Mysuru: ಚುಂಚನಕಟ್ಟೆಯಲ್ಲಿ 31 ಅಡಿ ಎತ್ತರದ‌ ಆಂಜನೇಯ ವಿಗ್ರಹ; ರಾಜವಂಶಸ್ಥ ಯದುವೀರರಿಂದ ವೀಕ್ಷಣೆ

ಶಾಸಕ ಸಾ.ರಾ. ಮಹೇಶ್ ಅವರು ಪ್ರವಾಸೋದ್ಯಮ ಸಚಿವರಾಗಿದ್ದಾಗ ಪ್ರವಾಸೋದ್ಯಮ ಇಲಾಖೆ ಅನುದಾನದಲ್ಲಿ ಈ ಯೋಜನೆ  ಕೈಗೆತ್ತಿ ಕೊಳ್ಳಲಾಗಿತ್ತು. ಸುಮಾರು 40 ಲಕ್ಷ ರೂ. ವೆಚ್ಚದಲ್ಲಿ 35 ಟನ್ ತೂಗುವ 31 ಅಡಿ ಎತ್ತರದ ಏಕಶಿಲೆಯ ವಿಶಿಷ್ಠ ಮೂರ್ತಿ ಇದಾಗಿದೆ.

31 ಅಡಿ ಎತ್ತರದ ಆಂಜನೇಯ ಮೂರ್ತಿ

31 ಅಡಿ ಎತ್ತರದ ಆಂಜನೇಯ ಮೂರ್ತಿ

  • Share this:
ಮೈಸೂರು (ಮೇ 7):  ಕೆ.ಆರ್​ ನಗರದ ಚುಂಚನಕಟ್ಟೆ ಐತಿಹಾಸಿಕ ಶ್ರೀರಾಮ ದೇವಸ್ಥಾನದ (Sri Ram Temple) ಎದುರು ಪ್ರತಿಷ್ಠಾಪಿಸಲು ಸಿದ್ಧವಾಗಿರುವ ಶ್ರೀ ಆಂಜನೇಯ ಮೂರ್ತಿಯನ್ನು (Anjaneya Statue) ನಗರದಿಂದ ಚುಂಚನಕಟ್ಟೆಗೆ ಸಾಗಿಸಲಾಯಿತು. ನಗರದ ಶಿಲ್ಪಿ ಅರುಣ್ ಯೋಗಿರಾಜ್ (Yogi Raj) ಮತ್ತು ತಂಡವರು ಸರಸ್ವತಿಪುರಂನಲ್ಲಿರುವ (Saraswatipuram) ಕುಟೀರದಲ್ಲಿ ನಿರ್ಮಿಸಿದ್ದ ಮೂರ್ತಿಗೆ ಶುಕ್ರವಾರ ರಾಜವಂಶಸ್ಥ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ (Yaduveer Krishnadatta Chamaraja) ವೀಕ್ಷಿಸಿ ಪೂಜೆ ಸಲ್ಲಿಸಿದರು.

31 ಅಡಿ ಎತ್ತರದ ಏಕಶಿಲೆಯ ವಿಶಿಷ್ಠ ಮೂರ್ತಿ

ಶಾಸಕ ಸಾ.ರಾ. ಮಹೇಶ್ ಅವರು ಪ್ರವಾಸೋದ್ಯಮ ಸಚಿವರಾಗಿದ್ದಾಗ ಪ್ರವಾಸೋದ್ಯಮ ಇಲಾಖೆ ಅನುದಾನದಲ್ಲಿ ಈ ಯೋಜನೆ  ಕೈಗೆತ್ತಿ ಕೊಳ್ಳಲಾಗಿತ್ತು. ಸುಮಾರು 40 ಲಕ್ಷ ರೂ. ವೆಚ್ಚದಲ್ಲಿ 35 ಟನ್ ತೂಗುವ 31 ಅಡಿ ಎತ್ತರದ ಏಕಶಿಲೆಯ ವಿಶಿಷ್ಠ ಮೂರ್ತಿ ಇದಾಗಿದೆ. ಪೂಜೆ ಸಲ್ಲಿಸಿದ ಬಳಿಕ ಕ್ರೇನ್ ಮೂಲಕ ಅಲಂಕೃತ ಲಾರಿಗೆ ಸಾಗಿಸಿ ಚುಂಚನಕಟ್ಟೆ ಕಡೆಗೆ ಕೊಂಡೊಯ್ಯಲಾಯಿತು.

ಹೆಚ್.ಡಿ.ದೇವೇಗೌಡರು ಲೋಕಾರ್ಪಣೆ ಮಾಡಲಿದ್ದಾರೆ

ಶಾಸಕ ಸಾ.ರಾ.ಮಹೇಶ್ ಈ ವೇಳೆ ಮಾತನಾಡಿ, ತಾಲ್ಲೂಕಿನ ಚುಂಚನಕಟ್ಟೆಯಲ್ಲಿ ರಾಮ, ಲಕ್ಷ್ಮಣ ಹಾಗೂ ಸೀತೆಯರ ವಿಗ್ರಹವಿದೆ‌. ಇತ್ತಿಚೀನ ದಿನಗಳಲ್ಲಿ ರಾಮನ ಭಂಟ ಯಾರೆಂದೂ ಹೇಳಿದರೆ ಅದು ಹನುಮ ಎಂಬ ಮಾತು ಎಲ್ಲೆಡೆ ಪ್ರಖ್ಯಾತಿ ಪಡೆದಿದೆ. ಹೀಗಾಗಿ ಚುಂಚನ ಕಟ್ಟೆಯಲ್ಲಿ ಇರಿಸಲು ಇಲ್ಲಿಂದ ವಿಗ್ರಹ ಕೊಂಡೊಯ್ಯಲಾಗುತ್ತಿದೆ ಎಂದರು.ಮೇ.20ರ ಶುಭ ದಿನದಂದು ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು ಅದರ ಲೋಕಾರ್ಪಣೆ ಮಾಡಲಿದ್ದಾರೆ.

ಇದನ್ನೂ ಓದಿ: Bengaluru Hotels: 24 ಗಂಟೆ ಹೋಟೆಲ್ ತೆರೆಯಲು ಪೊಲೀಸರು ಕೊಡ್ತಿಲ್ಲ ಗ್ರೀನ್ ಸಿಗ್ನಲ್; ಅನುಮತಿಗಾಗಿ ಮಾಲೀಕರ ಮನವಿ

K.R ನಗರದ ಹೆಬ್ಬಾಗಿಲಿನಲ್ಲಿ ಭಾವೈಕ್ಯತೆ ಕೆಲಸ 

ಇತ್ತಿಚೇಗೆ ರಾಜಕಾರಣವೂ ಸೇರಿ ಎಲ್ಲಾ ಕ್ಷೇತ್ರಗಳಲ್ಲಿ ಸ್ವಾಮಿ ನಿಷ್ಠೆ ಎಂಬುದು ಇಲ್ಲವಾಗುತ್ತಿದೆ.  ಸ್ವಾಮೀ ನಿಷ್ಠೆಗೆ ಹೆಸರಾದವರು ಆಂಜನೇಯ ಹೀಗಾಗಿ ಅವರನ್ನು ನೆನಪಿಸುವ ಅಳಿಲು ಸೇವೆ ಮಾಡುತ್ತಿದ್ದೇನೆ ಎಂದರು. ಸದರಿ ಮೂರ್ತಿಯನ್ನು ಕೆ.ಆರ್.ನಗರದ ಹೆಬ್ಬಾಗಿಲಿನಲ್ಲಿ ಹಿಂದೂ, ಮುಸ್ಲಿಂ ಹಾಗೂ ಕ್ರಿಶ್ಚಿಯನ್ ಗುರುಗಳು ಸ್ವಾಗತ ಕೋರುವ ಭಾವೈಕ್ಯತೆ ಯ ಕೆಲಸ ಆಗಲಿದೆ. ನಾಲ್ವಡಿ ಅವರ ಕಾಲದಲ್ಲಿ ಕೃಷ್ಣರಾಜೇಂದ್ರ ನಗರ ಎಂದು ನಾಮಕರಣವಾಯಿತು.

ಚುಂಚನಕಟ್ಟೆ ಕ್ಷೇತ್ರ ಅಭಿವೃದ್ಧಿಗೂ 12 ಕೋಟಿ

ಎಚ್.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿ ಆಗಿದ್ದ ಸಂದರ್ಭದಲ್ಲಿ ಅರ್ಕೇಶ್ವರ ನಾಥ ದೇವಾಲಯದಲ್ಲಿ 12 ಕೋಟಿ ರೂ.ಗಳನ್ನು ಆಕ್ಷೇತ್ರದ ಅಭಿವೃದ್ಧಿಗೆ ನೀಡಿದ್ದರು. ಅದೇ ರೀತಿ ಚುಂಚನಕಟ್ಟೆ ಕ್ಷೇತ್ರ ಅಭಿವೃದ್ಧಿಗೂ 12 ಕೋಟಿ ನೀಡಿದ್ದರೂ ಎಲ್ಲಾ ಅಭಿವೃದ್ಧಿ ಕೆಲಸ ಮುಗಿದಿವೆ. ಇದು ಆಗುತ್ತಿರುವುದು ಸಂತಸದ ವಿಷಯ ಎಂದರು.

ಮೈಸೂರಿನ  ಶಿಲ್ಪಿಗಳಿಂದ ಕೆತ್ತನೆ

ಇದೇ ವೇಳೆ ಮಾತ್ನಾಡಿದ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಸೂಚಿಸಿದ ಹೆಸರಿನ ತಾಲ್ಲೂಕಿನಲ್ಲಿ ಹೊಯ್ಸಳರ ಶೈಲಿಯಲ್ಲಿ ಮೈಸೂರಿನವರೇ ಆದ ಶಿಲ್ಪಿಗಳ ಕೆತ್ತನೆ ಮಾಡಿರುವ ಆಂಜನೇಯ ಮೂರ್ತಿ ನಿರ್ಮಾಣಕ್ಕೆ ಚಾಲನೆ ನೀಡಿರುವುದು ಸಂತಸದ ವಿಷಯವಾಗಿದೆ. ಇಂತಹ ಕಾರ್ಯದಲ್ಲಿ ಭಾಗವಹಿಸಿದ್ದು ಖುಷಿ ತರಿಸಿದೆ. ಈ ರೀತಿಯ ಕಲೆಗೆ ಹೆಚ್ಚಿನ ಪ್ರೋತ್ಸಾಹ ಇನ್ನೂ ದೊರೆಯ ಬೇಕು ಎಂದು ತಿಳಿಸಿದರು.

ಇದನ್ನೂ ಓದಿ: DK Shivakumar: "ಯತ್ನಾಳ್ ಏನು ಮೆಂಟಲ್ಲಾ? ಅವರನ್ನು ಮೊದಲು ವಿಚಾರಣೆ ಮಾಡಿ" - ಸರ್ಕಾರಕ್ಕೆ ಡಿಕೆಶಿ ಆಗ್ರಹ

ಇದೇ ವೇಳೆ ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ತಿನ ಸದಸ್ಯ ಸಿ.ಎನ್.ಮಂಜೇಗೌಡ, ಮಾಜಿ ಮೇಯರ್‌ಗಳಾದ ಆರ್.ಲಿಂಗಪ್ಪ, ಎಂ.ಜೆ.ರವಿಕುಮಾರ್,  ನಗರಪಾಲಿಕೆ ಮಾಜಿ ಸದಸ್ಯ ಕೆ.ವಿ.ಮಲ್ಲೇಶ್, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ದ್ವಾರಕೀಶ್, ವಕ್ತಾರ ಎಂ.ರಾಮು ಇತರರು ಉಪಸ್ಥಿತರಿದ್ರು.
Published by:Pavana HS
First published: