ನನ್ನ ರಾಜೀನಾಮೆ ಪತ್ರವನ್ನ ಟೈಪ್ ಮಾಡಿ ಇಟ್ಟಿದ್ದೇನೆ; ಸಚಿವ ಸಿ.ಟಿ.ರವಿ
ನನ್ನ ವಾರ್ಷಿಕ ರಿಪೋರ್ಟ್ ಕಾರ್ಡ್ ಮಾಡಿದ್ದೇವೆ. ಅದನ್ನ ರಿಲೀಸ್ ಮಾಡಿ, ಆಮೇಲೆ ಸಿಎಂ ಜೊತೆ ಸಮಾಲೋಚನೆ ಮಾಡಿ ನಿರ್ಣಯ ತೆಗೆದುಕೊಳ್ಳುತ್ತೇನೆ ಎಂದು ಹೇಳಿದರು.
news18-kannada Updated:September 30, 2020, 9:16 AM IST

ಸಚಿವ ಸಿ ಟಿ ರವಿ
- News18 Kannada
- Last Updated: September 30, 2020, 9:16 AM IST
ಚಿಕ್ಕಮಗಳೂರು : ರಾಜಕಾರಣದಲ್ಲಿ ನಾನು ಖಂಡಿತಾ ಸನ್ಯಾಸಿಯಂತೂ ಅಲ್ಲವೇ ಅಲ್ಲ. ಆದರೆ ಅದೇ ಜೀವನದ ಗುರಿ ಎಂದು ಭಾವಿಸಿರುವವನೂ ಅಲ್ಲ. ಸಂಘಟನೆ-ಸರ್ಕಾರ ಇವೆರಡಲ್ಲಿ ನಿನ್ನ ಆದ್ಯತೆ ಯಾವುದು ಅಂದರೆ ನನ್ನ ಆದ್ಯತೆ ಸಂಘಟನೆ ಎಂದು ಪ್ರವಾಸೋದ್ಯಮ ಸಚಿವ ಸಿ.ಟಿ.ರವಿ ಹೇಳಿದ್ದಾರೆ. ಚಿಕ್ಕಮಗಳೂರಿನ ತಮ್ಮ ನಿವಾಸದಲ್ಲಿ ಮಾತನಾಡಿದ ಅವರು, ಸಂಘಟನೆ ಯಾವ ಕಾರಣಕ್ಕೆ ನನ್ನ ಆದ್ಯತೆ ಎಂಬುದನ್ನೂ ಸ್ಪಷ್ಟಪಡಿಸಿದ್ದೇನೆ ಎಂದಿದ್ದಾರೆ. ತೀರ್ಮಾನ ಮಾಡಬೇಕಿರೋದು ಪಾರ್ಟಿಯ ವರಿಷ್ಠರು. ನಾನು ಸಾಮಾನ್ಯ ಕಾರ್ಯಕರ್ತನಾಗಿಯೇ ಕೆಲಸ ಮಾಡಿಕೊಂಡು ಬಂದಿರುವುದರಿಂದ ನನಗೆ ಯಾವುದೇ ಗೊಂದಲಗಳಿಲ್ಲ. ಅಧಿಕಾರವೆಂಬುದು ಒಂದು ಸಾಧನ. ಅಧಿಕಾರವೇ ಜೀವನದ ಅಂತಿಮ ಗುರಿಯಲ್ಲ. ಜೀವನದ ಅಂತಿಮ ಗುರಿ, ತಾಯಿ ಭಾರತಿ ಎಲ್ಲಾ ಕ್ಷೇತ್ರದಲ್ಲೂ ಸಶಕ್ತವಾಗಬೇಕು. ದೇಶದೊಳಗಿರುವ ದೌರ್ಬಲ್ಯಗಳು ಕೊನೆಯಾಗಬೇಕು. ದೋಷ ಮುಕ್ತವಾಗಬೇಕು ಎಂದಿದ್ದಾರೆ. ನನಗೆ ಬಹಳ ಸ್ಪಷ್ಟತೆ ಇದೆ. ಪಾರ್ಟಿಯೇ ಮುಖ್ಯ. ಅದು ಸಾಧನ. ಒಂದು ವರ್ಷದಲ್ಲಿ ಮಂತ್ರಿಯಾಗಿ ನನ್ನ ಯೋಜನೆ ಪ್ರಕಾರ ಕೆಲವು ಕೆಲಸವನ್ನ ಅನುಷ್ಠಾನಗೊಳಿಸಿದ್ದೇನೆ. ಕೆಲವನ್ನ ಅನುಷ್ಠಾನದ ಹಂತಕ್ಕೆ ತಂದಿದ್ದೇನೆ. ಅದನ್ನ ಮಾಡೇ ಮಾಡ್ತೀನಿ. ನಮ್ಮ ಜಿಲ್ಲೆ, ಕ್ಷೇತ್ರಕ್ಕೆ ಏನು ಮಾಡಬೇಕು ಅದನ್ನ ಮಂತ್ರಿ ಸ್ಥಾನದಿಂದ ಹೊರಗಿದ್ದರೂ ಮಾಡುತ್ತೇನೆ ಎಂದರು.
ಶಿರಾ ಉಪಚುನಾವಣೆ: ಶಿರಾಗೆ ಇಂದು ಮಾಜಿ ಪ್ರಧಾನಿ ದೇವೇಗೌಡ ಮತ್ತು ಎಚ್ಡಿ ಕುಮಾರಸ್ವಾಮಿ ಭೇಟಿ ಸರ್ಕಾರ ಚೆನ್ನಾಗಿ ನಡೆದು ಹೋಗಲು ಕಾಲಕಾಲಕ್ಕೆ ನನ್ನ ಸಹಕಾರ ಏನು ಬೇಕು ಅದನ್ನ ಸದಾಕಾಲ ಕೊಡುತ್ತೇನೆ. ಯಾವ ಗೊಂದಲವೂ ಇಲ್ಲ. ನಾನು ನನ್ನ ರಾಜೀನಾಮೆ ಪತ್ರವನ್ನು ಟೈಪ್ ಮಾಡಿ ಇಟ್ಟಿದ್ದೀನಿ. 1ನೇ ತಾರೀಖು ಕ್ಯಾಬಿನೆಟ್ ಇದೆ. 2ನೇ ತಾರೀಖು ಗಾಂಧಿ ಜಯಂತಿ ಇದೆ. ಗಾಂಧಿ ಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸಿ, ನನ್ನ ವಾರ್ಷಿಕ ರಿಪೋರ್ಟ್ ಕಾರ್ಡ್ ಮಾಡಿದ್ದೇವೆ. ಅದನ್ನ ರಿಲೀಸ್ ಮಾಡಿ, ಆಮೇಲೆ ಸಿಎಂ ಜೊತೆ ಸಮಾಲೋಚನೆ ಮಾಡಿ ನಿರ್ಣಯ ತೆಗೆದುಕೊಳ್ಳುತ್ತೇನೆ ಎಂದು ಹೇಳಿದರು.
ಇದು ನನ್ನ ಸ್ಥಾನವಲ್ಲ. ನನ್ನದು ಎಂದು ಭಾವಿಸಿದ್ರೆ ನನ್ನಂತಹ ಮೂರ್ಖ ಮತ್ತೊಬ್ಬನಿಲ್ಲ. ಈಗ ನಾನು ಸಚಿವ ಸ್ಥಾನದಲ್ಲಿದ್ದೇನೆ. ಮುಂದೆ ಮತ್ತೊಬ್ಬ ಬರಬಹುದು ಎಂದರು. ಇದು ನಮ್ಮ ಯಾರ ಸ್ವಂತ ಆಸ್ತಿಯಲ್ಲ ಎಂದರು.
ಜಿಲ್ಲೆಯ ಮುಂದಿನ ಉಸ್ತುವಾರಿ ಸಚಿವರು ಎಂಬ ಪ್ರಶ್ನೆಗೆ ಉತ್ತರಿಸಿದ ಸಿ.ಟಿ.ರವಿ, ಎಲ್ಲರಿಗೂ ನಿರೀಕ್ಷೆ-ಆಕಾಂಕ್ಷೆಗಳಿರುತ್ತೆ. ಅದು ತಪ್ಪಲ್ಲ. ಯಾರಿಗೆ ಸಿಗುತ್ತೋ ಗೊತ್ತಿಲ್ಲ. ಎಲ್ಲರಿಗೂ ಯೋಗ್ಯತೆ ಇದೆ. ಯೋಗ ಯಾರಿಗೆ ಇದೆಯೋ ಗೊತ್ತಿಲ್ಲ. ಯೋಗ ಇದ್ದವರು ಆಗ್ತಾರೆ. ನಾನು ರಾಜಕೀಯಕ್ಕೆ ಬರುವ 20 ವರ್ಷ ಮುಂಚೆಯೇ ಸಿಎಂ ಬಂದಿದ್ದರು. ಅವರು ಅನುಭವಿಗಳು ಇದ್ದಾರೆ. ಅವರು ಅದನ್ನ ಸಮರ್ಥವಾಗಿ ನಿಭಾಯಿಸುತ್ತಾರೆ ಎಂದರು.
ಶಿರಾ ಉಪಚುನಾವಣೆ: ಶಿರಾಗೆ ಇಂದು ಮಾಜಿ ಪ್ರಧಾನಿ ದೇವೇಗೌಡ ಮತ್ತು ಎಚ್ಡಿ ಕುಮಾರಸ್ವಾಮಿ ಭೇಟಿ