• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • Nikhil Kumaraswamy: ನನ್ನ ಮಗ ನಿಖಿಲ್​ ಕುಮಾರಸ್ವಾಮಿಯೇ ರಾಮನಗರ JDS​ ಅಭ್ಯರ್ಥಿ! ಅನಿತಾ ಕುಮಾರಸ್ವಾಮಿ ಘೋಷಣೆ

Nikhil Kumaraswamy: ನನ್ನ ಮಗ ನಿಖಿಲ್​ ಕುಮಾರಸ್ವಾಮಿಯೇ ರಾಮನಗರ JDS​ ಅಭ್ಯರ್ಥಿ! ಅನಿತಾ ಕುಮಾರಸ್ವಾಮಿ ಘೋಷಣೆ

ನಿಖಿಲ್​ ಕುಮಾರಸ್ವಾಮಿ, ಅನಿತಾ ಕುಮಾರಸ್ವಾಮಿ

ನಿಖಿಲ್​ ಕುಮಾರಸ್ವಾಮಿ, ಅನಿತಾ ಕುಮಾರಸ್ವಾಮಿ

ನಿಖಿಲ್​ ಕುಮಾರಸ್ವಾಮಿ ಅವರು ರಾಮನಗರದ ಅಭ್ಯರ್ಥಿ ಎಂದು ಶಾಸಕಿ ಅನಿತಾ ಕುಮಾರಸ್ವಾಮಿ ಘೋಷಣೆ ಮಾಡಿದ್ದಾರೆ. 

  • News18 Kannada
  • 2-MIN READ
  • Last Updated :
  • Karnataka, India
  • Share this:

ರಾಮನಗರ (ಡಿ.17): 2023ರ ವಿಧಾನಸಭೆ ಚುನಾವಣೆಗೆ (Assembly Election) ನನ್ನ ಮಗ ನಿಖಿಲ್​ ಕುಮಾರಸ್ವಾಮಿಯೇ ರಾಮನಗರದ (Ramanagara) ಅಭ್ಯರ್ಥಿ (Candidate) ಎಂದು ಶಾಸಕಿ ಅನಿತಾ ಕುಮಾರಸ್ವಾಮಿ (Anitha Kumaraswamy) ಘೋಷಣೆ ಮಾಡಿದ್ದಾರೆ. ನಮ್ಮ ಮಾವನವರಿಗೆ ಹಾಗೂ ಯಜಮಾನರಿಗೆ ಆಶೀರ್ವಾದ ಮಾಡಿದ್ದೀರಿ. ನನ್ನ ಮಗನಿಗೂ ಆಶೀರ್ವಾದ ಮಾಡಿ ಎಂದು ಅನಿತಾ ಕುಮಾರಸ್ವಾಮಿ ಅವರು ರಾಮನಗರದ ಜನತೆ ಬಳಿ ಕೇಳಿಕೊಂಡಿದ್ದಾರೆ. 


ಹೆಲಿಕಾಪ್ಟರ್​ ಮೂಲಕ ಹೂಮಳೆ


ರಾಮನಗರದಲ್ಲಿ ಹೆಚ್. ಡಿ ಕುಮಾರಸ್ವಾಮಿ ಹವಾ ಜೋರಾಗಿದ್ದು, ಕುಮಾರಸ್ವಾಮಿಗೆ ಹೆಲಿಕಾಪ್ಟರ್​ ಮೂಲಕ ಹೂಮಳೆ ಸುರಿಸಲಾಗಿದೆ. ರಾಮನಗರದ ಹಳೇ ಬಸ್ ನಿಲ್ಧಾಣದಲ್ಲಿ ಸಾರ್ವಜನಿಕ ಭಾಷಣ ಮಾಡಿದ್ದಾರೆ. ಸಾವಿರಾರು ಸಂಖ್ಯೆಯಲ್ಲಿ ಜನ ಭಾಗಿಯಾಗಿದ್ದು, ಕೇಕ್ ಕಟ್ ಮಾಡಿದ ಕುಮಾರಸ್ವಾಮಿ ಕ್ರೇನ್ ಮೂಲಕ ರೇಷ್ಮೆ ಹಾರ ಹಾಕಿ ಸಂಭ್ರಮಿಸಿದ್ರು.




ನನಗೆ ನನ್ನ ಕುಟುಂಬ ಮುಖ್ಯ, ಗಂಡ ಮಗ ಮುಖ್ಯ


ಕೆಲವರು ಅಪಪ್ರಚಾರ ಮಾಡ್ತಿದ್ದರು. ಅದಕ್ಕಾಗಿಯೇ ಇವತ್ತು ವಿವಾದಕ್ಕೆಲ್ಲಾ ತೆರೆ ಎಳೆಯಲು ನಾನೇ ಘೋಷಣೆ ಮಾಡಿದ್ದೇನೆ. ನನಗೆ ನನ್ನ ಕುಟುಂಬ ಮುಖ್ಯ, ಗಂಡ ಮಗ ಮುಖ್ಯ ಎಂದು ಮಾತನಾಡುತ್ತಾ ಅನಿತಾ ಕುಮಾರಸ್ವಾಮಿ ಗದ್ಗದಿತರಾದರು.


ಬಿಜೆಪಿ ಹಾಗೂ ಕಾಂಗ್ರೆಸ್ ನಾಯಕರಿಗೆ HDK ಟಾಂಗ್​


ಕಾಂಗ್ರೆಸ್​ನಿಂದ (Congress) ಒಕ್ಕಲಿಗ ನಾಯಕರ ಸಭೆ ವಿಚಾರ‌ವಾಗಿ ರಾಮನಗರದ (Ramanagara) ಗುಡ್ಡದಹಳ್ಳಿಯಲ್ಲಿ ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ (H D Kumaraswamy) ಮಾತನಾಡಿದ್ದು, ಕಾಂಗ್ರೆಸ್ ಹಾಗೂ ಬಿಜೆಪಿ ನಾಯಕರಿಗೆ ಟಾಂಗ್ ನೀಡಿದ್ದಾರೆ.‌ ಹಳೇ ಮೈಸೂರು ಭಾಗದಲ್ಲಿ ಜೆಡಿಎಸ್ (JDS) ಭದ್ರಕೋಟೆ ಹೊಡೆಯಲು ಎಲ್ಲರೂ ಹೊರಟಿದ್ದಾರೆ‌.‌ ಹಲವಾರು ವರ್ಷಗಳಿಂದ ಪ್ರಯತ್ನ ಮಾಡ್ತಿದ್ದಾರೆ.‌ ಈ ಭದ್ರಕೋಟೆಯನ್ನ ಜನ ಬಿಗಿಯಾಗಿ ಕಟ್ಟಿದ್ದಾರೆ.‌ ಭದ್ರಕೋಟೆ ಒಡೆಯಲು ಅವರ ಬಳಿ ಯಾವುದೇ ಅಸ್ತ್ರಗಳಿಲ್ಲ ಎಂದು ಬಿಜೆಪಿ ಹಾಗೂ ಕಾಂಗ್ರೆಸ್ ನಾಯಕರಿಗೆ (Congress Leaders) ಹೆಚ್ಡಿಕೆ ಟಾಂಗ್ ಕೊಟ್ಟಿದ್ದಾರೆ.


ಸೋಮವಾರ ಮೊದಲ ಹಂತದ ಪಟ್ಟಿ ಬಿಡುಗಡೆ


ಜೆಡಿಎಸ್ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ವಿಚಾರವಾಗಿ ಮಾತನಾಡಿ ನಿನ್ನೆ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಬೇಕಿತ್ತು‌, ಆದರೆ ಧಾರ್ಮಿಕ ವೇದಿಕೆಯಲ್ಲಿ ರಾಜಕೀಯ ಬೇಡ ಅಂತ ಹೇಳಿದ್ರು. ಅಲ್ಲದೇ ಟಿಟಿಡಿಯ ಗೈಡ್ ಲೈನ್ ಉಲ್ಲಂಘನೆ ಆಗಬಾರದು ಅಂತ ಮುಂದೂಡಿದ್ದೇವೆ. ಸೋಮವಾರ ಮೊದಲ ಹಂತದ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಆಗಲಿದೆ ಎಂದರು.


ಕುಮಾರಸ್ವಾಮಿ ಭರ್ಜರಿ ರೋಡ್ ಶೋ 


ಶಾಸಕಿ, ಪತ್ನಿ ಅನಿತಾ ಕುಮಾರಸ್ವಾಮಿ ಜೊತೆಗೆ ಕುಮಾರಸ್ವಾಮಿ ಭರ್ಜರಿ ರೋಡ್ ಶೋ ನಡೆಸಿದರು. ‌ರಾಮನಗರದ ಹಲವು ಗ್ರಾಮದಲ್ಲಿ ಕುಮಾರಸ್ವಾಮಿ ಹವಾ ಜೋರಾಗಿತ್ತು.‌ ನಿಖಿಲ್ ಕುಮಾರಸ್ವಾಮಿ ಸಹ ರೋಡ್ ಶೋದಲ್ಲಿ ಭಾಗಿಯಾಗಿದ್ದರು. ಮಾಜಿ ಸಿಎಂ ಕುಮಾರಸ್ವಾಮಿ, ಅನಿತಾ ಕುಮಾರಸ್ವಾಮಿಗೆ ಹೊರೆಹೊತ್ತು ಕಳಶದೊಂದಿಗೆ ಮಹಿಳೆಯರು ಬೆಂಬಲ ಸೂಚಿಸಿದ್ರು. ದಾರಿಯುದ್ದಕ್ಕೂ ಕುಮಾರಸ್ವಾಮಿಗೆ ನೂರಾರು ಜನರ ಭಾರೀ ಜನಬೆಂಬಲ ವ್ಯಕ್ತವಾಯಿತು.‌


ಮೊದಲು ಪಕ್ಷ ಕಟ್ಟುತ್ತೇನೆ, ಕಾರ್ಯಕರ್ತರು ಸ್ಪರ್ಧೆ ಬಗ್ಗೆ ನಿರ್ಧಾರ ಮಾಡ್ತಾರೆ 


ರಾಮನಗರ ಕ್ಷೇತ್ರದಿಂದ ನಿಖಿಲ್ ಸ್ಪರ್ಧೆ ವಿಚಾರವಾಗಿ ರಾಮನಗರದ ಗುಡ್ಡದಹಳ್ಳಿಯಲ್ಲಿ ನಿಖಿಲ್ ಕುಮಾರಸ್ವಾಮಿ ಮಾತನಾಡಿದ್ರು. ನನ್ನ ಸ್ಪರ್ಧೆ ಪಕ್ಷಕ್ಕೆ ಬಿಟ್ಟ ತೀರ್ಮಾನ, ನನಗೆ ಪಕ್ಷದ ಸಂಘಟನೆ ಜವಾಬ್ದಾರಿ ಕೊಟ್ಟಿದ್ದಾರೆ.
ಯುವ ಘಟಕದ ರಾಜ್ಯಾಧ್ಯಕ್ಷನ್ನಾಗಿ ಮಾಡಿದ್ದಾರೆ.





ಇದನ್ನೂ ಓದಿ: BJP Tweet: ಡಿ ಕೆ ಶಿವಕುಮಾರ್​ಗೆ ಭಯೋತ್ಪಾದಕರೇ ಬ್ರದರ್ಸ್‌, ಡಿಕೆಶಿ ವಿರುದ್ಧ ಬಿಜೆಪಿ ಸಾಲು ಸಾಲು ಟ್ವೀಟ್


ನಾನೂ ರಾಜ್ಯಾದ್ಯಂತ ಪ್ರವಾಸ ಮಾಡಿ ಸಂಘಟನೆ ಮಾಡ್ತಿದ್ದೇನೆ. ಕುಮಾರಣ್ಣ ಪಂಚರತ್ನ ರಥಯಾತ್ರೆ ಮಾಡ್ತಿದ್ದಾರೆ.
ಹಾಗಾಗಿ ರಾಮನಗರ ಜಿಲ್ಲೆಯಾದ್ಯಂತ ಹೆಚ್ಚು ಸಂಚಾರ ಮಾಡ್ತಿದ್ದೇನೆ ಎಂದು ನಿಖಿಲ್​ ಕುಮಾರಸ್ವಾಮಿ ಹೇಳಿದ್ದಾರೆ.





Published by:ಪಾವನ ಎಚ್ ಎಸ್
First published: