ಮೈಸೂರು: ಆತ ಕುಡಿದ ಮತ್ತಿನಲ್ಲಿ (Drunken State) ಪಕ್ಕದ ಮನೆಯವರೊಟ್ಟಿಗೆ ಜಗಳವಾಡ್ತಾ ಇದ್ದ. ಗಲಾಟೆ ಮಾಡಿದ್ದಕ್ಕೆ ಆ ಮನೆಯವ್ರೇ ಪೊಲೀಸರಿಗೆ (Police) ಕರೆ ಮಾಡಿ ವಿಚಾರ ಮುಟ್ಟಿಸಿದ್ದರು. ಸ್ಥಳಕ್ಕೆ ಬಂದ ಪೊಲೀಸ್ರು ಗಲಾಟೆ ಮಾಡ್ತಿದ್ದ ವ್ಯಕ್ತಿಯನ್ನ ಠಾಣೆಗೆ ಕರೆದೊಯ್ದರು. ಆದ್ರೆ ಪೊಲೀಸ್ ಠಾಣೆಗೆ ಹೋದ ಆ ವ್ಯಕ್ತಿ ಬಂದಿದ್ದು ಮಾತ್ರ ಹೆಣವಾಗಿ. ಅಷ್ಟಕ್ಕೂ ಅಲ್ಲಿ ಆಗಿದ್ದಾದ್ರೂ ಏನು ಠಾಣೆಗೆ (Police Station) ಹೋದವನು ಸಾವನ್ನಪ್ಪಿದ್ದು ಹೇಗೆ ಅಂತಿರಾ . ಹಾಗಿದ್ರೆ ಇಲ್ಲಿದೆ ನೋಡಿ ಕಂಪ್ಲೀಟ್ ಡಿಟೇಲ್ಸ್. ಮೃತ ಸಿದ್ದರಾಜು ಮೈಸೂರು ಜಿಲ್ಲೆ ನಂಜನಗೂಡು (Nanjangud) ತಾಲೂಕಿನ ಬ್ಯಾಳಾರು ಹುಂಡಿ ಗ್ರಾಮದ ನಿವಾಸಿ. ಮೂರು ದಿನಗಳ ಹಿಂದೆ ಗ್ರಾಮದ ಮಣಿ ಎಂಬಾಕೆ ಜೊತೆ ಈ ಸಿದ್ದರಾಜು ಜಗಳವಾಡ್ತಿದ್ದನಂತೆ ಈ ಕಾರಣಕ್ಕಾಗಿ ಕುಪಿತಗೊಂಡ ಮಣಿ ಪಕ್ಕದ ಗ್ರಾಮದ ತನ್ನ ಸಂಬಂಧಿಕರನ್ನು ಕರೆಸಿ ಸಿದ್ದರಾಜು ಮೇಲೆ ಹಲ್ಲೆ ಮಾಡಿಸಿದ್ದಾರೆ ಎನ್ನಲಾಗಿದೆ.
ಠಾಣೆಯಲ್ಲೇ ಅಸ್ವಸ್ಥ
ಗಲಾಟೆ ವಿಚಾರವನ್ನು ಗ್ರಾಮಸ್ಥರೇ ಪೊಲೀಸ್ ಠಾಣೆಗೆ ಮುಟ್ಟಿಸಿದ್ದಾರೆ. ಸ್ಥಳಕ್ಕೆ ಬಂದ ನಂಜನಗೂಡು ಗ್ರಾಮಾಂತರ ಠಾಣಾ ಪೊಲೀಸರು ಗಲಾಟೆಗೆ ಕಾರಣನಾಗಿದ್ದ ಸಿದ್ದರಾಜುವನ್ನ ಪೊಲೀಸ್ ಠಾಣೆಗೆ ಕರೆದೊಯ್ದಿದ್ದಾರೆ. ಮೊದಲೇ ಹಲ್ಲೆಗೆ ಒಳಗಾಗಿದ್ದ ಸಿದ್ದರಾಜು ಒಂದು ರಾತ್ರಿ ಠಾಣೆಯಲ್ಲಿಯೇ ಕಾಲ ಕಳೆದಿದ್ದಾನೆ. ಬೆಳಿಗ್ಗೆ ಅಸ್ವಸ್ಥನಾಗಿ ಕಂಡು ಬಂದ ಸಿದ್ದರಾಜುವನ್ನ ನಂಜನಗೂಡು ಪಟ್ಟಣದ ಸರ್ಕಾರಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲು ಮಾಡಲು ಮುಂದಾದಾಗ ಕೊನೆಯುಸಿರೆಳೆದಿದ್ದಾನೆ.
ನೀರು ಎರಚಿದ್ದನ್ನು ಪ್ರಶ್ನಿಸಿದ್ದಕ್ಕೆ ಗಂಭೀರ ಹಲ್ಲೆ
ಇನ್ನೂ ಈ ಸಾವಿನ ಕಹಾನಿಯೇ ಕೊಂಚ ರೋಚಕವಾಗಿದೆ, ಬೈಕ್ ನಲ್ಲಿ ಸಿದ್ದರಾಜು ತನ್ನ ತಾಯಿಯ ಜೊತೆಗೆ ತೆರಳುತ್ತಿದ್ದ ವೇಳೆ ಈ ಮಣಿ ಎನ್ನುವಾಕೆ ನೀರು ಎರಚಿದ್ಲು ಅನ್ನೋ ವಿಚಾರದಲ್ಲಿ ಆರಂಭವಾಗಿರೋ ಗಲಾಟೆ ಇದು. ನೀರು ಎರಚಿರೋದನ್ನ ಪ್ರಶ್ನೆ ಮಾಡಿದ್ದ ಸಿದ್ದರಾಜು. ಇದಾದ ಕೆಲ ಸಮಯದ ಬಳಿಕ ಪಕ್ಕದ ಗ್ರಾಮದಲ್ಲೇ ಇದ್ದ ಮಣಿ ಸಂಬಂಧಿಕರು ಬ್ಯಾಳಾರುಹುಂಡಿ ಗ್ರಾಮಕ್ಕೆ ಆಗಮಿಸಿದ್ದಾರೆ. ನೀರು ಎರಚಿದ್ದನ್ನ ಪ್ರಶ್ನೆ ಮಾಡಿ ಪಾನಮತ್ತನಾಗಿದ್ದ ಸಿದ್ದರಾಜು ಮೇಲೆ ಮನಬಂದಂತೆ ಹಲ್ಲೆ ಮಾಡಿದ ಮಣಿ ಸಂಬಂಧಿಕರು ಬಳಿಕ ಪೊಲೀಸರಿಗೆ ವಿಚಾರ ಮುಟ್ಟಿಸಿದ್ದಾರೆ ಎನ್ನಲಾಗ್ತಿದೆ.
ಇದನ್ನೂ ಓದಿ: Hassan:ಪ್ರೀತಿಸಿ ಮದುವೆಯಾಗಿ 9 ವರ್ಷ ಸಂಸಾರ: ಎದೆಯತ್ತರದ ಮಗನಿದ್ರೂ ಸುಳ್ಳು ಹೇಳಿ ನಿಶ್ಚಿತಾರ್ಥ ಮಾಡ್ಕೊಂಡ!
ಪೊಲೀಸ್ ಠಾಣೆಗೆ ಕರೆತಂದ ಪೊಲೀಸರು ಕೂಡ ಸಿದ್ದರಾಜು ಮೇಲೆ ಹಲ್ಲೆ ಮಾಡಿದ್ದಾರೋ ಇಲ್ಲವೋ ಅನ್ನೋದು ಯಾರಿಗೂ ತಿಳಿದಿಲ್ಲ. ಆದ್ರೆ ಪೊಲೀಸ್ ವಶದಲ್ಲಿದ್ದ ಆರೋಪಿ ಸಿದ್ದರಾಜು ಲಾಕಪ್ ನಲ್ಲಿಯೇ ಸಾವನ್ನಪ್ಪಿದ್ದು ಹಲವು ಅನುಮಾನಗಳನ್ನ ಹುಟ್ಟಿಸಿವೆ. ಹೀಗಾಗಿ ಸಿದ್ದರಾಜು ಸಂಬಂಧಿಕರು ಹಾಗೂ ಕೆಲ ಹೋರಾಟಗಾರರು ಸಿದ್ದರಾಜು ಸಾವಿನ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದಾರೆ. ಘಟನೆ ಬಗ್ಗೆ ಸೂಕ್ತ ತನಿಖೆ ನಡೆಸಬೇಕು ಅಂತಾ ಒತ್ತಾಯವನ್ನೂ ಮಾಡಿದ್ದಾರೆ. ಒಟ್ಟಿನಲ್ಲಿ ನೀರು ಎರಚಿದ ಕ್ಷುಲ್ಲಕ ವಿಚಾರ ಒರ್ವನ ಸಾವಿನಲ್ಲಿ ಅಂತ್ಯವಾಗಿದೆ. ಘಟನೆ ಬಗ್ಗೆ ಸೂಕ್ತ ತನಿಖೆಯಾದಾಗ ಮಾತ್ರವೇ ಮೃತ ಸಿದ್ದರಾಜು ಸಾವಿಗೆ ನಿಖರ ಕಾರಣ ತಿಳಿಯಲಿದೆ.
ಸಾಂಸ್ಕೃತಿಕ ನಗರಿ ಮೈಸೂರಿನ ಶ್ರೀರಾಂಪುರದಲ್ಲಿ ಜಯಮ್ಮ ಎಂಬ ವೃದ್ದೆ ಇತ್ತೀಚಿಗೆ ವಯೋಸಹಜ ಅನಾರೋಗ್ಯದ ಕಾರಣದಿಂದ ಮೃತಪಟ್ಟಿದ್ದರು.. ಜಯಮ್ಮ ಅವರ ಶವ ಸಂಸ್ಕಾರ ಮುಗಿಯುವ ಮೊದಲೇ, ಸಂಬಂಧಿಗಳು ಆಸ್ತಿಯ ಆಸೆಗಾಗಿ, ಜಯಮ್ಮ ಶವದ ಹೆಬ್ಬೆರಳಿನ ಮುದ್ರೆಯನ್ನು ಖಾಲಿ ಕಾಗದ ಪತ್ರಗಳಿಗೆ ಒತ್ತಿಸಿಕೊಂಡಿರುವ ಅಮಾನುಷ ವಿಡಿಯೋ ಎಲ್ಲಾ ಕಡೆ ವೈರಲ್ ಆಗುತ್ತಿದ್ದು, ಸಂಬಂಧಿಕರ ಆಸ್ತಿ ಆಸೆಯ ಬಗ್ಗೆ ಆಕ್ರೋಶ ವ್ಯಕ್ತವಾಗುತ್ತಿದೆ.ಕಳೆದ ನವೆಂಬರ್ 17ರಂದು ಅನಾರೋಗ್ಯದಿಂದ ವೃದ್ಧರಾದ ಜಯಮ್ಮ ಅವರಿಗೆ ಮಕ್ಕಳಿರಲಿಲ್ಲ.. ಹಳ ಇಂದೇಯೆ ಜಯಮ್ಮ ಅವರ ಪತಿ ಮೃತಪಟ್ಟಿದ್ದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ