ಬೆಂಗಳೂರು: ಅಪ್ಪ ಇನ್ನೂ 20 ವರ್ಷ ಆರೋಗ್ಯದಿಂದ (Father Health) ಬದುಕುತ್ತಿದ್ದರು. ಹಾಗಾಗಿ ಕೊಂದೆ ಎಂದು ಆರೋಪಿ ಮಗ ಪೊಲೀಸರ ಮುಂದೆ ಶಾಕಿಂಗ್ ಹೇಳಿಕೆ ನೀಡಿದ್ದಾನೆ. ಒಂದು ವೇಳೆ ತಂದೆ ಬದುಕಿದ್ರೆ ಆಸ್ತಿಯನ್ನು ಅನುಭವಿಸಲು ಆಗ್ತಿರಲಿಲ್ಲ ಎಂದು ಆರೋಪಿ ಮಣಿಕಂಠ ಹೇಳಿದ್ದಾನೆ. ಫೆಬ್ರವರಿ 13ರಂದು ನಾರಾಯಣ ಸ್ವಾಮಿ ಎಂಬ ಕೊಲೆ ಬೆಂಗಳೂರಿನ (Bengaluru Crime News) ಮಾರತಹಳ್ಳಿಯಲ್ಲಿ ನಡೆದಿತ್ತು. ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದಾಗ ಮಗನೇ ಆರೋಪಿ ಎಂಬುವುದು ತಿಳಿದು ಬಂದಿದೆ. ಸದ್ಯ ಪೊಲೀಸರು (Police) ಆರೋಪಿ ಮಣಿಕಂಠನನ್ನು ಬಂಧಿಸಿದ್ದಾರೆ. ಬಂಧಿಸಿ ವಿಚಾರಣೆ ನಡೆಸಿದಾಗ ಆರೋಪಿ ಮಣಿಕಂಠ ಶಾಕಿಂಗ್ ಹೇಳಿಕೆ ನೀಡಿದ್ದಾನೆ.
ನಾರಾಯಣಸ್ವಾಮಿ ಅವರಿಗೆ ಮಣಿಕಂಠ ಒಬ್ಬನೇ ಮಗ. ಆದರೆ ಆಸ್ತಿಯನ್ನು ಮಗನಿಗೆ ಬಿಟ್ಟು ಕೊಟ್ಟಿರಲಿಲ್ಲ ಎಂದು ವರದಿಯಾಗಿದೆ. ಪಿತ್ರಾರ್ಜಿತ ಆಸ್ತಿ ಆಗಿದ್ದು, ತಂದೆಯ ನಿಧನದ ಬಳಿಕ ಒಬ್ಬನೇ ಮಗನಾಗಿರುವ ನಿನಗೆ ಬರುತ್ತಿತ್ತು. ಆದರೂ ಯಾಕೆ ಕೊಲೆ ಮಾಡಿದೆ ಎಂದು ಪೊಲೀಸರು ಆರೋಪಿಯನ್ನು ಪ್ರಶ್ನೆ ಮಾಡಿದ್ದಾರೆ.
ನಮ್ಮ ತಂದೆ ಆರೋಗ್ಯ ಚೆನ್ನಾಗಿತ್ತು. ಏನಿಲ್ಲಾ ಅಂದ್ರೂ ಇನ್ನು 20 ವರ್ಷ ಅವರು ಬದುಕುತ್ತಿದ್ದರು. ಆಸ್ತಿಯೆಲ್ಲಾ ನನಗೆ ಸಿಗುವ ವೇಳೆಗೆ ನನ್ನ ಯೌವನ ಮುಗಿದಿರುತ್ತಿತ್ತು. ಹಾಗಾಗಿ ಕೊಲೆ ಮಾಡಿದೆ ಎಂದು ಹೇಳಿದ್ದಾನೆ.
ತಂದೆ ಖರ್ಚಿಗೆ ಹಣ ಕೊಡುತ್ತಿರಲಿಲ್ಲ. ನನ್ನನ್ನು ತುಂಬಾ ಕೀಳಾಗಿ ನೋಡುತ್ತಿದ್ದರು ಎಂದು ಮಣಿಕಂಠ ಪೊಲೀಸರ ಮುಂದೆ ಹೇಳಿದ್ದಾನೆ.
ಈ ಹಿಂದೆಯೂ ಜೈಲುಪಾಲಾಗಿದ್ದ ಮಣಿಕಂಠ!
ಮೊದಲ ಪತ್ನಿಯ ಕೊಲೆ ಪ್ರಕರಣದಲ್ಲಿ ಮಣಿಕಂಠ ಜೈಲು ಸೇರಿದ್ದನು. ಈ ವೇಳೆ ಜೈಲಿನಲ್ಲಿ ಕುಖ್ಯಾತ ರೌಡಿ ನಡುವಟ್ಟಿ ಶಿವು ಗ್ಯಾಂಗ್ ಮಣಿಕಂಠನಿಗೆ ಪರಿಚಯವಾಗಿದೆ. ಜೈಲಿನಲ್ಲಿದ್ದಾಗ ತಂದೆಯ ಕೊಲೆ ಮಾಡುವ ಬಗ್ಗೆ ಚರ್ಚೆ ನಡೆಸಿದ್ದನು. ಕೊಲೆ ಮಾಡಲು ಸುಪಾರಿ ನೀಡುವಂತೆ ಶಿವು ಗ್ಯಾಂಗ್ ಸಲಹೆ ನೀಡಿತ್ತು.
ಕೊಲೆಯ ಬಳಿಕ ತಮ್ಮಲ್ಲಿಯೇ ಒಬ್ಬರು ಪೊಲೀಸರಿಗೆ ಶರಣಾಗೋದು ಅಂತ ಪ್ಲಾನ್ ಮಾಡಲಾಗಿತ್ತು. ಜೈಲಿನಿಂದ ಹೊರ ಬಂದ ಬಳಿಕ ಪ್ಲಾನ್ ಪ್ರಕಾರವೇ, ಚಿಟ್ಟಿ ಬಾಬು ಎಂಬಾತನಿಗೆ ಸುಪಾರಿ ನೀಡಿದ್ದನು. ಕೊಲೆ ಬಳಿ ಶಿವು ಗ್ಯಾಂಗ್ ಸದಸ್ಯರು ಪೊಲೀಸರ ಮುಂದೆ ಶರಣಾಗಿದ್ದರು.
ಇದನ್ನೂ ಓದಿ: Prediction: ನೂತನ ಕಾಂಗ್ರೆಸ್ ಸರ್ಕಾರದ ಭವಿಷ್ಯ ನುಡಿದ ಕೋಡಿಮಠದ ಶ್ರೀಗಳು
ಪ್ರಕರಣ ದಾಖಲಿಸಿಕೊಂಡ ಪೊಲೀಸರು ಸುಪಾರಿ ಹಂತಕ ಚಿಟ್ಟಿ ಬಾಬುನನ್ನು ಬಂಧಿಸಿದ್ದರು. ಚಿಟ್ಟಿ ಬಾಬು ಬಂಧನ ಬಳಿಕ ಕೊಲೆಯ ರಹಸ್ಯ ಬೆಳಕಿಗೆ ಬಂದಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ