ಉಮೇಶ್​ ಜಾಧವ್​ ಬಿಜೆಪಿಗೆ ಮಾರಾಟವಾಗಿದ್ದಾರೆ ಎಂಬ ಆರೋಪ; ಸ್ಪಷ್ಟನೆ ನೀಡಿದ ಮಗ ಅವಿನಾಶ್​ ಜಾಧವ್​

ಆಪರೇಷನ್ ಕಮಲಕ್ಕೆ ಬಲಿಯಾಗಿ ಮಾಜಿ ಶಾಸಕ ಉಮೇಶ್ ಜಾಧವ್ ಬಿಜೆಪಿಗೆ ಮಾರಾಟವಾಗಿದ್ದಾರೆ ಎಂದು ಸಿದ್ದರಾಮಯ್ಯ ಆರೋಪಿಸಿದ್ದರು. ಈ ಹೇಳಿಕೆಗೆ ಅವಿನಾಶ್​ ಜಾಧವ್​ ಸ್ಪಷ್ಟನೆ ನೀಡಿದ್ದಾರೆ.

Rajesh Duggumane | news18
Updated:May 19, 2019, 5:17 PM IST
ಉಮೇಶ್​ ಜಾಧವ್​ ಬಿಜೆಪಿಗೆ ಮಾರಾಟವಾಗಿದ್ದಾರೆ ಎಂಬ ಆರೋಪ; ಸ್ಪಷ್ಟನೆ ನೀಡಿದ ಮಗ ಅವಿನಾಶ್​ ಜಾಧವ್​
ಸಿದ್ದರಾಮಯ್ಯ, ಅವಿನಾಶ್​, ಉಮೇಶ್​
Rajesh Duggumane | news18
Updated: May 19, 2019, 5:17 PM IST
ಚಿಂಚೋಳಿ (ಮೇ 19): ನಮ್ಮ ತಂದೆ ಬಿಜೆಪಿಗೆ 50 ಕೋಟಿ ರೂಪಾಯಿಗೆ ಮಾರಾಟವಾಗಿದ್ದಾರೆ ಎಂಬ ವಿಚಾರವೆಲ್ಲ ಸುಳ್ಳು. ಈ ವಿಷಯದಲ್ಲಿ ಯಾವುದೇ ಹುರುಳಿಲ್ಲ ಎಂದು ಚಿಂಚೋಳಿ ಬಿಜೆಪಿ ಅಭ್ಯರ್ಥಿ ಅವಿನಾಶ್ ಜಾಧವ್ ಸ್ಪಷ್ಟನೆ ನೀಡಿದ್ದಾರೆ. ಈ ಮೂಲಕ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿಕೆಗೆ ತಿರುಗೇಟು ನೀಡಿದ್ದಾರೆ.

ಚಿಂಚೋಳಿ ವಿಧಾನಸಭಾ ಕ್ಷೇತ್ರಕ್ಕೆ ಉಪಚುನಾವಣೆ ನಡೆಯುತ್ತಿದೆ. ಸ್ವಗ್ರಾಮ ಬೆಡಸೂರು ತಾಂಡಾದಲ್ಲಿ ಮತ ಚಲಾಯಿಸಿದ ನಂತರ ನ್ಯೂಸ್​18 ಕನ್ನಡದ ಜೊತೆ ಮಾತನಾಡಿದ ಅವಿನಾಶ್, “ತಂದೆ ಉಮೇಶ್ ಜಾಧವ್ 50 ಕೋಟಿ ರೂಪಾಯಿಗೆ ಮಾರಾಟವಾಗಿದ್ದಾರೆ, ಆಪರೇಷನ್ ಕಮಲಕ್ಕೆ ಬಲಿಯಾಗಿದ್ದಾರೆ ಎಂಬ ಮಾತುಗಳೆಲ್ಲವೂ ಸುಳ್ಳು. ಚಿಂಚೋಳಿ ಜನತೆಯ ಆತ್ಮಾಭಿಮಾನಕ್ಕೆ ಧಕ್ಕೆ ಬಂತು. ಆದ್ದರಿಂದ ನಮ್ಮ ತಂದೆ ರಾಜೀನಾಮೆ ನೀಡಿದ್ದರು. ಪ್ರತಿಪಕ್ಷಗಳ ಪಿತೂರಿಯನ್ನು ಜನ ನಂಬುವುದಿಲ್ಲ,” ಎಂದಿದ್ದಾರೆ ಅವರು.

ಅಷ್ಟಕ್ಕೂ ಅವರು​ ಚಿಂಚೋಳಿಯಿಂದ ಸ್ಪರ್ಧಿಸಲು ಕಾರಣವೇನು ಎಂಬುದಕ್ಕೆ ಉತ್ತರ ನೀಡಿದ್ದಾರೆ. “ನಾನು ಚಿಂಚೋಳಿಯಲ್ಲಿ ಅಭಿವೃದ್ಧಿ ಕಾರ್ಯ ಮುಂದುವರಿಸುವ ಉದ್ದೇಶದಿಂದ ಸ್ಪರ್ಧಿಸಿದ್ದೇನೆ. ನೆನೆಗುದಿಗೆ ಬಿದ್ದ ಕೆಲಸಗಳಿಗೆ ಮರುಚಾಲನೆ ನೀಡುತ್ತೇನೆ. ನಾನು ಖಂಡಿತವಾಗಿಯೂ ಉಪ ಚುನಾವಣೆಯಲ್ಲಿ ಗೆಲ್ಲುತ್ತೇನೆ,” ಎಂದು ವಿಶ್ವಾಸ ವ್ಯಕ್ತಪಡಿಸಿದ್ದರು.

ಇದನ್ನೂ ಓದಿ: 50 ಕೋಟಿ ರೂ. ತೆಗೆದುಕೊಂಡಿರುವುದು ಸಾಬೀತಾದರೆ ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ; ಉಮೇಶ್​ ಜಾಧವ್​

ಆಪರೇಷನ್ ಕಮಲಕ್ಕೆ ಬಲಿಯಾಗಿ ಮಾಜಿ ಶಾಸಕ ಉಮೇಶ್ ಜಾಧವ್ ಬಿಜೆಪಿಗೆ ಮಾರಾಟವಾಗಿದ್ದಾರೆ ಎಂದು ಸಿದ್ದರಾಮಯ್ಯ ಆರೋಪಿಸಿದ್ದರು. ಚಿಂಚೋಳಿ ಉಪಚುನಾವಣೆ ಪ್ರಚಾರ ಮಾಡಿದ್ದ ಅವರು, “ಉಮೇಶ್​ ಜಾಧವ್ ಮಾರಾಟವಾಗಿದ್ದಾರೆ. ಬಿಜೆಪಿಯವರು ಶಿವಳ್ಳಿಗೆ 25 ಕೋಟಿ ರೂ. ಹಣಕ್ಕೆ ಬೆಲೆ ಕಟ್ಟಿದ್ದರು. ಶಿವಳ್ಳಿ ಈ ವಿಚಾರನ್ನು ನನಗೆ ಫೋನ್ ಮೂಲಕ ತಿಳಿಸಿದ್ದರು. ಪ್ರಜಾಪ್ರಭುತ್ವ ಉಳಿಯಬೇಕು ಅಂದರೆ ಪಕ್ಷಕ್ಕೆ ಬದ್ಧರಾಗಿ ಚುನಾಯಿತವಾದ ಪಕ್ಷಕ್ಕೆ ನಿಷ್ಠಾವಂತರಾಗಿಬೇಕು" ಎಂದು ಅಭಿಪ್ರಾಯ ಪಟ್ಟಿದ್ದರು.

ಈ ಬಗ್ಗೆ ಕಿಡಿಕಾರಿದ್ದ ಉಮೇಶ್​ ಜಾಧಬ್​, "ನಾನು ಒಂದು ವೇಳೆ 50 ಕೋಟಿ ರೂಪಾಯಿ ತೆಗೆದುಕೊಂಡಿದ್ದು ಸಾಬೀತಾದರೆ ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ. ನಮ್ಮ ಕ್ಷೇತ್ರದಲ್ಲಿ ಯಾವುದೇ ಅಭಿವೃದ್ಧಿ ಕೆಲಸ ಆಗುತ್ತಿಲ್ಲ. ಹೀಗಾಗಿ ನಾನು ಕಾಂಗ್ರೆಸ್​ ನಾಯಕರ ವಿರುದ್ಧ ಅಸಮಾಧಾನಗೊಂಡಿದ್ದೆ. ಹಾಗಾಗಿ ಬಿಜೆಪಿ ಸೇರಿದ್ದೆ," ಎಂದಿದ್ದರು.

ಇದನ್ನೂ ಓದಿ: ಪ್ರಜ್ವಲ್ ರೇವಣ್ಣ ಅಫಿಡವಿಟ್ ವಿವಾದ: ಹಾಸನ ಡಿಸಿಯಿಂದ 5 ಪುಟಗಳ ವರದಿ ಸಲ್ಲಿಕೆ
Loading...

'ನಿಮ್ಮ ನ್ಯೂಸ್ 18 ಕನ್ನಡವನ್ನು ಶೇರ್ಚಾಟ್ ನಲ್ಲೂ ಹಿಂಬಾಲಿಸಿ'

First published:May 19, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...