Mysore Crime News: ಪಟಾಕಿ ತರಲು ಹೋದ ಬಾಲಕ ಮನೆಗೆ ಬರಲೇ ಇಲ್ಲ; ಪಾಪಿಯ ದುರಾಸೆಗೆ ಕಮರಿತು ಜೀವ!

ಬಾಲಕನನ್ನು ಕಿಡ್ನಾಪ್ ಮಾಡಿದ್ದ ಆರೋಪಿ ಜವರಯ್ಯ ಐಪಿಎಲ್​ ಬೆಟ್ಟಿಂಗ್​ನಲ್ಲಿ ಲಕ್ಷಾಂತರ ರೂ. ಹಣ ಕಳೆದುಕೊಂಡಿದ್ದ. ಸಾಲಗಾರರ ಹಾವಳಿ ಹೆಚ್ಚಾದ ಹಿನ್ನೆಲೆಯಲ್ಲಿ ಅಡ್ಡದಾರಿಯಲ್ಲಿ ದುಡ್ಡು ಮಾಡುವ ಪ್ಲ್ಯಾನ್ ಮಾಡಿದ್ದ.

ಮೃತ ಬಾಲಕ

ಮೃತ ಬಾಲಕ

  • Share this:
ಮೈಸೂರು :  ದೀಪಾವಳಿ ಹಬ್ಬದಲ್ಲಿ (Deepavali Festival) ಪಟಾಕಿ (Crackers) ತರ್ತಿನಿ ಅಂತಾ ಮನೆಯಲ್ಲಿ ಹೇಳಿ ಅಂಗಡಿಗೆ ಹೋದ ಬಾಲಕ ನಾಪತ್ತೆಯಾಗಿದ್ದ. ಬಾಲಕನನ್ನು ಅಪಹರಿಸಿ (Kidnap) ಹಣಕ್ಕಾಗಿ ಡಿಮ್ಯಾಂಡ್ (Demand for Money) ಮಾಡಿದ್ದ ಪಾಪಿಗಳು ಕೊನೆಗೆ ಬಾಲಕನನ್ನು ಕೊಂದೇ ಬಿಟ್ಟಿದ್ದಾರೆ.  ಈ ಅಮಾನುಷ ಕೃತ್ಯಕ್ಕೆ  ಕಾರಣವಾಗಿದ್ದು ಐಪಿಎಲ್ ಬೆಟ್ಟಿಂಗ್ (IPL Betting) ಹಾಗೂ ಅನ್​​ಲೈನ್​ (Online) ದಂಧೆ.  ಹುಣಸೂರು (Hunsur) ತಾಲೂಕಿನಲ್ಲಿ ಕಿಡ್ನಾಪ್ ಆಗಿದ್ದ ಬಾಲಕನೊಬ್ಬ ಶವವಾಗಿ ಪತ್ತೆಯಾಗಿತ್ತು. ಪಕ್ಕದ ಊರಿನ ನಿವಾಸಿಯೇ ಆ  ಮಗುವನ್ನು ಕೊಂದಿರೋದು ಪೊಲೀಸ್ ತನಿಖೆಯಿಂದ ಗೊತ್ತಾಗಿದೆ. ಈ ಅಪಹರಣ, ಕೊಲೆಗೆ ಐಪಿಎಲ್ ಬೆಟ್ಟಿಂಗ್ ಕಾರಣ ಅನ್ನುವ ಆರೋಪಗಳು ಕೇಳಿ ಬಂದಿವೆ.

ಕಿಡ್ನ್ಯಾಪ್​​ ಮಾಡಿ 4 ಲಕ್ಷಕ್ಕೆ ಬೇಡಿಕೆ 

ಅಂದ ಹಾಗೆ ಮೈಸೂರು ಜಿಲ್ಲೆ ಹುಣಸೂರು ತಾಲೂಕಿನ ಹನಗೋಡು ಗ್ರಾಮದಲ್ಲಿ ನ.03 ರಂದು 10 ವರ್ಷದ ಬಾಲಕ ಕಾರ್ತಿಕ್​​ನ ಕಿಡ್ನಾಪ್ & ಮರ್ಡರ್ ಆಗಿತ್ತು. ಹನಗೋಡು ಸಮೀಪದ ದಾಸನಪುರ ನಿವಾಸಿಯೇ ಬಾಲಕನನ್ನ ಅಪಹರಿಸಿ 4 ಲಕ್ಷ ರೂ. ಗಳಿಗೆ ಬೇಡಿಕೆ ಇಟ್ಟಿದ್ದ. ವಿಚಾರ ಪೊಲೀಸರಿಗೆ ತಿಳಿಯುತ್ತಿದ್ದಂತೆಯೇ ಬಾಲಕನನ್ನು ಕೊಂದು ಕುಂಟೇರಿ ಕೆರೆಯ ಪೊದೆಗೆ ಬಿಸಾಡಿದ್ದ.ಈ ಕೊಲೆಗೆ ಐಪಿಎಲ್ ಬೆಟ್ಟಿಂಗ್ ಕಾರಣವಾಯ್ತ ಅನ್ನುವ ಅನುಮಾನ ಶುರುವಾಗಿದೆ.

ಬಾಲಕನ ತಂದೆಯ ಆದಾಯ-ಆಸ್ತಿ ಮೇಲೆ ಕಣ್ಣು 

ಹನಗೋಡು ಗ್ರಾಮಸ್ಥರೇ ಇಂತಹದ್ದೊಂದು ಗಂಭೀರ ಆರೋಪ ಮಾಡುತ್ತಿದ್ದಾರೆ. ಬಾಲಕನನ್ನು ಕಿಡ್ನಾಪ್ ಮಾಡಿದ್ದ ಆರೋಪಿ ಜವರಯ್ಯ ಐಪಿಎಲ್​ ಬೆಟ್ಟಿಂಗ್​ನಲ್ಲಿ ಲಕ್ಷಾಂತರ ರೂ. ಹಣ ಕಳೆದುಕೊಂಡಿದ್ದ. ಸಾಲಗಾರರ ಹಾವಳಿ ಹೆಚ್ಚಾದ ಹಿನ್ನೆಲೆಯಲ್ಲಿ ಅಡ್ಡದಾರಿಯಲ್ಲಿ ದುಡ್ಡು ಮಾಡುವ ಪ್ಲ್ಯಾನ್ ಮಾಡಿದ್ದ. ಶುಂಠಿ, ಅರಿಶಿನ ಹೋಲ್​ಸೆಲ್ ವ್ಯಾಪಾರಿಯಾಗಿದ್ದ ಹನಗೋಡಿನ ನಾಗರಾಜ್ ಸ್ಥಿತಿವಂತ ಅನ್ನೋದು ಗೊತ್ತಿತ್ತು. ಆದ್ದರಿಂದಲೇ ನಾಗರಾಜ್ ಅವರ ಪುತ್ರ ಕಾರ್ತಿಕ್​ನನ್ನು ನವೆಂಬರ್ ೩ ರಂದು ಕಿಡ್ನಾಪ್ ಮಾಡಿದ್ದಾನೆ. ಮಗುವನ್ನು ಕಿಡ್ನಾಪ್ ಮಾಡಿದ್ದ ಆರೋಪಿ ಮಗುವಿನ ತಂದೆಗೆ ಕರೆ ಮಾಡಿ 4 ಲಕ್ಷ ರೂ.ಗಳಿಗೆ ಡಿಮಾಂಡ್ ಮಾಡಿದ್ದರು.

ಐಪಿಎಲ್​​ ಬೆಟ್ಟಿಂಗ್​ನಿಂದ ಬರ್ಬಾದ್ ಆಗಿದ್ದ ಆರೋಪಿ 

ಹುಣಸೂರಿಗೆ ಹಣ ತರುವಂತೆ ಹೇಳಿದ್ದ ಕಿಡಿಗೇಡಿ ಮೊಬೈಲ್ ಫೋನ್ ಸ್ವಿಚ್​ ಆಫ್ ಮಾಡಿದ್ದನು. ಹೀಗಾಗಿ ಅನಿವಾರ್ಯವಾಗಿ ಕುಟುಂಬಸ್ಥರು ಪೊಲೀಸರಿಗೆ ಮಾಹಿತಿ ನೀಡಬೇಕಾಯ್ತು. ಪೊಲೀಸರಿಗೆ ಸಿಕ್ಕಿ ಬೀಳುವ ಭಯದಲ್ಲಿ ಪಾಪಿ ೧೦ ವರ್ಷದ  ಬಾಲಕನನ್ನೇ ಕೊಂದು ಪೊದೆಯೊಂದರಲ್ಲಿ ಬಿಸಾಡಿದ್ದ. ಇನ್ನೂ ಗ್ರಾಮೀಣ ಭಾಗದಲ್ಲಿ ಹೆಚ್ಚಾಗಿರುವ  ಐಪಿಎಲ್ ಬೆಟ್ಟಿಂಗ್ ಹಾಗೂ ಅನ್ಲೈನ್ ಬೆಟ್ಟಿಂಗ್ ದಂಧೆ ಹೆಚ್ಚಾಗಿದೆ. ಇದನ್ನ ತಡೆಯಬೇಕು ಬೇಕು ಅಂದು ಗ್ರಾಮಸ್ಥರು ಮನವಿ ಮಾಡಿದ್ದರು. ಈಗಾಗಿ ಇದನ್ನ ಗಂಭೀರವಾಗಿ ಪರಿಗಣಿಸಿ ಕಡಿವಾಣ ಹಾಕುವ ನಿಟ್ಟಿನಲ್ಲಿ ಕ್ರಮ ವಹಿಸಲಾಗುತ್ತದೆ ಅಂತಾ ಎಸ್ಪಿ ತಿಳಿಸಿದ್ದಾರೆ.

ಇದನ್ನೂ ಓದಿ: ಮಧ್ಯರಾತ್ರಿ ಹೆದ್ದಾರಿ ಪಕ್ಕದಲ್ಲಿ ಸಿಕ್ಕ Suitcase ತುಂಬಾ Gold Jewellery; ಮುಂದಾಗಿದ್ದು ನಿಜಕ್ಕೂ ರೋಚಕ

ಒಟ್ಟಿನಲ್ಲಿ, ಬೆಳಕಿನ ಹಬ್ಬದಂದು ಪಟಾಕಿ ತರೋದಾಗಿ ಹೇಳಿ ಮನೆಯಿಂದ ಹೊರ ಹೋಗಿದ್ದ ಪುಟ್ಟ ಬಾಲಕ ಪಾಪಿದ ಹಣದಾಸೆಗೆ ಬಲಿಯಾಗಿದ್ದಾನೆ. ಮನೆಗೆ ಬೆಳಕಾಗಬೇಕಿದ್ದ ಬಾಲಕ ಬೆಟ್ಟಿಂಗ್ ದಂದೆಗೆ  ಕೊಲೆಯಾಗಿದ್ದು ಮಾತ್ರ ದುರಂತವೇ ಸರಿ.
Published by:Kavya V
First published: