ಕೆಜಿಎಫ್​ನಲ್ಲಿ ಕಾಂಗ್ರೆಸ್​ ಸಮಾವೇಶ: ಮಟನ್ ಬಿರಿಯಾನಿ ಸವಿಯಲು ಮುಗಿಬಿದ್ದ ಜನರು

 ಸಭೆ ತಡವಾಗಿ ಆರಂಭವಾದರೂ ಮೊದಲು ಸಮಾಧಾನವಾಗಿಯೇ ಕುಳಿತಿದ್ದ ಕಾರ್ಯಕರ್ತರು,  ಅರ್ಧದಲ್ಲಿ  ಮಟನ್ ಬಿರಿಯಾನಿ ಸವಿಯಲು ಮುಗಿಬಿದ್ದ ದೃಶ್ಯಗಳು ಕಂಡುಬಂತು.

 ಸಭೆ ತಡವಾಗಿ ಆರಂಭವಾದರೂ ಮೊದಲು ಸಮಾಧಾನವಾಗಿಯೇ ಕುಳಿತಿದ್ದ ಕಾರ್ಯಕರ್ತರು,  ಅರ್ಧದಲ್ಲಿ  ಮಟನ್ ಬಿರಿಯಾನಿ ಸವಿಯಲು ಮುಗಿಬಿದ್ದ ದೃಶ್ಯಗಳು ಕಂಡುಬಂತು.

 ಸಭೆ ತಡವಾಗಿ ಆರಂಭವಾದರೂ ಮೊದಲು ಸಮಾಧಾನವಾಗಿಯೇ ಕುಳಿತಿದ್ದ ಕಾರ್ಯಕರ್ತರು,  ಅರ್ಧದಲ್ಲಿ  ಮಟನ್ ಬಿರಿಯಾನಿ ಸವಿಯಲು ಮುಗಿಬಿದ್ದ ದೃಶ್ಯಗಳು ಕಂಡುಬಂತು.

  • Share this:
ಕೋಲಾರ (ಮಾ. 18):  ಮುಂಬರುವ ಜಿಲ್ಲಾ ಪಂಚಾಯ್ತಿ, ತಾಲೂಕು ಪಂಚಾಯ್ತಿ ಚುನಾವಣೆ ಹಿನ್ನಲೆ ಕಾಂಗ್ರೆಸ್ ಪಕ್ಷ ಚುನಾವಣಾ ರಣಕಹಳೆ ಮೊಳಗಿಸಿದೆ. ಕೆಜಿಎಫ್​ ಕಾಂಗ್ರೆಸ್ ಶಾಸಕಿ ರೂಪಾ ಶಶಿಧರ್ ನೇತೃತ್ವದಲ್ಲಿ  ತಾಲೂಕಿನ ಬೇತಮಂಗಲ ಗ್ರಾಮದಲ್ಲಿ ಚುನಾವಣಾ ಪೂರ್ವ ಸಿದ್ದತೆ ಸಭೆಯನ್ನ ಆಯೋಜಿಸಲಾಗಿತ್ತು.  ಲೋಕಸಭೆ ಚುನಾವಣೆ ನಂತರ ಜಿಲ್ಲೆಯಲ್ಲಿ ಇದೇ ಮೊದಲ ಬಾರಿಗೆ ಕೈ ಸಭೆ ಆಯೋಜಿಸಲಾಗಿದ್ದು,  ಸಭೆಯಲ್ಲಿ ಮಾಜಿ ಕೇಂದ್ರ ಸಚಿವ ಕೆಎಚ್ ಮುನಿಯಪ್ಪ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ್ಯ ಕೆ ಚಂದ್ರಾರೆಡ್ಡಿ ಸೇರಿದಂತೆ, ಕೆಜಿಎಫ್​ ಮತ್ತು ಬೇತಮಂಗಲ ಗ್ರಾಮದ ಹತ್ತಾರು ಕಾಂಗ್ರೆಸ್ ನಾಯಕರು ಹಾಗೂ ಮೂರು ಸಾವಿರಕ್ಕೂ ಅಧಿಕ ಕಾಂಗ್ರೆಸ್ ಕಾರ್ಯಕರ್ತರು ವಿವಿಧೆಡೆಯಿಂದ ಆಗಮಿಸಿ  ಭಾಗಿಯಾಗಿದ್ದರು,

ಬಿಜೆಪಿ ವಿರುದ್ದ ಕೆಎಚ್ ಮುನಿಯಪ್ಪ ವ್ಯಂಗ್ಯ

ಕಾರ್ಯಕ್ರಮದಲ್ಲಿ ಪ್ರಮುಖ ಭಾಷಣ ಮಾಡಿದ ಮುನಿಯಪ್ಪ, ತಮ್ಮ ಭಾಷಣದುದ್ದಕ್ಕು  ಬಿಜೆಪಿ ವಿರುದ್ದ  ಹರಿಹಾಯ್ದರು,  ಬಿಜೆಪಿ ವಿರುದ್ದ ದೇಶದಲ್ಲೆ ಚಳವಳಿ ಆರಂಭಿಸಬೇಕಿದೆ, ಇಲ್ಲವಾದರೆ ರೈತರು, ಬಡವರು ,ಕಾರ್ಮಿಕರಿಗೆ ಜೀವನ ನಡೆಸಲು ಸಾಧ್ಯವಾಗುವುದಿಲ್ಲ. ದೆಹಲಿಯಲ್ಲಿ ರೈತರ ಹೋರಾಟಕ್ಕೂ ಬಿಜೆಪಿ ಬೆಲೆ ನೀಡಿಲ್ಲ. ಕಾಂಗ್ರೆಸ್ ಸ್ವಾತಂತ್ರ್ಯ ಹೋರಾಟ ಮಾಡುವ ವೇಳೆಯಲ್ಲಿ ಬಿಜೆಪಿಯವರು ಬ್ರಿಟಿಷರ ಗುಲಾಮರಾಗಿದ್ದರು. ರಾಜ್ಯ ಬಿಜೆಪಿ  ಸರ್ಕಾರ ಹೆಚ್ಚು ದಿನ ಉಳಿಯುವುದಿಲ್ಲ ಎಂದು ಭವಿಷ್ಯ ನುಡಿದರು.ಸಿಎಂ ಯಡಿಯೂರಪ್ಪರನ್ನ ಕುರ್ಚಿಯಿಂದ ಕೆಳಗಿಳಿಸುವ ಪ್ರಯತ್ನ ಈಗಾಗಲೇ ತೆರೆಮರೆಯಲ್ಲಿ ನಡೆಯುತ್ತಿದ್ದು, ಹಾಗೇನಾದರು ಆದಲ್ಲಿ ಸರ್ಕಾರ ಬಿದ್ದು ಹೊಗುತ್ತದೆ, ಮತ್ತೆ ಕಾಂಗ್ರೆಸ್ ಪಕ್ಷ ರಾಜ್ಯದಲ್ಲಿ ಸಂಪೂರ್ಣವಾಗಿ ಅಧಿಕಾರಕ್ಕೆ ಬರಲಿದೆ ಎಂದರು.ಕಳೆದ ಲೋಕಸಭೆ ಚುನಾವಣೆ ಸೋಲಿನ ಬಗ್ಗೆ ಮಾತನಾಡಿದ ಅವರಿ, ನಾನು ನೋಡಿದ ಸೋಲು ಅದು ಸೋಲಲ್ಲ ಎಂದರು, ಕಳೆದ ಏಳು ಬಾರಿ ನಾನು ಗೆದ್ದಾಗ ಪ್ರತಿ ಚುನಾವಣೆಯಲ್ಲಿ 4 ಲಕ್ಷ ಮತಗಳನ್ನ‌ ಪಡೆದಿದ್ದೆ, ಆದರೆ ಕಳೆದ ಲೋಕಸಭೆ ಚುನಾವಣೆಯಲ್ಲಿ 5 ಲಕ್ಷ ಮತಗಳನ್ನು ಪಡೆದಿದ್ದೇನೆ. ಜೆಡಿಎಸ್ ಪಕ್ಷದ ಅಭ್ಯರ್ಥಿ ಇದ್ದಲ್ಲಿ ನಾನು ಮತ್ತೊಮ್ಮೆ ಗೆಲ್ಲುತ್ತಿದ್ದೆ ಎಂದು, ಲೋಕಸಭೆ ಚುನಾವಣೆಯಲ್ಲಿನ ಸೋಲನ್ನ ಮೆಲುಕು ಹಾಕಿಕೊಂಡರು.

ಮಟನ್ ಬಿರಿಯಾನಿ  ಸವಿಯಲು ಮುಗಿಬಿದ್ದ ಕೈ ಕಾರ್ಯಕರ್ತರು

ಸಭೆ ತಡವಾಗಿ ಆರಂಭವಾದರೂ ಮೊದಲು ಸಮಾಧಾನವಾಗಿಯೇ ಕುಳಿತಿದ್ದ ಕಾರ್ಯಕರ್ತರು,  ಅರ್ಧದಲ್ಲಿ  ಮಟನ್ ಬಿರಿಯಾನಿ ಸವಿಯಲು ಮುಗಿಬಿದ್ದ ದೃಶ್ಯಗಳು ಕಂಡುಬಂತು.ಕಾರ್ಯಕರ್ತರಿಗೆ ಮಟನ್ ಬಿರಿಯಾನಿ ಹಾಕಲೆಂದು 20 ಕೌಂಟರ್ ಗಳನ್ನ ತೆರೆಯಲಾಗಿತ್ತು, ಹಾಗಿದ್ದರು ನೂಕುನುಗ್ಗಲು ಉಂಟಾಯಿತು,  ಎಲ್ಲರಿಗೂ  ಸಾಕಾಗುವಷ್ಟು ಮಟನ್ ಬಿರಿಯಾನಿ ಆಯೋಜಿಸಿದ್ದರು. ಕೌಂಟರ್ ಗಳಲ್ಲಿ ಬಿರಿಯಾನಿ ಖಾಲಿಯಾಗುತ್ತಿದ್ದಂತೆ, ಅಕ್ಕ ಪಕ್ಕದಲ್ಲಿದ್ದ ಬಿರಿಯಾನಿ ವಿತರಣೆ ಕೌಂಟರ್ ಗಳಿಗೆ, ಜನರು ಮುಗಿಬಿದ್ದಿದ್ದರಿಂದ ನೂಕುನುಗ್ಗಲು ಉಂಟಾಯಿತು. ಕಡೆಗೆ ಸುಡು ಬಿಸಿಲಲ್ಲು  ಸಮಾವೇಶದಲ್ಲಿ ಭಾಗಿಯಾಗಿದ್ದ ಎಲ್ಲಾ ಕಾರ್ಯಕರ್ತರು ಹರಸಾಹಸ ಪಟ್ಟು ರುಚಿಯಾದ ಬಿರಿಯಾನಿ ಸೇವಿಸಿ ಖುಷಿ ಪಟ್ಟರು. ಆದರೆ ಬಿರಿಯಾನಿಗೆ ಮುಗಿಬೀಳುವ  ಆತುರದಲ್ಲಿ ಜನರು ಮಾಸ್ಕ್ ಧರಿಸದೆ, ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳದೆ ನಿರ್ಲಕ್ಷ್ಯ ತೋರಿದರು.
Published by:Seema R
First published: