Mysore Dasara 2021: ಈ ಬಾರಿ ಕೂಡ ಅಭಿಮನ್ಯು ಹೆಗಲಿಗೆ ಅಂಬಾರಿ ಹೊರುವ ಜವಾಬ್ದಾರಿ

ಈ ಬಾರಿಯೂ ಅಭಿಮನ್ಯುವೇ ದಸರಾದ ಚಿನ್ನದ ಅಂಬಾರಿ ಹೊರಲಿದ್ದಾನೆ. ಅಭಿಮನ್ಯು ನೇತೃತ್ವದಲ್ಲಿ ಉಳಿದ 7 ಆನೆಗಳು ಜಂಬೂಸವಾರಿಯಲ್ಲಿ ಭಾಗಿಯಾಗಲಿವೆ. 

ಅಂಬಾರಿ ಚಿತ್ರ

ಅಂಬಾರಿ ಚಿತ್ರ

  • Share this:
    ಮೈಸೂರು (ಸೆ. 8): ಕೋವಿಡ್ ಸೋಂಕು ಕಡಿಮೆಯಾಗಿದ್ದರೂ ಆತಂಕ ಇನ್ನು ಕಡಿಮೆಯಾಗಿಲ್ಲ. ಇದೇ ಹಿನ್ನಲೆ ಈ ಬಾರಿ ಕೂಡ ಸರಳ ದಸರಾ ಆಚರಣೆಗೆ (Mysore Dasara) ಸರ್ಕಾರ ಮುಂದಾಗಿದೆ. ವಿಶ್ವ ವಿಖ್ಯಾತ ದಸರಾ ಆಚರಣೆ ಯಾವ ರೀತಿ ಮಾಡಬೇಕು ಕುರಿತು ಇಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್​ಟಿ ಸೋಮಶೇಖರ್​ (Mysore district in charge minister ST somashekar) ನೇತೃತ್ವದಲ್ಲಿ ಕಾರ್ಯಕಾರಿ ಸಮಿತಿ ಸಭೆ ನಡೆಸಲಾಯಿತು. ಸಭೆಯಲ್ಲಿ ಜಂಬೂ ಸವಾರಿ, ಸಾಂಸ್ಕೃತಿ ಕಾರ್ಯಕ್ರಮ, ದೀಪಾಲಂಕಾರ, ಅರಮನೆ ಮೆರವಣಿಗೆ ಉತ್ಸವ, ಸ್ಥಬ್ಧ ಚಿತ್ರಗಳ ಪ್ರದರ್ಶನ ಸೇರಿದಂತೆ ಅನೇಕ ವಿಷಯಗಳ ಕುರಿತು ಚರ್ಚೆ ನಡೆಸಲಾಯಿತು. ಸಭೆ ಬಳಿಕ ಈ ಕುರಿತು ಮಾತನಾಡಿದ ಸಚಿವರು, ಸೆಪ್ಟೆಂಬರ್​ 13ರಂದು ಹುಣಸೂರಿನ ವೀರ ಹೊಸಹಳ್ಳಿಯಿಂದ ಗಜಪಯಣ ಆರಂಭವಾಗಲಿದ್ದು, ಸೆ. 16ರಂದು ಗಜ ಪಡೆ ಅಂಬಾ ವಿಮಾಸ ಅರಮನೆ ಸೇರಲಿದೆ. ಗಜಪಡೆ ನಿರ್ವಹಣೆಗೆ 50 ಲಕ್ಷ ರೂಪಾಯಿ ಆನೆಗಳ ಪೋಷಣೆಗೆ ಮೀಸಲು ಇಡಲಾಗಿದೆ ಎಂದರು.

    ಇನ್ನು ಈ ಬಾರಿ ಕೂಡ ಜಂಬೂ ಸವಾರಿ ಕೇವಲ ಅರಮನೆಗೆ ಮಾತ್ರ ಸೀಮಿತವಾಗಿದೆ. ಅಭಿಮನ್ಯ ನಾಯಕತ್ವದಲ್ಲಿ 8 ಆನೆಗಳು ಅರಮನೆ ಮೈದಾನ ಸೇರಲಿದೆ. ಡಿಸಿಎಫ್​ ಕರಿಕಾಳನ್​ ಆನೆ ಶಿಬಿರಕ್ಕೆ ತೆರಳಿ 16 ಆನೆಗಳ ಆರೋಗ್ಯ ಸ್ಥಿತಿ ಪರೀಕ್ಷಿಸಲಿದ್ದಾರೆ. ಇದರಲ್ಲಿ 8 ಆನೆಗಳ ಪಟ್ಟಿಯನ್ನು ಸಿದ್ದ ಪಡಿಸಿದ್ದು, ಅದನ್ನು ಬೆಂಗಳೂರಿನ ಪಿಸಿಸಿಎಫ್​ ಕಚೇರಿಗೆ ಕಳುಹಿಸಿದ್ದಾರೆ.

    ಈ ಬಾರಿ 8 ಆನೆಗೆ ಅವಕಾಶ

    ಕಳೆದ ವರ್ಷ ಕೇವಲ ಮೂರು ಗಂಡು ಮತ್ತು ಎರಡು ಹೆಣ್ಣು ಆನೆಗಳು ದಸರಾ ಆಚರಣೆಯಲ್ಲಿ ಭಾಗವಹಿಸಿದ್ದವು. ಈ ಬಾರಿ ಹೆಚ್ಚುವರಿಯಾಗಿ ಎರಡು ಗಂಡು ಮತ್ತು ಒಂದು ಹೆಣ್ಣು ಆನೆಯನ್ನು ಆ ಪಟ್ಟಿಗೆ ಸೇರಿಸಲಾಗಿದೆ. ಒಟ್ಟು 5 ಗಂಡು ಮತ್ತು 3 ಹೆಣ್ಣು ಆನೆಗಳು ಈ ಬಾರಿ ದಸಾರದಲ್ಲಿ ಭಾಗಿಯಾಗಲಿವೆ.

    ಚಿನ್ನದ ಅಂಬಾರಿ ಹೊರಲಿರುವ ಅಭಿಮನ್ಯು

    ಈ ಬಾರಿಯೂ ಅಭಿಮನ್ಯುವೇ ದಸರಾದ ಚಿನ್ನದ ಅಂಬಾರಿ ಹೊರಲಿದ್ದಾನೆ. ಅಭಿಮನ್ಯು ನೇತೃತ್ವದಲ್ಲಿ 8 ಆನೆಗಳು ಜಂಬೂಸವಾರಿಯಲ್ಲಿ ಭಾಗಿಯಾಗಲಿವೆ.  ಗೋಪಾಲಸ್ವಾಮಿ , ಆನೆಕಾಡು ಶಿಬಿರದ ವಿಕ್ರಮ, ದುಬಾರೆ ಶಿಬಿರದ ಕಾವೇರಿ, ಧನಂಜಯ, ನಾಗರಹೊಳೆಯ ದೊಡ್ಡಹರವೆ ಶಿಬಿರದ ಅಶ್ವತ್ಥಾಮ, ಬಂಡೀಪುರ ರಾಂಪುರ ಶಿಬಿರದ ಚೈತ್ರಾ ಹಾಗೂ ಲಕ್ಷ್ಮಿ ದಸರಾದಲ್ಲಿ ಭಾಗಿಯಾಗಲಿದ್ದಾರೆ. ಇನ್ನು ಇದೇ ಪ್ರಥಮವಾಗಿ 34 ವರ್ಷದ ಅಶ್ವತ್ಥಾಮ ದಸರಾಗೆ  ಪ್ರವೇಶ ಮಾಡಿರುವುದು ವಿಶೇಷ. ಕಿರಿಯ ಆನೆಯಾಗಿ ಲಕ್ಷ್ಮೀ ಎರಡನೇ ಬಾರಿಗೆ ದಸರಾದಲ್ಲಿ ಭಾಗಿಯಾಗುತ್ತಿದೆ.

    ಇದನ್ನು ಓದಿ: ಐತಿಹಾಸಿಕ ನಿರ್ಧಾರ: ಇನ್ಮುಂದೆ NDAಯಲ್ಲಿ ಮಹಿಳೆಯರಿಗೂ ಅವಕಾಶ; ಸುಪ್ರೀಂಗೆ ತಿಳಿಸಿದ ಕೇಂದ್ರ

    9 ದಿನವೂ ಸಾಂಸ್ಕೃತಿಕ ಕಾರ್ಯಕ್ರಮ

    ಅ. 7ರಂದು ಚಾಮುಂಡಿ ಬೆಟ್ಟದಲ್ಲಿ ದಸರಾ ಉದ್ಘಾಟನೆ ನಡೆಯಲಿದೆ. 9 ದಿನಗಳ ಕಾಲ ಪ್ರತಿದಿನ ಅರಮನೆ ಆವರಣದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ. ಜೊತೆಗೆ ನಂಜನಗೂಡಿನ ದೇವಸ್ಥಾನದ ಒಳಗೆ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ ಅಕ್ಟೋಬರ್​ 15ರ ಸಂಜೆ4.36 ರಿಂದ 4.44 ನಂದಿ ಪೂಜೆ ನಡೆಯಲಿದ್ದು, ಬಳಿಕ ಸಂಜೆ 5 ರಿಂದ 5.36 ಜಂಬೂ ಸವಾರಿ ಆರಂಭವಾಗಲಿದೆ.

    ನಗರದಲ್ಲಿ ದೀಪಾಲಂಕಾರ

    ಈ ಬಾರಿ ನಗರದ ಒಳಗೆ 100 ಮೀ ದೀಪಾಲಂಕಾರ ಮಾಡಲಾಗುವುದು. ಒಟ್ಟು 157 ವೃತ್ತಗಳಲ್ಲಿ ದೀಪಾಲಂಕಾರ ಮಾಡಲಾಗುವುದು. ಜಂಬೂ ಸವಾರಿ ವೇಳೆ ಈ ಬಾರಿ ಸ್ಥಬ್ದಚಿತ್ರಗಳಿಗೆ ಅವಕಾಶ ನೀಡಲಾಗಿದೆ. ಚಾಮುಂಡಿ ಉತ್ಸಹ ಮೂರ್ತಿಯನ್ನು ಚಾಮುಂಡಿ ಬೆಟ್ಟದಿಂದ ಅರಮನೆಗೆ ಮೆರವಣಿಗೆ ಮೂಲಕ ತರಲಾಗುವುದು. ಎಲ್ಲರೂ ನಾಡದೇವತೆ ತಾಯಿ ಚಾಮುಂಡೇಶ್ವರಿ ಉತ್ಸವಮೂರ್ತಿ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗುವುದು. ಹೆಚ್ಚಿನ ಜನಕ್ಕೆ ಅವಕಾಶ ಕೊಡಲು ಮುಂದಿನ ದಿನಗಳಲ್ಲಿ ಕೇಳುತ್ತೇವೆ ಎಂದರು
    Published by:Seema R
    First published: