Muthappa Rai Funeral: ಬಂಟ್ಸ್ ಸಂಪ್ರದಾಯದಂತೆ ನಡೆಯಲಿದೆ ಮುತ್ತಪ್ಪ ರೈ ಅಂತಿಮ ವಿಧಿ ವಿಧಾನ

Muthappa Rai Funeral: ಇಂದು ಬೆಳಗ್ಗೆ 2 ಗಂಟೆಗೆ ಮುತ್ತಪ್ಪ ರೈ ನಮ್ಮನ್ನು ಅಗಲಿದ್ದಾರೆ. ಅವರಿಗೆ ಇಬ್ಬರು ಮಕ್ಕಳಿದ್ದು, ಅವರ ಇಚ್ಚೆಯಂತೆ ಬಂಟ್ಸ್ ಸಮುದಾಯದ ಸಂಪ್ರದಾಯದ ಪ್ರಕಾರ ಅವರ ಧರ್ಮಪತ್ನಿಯ ಸಮಾಧಿಯ ಬಳಿಯೇ ಅಂತಿಮ ಸಂಸ್ಕಾರ ಮಾಡುತ್ತೇವೆ ಎಂದು ರೈ ಸಂಬಂಧಿ ರಾಕೇಶ್‌ ಲಾಬೋ ತಿಳಿಸಿದ್ದಾರೆ.

ಮುತ್ತಪ್ಪ ರೈ

ಮುತ್ತಪ್ಪ ರೈ

  • Share this:
ಬೆಂಗಳೂರು (ಮೇ 15); ಕ್ಯಾನ್ಸ್‌ರ್‌ನಿಂದ ಬಳಲುತ್ತಿದ್ದ ಮಾಜಿ ಡಾನ್ ಮುತ್ತಪ್ಪ ರೈ ಮೃತಪಟ್ಟಿದ್ದು, ಬಂಟ್ಸ್‌ ಸಮುದಾಯದ ವಿಧಿ ವಿಧಾನದಂತೆ ಅವರ ಅಂತ್ಯಕ್ರಿಯೆ ನಡೆಸಲಾಗುವುದು ಎಂದು ಮುತ್ತಪ್ಪ ರೈ ಸಂಬಂಧಿ ರಾಕೇಶ್ ಲಾಬೋ ತಿಳಿಸಿದ್ದಾರೆ.

ಈ ಕುರಿತು ಮಾಹಿತಿ ನೀಡಿರುವ ರಾಕೇಶ್‌ ಲಾಬೋ, "ಇಂದು ಬೆಳಗ್ಗೆ 2 ಗಂಟೆಗೆ ಮುತ್ತಪ್ಪ ರೈ ನಮ್ಮನ್ನು ಅಗಲಿದ್ದಾರೆ. ಅವರಿಗೆ ಇಬ್ಬರು ಮಕ್ಕಳಿದ್ದು, ಅವರ ಇಚ್ಚೆಯಂತೆ ಬಂಟ್ಸ್ ಸಮುದಾಯದ ಸಂಪ್ರದಾಯದ ಪ್ರಕಾರ ಅವರ ಧರ್ಮಪತ್ನಿಯ ಸಮಾಧಿಯ ಬಳಿಯೇ ಅಂತಿಮ ಸಂಸ್ಕಾರ ಮಾಡುತ್ತೇವೆ.

ಮುತ್ತಪ್ಪ ರೈ ಅವರ ಹಿರಿಯ ಮಗ ರಾಕಿ ರೈ ಕೆನಡಾದಲ್ಲಿ ಇದ್ದಾರೆ. ಅವರು ಪ್ರಸ್ತುತ ಪರಿಸ್ಥಿತಿಯಲ್ಲಿ ಭಾರತಕ್ಕೆ ಬರಲು ಸಾಧ್ಯವಿಲ್ಲ. ಹೀಗಾಗಿ ಅವರ ಕಿರಿಯ ಮಗ ರಿಕ್ಕಿ ರೈ ಎಲ್ಲಾ ಅಂತಿಮ ವಿಧಿವಿಧಾನ ನೆರವೇರಿಸಲಿದ್ದಾರೆ. ಬಿಡದಿಯಲ್ಲಿ ಅಂತಿಮ ಕಾರ್ಯ ನಡೆಯಲಿದ್ದು, ಲಾಕ್ ಡೌನ್ ಇರೋದ್ರಿಂದ ಕುಟುಂಬದ 25 ಜನ ಮಾತ್ರ ಭಾಗಿಯಾಗುತ್ತಾರೆ" ಎಂದು ಲಾಕೇಶ್‌ ಲಾಬೋ ತಿಳಿಸಿದ್ದಾರೆ.

ಇದನ್ನೂ ಓದಿ : Muthappa Rai Death: ಡಾನ್ ಜಯರಾಜನ ಕೊಲೆಯಿಂದ ಮೋಹನ್‌ ಆಳ್ವಾ ಮರ್ಡರ್‌ ವರೆಗೆ ಮುತ್ತಪ್ಪ ರೈ ರಕ್ತಸಿಕ್ತ ಇತಿಹಾಸ!
First published: