Hampi : ನೀವು ಹಂಪಿಗೆ ಟ್ರಿಪ್ ಪ್ಲಾನ್ ಮಾಡಿದ್ರೆ, ಮಿಸ್ ಮಾಡ್ದೆ ಈ ಸ್ಥಳಗಳಿಗೆ ಹೋಗಲೇಬೇಕು

Hampi Places :ಹಂಪಿ ಎಂದ ಕೂಡಲೇ ನಮ್ಮ ಕಣ್ಮುಂದೆ ಸುಳಿಯುವುದು ಅಲ್ಲಿನ ಪ್ರಸಿದ್ಧ ವಿಜಯ ನಗರ ರಾಜಮನೆತನ, ಕಲ್ಲಿನಲ್ಲಿ ಅರಳಿ ನಿಂತ ದೇವಾಲಯಗಳು, ಕಲಾ ಕುಸುರಿಯಿಂದಲೇ ಕಣ್ಮನ ಸೆಳೆಯುವ ಗೋಪುರಗಳು, ವಿಶಾಲ ರಸ್ತೆಗಳು ಮತ್ತು ಪ್ರತಿಮೆಗಳು.. ಇತಿಹಾಸದ ಗತವೈಭವ ಸಾರಿ ಹೇಳುವ ಪಾಳುಬಿದ್ದಿರುವ ಹಂಪೆಗೆ ಪ್ರತಿನಿತ್ಯ ಸಾವಿರಾರು ಸಂಖ್ಯೆಯ ಪ್ರವಾಸಿಗರು ಭೇಟಿ ನೀಡುತ್ತಲೇ ಇರುತ್ತಾರೆ..

 ಹಂಪಿ ಟ್ರಿಪ್

ಹಂಪಿ ಟ್ರಿಪ್

 • Share this:
  ಪ್ರಕೃತಿಯ ರಮಣೀಯತೆಗೆ ಹತ್ತಿರವಾದ ತುಂಗಭದ್ರೆಯ(Tungabhadra) ತಟದಲ್ಲಿ(Bank of River) ವಿಜಯನಗರ ಸಾಮ್ರಾಜ್ಯ (Vijayanagara empire) ಸ್ಥಾಪನೆಯಾದ ಸ್ಥಳ ಹಂಪಿ..(Hampi) ಸರಿಸುಮಾರು 500 ವರ್ಷಗಳ ಹಿಂದೆ ವೈಭವೋಪೇತ ಆಡಳಿತ ನಡೆಸಿದ ಕೃಷ್ಣದೇವರಾಯನ (Sri KrishnaDevaraya) ಸಾಹಸಗಾಥೆಯ ಕಥೆ,ವಿಜಯನಗರ ಸಾಮ್ರಾಜ್ಯದ ಗತ ವೈಭವವನ್ನು ಸಾರುವ ಕಥೆ ಹೇಳಲು ಇರುವ ಕುರುಹು ಅಂದ್ರೆ ಹಂಪಿ..ಹಂಪಿಯಲ್ಲಿ ಒಂದೊಂದು ಶಿಲೆಯೂ ಅದ್ಭುತ ಕತೆಯನ್ನು(Story) ಹೇಳುತ್ತವೆ. ಪ್ರತೀ ಕಟ್ಟಡಗಳೂ ತನ್ನದೇ ಆದ ವೈವಿಧ್ಯತೆಯನ್ನೂಳಗೊಂಡಿದೆ. ದೇವಸ್ಥಾನ,(Temple) ಸಪ್ತಸ್ವರ ಸಂಗೀತ ಹೊರಹೊಮ್ಮಿಸುವ ಕಲ್ಲಿನ ಕಂಭಗಳು, ಜುಳು ಜುಳು ಹರಿಯುವ ತುಂಗಭದ್ರೆಯ ತಟದಲ್ಲಿರುವ ವಿಶ್ವವಿಖ್ಯಾತ ಕಲ್ಲಿನ ರಥ, ಮಹಾನವಮಿ ದಿಬ್ಬ,(Mahanavami Dibba) ಸಾಸಿವೆ ಕಾಳು ಗಣಪತಿ, ಉಗ್ರ ನರಸಿಂಹ, ಕಮಲ ಮಹಲ್ , ಬಡವಿ ಲಿಂಗ, ಅನೆ ಲಾಯ, ಒಂಟೆ ಸಾಲು, ಹೀಗೆ ಸಾಲು ಸಾಲು ಹಂಪಿಯಲ್ಲಿನ ಒಂದೊಂದು ದೇಗುಲ ಶಿಲೆಗಳು, ಕನ್ನಡ ಸಾಮ್ರಾಜ್ಯ ವಿಜಯನಗರದ ವೈಭೋಗ ಎಷ್ಟಿತ್ತು ಎಂಬುದಕ್ಕೆ ಸಾಕ್ಷಿಯಾಗಿದೆ..

  ತುಂಗಭದ್ರೆಯ ಜುಳು ಜುಳು ಹರಿಯುವ ಸದ್ದಿನ ಜೊತೆಗೆ, ಮುತ್ತು ರತ್ನಗಳನ್ನು ರಸ್ತೆಯಲ್ಲಿ ಗುಡ್ಡೆಯಾಗಿ ಮಾರಾಟ ಮಾಡಲಾಗುತ್ತಿತ್ತು ಎಂಬ ದಂತಕಥೆಗಳನ್ನು ಕೇಳಿದ ಸಾವಿರಾರು ಜನ ಪ್ರವಾಸಿಗರು , ಹಂಪಿಯ ಗತ ವೈಭೋಗ ಹೇಗಿರಬಹುದು ಎಂಬ ಕುತೂಹಲದಿಂದ ಹಂಪಿಯತ್ತ ಪ್ರತಿನಿತ್ಯ ಬರುತ್ತಲೇ ಇರುತ್ತಾರೆ.. ಹೀಗಾಗಿ ಹಂಪಿಗೆ ಹೋದಾಗ ಪ್ರಮುಖವಾಗಿ ಯಾವೆಲ್ಲಾ ಜಾಗಕ್ಕೆ ಹೋಗಬೇಕು ಎನ್ನುವುದರ ಬಗ್ಗೆ ಮಾಹಿತಿ ಇಲ್ಲಿದೆ..

  1) ವಿರೂಪಾಕ್ಷ ದೇವಸ್ಥಾನ : ಹಂಪಿಯ ಹೆಮ್ಮೆಗಳಲ್ಲೊಂದು ವಿರೂಪಾಕ್ಷ ದೇವಾಲಯ. ದಕ್ಷಿಣ ಭಾರತದ ಕಾಶಿ ಎಂದು ಕರೆಸಿಕೊಂಡಿರುವ ವಿರೂಪಾಕ್ಷ ದೇವಾಲಯದಲ್ಲಿ ಸುಮಾರು ಹೇಳು ಶತಮಾನಗಳ ಹಿಂದಿನಷ್ಟು ಹಳೆಯದು.. ವಿರೂಪಾಕ್ಷ ದೇವಾಲಯದಲ್ಲಿ ಗರ್ಭ ಗೃಹ, ಮೂರು ಅಂತರಾಳಗಳು, ನವರಂಗ ಮತ್ತು ಮುಖಮಂಟಪ ಅಥವಾ ರಂಗಮಂಪಟಗಳು ಕಂಡು ಬರುತ್ತವೆ.. ದೇವಸ್ಥಾನದ ಒಳಭಾಗದಲ್ಲಿ ಸೂರ್ಯನಾರಾಯಣ, ಮುತ್ತಿನರಸಿಂಹ, ತಾರಕೇಶ್ವರ, ಪಾತಾಳೇಶ್ವರ, ಸ್ವರಸ್ವತಿ ಮತ್ತು ನವದುರ್ಗಾ ಗುಡಿಗಳಿವೆ. ಪಶ್ಚಿಮ ಮೊಗಸಾಲೆಯಲ್ಲಿ ಆರು ಕೈಗಳ ಮಹಿಷಾಸುರ ಮರ್ದಿನಿ, ಹಿಂದುಗಡೆ ವಿದ್ಯಾರಣ್ಯ ಯತಿಗಳ ಇನ್ನೊಂದು ಚಿಕ್ಕ ಗುಡಿಯಿದೆ.

  ಇದನ್ನೂ ಓದಿ :ಪ್ರವಾಸಿಗರ ಸಂಖ್ಯೆ ಇಳಿಮುಖ: ಸಂಕಷ್ಟಕ್ಕೆ ತಲುಪಿದ ಹಂಪಿ ಪ್ರವಾಸಿ ಗೈಡ್​ಗಳು

  2) ಸಾಸಿವೆಕಾಳು ಗಣೇಶ : ನೀವು ಹಂಪಿಗೆ ಹೋಗುತ್ತೀರೆಂದಾದರೆ, ಹೇಮಕೂಟ ಬೆಟ್ಟದ ಕೆಳಗಿರುವ ಸಸಿವೇಕಾಳು ಗಣೇಶ ಗುಡಿಗೆ ಭೇಟಿ ನೀಡಲೇ ಬೇಕು. ಸಾಸಿವೆ ಕಾಳುಗಳನ್ನು ನೆನಪಿಗೆ ತರುವಂತಹ, ಇಲ್ಲಿರುವ ಜನಪ್ರೀಯ ಗಣಪತಿ ವಿಗ್ರಹವು 8 ಅಡಿ ಉದ್ದವಾಗಿದೆ. ಆದ್ದರಿಂದ ಭಕ್ತ ಸಮೂಹದಲ್ಲಿ, ಇದು ಸಾಸಿವೆಕಾಳು ಗಣೇಶನೆಂಬ ಹೆಸರಿನಿಂದಲೂ ಚಿರಪರಿಚಿತವಾಗಿದೆ.

  3) ಕಡಲೆಕಾಳು ಗಣೇಶ : ಹೇಮಕೂಟದಲ್ಲಿ ಸಾಸಿವೆಕಾಳು ಗಣೇಶನಂತೆ ಹಂಪಿಯಲ್ಲಿರುವ ಮತ್ತೊಂದು ಪ್ರಮುಖ ಪ್ರವಾಸೀ ತಾಣ ಅಂದ್ರೆ ಅದು ಕಡಲೆಕಾಳು ಗಣೇಶ.. ಕಡಲೆಕಾಳು ಗಣೇಶನ ವಿಗ್ರಹ ಕೊಂಚ ಭಗ್ನ ಗೊಂಡಿರುವುದರಿಂದ ಇದರ ಹೊಟ್ಟೆ ನೋಡಲು ಕಡಲೆಕಾಳಿನಂತೆ ಕಾಣುತ್ತದೆ.ಜೊತೆಗೆ ಇದು ಏಕಶಿಲೆ ವಿಗ್ರಹ ಆಗಿರುವುದರಿಂದ ಕಡಲೆಕಾಳು ಗಣಪತಿ ಎಂದು ಕರೆಯಲಾಗುತ್ತದೆ.

  ಇದನ್ನೂ ಓದಿ :ಹಂಪಿಯಲ್ಲಿ ನಿರ್ಮಾಣವಾಗಲಿದೆ ವಿಶ್ವದ ಅತಿ ಎತ್ತರದ ಹನುಮಂತನ ಪ್ರತಿಮೆ; ಇದರ ಎತ್ತರ ಮತ್ತು ವೆಚ್ಚ ಎಷ್ಟು ಗೊತ್ತಾ?

  4) ಮಾತುಂಗ ಬೆಟ್ಟ : ಮಾತುಂಗ ಬೆಟ್ಟಹಂಪಿಯ ಅತ್ಯಂತ ಜನಪ್ರಿಯ ಬೆಟ್ಟವಾಗಿದೆ. ಇದು ನಗರದ ಹೃದಯ ಭಾಗದಲ್ಲಿದೆ ಮತ್ತು ಇಲ್ಲಿನ ಅತಿ ಎತ್ತರದ ಸ್ಥಳವಾಗಿದೆ. ಇಡೀ ನಗರದ ಅತ್ಯುತ್ತಮ ನೋಟವನ್ನು ಒದಗಿಸುವ ಕಾರಣದಿಂದಾಗಿ ಇದು ಜನಪ್ರಿಯತೆಗೆ ಮುಖ್ಯ ಕಾರಣವಾಗಿದೆ. ಇಲ್ಲಿನ ಇನ್ನೊಂದು ಆಕರ್ಷಣೆ ಎಂದರೆ ಬೆಟ್ಟದ ಮೇಲಿನಿಂದ ಮುಂಜಾನೆ ಮತ್ತು ಮುಸ್ಸಂಜೆಯ ಸುಂದರ ನೋಟವನ್ನು ಕಣ್ತುಂಬಿಸಿಕೊಳ್ಳ ಬಹುದು. ಒಂದು ವೇಳೆ ನಾವು ಹಂಪಿಗೆ ಭೇಟಿ ನೀಡಿ ಮಾತುಂಗ ಬೆಟ್ಟಕ್ಕೆ ಹೋಗಿ ಬರದೆ ಇದ್ದರೆ ಹಂಪಿಯ ಪ್ರವಾಸ ಅಪೂರ್ಣವಾದಂತೆ..

  5) ಹೇಮಕೂಟ ಬೆಟ್ಟದ ದೇವಾಲಯ: ವಿಜಯನಗರ ಸಾಮ್ರಾಜ್ಯದ ಗತವೈಭವದ ಸಾರಿ ಹೇಳಲು ಸಾಕ್ಷಿಯಾಗಿರುವ ಅನೇಕ ದೇವಾಲಯಗಳ ಸಾಲು ಹೇಮಕೂಟದಲ್ಲಿ ಬರುತ್ತದೆ. ವಿಶ್ವಪಾರಂಪರಿಕಾ ಸ್ಥಳಗಳಲ್ಲಿ ಸ್ಥಾನ ಪಡೆದಿರುವ ಹಂಪಿಯ ಹೇಮಕೂಟ ಬೆಟ್ಟದ, ವಿಜಯನಗರ ಸಾಮ್ರಾಜ್ಯದಲ್ಲಿನ ವಾಸ್ತುಶಿಲ್ಪ ಮತ್ತು ಕಲೆಗೆ ಹಿಡಿದ ಕೈಗನ್ನಡಿಯಾಗಿದೆ.
  Published by:Seema R
  First published: