ಬೀದರ್ (ಡಿ.08) : ಇದು ಇತಿಹಾಸ ಪ್ರಸಿದ್ಧ ದೇಗುಲ (Temple) . ಅಲ್ಲಿ ಪ್ರತಿ ವರ್ಷ ನಡೆಯೋ ಭಂಡಾರ ಜಾತ್ರೆ ನಿಜಕ್ಕೂ ನೋಡುಗರನ್ನ ಭಾವಪರವಶರನ್ನಾಗಿಸುತ್ತದೆ. ಮಹಾರಾಷ್ಟ್ರ, ಆಂಧ್ರ, ತೆಲಂಗಾಣದಿಂದಲೂ ಆಗಮಿಸುವ ಭಕ್ತರ ದಂಡು ಈ ಯಾತ್ರೆಯಲ್ಲಿ ಅಕ್ಷರಶಃ ಭಂಡಾರದಲ್ಲಿ ಮಿಂದೇಳುತ್ತಾರೆ. ಇಲ್ಲಿ ಭಕ್ತರು ಎರಚುವ ಭಂಡಾರ (Bandara) ಇಡಿ ವಾತಾವರಣವನ್ನೇ ಬಂಗಾರದ ಬಣ್ಣಕ್ಕೆ ತಿರುಗಿಸುತ್ತದೆ. ಹೀಗಾಗಿಯೇ ಈ ದಿನ ಆ ಇಡೀ ದೇಗುಲ ಹೊನ್ನವರ್ಣದಿಂದ ಕಂಗೋಳಿಸುತ್ತದೆ. ಅಷ್ಟಕ್ಕೂ ಆ ದೇಗುಲವಾದ್ರು ಯಾವುದು ಗೊತ್ತಾ?
ಬೀದರ್ ನಲ್ಲಿ ಭಂಡಾರದೊಡೆಯನ ಅದ್ಧೂರಿ ಜಾತ್ರೋತ್ಸವ!
ದಕ್ಷಿಣ ಕಾಶಿ ಅಂತಾಲೇ ಫೇಮಸ್ ಆಗಿರುವ ಬೀದರ್ ನ ದೇಗುಲದಲ್ಲಿ ಭಕ್ತಿ, ಭಾವದಿಂದ ಮೈಲಾರ ಮಲ್ಲಣ್ಣನಿಗೆ ಭಂಡಾರ ಪೂಜೆ ನಡೆಯಿತು. ಭಾಲ್ಕಿ ತಾಲೂಕಿನಲ್ಲಿರುವ ಮೈಲಾರ ಮಲ್ಲಣ್ಣ ದೇವಾಲಯ ಐದು ಶತಮಾನಗಳಷ್ಟೂ ಹಳೆಯದಾದ ದೇವಾಲಯವಾಗಿದೆ. ಇನ್ನೂ ಈ ದೇವಸ್ಥಾನಕ್ಕೆ ರಾಜ್ಯ ಸೇರಿದಂತೆ ಮಹಾರಾಷ್ಟ್ರ, ತೆಲಂಗಾಣ, ಆಂಧ್ರಪ್ರದೇಶದಿಂದ ಪ್ರತಿ ವರ್ಷ ಲಕ್ಷಾಂತರ ಭಕ್ತರು ಇಲ್ಲಿಗೆ ಬಂದು ಜಾತ್ರೆಯಲ್ಲಿ ಭಾಗವಹಿಸಿ ದೇವರ ದರ್ಶನ ಪಡೆದು ಹೋಗುತ್ತಾರೆ.
ಒಂದು ತಿಂಗಳುಗಳ ಕಾಲ ಜಾತ್ರೆ
ಪ್ರತಿ ವರ್ಷ ಚಟ್ಟಿ ಅಮಾವಾಸ್ಯೆಯಿಂದ ಬರೋಬ್ಬರಿ ಒಂದು ತಿಂಗಳುಗಳ ಕಾಲ ಇಲ್ಲಿ ಅದ್ದೂರಿಯಾಗಿ ಜಾತ್ರೆ ನಡೆಯುತ್ತದೆ. ಈ ಒಂದು ತಿಂಗಳ ಅವಧಿಯಲ್ಲಿ ಐವತ್ತು ಲಕ್ಷಕ್ಕೂ ಅಧಿಕ ಸಂಖ್ಯೆಯ ಭಕ್ತರು ಬಂದು ದೇವಸ್ಥಾನದ ಆವರಣದಲ್ಲಿಯೇ ರಾತ್ರಿಯಿಡಿ ಕಳೆದು ಇಲ್ಲಿಯೇ ಅಡುಗೆ ಮಾಡಿಕೊಂಡು ದೇವರ ದರ್ಶನ ಮಾಡುತ್ತಾರೆ. ಇದಷ್ಟೇ ಅಲ್ಲದೆ ಪ್ರತಿ ಅಮಾವಾಸ್ಯೆ, ಹುಣ್ಣಿಮೆ, ಪ್ರತಿ ರವಿವಾರದಂದು ಕೂಡಾ ಸಾವಿರಾರು ಭಕ್ತರು ಇಲ್ಲಿಗೆ ಬಂದು ತಮ್ಮ ಹರಕೆ ತಿರಿಸಿ ಹೋಗುತ್ತಾರೆ. ಇನ್ನೂ ಇಲ್ಲಿಗೆ ಬರುವ ಪ್ರತಿಯೊಬ್ಬರ ಭಕ್ತರು ಕೂಡಾ ದೇವರಿಗೆ ಹರಕೆ ರೂಪದಲ್ಲಿ ತೆಂಗಿನಕಾಯಿಯ ಹೋಳು ಮತ್ತು ಭಂಡಾರವನ್ನು ಮಿಶ್ರಣ ಮಾಡಿ ಹಾರಿಸುತ್ತಾರೆ.
ಮೈಲಾರ ಮಲ್ಲಣ್ಣ ದೇವಸ್ಥಾನಕ್ಕೆ ಭಕ್ತರ ದಂಡು
ಇನ್ನೂ ಇತಿಹಾಸ ಪ್ರಶಿದ್ಧ ಮೈಲಾರ ಮಲ್ಲಣ್ಣ ದೇವಸ್ಥಾನಕ್ಕೆ ರಾಜ್ಯ ಸೇರಿದಂತೆ ನೇರೆಯ ರಾಜ್ಯಗಳಾದ ತೆಲಂಗಾಣ, ಆಂಧ್ರ ಪ್ರದೇಶ್, ಮಹರಾಷ್ಟ್ರದಿಂದ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಇಲ್ಲಿಗೆ ಬಂದು ಹರಕೆ ತಿರಿಸಿ ದೇವರ ದರ್ಶನ ಪಡೆದುಕೊಂದು ಹೋಗುತ್ತಾರೆ. ಕೆಲವು ಭಕ್ತರು ಇಲ್ಲಿಯೇ ವಸತಿ ಉಳಿದುಕೊಂಡು ದೇವರ ದರ್ಶನ ಮಾಡಿಕೊಂಡು ಹೋಗುತ್ತಾರೆ.
ಸಜ್ಜೆ ರೊಟ್ಟಿ, ಚಟ್ಟಿ ಖಾರಾ ನೈವೇದ್ಯ
ಇನ್ನೂ ಶತಮಾನದಷ್ಠು ಪುರಾತನವಾದ ನೀರಿನ ಹೊಂಡಗಳು ಕೂಡಾ ಇಲ್ಲಿದ್ದು, ಅವುಗಳಲ್ಲಿ ಭಕ್ತರು ಸ್ನಾನ ಮಾಡಿ ಮಲ್ಲಣ್ಣ ದರ್ಶನ ಪಡೆದು ಪಾವನರಾಗುತ್ತಾರೆ. ಬಳಿಕ ಮಲ್ಲಣ್ಣ ದೇವರಿಗೆ ಕಾಯಿ, ಕರ್ಪೂರ, ಹೂವು, ಭಂಡಾರ ದೊಂದಿಗೆ ತೆರಳಿ ದರುಶನ ಪಡೆದುಕೊಂಡು ಹಿಂತಿರುಗಿ ಜಾತ್ರೆಯ ಖರೀದಿಯಲ್ಲಿ ತೊಡಗಿಸಿಕೊಳ್ಳುತ್ತಾರೆ. ಇನ್ನು ಬಹುತೇಕರು ಮಂದಿರದ ಆವರಣದಲ್ಲೇ ಸಜ್ಜೆ ರೊಟ್ಟಿ, ಚಟ್ಟಿ ಖಾರಾ ನೈವೇದ್ಯ ತಯಾರಿಸಿ, ದೇವರಿಗೆ ಅರ್ಪಿಸುತ್ತಿದ್ದರು.
ದೇಗುಲದಲ್ಲಿ ಮಲ್ಲಣ್ಣನಿಗೆ ಭಕ್ತರು ಭಂಡಾರ ಹಾಗೂ ಕೊಬ್ಬರಿ ತುಂಡುಗಳನ್ನು ಹಾರಿಸುವ ವಾಡಿಕೆ ಇದೆ. ಅಸುರರ ಸಂಹಾರ ಮಾಡಲು ಶಿವ ಮಾರ್ಥಂಡ ರೂಪದಲ್ಲಿ ಬಂದಾಗ ಅಸುರರು ಹೊಡೆದು ಗಾಯಗೊಳಿಸಿದ್ದರು. ಆಗ ಮೈಗೆ ಭಂಡಾರ ಹಚ್ಚಿಕೊಂಡಾಗ ತಕ್ಷಣ ಗಾಯ ವಾಸಿಯಾಗುತ್ತಿದ್ದವಂತೆ ಅಸುರರನ್ನು ಸಂಹರಿಸಿದ ಕಾರಣಕ್ಕೆ ಕೊಬ್ಬರಿ ಹಾರಿಸಿ ವಿಜಯೋತ್ಸವ ಮಾಡಿದ ಪ್ರಯುಕ್ತ ಭಕ್ತರು ಭಂಡಾರ ಹಾಗೂ ಕೊಬ್ಬರಿ ಹಾರಿಸುವ ವಾಡಿಕೆ ಇದೆ ಎಂದು ಹೇಳುತ್ತಾರೆ.
ಇದನ್ನೂ ಓದಿ: Shootout At Bengaluru: ಬೆಂಗಳೂರಿನಲ್ಲಿ ಮತ್ತೆ ಗುಂಡಿನ ಸದ್ದು; ಬಿಲ್ಡರ್ ಮೇಲೆ ಫೈರಿಂಗ್
ಕಲ್ಯಾಣ ಕರ್ನಾಟಕ ಭಾಗದಲ್ಲಿ ಅಪಾರ ಪ್ರಮಾಣದ ಭಕ್ತರನ್ನ ಹೊಂದಿರುವ ಪ್ರಸಿದ್ಧ ದೇವಸ್ಥಾನವಿದು. ರಾಜ್ಯದಿಂದಷ್ಟೇ ಅಲ್ಲದೆ ಹೊರರಾಜ್ಯದಿಂದಲೂ ಸಾವಿರಾರು ಭಕ್ತರು ಈ ದೇವಸ್ಥಾನಕ್ಕೆ ಬರುತ್ತಾರೆ. ಭಂಡಾರ ಒಡೆಯನ ಸ್ಥಳಕ್ಕೆ ಬರುವ ಭಕ್ತರು ಮಲ್ಲಣ್ಣನು ತಮ್ಮ ಕಷ್ಟ ಕಾರ್ಪಣ್ಯಗಳು ಇಡೆರಿಸುತ್ತಾನೆಂದು ಬರುವ ಭಕ್ತರು ಭಕ್ತಿ, ಭಾವದಿಂದ ಮೈಲಾರ ಮಲ್ಲಣ್ಣನಿಗೆ ಭಂಡಾರ ಪೂಜೆ ಮಾಡಿ ಭಂಡಾರದೋಕುಳಿಯಲ್ಲಿ ಮಿಂದೆಂದ ಜಾತ್ರೆಯನ್ನು ಅದ್ದೂರಿ ಗೊಳಿಸುತ್ತಾರೆ.
ವರದಿ: ಚಮನ್ ಹೊಸಮನಿ
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ