this:
ಚನ್ನಪಟ್ಟಣ (ಮಾ.13): ಇಲ್ಲಿನ ನಗರದ ಕೆಎಚ್​ಬಿ ಬಡಾವಣೆಯಲ್ಲಿನ ಮೈಸೂರು ಎಸಿಪಿ ತಂಗಿ ಮನೆಯಲ್ಲಿ ನಡೆದ ದರೋಡೆ ಪ್ರಕರಣದ ಹಿಂದೆ ಕಳ್ಳತನದ ಬದಲು ಕೊಲೆಯ ಸಂಚಿತ್ತು ಎಂಬ ಹೊಸ ಸಂಗತಿಯೊಂದು ಬಯಲಾಗಿದೆ. 

ಕಳೆದ ವಾರ ಇಲ್ಲಿನ ಕೆಎಚ್​ಬಿ ಬಡಾವಣೆಯಲ್ಲಿರುವ ಶಿಕ್ಷಕ ಉತ್ತೇಶ್​ ಮನೆಗೆ ನಾಲ್ವರು ದರೋಡೆಕೋರರು ನುಗ್ಗಿ ಮನೆಯಲ್ಲಿದ್ದ ಚಿನ್ನಾಭರಣ ದೋಚಿದ್ದರು. ಮಧ್ಯಾಹ್ನದ ವೇಳೆ ಮನೆಗೆ ನುಗ್ಗಿದ ದರೋಡೆಕೋರರ ಗುಂಪು, ಮನೆಯಲ್ಲಿದ್ದ ಅಮ್ಮ-ಮಗಳಿಗೆ ಲಾಂಗ್​ ತೋರಿಸಿ ಬೆದರಿಸಿ 10 ಸಾವಿರ ನಗದು ಹಾಗೂ 60 ಗ್ರಾಂ ಚಿನ್ನ ದೋಚಿ ಪರಾರಿಯಾಗಿತ್ತು.

ಈ ಪ್ರಕರಣದ ಬೆನ್ನತ್ತಿದ್ದ ಡಿವೈಎಸ್​ಪಿ ತಂಡ ಆರೋಪಿಗಳ ಪತ್ತೆಗೆ ತನಿಖೆ ಆರಂಭಿಸಿತು. ಡಿವೈಎಸ್​ಪಿ ಓಂ ಪ್ರಕಾಶ್​ ನೇತೃತ್ವದಲ್ಲಿ ತನಿಖೆ ನಡೆಸಿದ ತಂಡ ಈ ಪ್ರಕರಣದ ಪ್ರಮುಖ ಆರೋಪಿಯನ್ನು ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.

ಪ್ರಕರಣದ ಮುಖ್ಯ ಆರೋಪಿ ರಮೇಶ್ ಅಲಿಯಾಸ್ ಜಾಕಿ ಪ್ರಕರಣದ ಪ್ರಮುಖ ಆರೋಪಿಯಾಗಿದ್ದು ಈತನನ್ನು ಘಟನಾ ಸ್ಥಳಕ್ಕೆ ಕರೆದೊಯ್ದಾಗ ಪರಾರಿಯಾಗುವ ಯತ್ನ ನಡೆಸಿದ್ದ. ಈ ವೇಳೆ  ತಪ್ಪಿಸಿಕೊಳ್ಳಲು ಮುಂದಾದ ಹಿನ್ನೆಲೆ  ಜಾಕಿ ಕಾಲಿಗೆ ಪೊಲೀಸರು ಗುಂಡು ಹಾರಿಸಿದ್ದರು.

ಕೊಲೆ ಸಂಚು​ ಬಾಯ್ಬಿಟ್ಟ ಆರೋಪಿ:

ಉತ್ತೇಶ್​ ಮನೆಗೆ ದರೋಡೆಗೆ ನುಗ್ಗಿದ ಆರೋಪಿ ಜಾಕಿ​ ತಂಡ, ಮನೆಯಲ್ಲಿದ್ದ ಸುವರ್ಣಗೆ ಲಾಂಗ್​ ತೋರಿಸಿ ಬೆದರಿಸಿದ್ದಾರೆ. ಈ ವೇಳೆ ನಾವು ಯಾರನ್ನೋ ಕೊಲೆ ಮಾಡಲು ಬಂದಿದ್ದೆವು. ಅದು ಆಗಲಿಲ್ಲ, ಈ ಹಿನ್ನೆಲೆ ದರೋಡೆ ನಡೆಸಿದ್ದೇವೆ ಎಂದು ಮನೆ ಮಾಲೀಕಿ ಸುವರ್ಣಗೆ ಹೇಳಿದ್ದರು. ಈ ವಿಷಯವನ್ನು ಮಹಿಳೆ ಪೊಲೀಸರ ಮುಂದೆ ಬಾಯ್ಬಿಟ್ಟಿದ್ದರು.

ರೌಡಿ ಶೀಟರ್​ ಕೊಲೆಗೆ ಸಂಚು:​ಚನ್ನಪಟ್ಟಣದ ರೌಡಿಶೀಟರ್ ಎಲೆಕೇರಿ ಧ್ರುವಕುಮಾರ್ ಅಲಿಯಾಸ್ ಡಿಚ್ಚಿ ಧ್ರುವನನ್ನ ಕೊಲೆ ಮಾಡಲು ರಮೇಶ್ ಅಲಿಯಾಸ್ ಜಾಕಿ ಗ್ಯಾಂಗ್ ಬಂದಿತ್ತು. ಮದ್ದೂರು ತಾಲೂಕು ಬಿಜೆಪಿ ಅಧ್ಯಕ್ಷ ಹಾಗೂ ರೌಡಿಶೀಟರ್ ಲಕ್ಷ್ಮಣನ  ಕೊಲೆ  ಸುಫಾರಿಗೆ ಧ್ರುವ ಫೈನಾನ್ಸ್ ಮಾಡಿದ್ದ, ಹಾಗಾಗಿ ಲಕ್ಷ್ಮಣನ ಸಹಚರರುರೌಡಿ ಶೀಟರ್​​​ ಜಾಕಿ ಮೂಲಕ ಧ್ರವಕುಮಾರ್​ ಕೊಲೆಗೆ ಸ್ಕೆಚ್ ಹಾಕಿದ್ದರು ಮಾಹಿತಿ ಪೊಲೀಸ್ ಮೂಲಗಳಿಂದ ತಿಳಿದು ಬಂದಿದೆ.

ಇದನ್ನು ಓದಿ: ರಾಮನಗರದ ಜಾನಪದ ಲೋಕದ ಬಳಿ ನಿಖಿಲ್ ಮದುವೆ ಫಿಕ್ಸ್ - ಎಚ್​ಡಿಕೆ ಅಭಿಮಾನಿಯಿಂದ ವಿಶೇಷ ಕೋರಿಕೆ

ಜಾಕಿ ಮೇಲೆ ಬೆಂಗಳೂರು ನಗರ, ಶಿವಮೊಗ್ಗ, ಬಂಟ್ವಾಳ ಸೇರಿದಂತೆ ಹಲವು ಕಡೆಗಳಲ್ಲಿ ಕೊಲೆ, ಸುಲಿಗೆ ಮತ್ತಿತರ 15 ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿವೆ. ಬೆಂಗಳೂರಿನ ಹಲವು ಠಾಣೆಗಳಲ್ಲಿ ಈತನ ವಿರುದ್ದ ದೂರುಗಳಿವೆ. ಈತ ಮೂಲತಃ ಹಾಸನ ಜಿಲ್ಲೆಯ ಚನ್ನರಾಯಪಟ್ಟದವನು ಎಂದು ತಿಳಿದುಬಂದಿದೆ. ಈಗಷ್ಟೇ ಜೈಲಿಂದ ಬಿಡುಗಡೆಯಾಗಿದ್ದ ಇವನು ದರೋಡೆ ಪ್ರಕರಣದಲ್ಲಿ ಸಿಕ್ಕಿಬಿದ್ದಿದ್ದು, ಹೈದ್ರಾಬಾದ್ ನಲ್ಲಿ ಈತನನ್ನ ಬಂಧಿಸಲಾಗಿತ್ತು.

(ವರದಿ: ಎಟಿ ವೆಂಕಟೇಶ್​​)
First published: March 13, 2020, 1:01 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading