ಮಹಾಘಟ್ಬಂಧನ್ನಿಂದ ರಾಹುಲ್ ಗಾಂಧಿ ಪ್ರಧಾನಿಯಾಗಲು ನಮ್ಮ ಸಂಪೂರ್ಣ ಬೆಂಬಲವಿದೆ; ಸಿಎಂ ಎಚ್.ಡಿ.ಕುಮಾರಸ್ವಾಮಿ
ಮೋದಿ ಒಬ್ಬರು ಅತ್ಯುತ್ತಮ ಭಾಷಣಕಾರರು, ಜನರನ್ನು ಮಾತಿನಲ್ಲಿ ತುಂಬಾ ಚೆನ್ನಾಗಿ ಆಕರ್ಷಿಸುತ್ತಾರೆ. ಆದರೆ, ನಾಲ್ಕುವರೆ ವರ್ಷದಲ್ಲಿ ಅವರು ಮಾಡಿದ್ದಾದರೂ ಏನು. ಅವರು ಪೇಪರ್ ಟೈಗರ್ ಎಂದು ಟೀಕಿಸಿದ ಕುಮಾರಸ್ವಾಮಿ, ನನ್ನ ಪ್ರಕಾರ ರಾಹುಲ್ ಗಾಂಧಿ ಪ್ರಬುದ್ಧ ರಾಜಕಾರಣಿಯಾಗಿದ್ದಾರೆ. ಪ್ರಧಾನಿಯಾಗುವ ಎಲ್ಲ ಅರ್ಹತೆಗಳು ಅವರಲ್ಲಿದೆ ಎಂದು ಹೇಳಿದರು.
ಬೆಂಗಳೂರು: ಬಿಜೆಪಿ ವಿರುದ್ಧ ರಚನೆಯಾಗಿರುವ ವಿರೋಧ ಪಕ್ಷಗಳ ಮೈತ್ರಿಕೂಟದಲ್ಲಿ ಪ್ರಧಾನಿ ಅಭ್ಯರ್ಥಿ ಯಾರು ಪ್ರಶ್ನೆ ಸುಳಿದಾಡುತ್ತಲೇ ಇದೆ. ಮೈತ್ರಿಕೂಟದ ಪ್ರಮುಖ ಪಕ್ಷವೊಂದರ ನಾಯಕರು ರಾಹುಲ್ ಗಾಂಧಿ ಪ್ರಧಾನಿ ಅಭ್ಯರ್ಥಿ ಎಂದು ತಮ್ಮ ನಿಲುವು ಪ್ರಕಟಿಸಿದ್ದಾರೆ.
ರಾಹುಲ್ ಗಾಂಧಿ ಪ್ರಧಾನಿ ಅಭ್ಯರ್ಥಿ ಎಂಬ ನಿಲುವು ತಿಳಿಸಿದ ನಾಯಕ ಮತ್ಯಾರು ಅಲ್ಲ, ಜೆಡಿಎಸ್ ನಾಯಕ ಹಾಗೂ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ. ಕಾಂಗ್ರೆಸ್ನೊಂದಿಗೆ ಮೈತ್ರಿ ಮಾಡಿಕೊಂಡು ರಾಜ್ಯದಲ್ಲಿ ಸರ್ಕಾರ ರಚಿಸಿರುವ ಜೆಡಿಎಸ್ನ ನಿಲುವು ಮಹಾಘಟ್ಬಂಧನ್ನಿಂದ ರಾಹುಲ್ ಗಾಂಧಿ ಪ್ರಧಾನಿ ಅಭ್ಯರ್ಥಿ ಎಂದು ಎನ್ಡಿಟಿವಿಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.
ರಾಹುಲ್ ಗಾಂಧಿ ಪ್ರಧಾನಿ ಅಭ್ಯರ್ಥಿಯಾಗಲು ನನ್ನ ಸಂಪೂರ್ಣ ಸಹಕಾರ, ಬೆಂಬಲವಿದೆ. ಅಷ್ಟೇ ಅಲ್ಲದೇ ನಮ್ಮ ತಂದೆಯವರಾದ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರ ನಂಬಿಕೆ ಸಹ ಅದೆ ಎಂದು ಎಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ.ಕಳೆದ ಭಾನುವಾರ ಕೊಲ್ಕತ್ತದಲ್ಲಿ ನಡೆದ ಪ್ರಾದೇಶಿಕ ಪಕ್ಷಗಳ ಸಮಾವೇಶದಲ್ಲಿ ಪಶ್ಚಿಮಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಪ್ರಧಾನಿ ಅಭ್ಯರ್ಥಿಯಾಗಲು ಅರ್ಹ ಅಭ್ಯರ್ಥಿ ಎಂದು ಹೇಳಿದ್ದಿರಲಾ ಎಂಬ ಪ್ರಶ್ನೆಗೆ ಉತ್ತರಿಸಿದ ಎಚ್ಡಿಕೆ, ನಾನು ಆ ಮಾತನ್ನು ಯಾವ ಹಿನ್ನೆಲೆಯಲ್ಲಿ ಹೇಳಿದ್ದು ಎಂಬುದು ಮುಖ್ಯವಾಗುತ್ತದೆ. ಮಹಾಮೈತ್ರಿ ಕೂಟದ ಪ್ರಾದೇಶಿಕ ಪಕ್ಷಗಳಲ್ಲಿ ಬಿಜೆಪಿಗಿಂತಲೂ ಹಲವು ಸಮರ್ಥ ನಾಯಕರಿದ್ದಾರೆ. ಅವರಲ್ಲಿ ಮಾಯಾವತಿ, ಮಮತಾ ಬ್ಯಾನಿರ್ಜಿ ಅವರು ಕೂಡ ಏಕಾಗಬಾರದು.... ಆದರೆ, ಪ್ರಧಾನಿ ಅಭ್ಯರ್ಥಿ ಯಾರು ಪ್ರಶ್ನೆಗೆ ನಮ್ಮ ಪಕ್ಷದ ಸಂಪೂರ್ಣ ಸಹಕಾರ, ಸಹಮತ ಇರುವುದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರಿಗೆ ಎಂದು ಸ್ಪಷ್ಟಪಡಿಸಿದರು.
ಮೋದಿ ಅವರು ಅತ್ಯುತ್ತಮ ಭಾಷಣಕಾರರು, ಜನರನ್ನು ಮಾತಿನಲ್ಲಿ ತುಂಬಾ ಚೆನ್ನಾಗಿ ಆಕರ್ಷಿಸುತ್ತಾರೆ. ಸಾಮಾಜಿಕ ಜಾಲತಾಣಗಳನ್ನು ಚೆನ್ನಾಗಿ ದುರ್ಬಳಕೆ ಮಾಡಿಕೊಳ್ಳುತ್ತಾರೆ. ಆದರೆ, ನಾಲ್ಕುವರೆ ವರ್ಷದಲ್ಲಿ ಅವರು ಮಾಡಿದ್ದಾದರೂ ಏನು. ಅವರು ಪೇಪರ್ ಟೈಗರ್ ಎಂದು ಟೀಕಿಸಿದ ಕುಮಾರಸ್ವಾಮಿ, ನನ್ನ ಪ್ರಕಾರ ರಾಹುಲ್ ಗಾಂಧಿ ಪ್ರಬುದ್ಧ ರಾಜಕಾರಣಿಯಾಗಿದ್ದಾರೆ. ಪ್ರಧಾನಿಯಾಗುವ ಎಲ್ಲ ಅರ್ಹತೆಗಳು ಅವರಲ್ಲಿದೆ ಎಂದು ಹೇಳಿದರು.
ಇದನ್ನು ಓದಿ: ಕೊಲ್ಕತ್ತದಲ್ಲಿ ಪ್ರಾದೇಶಿಕ ಪಕ್ಷಗಳ ಶಕ್ತಿ ಪ್ರದರ್ಶನ; ಬಿಜೆಪಿ, ಪ್ರಧಾನಿ ಮೋದಿ ವಿರುದ್ಧ ಹರಿಹಾಯ್ದ ನಾಯಕರು
Loading...
ಮಹಾಮೈತ್ರಿ ಕೂಟದಲ್ಲಿ ಪ್ರಧಾನಿ ಅಭ್ಯರ್ಥಿ ಘೋಷಿಸದಿರುವುದನ್ನು ಬಿಜೆಪಿ ಅಸ್ತ್ರವನ್ನಾಗಿ ಬಳಕೆ ಮಾಡಿಕೊಳ್ಳುತ್ತಿದೆ. ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರು ಕೊಲ್ಕತ್ತದಲ್ಲಿ ಮಮತಾ ಬ್ಯಾನರ್ಜಿ ಅವರು ಆಯೋಜಿಸಿದ್ದ ಸಮಾವೇಶ ಕುರಿತು ಬ್ಯಾನರ್ಜಿ ಅವರು 23 ಪಕ್ಷಗಳು ಹಾಗೂ 9 ಮಂದಿ ಪ್ರಧಾನಿ ಅಭ್ಯರ್ಥಿಗಳನ್ನು ತೋರಿಸುತ್ತಿದ್ದಾರೆ ಎಂದು ಟೀಕೆ ಮಾಡಿದ್ದರು.
Loading...