ಹಾವೇರಿ: ಸ್ವಕ್ಷೇತ್ರದಲ್ಲಿ ಗೆಲುವು ಸರಳವಾಗಿಲ್ಲ ಎಂಬ ಗುಪ್ತಚರ ವರದಿ ಬೆನ್ನಲ್ಲೇ ಮತ್ತೊಮ್ಮೆ ಶಿಗ್ಗಾಂವಿಗೆ ಸಿಎಂ ಬಸವರಾಜ್ ಬೊಮ್ಮಾಯಿ (CM Basavaraj Bommai) ಭೇಟಿ ನೀಡಿ ಪ್ರಚಾರ ನಡೆಸಿದ್ದಾರೆ. ತಡಸ ಗ್ರಾಮದಲ್ಲಿ (Tadasa Village) ಜನರನ್ನು ಉದ್ದೇಶಿಸಿ ಮಾತನಾಡಿದ ಸಿಎಂ ಬೊಮ್ಮಾಯಿ, ಸಿಎಂ ಆಗಿದ್ದಕ್ಕೆ ಇಷ್ಟೆಲ್ಲಾ ಕೆಲಸ ಮಾಡೋಕೆ ಸಾಧ್ಯ. ಶಾಸಕ. ಮಂತ್ರಿ ಹಾಗೂ ಮುಖ್ಯಮಂತ್ರಿಯಾಗಿ ನಿಮ್ಮ ಪರವಾಗಿ ಕೆಲಸ ಮಾಡಿದ್ದೇನೆ. ಕ್ಷೇತ್ರದಲ್ಲಿ ಯುವಕರಿಗೆ ಉದ್ಯೋಗ ಕೊಡುವುದು ನನ್ನ ಗುರಿ ಎಂದು ಹೇಳಿದರು. ನಾವೆಲ್ಲರೂ ಶಾಂತಿ ಸೌಹಾರ್ದತೆ ಕಾಪಾಡಿಕೊಂಡು ಹೋಗಬೇಕು ಎಂದು ಕಾರ್ಯಕರ್ತರಿಗೆ ಸಲಹೆ ನೀಡಿದರು.
ನಾನು ಇಡೀ ರಾಜ್ಯ ಸುತ್ತಬೇಕಾಗಿದೆ. ಕರ್ನಾಟಕದಲ್ಲಿ ಬಿಜೆಪಿಯ ಸುನಾಮಿ ಇದೆ. ಕಲ್ಯಾಣ ಕರ್ನಾಟಕ, ಕರಾವಳಿ ಕರ್ನಾಟಕ ಹಾಗೂ ಮಧ್ಯ ಕರ್ನಾಟಕ ಎಲ್ಲಾ ಕಡೆ ಬಿಜೆಪಿ ಸುನಾಮಿ ಇದೆ. ಈ ಬಾರಿ ಮತ್ತೆ ಬಿಜೆಪಿ ಅಧಿಕಾರಕ್ಕೆ ಬರುತ್ತದೆ ಎಂದು ಸಿಎಂ ಬೊಮ್ಮಾಯಿ ವಿಶ್ವಾಸ ವ್ಯಕ್ತಪಡಿಸಿದರು.
ನಿಮ್ಮ ಆಶೀರ್ವಾದದಲ್ಲಿ ದೊಡ್ಡ ಶಕ್ತಿ ಇದೆ
ನೀವೇ ಬಸವರಾಜ್ ಬೊಮ್ಮಾಯಿ ಎಂದು ತಿಳಿದು ನನಗೆ ಮತ ನೀಡಿ. ನನಗೆ ಇಡೀ ರಾಜ್ಯ ಸುತ್ತವ ಅವಕಾಶ ಮಾಡಿಕೊಡಿ. ನಿಮ್ಮ ಸಮಸ್ಯೆ ನಮ್ಮ ಹಿರಿಯರು, ಮುಖಂಡರು ಬಗೆಹರಿಸುತ್ತಾರೆ. ನಿಮ್ಮ ಆಶೀರ್ವಾದದಲ್ಲಿ ದೊಡ್ಡ ಶಕ್ತಿ ಇದೆ. ನೀವೂ ಬಟನ್ ಒತ್ತಿದ್ದರಿಂದ ನಾನು ಎಲ್ಲಾ ಸ್ಥಾನಮಾನ ಪಡಕೊಂಡಿದ್ದೇನೆ ಎಂದು ಹೇಳಿದರು.
ಇದನ್ನೂ ಓದಿ: Varuna ಕ್ಷೇತ್ರದಲ್ಲಿ ಸಿದ್ದರಾಮಯ್ಯ ವಿರುದ್ಧ ಯುವಕರ ಆಕ್ರೋಶ
ಮುಸ್ಲಿಂ ನಾಯಕರು ಬಿಜೆಪಿ ಸೇರ್ಪಡೆ
ಸಿಎಂ ರೋಡ್ ಶೋದಲ್ಲಿ ಹಲವು ಮುಸ್ಲಿಂ ನಾಯಕರು ಕಾಂಗ್ರೆಸ್ ತೊರೆದು ಬಿಜೆಪಿ ಸೇರ್ಪಡೆಯಾದರು. ಪಕ್ಷದ ಶಾಲು ಹಾಕಿ ಕಾಂಗ್ರೆಸ್ ಕಾರ್ಯಕರ್ತರನ್ನು ಬಸವರಾಜ್ ಬೊಮ್ಮಾಯಿ ಬರಮಾಡಿಕೊಂಡರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ