news18-kannada Updated:May 25, 2020, 1:08 PM IST
ಮಸೀದಿಯ ಚಿತ್ರ
ಕಾರವಾರ(ಮೇ 25): ಇವತ್ತು ಮುಸಲ್ಮಾನ ಧರ್ಮೀಯರ ಪವಿತ್ರ ರಂಜಾನ್ ಹಬ್ಬ. ಉತ್ತರ ಕನ್ನಡ ಜಿಲ್ಲೆಯಲ್ಲಿ ಇಡೀ ಮುಸಲ್ಮಾನ ಸಮುದಾಯಕ್ಕೆ ಇದು ಸಂಭ್ರಮದ ಹಬ್ಬ. ಶ್ವೇತ ವಸ್ತ್ರಧಾರಿಯಾಗಿ ಮಸೀದಿಗೆ ಬಂದು ವಿವಿಧ ಧಾರ್ಮಿಕ ಕಾರ್ಯ ನಡೆಸಿ ಮನೆಗೆ ಹೋಗಿ ಹಬ್ಬ ಆಚರಣೆ ಮಾಡಿ ಕುಟುಂಬದವರೊಂದಿಗೆ ಸಂಭ್ರಮಿಸುತ್ತಿದ್ದರು. ಆದ್ರೆ ಇವತ್ತು ಕೊರೋನಾ ಕರಾಳ ದಿನಕ್ಕೆ ರಂಜಾನ ಹಬ್ಬ ಸಂಭ್ರಮ ಕಳೆದುಕೊಂಡಿದೆ.
ಕಾರವಾರದಲ್ಲಿ ಎಲ್ಲ ಮಸೀದಿಗಳು ಬಿಕೋ ಎನ್ನುತ್ತಿವೆ. ನಮಾಜ್ ಮಾಡಲು ಮುಸಲ್ಮಾನ ಧರ್ಮೀಯರಿಲ್ಲದೆ ಮಸೀದಿಗಳು ಹಬ್ಬದ ಕಳೆ ಕಳೆದುಕೊಂಡಿವೆ. ಇವತ್ತು ಈ ಎಲ್ಲ ಕೊರೋನಾ ಕರಾಳ ದಿನವನ್ನ ಬದಿಗೊತ್ತಿ ಅದಕ್ಕೆ ಹೊಂದಾಣಿಕೆಯಾಗಿ ಮನೆಯಲ್ಲೇ ಕೂತು ಮುಸಲ್ಮಾನ ಧರ್ಮಿಯರು ನಮಾಜ್ ಮಾಡಿ ಹಬ್ಬ ಆಚರಣೆ ಮಾಡಿದರು.
ಇದನ್ನೂ ಓದಿ: Ramzan in Haveri - ಮನೆಯಲ್ಲಿಯೇ ಪ್ರಾರ್ಥನೆ ಮೂಲಕ ರಂಜಾನ್ ಆಚರಣೆ
ಜಿಲ್ಲೆಯ ಭಟ್ಕಳದಲ್ಲಿ ಈ ಬಾರಿ ಹಬ್ಬದ ಖುಷಿಯನ್ನು ಕೊರೋನಾ ನುಂಗಿ ತೇಗಿದೆ. ನಿರ್ಬಂಧಿತ ವಲಯವಾಗಿರುವ ಭಟ್ಕಳದಲ್ಲಿ ಹಬ್ಬದ ವಾತಾವರಣ ಮಾಯವಾಗಿದೆ. ಬಿಕೋಎನ್ನುತ್ತಿರುವ ರಸ್ತೆ ಮಧ್ಯೆ ಪೋಲಿಸ್ ಸಿಬ್ಬಂದಿ ಮಾತ್ರ ಕಾಣ ಸಿಗುತ್ತಿದ್ದಾರೆ.
ಹಬ್ಬವನ್ನ ಸಂಭ್ರಮಿಸಲು ಶ್ವೇತ ವಸ್ತ್ರಧಾರಿಯಾಗಿ ನಗರದಲ್ಲಿ ಸುತ್ತಾಟ ನಡೆಸುವ ಸಾಂಪ್ರದಾಯಿಕ ದೃಶ್ಯ ಈ ವರ್ಷ ನೆನಪು ಮಾತ್ರ. ಒಟ್ಟಿನಲ್ಲಿ ಇವತ್ತು ಮುಸಲ್ಮಾನ ಧರ್ಮೀಯರ ತಮ್ಮ ಪವಿತ್ರ ಹಬ್ಬವನ್ನ ಮನೆಯಲ್ಲೇ ಆಚರಿಸಿ ಸಂಭ್ರಮಿಸಿದರು.
First published:
May 25, 2020, 1:08 PM IST