Mysore: ಮುಡಾದಲ್ಲಿ ನಡೆದಿದೆ ಬ್ರಹ್ಮಾಂಡ ಭ್ರಷ್ಟಾಚಾರ! ನೂರಾರು ನಿವೇಶನಗಳ ದಾಖಲೆಯೇ ಮಂಗ ಮಾಯ!

ವಿವಿಧ ಪ್ರತಿಷ್ಠಿತ ಬಡಾವಣೆಗಳನ್ನೇ ಗುರಿಯಾಗಿಸಿಕೊಂಡು ದೊಡ್ಡ ನಿವೇಶನಗಳ ಮೂಲ ಕಡತಗಳಿಂದ ಪ್ರಮುಖ ಮಾಹಿತಿಗಳಿರುವ ಹಾಳೆಗಳನ್ನೇ ಕಿತ್ತಿರುವುದು, ಆ ಸ್ಥಳಕ್ಕೆ ಬೇರೊಬ್ಬ ವ್ಯಕ್ತಿಯ ಹೆಸರಿನ ನಕಲಿ ದಾಖಲೆಗಳನ್ನು ಸೇರಿಸಿರುವುದು ಪರಿಶೀಲನೆ ವೇಳೆ ಕಂಡುಬಂದಿದೆ.

ಮೂಡ ಕಡತಗಳು ಕಣ್ಮರೆ

ಮೂಡ ಕಡತಗಳು ಕಣ್ಮರೆ

  • Share this:
ಮೈಸೂರು (ಏ.25): ನಗರಾಭಿವೃದ್ಧಿ ಪ್ರಾಧಿಕಾರದ (Urban Development Authority) ಕಚೇರಿಯ ಕಡತಗಳಲ್ಲಿದ್ದ ಹಲವು ಮಹತ್ವದ ದಾಖಲೆಗಳು (Documentation) ಕಣ್ಮರೆಯಾಗಿರುವ ಸಂಗತಿ ಬಯಲಾಗಿದೆ. ಈ ಬಗ್ಗೆ ಸೂಕ್ತ ತನಿಖೆಗೆ ಆದೇಶಿಸಲಾಗುವುದು ಎಂದು ಮುಡಾ ಅಧ್ಯಕ್ಷ ಹೆಚ್.ವಿ ರಾಜೀವ್ (President HV Rajeev) ತಿಳಿಸಿದರು. ಕಡತಗಳನ್ನು ಗಣಕೀರಣ ಮಾಡುವ ವೇಳೆ ಸ್ಕ್ಯಾನಿಂಗ್ ಮಾಡುವಾಗ ಅಂದಾಜು 300 ಪುಟಗಳು (Pages) ಕಾಣೆಯಾಗಿರುವ ಸಂಗತಿ ಗೊತ್ತಾಗಿದೆ. ಈ ಬಗ್ಗೆ ಸಮಗ್ರ ವರದಿ ನೀಡುವಂತೆ ಸೂಚಿಸಲಾಗಿದೆ‌. ವರದಿ ಆಧರಿಸಿ ಸೂಕ್ತ ತನಿಖೆಗೆ (Investigation) ಆದೇಶಿಸಲಾಗುವುದು. ಪ್ರಕರಣ ಭೇದಿಸಲು ಯೋಜನೆಗಳನ್ನು ಹಾಕಿಕೊಳ್ಳಲಾಗುವುದು ಎಂದು ಹೆಚ್.ವಿ ರಾಜೀವ್ ತಿಳಿಸಿದ್ದಾರೆ.

ತಪ್ಪಿತಸ್ಥರನ್ನು ರಕ್ಷಿಸುವ ಪ್ರಶ್ನೆಯೇ ಇಲ್ಲ‌.

ಮುಡಾದ ಕಾರ್ಯದರ್ಶಿ ನೇತೃತ್ವದಲ್ಲಿ ದಾಖಲೆಗಳ ನಾಪತ್ತೆ ಬಗ್ಗೆ ಪರಿಶೀಲನೆ ನಡೆಯುತ್ತಿದೆ. ಸಂಪೂರ್ಣ ಪರಿಶೀಲನೆ ಬಳಿಕ ಎಷ್ಟು ದಾಖಲೆಗಳು ನಾಪತ್ತೆಯಾಗಿವೆ ಎಂಬುದು ಸ್ಪಷ್ಟವಾಗಿ ತಿಳಿಯಲಿದೆ. ಮುಡಾದಲ್ಲಿ ನಡೆದಿರುವ ಅಕ್ರಮಗಳಲ್ಲಿ ಮುಡಾದ ಸಿಬ್ಬಂದಿಗಳೂ ಭಾಗಿಯಾಗಿರುವ ಬಗ್ಗೆ ಸಂಶಯವಿದೆ. ಮನೆಯಲ್ಲೇ ಕಳ್ಳರಿದ್ದರೆ ಹೊರಗಿನವರೂ ಕೈ ಜೋಡಿಸುತ್ತಾರೆ. ಅಕ್ರಮದಲ್ಲಿ ಯಾರೇ ಭಾಗಿಯಾಗಿದ್ದರೂ ಕಾನೂನು ರೀತಿ ಕ್ರಮ ಕೈಗೊಳ್ಳಲಾಗುವುದು. ತಪ್ಪಿತಸ್ಥರನ್ನು ರಕ್ಷಿಸುವ ಪ್ರಶ್ನೆಯೇ ಇಲ್ಲ‌ ಎಂದು ಹೆಚ್ ವಿ ರಾಜೀವ್ ಹೇಳಿದರು.

600 ನಿವೇಶದ ಕಡತಗಳು ನಾಪತ್ತೆ

ವಿವಿಧ ಪ್ರತಿಷ್ಠಿತ ಬಡಾವಣೆಗಳನ್ನೇ ಗುರಿಯಾಗಿಸಿಕೊಂಡು ಭಾರೀ ಬೆಲೆಬಾಳುವ ದೊಡ್ಡ ದೊಡ್ಡ ನಿವೇಶನಗಳ ಮೂಲ ಕಡತಗಳಿಂದ ಪ್ರಮುಖ ಮಾಹಿತಿಗಳಿರುವ ಹಾಳೆಗಳನ್ನೇ ಕಿತ್ತಿರುವುದು, ಆ ಸ್ಥಳಕ್ಕೆ ಬೇರೊಬ್ಬ ವ್ಯಕ್ತಿಯ ಹೆಸರಿನ ನಕಲಿ ದಾಖಲೆಗಳನ್ನು ಸೇರಿಸಿರುವುದು ಪರಿಶೀಲನೆ ವೇಳೆ ಕಂಡುಬಂದಿದೆ. 600 ನಿವೇಶನಗಳ ದಾಖಲೆ ನಾಪತ್ತೆಯಾಗಿದೆ. ಮುಡಾದಿಂದ ರಚಿಸಿರುವ ವಿವಿಧ ಬಡಾವಣೆಗಳ 600 ನಿವೇಶನಗಳ ಹಂಚಿಕೆ ಮಾಡಿರುವ ಬಗ್ಗೆ ಇದ್ದ300 ಕಡತಗಳಿಂದ ದಾಖಲೆ ಪತ್ರಗಳನ್ನು ನಾಪತ್ತೆ ಮಾಡಲಾಗಿದ್ದು, ಫೈಲ್ ಮತ್ತು ಲೆಡ್ಜರ್‌ಗಳಲ್ಲಿರುವ ದಾಖಲೆಗಳಿಗೆ ಒಂದಕ್ಕೊಂದು ತಾಳೆಯಾಗದಿರುವುದು ಪರಿಶೀಲನೆ ವೇಳೆ ಕಂಡುಬರುತ್ತಿದೆ.

ಇದನ್ನೂ ಓದಿ:  Clarence School: ಬೈಬಲ್ ಹೇರಿಕೆಯ ಆರೋಪ; ಶಾಲೆಗೆ ಸ್ಥಳೀಯ ಪೊಲೀಸರಿಂದ ಭದ್ರತೆ

ನೂರಾರು ಕೋಟಿ ರೂ ಅವ್ಯವಹಾರ

ಮೂಲ ದಾಖಲೆಗಳನ್ನು ನಾಶ ಮಾಡಿ, ಅದರ ಸ್ಥಳದಲ್ಲಿ ನಕಲಿ ದಾಖಲೆಗಳನ್ನು ಸೇರಿಸಿ, ಬ್ಯಾಂಕ್ ಚಲನ್‌ಗಳನ್ನೂ ನಕಲಿ ಮಾಡಿ ನೂರಾರು ಕೋಟಿ ರೂ.ಗಳ ನಿವೇಶನಗಳನ್ನು ಪರಭಾರೆ ಮಾಡಿ ಭಾರೀ ಅವ್ಯವಹಾರ ಮಾಡಿರುವುದು ತನಿಖೆ ವೇಳೆ ಬೆಳಕಿಗೆ ಬಂದಿದೆ. ಅಧಿಕಾರಿ, ಸಿಬ್ಬಂದಿ ಶಾಮೀಲು: ಈ ಬ್ರಹ್ಮಾಂಡ ಭ್ರಷ್ಟಾಚಾರದಲ್ಲಿ ಮುಡಾದ ಕೆಲ ಅಧಿಕಾರಿಗಳು, ಸಿಬ್ಬಂದಿ ಶಾಮೀಲಾಗಿರುವ ಬಲವಾದ ಶಂಕೆ ವ್ಯಕ್ತವಾಗಿದ್ದು,

ಅಭಿಲೇಖಾಲಯದಿಂದ ಕಡತ ತೆಗೆದು ಅದರಲ್ಲಿನ ದಾಖಲೆಗಳ ಪುಟಗಳನ್ನು ತೆಗೆದು ಅಕ್ರಮ ನಡೆಸಲು ಬೇರೆಯವರಿಂದ ಸಾಧ್ಯವಾಗುವುದಿಲ್ಲ ಎಂಬುದೂ ಖಾತರಿಯಾಗಿದೆ. ಪ್ರಾಧಿಕಾರದಲ್ಲಿ ಕೆಲಸ ಮಾಡುತ್ತಿದ್ದು, ಈಗ ಸ್ವಯಂ ನಿವೃತ್ತಿ ಪಡೆದಿರುವ ಕೆಲವರು ಈ ಅವ್ಯವಹಾರ ದಂಧೆಯ ಪ್ರಮುಖ ರೂವಾರಿಗಳೆಂದು ಹೇಳಲಾಗುತ್ತಿದ್ದು, ಅಂತಹವರ ಮಾಹಿತಿ ಕಲೆ ಹಾಕಲು ಈಗಾಗಲೇ ಒಂದು ತಂಡ ಸದ್ದಿಲ್ಲದೇ ಕೆಲಸ ಮಾಡುತ್ತಿದೆ.

ಇದನ್ನೂ ಓದಿ:  Modi Meeting: ಮತ್ತೆ ಕೋವಿಡ್ ಕೇಸ್ ಹೈಕ್, ಆಗುತ್ತಾ ದೇಶ 'ಲಾಕ್'? ಏಪ್ರಿಲ್ 27ಕ್ಕೆ ಸಿಎಂಗಳ ಜೊತೆ ಪ್ರಧಾನಿ ಮೀಟಿಂಗ್

ಹಲವು ಕಡತಗಳೇ ಕಣ್ಮರೆ

ಕೇವಲ ದಾಖಲೆ ಪುಟಗಳಷ್ಟೇ ಅಲ್ಲದೆ, ಹಲವು ಬಡಾ ವಣೆಗಳಲ್ಲಿ ಹಂಚಿಕೆ ಮಾಡಿರುವ ನಿವೇಶನಗಳಿಗೆ ಸಂಬಂಧಿಸಿದ ಮೂಲ ಕಡತಗಳೇ ಕಣ್ಮರೆಯಾಗಿವೆ. ಲೆಡ್ಜರ್‌ಗಳಲ್ಲಿ ನಿವೇಶನಗಳ ಮಾಹಿತಿ ಬರೆಯಲಾಗಿದೆ. ಆದರೆ ಅವುಗಳಿಗೆ ಸಂಬಂಧಿಸಿದ ದಾಖಲೆಗಳಿರುವ ಕಡತಗಳನ್ನು ಕಳವು ಮಾಡಲಾಗಿದೆ. ಕೆಲ ಪ್ರಕರಣಗಳಲ್ಲಿ ಕಡತ ಮತ್ತು ಲೆಡ್ಜರ್ ಎರಡೂ ನಾಪತ್ತೆ ಆಗಿರುವುದು ತಿಳಿದು ಬಂದಿದೆ.

ವಿಜಯನಗರ, ದೇವನೂರು ಬಡಾವಣೆ ನಿವೇಶನಗಳದ್ದೇ ಸಿಂಹಪಾಲು

ಕಡತಗಳು, ಲೆಡ್ಜರ್‌ಗಳ ದಾಖಲೆ ಪುಟಗಳು ಕಣ್ಮರೆಯಾಗಿರುವು ದರಲ್ಲಿ ವಿಜಯನಗರ 2ನೇ ಹಂತ ಮತ್ತು ದೇವನೂರು 1ನೇ ಹಂತದ ಬಡಾವಣೆ ಗಳ ನಿವೇಶನಗಳದ್ದೇ ಸಿಂಹಪಾಲು. ಕೋಟ್ಯಾಂತರ ರೂ. ಬೆಲೆಬಾಳುವ ನಿವೇಶನಗಳ ಹಂಚಿಕೆ ಸಂಬಂಧ ಇದ್ದ ಕಡತ, ಲೆಡ್ಜರ್ ಮತ್ತು ಪ್ರಮುಖದಾಖಲೆಗಳನ್ನೇ ತೆಗೆದು ಹಾಕಿ ಆ ಸ್ಥಳದಲ್ಲಿ ಬೇರೆಯವರ ಹೆಸರಿನ ದಾಖಲಾತಿ ಸೃಷ್ಟಿಸಲಾಗಿದೆ.
Published by:Pavana HS
First published: