DCM Post Race: ಅಪ್ಪನಿಗೆ ಡಿಸಿಎಂ ಸ್ಥಾನ ಸಿಗಲಿ; ತಂದೆ ಪರ ಮಗಳ ಲಾಬಿ

ಸಂಯುಕ್ತಾ ಪಾಟೀಲ್, ಶಿವಾನಂದ ಪಾಟೀಲ್ ಪುತ್ರಿ

ಸಂಯುಕ್ತಾ ಪಾಟೀಲ್, ಶಿವಾನಂದ ಪಾಟೀಲ್ ಪುತ್ರಿ

Shivanand Patil: ಶಿವಾನಂದ ಪಾಟೀಲರಿಗೆ ಡಿಸಿಎಂ ಸ್ಥಾನ ನೀಡಿದರೆ ನಿಭಾಯಿಸುವ ಸಾಮರ್ಥ್ಯ ಅವರಲ್ಲಿದೆ ಎಂದು ಸಂಯುಕ್ತಾ ಪಾಟೀಲ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

  • Share this:

ಬೆಂಗಳೂರು: ಚುನಾವಣೆಯಲ್ಲಿ ಅಭೂತಪೂರ್ವ ಗೆಲುವು ದಾಖಲಿಸಿರುವ ಕಾಂಗ್ರೆಸ್ (Congress)​ ಮನೆಯಲ್ಲಿ ಸಿಎಂ ಆಯ್ಕೆಯ ಕಸರತ್ತು ನಡೆಯುತ್ತಿದೆ. ಸಿಎಂ ಸ್ಥಾನಕ್ಕಾಗಿ ಡಿಕೆ ಶಿವಕುಮಾರ್ (DK Shivakumar) ಮತ್ತು ಸಿದ್ದರಾಮಯ್ಯ (Siddaramaiah) ನಡುವೆ ನೇರ ಸ್ಪರ್ಧೆ ಏರ್ಪಟ್ಟಿದೆ. ಈ ನಡುವೆ ಡಿಸಿಎಂ ಸ್ಥಾನಕ್ಕಾಗಿ (DCM Post) ಮತ್ತೊಂಡೆ ಕಡೆ ಪೈಪೋಟಿ ನಡೆಯುತ್ತಿದೆ. ಬಸವನ ಬಾಗೇವಾಡಿ (Basavana Bagewadi) ಕ್ಷೇತ್ರದಿಂದ ಆಯ್ಕೆಯಾಗಿರುವ ಮಾಜಿ ಸಚಿವ ಶಿವಾನಂದ್ ಪಾಟೀಲ್ (Former Minister Shivanand Patil) ಪರವಾಗಿ ಮಗಳು ಡಿಸಿಎಂ ಸ್ಥಾನಕ್ಕಾಗಿ ಲಾಬಿ ನಡೆಸುತ್ತಿದ್ದಾರೆ. ಆರು ಬಾರಿ ಶಾಸಕರಾಗಿರುವ ತಂದೆಗೆ ಡಿಸಿಎಂ ಸ್ಥಾನ ಸಿಗಲಿ ಎಂದು ಶಿವಾನಂದ್ ಪಾಟೀಲ್ ಪುತ್ರಿ ಸಂಯುಕ್ತಾ ಪಾಟೀಲ್ ಹೇಳಿದ್ದಾರೆ.


ನಮ್ಮ ತಂದೆ ಶಿವಾನಂದ ಪಾಟೀಲ್ ಅವರಿಗೆ ಡಿಸಿಎಂ ಆಗುವ ಎಲ್ಲ ಅರ್ಹತೆ ಇದೆ. ತಂದೆ ಆರು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದು, ಹಿರಿಯ ರಾಜಕಾರಣಿಗಳಾಗಿದ್ದಾರೆ. ಸದ್ಯ ಕಾಂಗ್ರೆಸ್ ಸರ್ಕಾರ ಪೂರ್ಣ ಬಹುಮತದಿಂದ ಅಧಿಕಾರಕ್ಕೆ ಬಂದಿದೆ. ಕಾಂಗ್ರೆಸ್ ಹೈಕಮಾಂಡ ಮನಸ್ಸು ಮಾಡಿದರೆ ಅದು ಸಾಧ್ಯ. ಶಿವಾನಂದ ಪಾಟೀಲರಿಗೆ ಡಿಸಿಎಂ ಸ್ಥಾನ ನೀಡಿದರೆ ನಿಭಾಯಿಸುವ ಸಾಮರ್ಥ್ಯ ಅವರಲ್ಲಿದೆ ಎಂದು ಸಂಯುಕ್ತಾ ಪಾಟೀಲ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.




ಪಂಚಮಸಾಲಿ ಸಮುದಾಯದ ನಾಯಕ


ಶಿವಾನಂದ ಪಾಟೀಲ್​ ಪ್ರಬಲ ಪಂಚಮಸಾಲಿ ಸಮುದಾಯಕ್ಕೆ ಸೇರಿರುವ ನಾಯಕರಾಗಿದ್ದಾರೆ. ಈ ಹಿಂದೆ ತಿಕೋಟಾ ಮತ ಕ್ಷೇತ್ರದಲ್ಲಿ ಎಂಬಿ ಪಾಟೀಲ್ ವಿರುದ್ಧ ಎರಡು ಸಲ ಸ್ಪರ್ಧೆ ಮಾಡಿದ್ದರು. ಒಂದು ಸಲ ಎಂಬಿ ಪಾಟೀಲ್ ವಿರುದ್ಧ ಗೆಲುವು ಸಾಧಿಸಿದ್ದರು.




2004ರಿಂದ ಬಸವನ ಬಾಗೇವಾಡಿ ಕ್ಷೇತ್ರದಿಂದ ಕಾಂಗ್ರೆಸ್​ನಿಂದ ಸ್ಪರ್ಧಿಸಿದ್ರು. 2008 ರಲ್ಲಿ ಎಸ್ ಕೆ ಬೆಳ್ಳುಬ್ಬಿ ವಿರುದ್ಧ ಸೋಲು ಕಂಡಿದ್ದರು.ಚ 2013, 2018 ಹಾಗೂ 2023 ರಲ್ಲಿ ಸತತವಾಗಿ ಗೆಲ್ಲುತ್ತಾ ಶಿವಾನಂದ ಪಾಟೀಲ್ ಬಂದಿದ್ದಾರೆ.


ಇದನ್ನೂ ಓದಿ:  Karnataka Next CM: ಬೆಳಗಿನ ಜಾವ 4 ಗಂಟೆಗೆ ಡಿಕೆಶಿ ಮನೆಗೆ ಬಂದ ಕಾಲಜ್ಞಾನ ಗುರೂಜಿ; ಸಿಎಂ ಆಗ್ತಾರಾ ಕನಕಪುರ ಬಂಡೆ?

top videos


    ಎಂಬಿ ಪಾಟೀಲ್ ವಿರುದ್ದ ಎರಡು ಸಲ ಸ್ಪರ್ಧೆ ಮಾಡಿದಾಗ ಒಮ್ಮೆ ಜೆಡಿಎಸ್, ಮತ್ತೊಮ್ಮೆ ಬಿಜೆಪಿ ಪಕ್ಷದಿಂದ ಸ್ಪರ್ಧೆ ಮಾಡಿದ್ದರು.

    First published: